ಕರಾವಳಿಯಲ್ಲಿ ಭರ್ಜರಿ ಫುಡ್ ಫೆಸ್ಟ್!
– ಅದ್ದೂರಿಯಾಗಿ ನಡೆಯುತ್ತಿರುವ ಆಹಾರ ಉತ್ಸವ!
– ನಾಗ್ಪುರದ ಡಾಲಿ ಚಾಯ್ವಾಲಾ ಅವರಿಂದ ಉದ್ಘಾಟನೆ!
NAMMUR EXPRESS NEWS
ಮಂಗಳೂರು: ಮಂಗಳೂರಿನಲ್ಲಿ ಸ್ಟ್ರೀಟ್ ಫುಡ್ ಫೆಸ್ಟ್ ಮೂರನೇ ಆವೃತ್ತಿಯನ್ನು ನಾಗ್ಪುರದ ಡಾಲಿ ಚಾಯ್ವಾಲಾ (ಸುನೀಲ್ ಪಾಟೀಲ್) ಉದ್ಘಾಟಿಸಿದರು.
ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನ ಮಣ್ಣಗುಡ್ಡ ಮತ್ತು ಲೇಡಿಹಿಲ್ನ ರಸ್ತೆಗಳ ಇಕ್ಕೆಲಗಳಲ್ಲಿ ನಡೆಯುತ್ತಿರುವ ಅದ್ದೂರಿ ಕಾರ್ಯಕ್ರಮ ಇದಾಗಿದೆ. ಇದನ್ನು ಮಂಗಳೂರಿನ ಬಹುದೊಡ್ಡ ಹಬ್ಬ ಎಂದೇ ಗುರುತಿಸಬಹುದು. ಜನವರಿ 22 ರವರೆಗೆ ನಡೆಯಲಿದೆ. ನಾಗ್ಪುರದ ಡಾಲಿ ಚಾಯ್ವಾಲಾ ಅವರು ತಮ್ಮ ವಿಶಿಷ್ಟ ಶೈಲಿಯ ಪಾನೀಯ ತಯಾರಿಕೆಯಿಂದ ಪ್ರಸಿದ್ಧರಾಗಿದ್ದಾರೆ. ಕಾರ್ಯಕ್ರಮದಲ್ಲಿ ಮಂಗಳೂರು ನಗರ ದಕ್ಷಿಣ ಶಾಸಕ ಡಿ.ವೇದವ್ಯಾಸ ಕಾಮತ್, ಮೇಯರ್ ಮನೋಜ್ ಕುಮಾರ್, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಉಪಸ್ಥಿತರಿದ್ದರು. ಇದೊಂದು ಕರಾವಳಿ ಮೂಲೆ ಮೂಲೆ ಜನರು ಸೇರಿ ಆಚರಿಸುವ ಅದ್ದೂರಿ ಕಾರ್ಯಕ್ರಮವಾಗಿದ್ದು, ಜನರು ತಿಂಡಿತಿನಿಸುಗಳನ್ನು ಸವಿದು ಸಂಭ್ರಮದಿಂದ ಭಾಗಿಯಾಗುತ್ತಿದ್ದಾರೆ.