ಕಾರ್ಕಳ : ಇನ್ಸ್ಟಿಟ್ಯೂಟ್ ಆಫ್ ಕಂಪೆನಿ ಸೆಕ್ರೇಟರೀಸ್ ಇನ್ ಇಂಡಿಯಾ ಅವರು ನಡೆಸಿದ ಸಿ.ಎಸ್.ಇ.ಇ.ಟಿ(ಕಂಪೆನಿ ಸೆಕ್ರೇಟರಿ ಎಕ್ಸಿಕ್ಯೂಟಿವ್ ಎಂಟ್ರೆನ್ಸ್ ಟೆಸ್ಟ್)ಪರೀಕ್ಷೆಯಲ್ಲಿ ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಅಂಕಗಳೊoದಿಗೆ ತೇರ್ಗಡೆ ಹೊಂದಿದ್ದು, ಸಾಧಕ 28 ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಉಡುಪಿಯ ಸಿ.ಎ ಮಹೇಂದ್ರ ಶೆಣೈ ಪಿ ಸಾಧಕ ವಿದ್ಯಾರ್ಥಿಗಳನ್ನು ಅಭಿನಂದಿಸಿ, ಕಂಪೆನಿ ಸೆಕ್ರೇಟರಿ, ಚಾರ್ಟೆಂಟ್ ಅಕೌಂಟೆನ್ಸ್ನ ಅವಕಾಶಗಳ ಬಗ್ಗೆ ಹೇಳಿದರು.
ಕಾರ್ಯಕ್ರಮದಲ್ಲಿ ಸಾಧಕ ವಿದ್ಯಾರ್ಥಿಗಳಾದ ಕು.ರಕ್ಷಾ ರಾಮಚಂದ್ರ, ಖತಿಜಾತುಲ್ ರಾಫಿಯಾ, ಹೃಷಿಕೇಶ್ ಸತೀಶ್ ಶೆಟ್ಟಿ, ಮ್ಯಾಕ್ಲಿನ್ ಜಾಕ್ ಡಿ’ಮೆಲ್ಲೊ, ಶ್ರೀಧಾ ಶೆಟ್ಟಿ, ರಕ್ಷಿತಾ ಜನ್ನೆ, ಶೋಧನ್ ಕುಮಾರ್ ಶೆಟ್ಟಿ, ಶ್ರಜಿತ್ ಕುಲಾಲ್, ಶ್ರಾವಂತ್ ಕುಮಾರ್ ಶೆಟ್ಟಿ, ಪ್ರಥಮ್ ನಾಯಕ್, ರಕ್ಷಿತ್ ಆರ್, ಪ್ರಜನ್, ಅಜಯ್ ಡಿ. ನಾಯಕ್, ಆಯುಶ್ ಶೆಟ್ಟಿ, ನಮೀಶ್ ಎನ್ ಶೆಟ್ಟಿ, ವಿಘ್ನೇಶ್, ಕೆ.ಆಂಕಿತಾ ಪೈ, ಪ್ರೇರಣಾ ಸುನಿಲ್ ಕುಮಾರ್, ಸಮರ್ಥ್ ವಿಜಯ್ ದೇವಾಡಿಗ, ಅಪೇಕ್ಷಾ, ಹುದಾಹಮ್ರಾ, ಕಾವ್ಯ ಸೆಲ್ಲಾಮುತು, ರಾಜೇಂದ್ರ ಎನ್.ಮಲ್ಯಾ, ಶುಧಿನ್ ಶೆಟ್ಟಿ, ಸುಭೀತ್, ಸುವೀಕ್ಷಾ, ವಿಶ್ವಾಸ್ ನಾಯ್ಕ್ ಮತ್ತು ಯಶಸ್ವಿನಿ ಸೇರಿದಂತೆ 28 ವಿದ್ಯಾರ್ಥಿಗಳ ಸಹಿತ ಪೋಷಕರನ್ನು ಅಭಿನಂದಿಸಿ ಗೌರವಿಸಲಾಯಿತು.
ಈ ಸಂದರ್ಭ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟಿನ ಅಧ್ಯಕ್ಷರಾದ ಡಾ.ಸುಧಾಕರ್ ಶೆಟ್ಟಿಯವರು ಅಧ್ಯಕ್ಷತೆ ವಹಿಸಿ ಸಾಧಕ ವಿದ್ಯಾರ್ಥಿಗಳನ್ನು ಗೌರವಿಸಿ ಅಭಿನಂದನ ಮಾತುಗಳನ್ನಾಡಿದರು. ವೇದಿಕೆಯಲ್ಲಿ ಟ್ರಸ್ಟಿ ಸಿ.ಎ ನಿತ್ಯಾನಂದ ಪ್ರಭು, ಸಂಸ್ಥೆಯ ಸಿ.ಇ.ಒ ಹಾಗೂ ಪ್ರಾಂಶುಪಾಲರಾದ ಶ್ರೀ ದಿನೇಶ್ ಎಂ ಕೊಡವೂರ್, ಉಪಪ್ರಾಂಶುಪಾಲರಾದ ಶ್ರೀ ಸಾಹಿತ್ಯ, ಪಿ.ಆರ್.ಒ ಶ್ರೀಮತಿ ಜ್ಯೋತಿಪದ್ಮನಾಭ ಭಂಡಿ, ಶೈಕ್ಷಣಿಕ ವ್ಯವಹಾರಗಳ ಡೀನ್ ಡಾ.ಮಿಥುನ್ ಯು, ವಿದ್ಯಾರ್ಥಿ ವ್ಯವಹಾರಗಳ ಡೀನ್ ಶಕುಂತಲಾ ಎಂ.ಸುವರ್ಣಾ, ಜೆಇ.ಇ. ಸಂಯೋಜಕ ಶ್ರೀ ಸಂದೀಪ, ಸಂಸ್ಥೆಯ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ವಕೀಲ ಭವಿಷ್ ಕುಂದರ್, ಹಿತೈಷಿಗಳಾದ ದೇವೇಂದ್ರ ನಾಯಕ್, ತ್ರಿವಿಕ್ರಮ ಕಿಣಿ, ವಾಣಿಜ್ಯ ವಿಭಾಗದ ಮುಖ್ಯಸ್ಥೆ ಹಾಗೂ ಅರ್ಥಶಾಸ್ತç ಉಪನ್ಯಾಸಕಿ ಶ್ರೀಮತಿ ಸುಮಿತ್ರಾ, ವ್ಯವಹಾರ ಅಧ್ಯಯನ ಉಪನ್ಯಾಸಕರಾದ ಶೈಲೇಶ್ ಶೆಟ್ಟಿ, ಸಂಖ್ಯಾಶಾಸ್ತç ಉಪನ್ಯಾಸಕರಾದ ಶ್ರೀ ಮಂಜುನಾಥ್ ಮುದೂರು ಉಪಸ್ಥಿತರಿದ್ದರು. ಆಂಗ್ಲಭಾಷಾ ವಿಭಾಗದ ಮುಖ್ಯಸ್ಥೆ ಶ್ರೀಮತಿ ಸಂಗೀತಾ ಕುಲಾಲ್ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.