ಮರ್ಣಿ ಮರಾಟ ಬಾಂಧವರ ಯುವ ಸಂಘಟನೆ ದಶಮಾನೋತ್ಸವ ಸಂಭ್ರಮ
– 10ನೇ ವಾರ್ಷಿಕೋತ್ಸವದ ಪ್ರಯುಕ್ತ ಎಂಬಿವೈಎಸ್ ಟ್ರೋಫಿ 2025
– ಭರ್ಜರಿ ಗೆಲುವು ಸಾಧಿಸಿದ ಕೆ. ಎಫ್. ಕೆ ಕ್ರಿಕೆಟರ್ಸ್ ಅಲೆವೂರು ತಂಡ
NAMMUR EXPRESS NEWS
ಉಡುಪಿ: ಮರಾಟಿ ಬಾಂಧವರ ಯುವ ಸಂಘಟನೆ, ಮರ್ಣಿ ಇವರ ಆಶ್ರಯದಲ್ಲಿ 10ನೇ ವಾರ್ಷಿಕೋತ್ಸವದ ಪ್ರಯುಕ್ತ ಎಂಬಿವೈಎಸ್ ಟ್ರೋಫಿ 2025 ಎಂಬ ಪಂದ್ಯಾಟವು ಯು.ಎಸ್ ನಾಯಕ್ ಕ್ರೀಡಾಂಗಣ, ಪಟ್ಲದಲ್ಲಿ ಅದ್ದೂರಿಯಾಗಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮರಾಟ ಸಂಘ, ಕುಂಜಿಬೆಟ್ಟು ಕಾರ್ಯದರ್ಶಿ ಭುಜಂಗ ನಾಯ್ಕ ಅವರು ವಹಿಸಿದ್ದರು ಹಾಗೂ ಮುಖ್ಯ ಕಾರ್ಯನಿರ್ವಾಹಣಾ ಅಧಿಕಾರಿ ಕುಂಬಾರರ ಗುಡಿ ಕೈಗಾರಿಕಾ ಸಂಘ ಪೆರ್ಡೂರು ಸುಧಾಕರ ಪಟ್ಲ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದ್ದಾರೆ ಹಾಗೂ ಮುಖ್ಯ ಅತಿಥಿಗಳಾಗಿ ಅನೇಕ ಗಣ್ಯರು ಉಪಸ್ಥಿತರಿದ್ದರು. ಎಂಬಿವೈಎಸ್ ಟ್ರೋಫಿ 2025 ಪಂದ್ಯಾಟದಲ್ಲಿ ಕೆ. ಎಫ್. ಕೆ ಕ್ರಿಕೆಟರ್ಸ್ ಅಲೆವೂರು ಭರ್ಜರಿ ಗೆಲುವನ್ನು ಸಾಧಿಸಿರುತ್ತಾರೆ ಹಾಗೂ ಸಿಎಸ್ ಫ್ರೆಂಡ್ಸ್ ಕಾಜರಗುತ್ತು ದ್ವಿತೀಯ ಸ್ಥಾನ ಪಡೆದು ಉತ್ತಮ ಪ್ರದರ್ಶನ ತೋರಿದ್ದಾರೆ. ಪಂದ್ಯಾಟದಲ್ಲಿ ಪ್ರತೀ ತಂಡ ತಮ್ಮ ಕೈಚಳಕವನ್ನು ತೋರಿದ್ದು, ವಿಜೇತರಾದ ಹಾಗೂ ಭಾಗವಹಿಸಿರುವ ಪ್ರತೀ ತಂಡಕ್ಕೆ ಮರಾಟಿ ಬಾಂಧವರ ಯುವ ಸಂಘಟನೆ, ಮರ್ಣಿ ಇವರು ಈ ಮೂಲಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.