Author: Nammur Express Karkala

ಜಿಲ್ಲೆಯಲ್ಲಿ ಘನತೆವೆತ್ತ ರಾಜ್ಯಪಾರ ಪ್ರವಾಸ ಕಾರ್ಯಕ್ರಮ! ಜ. 23ಕ್ಕೆ ಉಡುಪಿ ನಗರಕ್ಕೆ ಆಗಮನ! ಕರ್ನಾಟಕ ಕ್ರೀಡಾಕೂಟ-2025 ರ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗಿ! ಉಡುಪಿ: ಕರ್ನಾಟಕ ಸರಕಾರದ ಘನತೆವೆತ್ತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಜನವರಿ 23 ರಂದು ಉಡುಪಿ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲು ನಿರ್ಧರಿಸಿದ್ದಾರೆ. ಜನವರಿ 23 ರಂದು ಮಧ್ಯಾಹ್ನ 2.35 ಕ್ಕೆ ಉಡುಪಿ ನಗರಕ್ಕೆ ಆಗಮಿಸುವ ಅವರು ಸಂಜೆ 5 ಗಂಟೆಗೆ ನಗರದ ಅಜ್ಜರಕಾಡು ಮಹಾತ್ಮಾಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿರುವ ಕರ್ನಾಟಕ ಕ್ರೀಡಾಕೂಟ-2025 ರ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ನಂತರ ಮಂಗಳೂರಿಗೆ ಪ್ರಯಾಣ ಬೆಳೆಸಲಿದ್ದಾರೆ ಎಂಬ ಮಾಹಿತಿಯನ್ನು ತಿಳಿಸಿದ್ದಾರೆ.

Read More

ಸಿರಿಧಾನ್ಯದ ಬಳಕೆಯಿಂದ ಯಾವ ರೀತಿಯ ಉತ್ತಮ ಆರೋಗ್ಯವನ್ನು ಹೊಂದಬಹುದು? ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಶ್ರೀನಿವಾಸ್ ಅವರಿಂದ ಮಾಹಿತಿ! ಉಡುಪಿ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕೃಷಿ ಇಲಾಖೆ ಉಡುಪಿ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ಜನವರಿ 22ರಂದು ನಡೆದ ಜಿಲ್ಲಾ ಮಟ್ಟದ ಸಿರಿಧಾನ್ಯ ಶೋ ಕಾರ್ಯಕ್ರಮಕ್ಕೆ ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಶ್ರೀನಿವಾಸ್ ರಾವ್ ಮಲ್ಪೆ ಪೊಲೀಸ್ ಠಾಣೆಯ ಬಳಿ ಚಾಲನೆ ನೀಡಿದರು. ಇದೇ ಸಂಧರ್ಭದಲ್ಲಿ ಮಾತನಾಡಿದ ಅವರು, ಸಿರಿಧಾನ್ಯದ ಬಳಕೆಯಿಂದ ಯಾವ ರೀತಿಯ ಉತ್ತಮ ಆರೋಗ್ಯವನ್ನು ಹೊಂದಬಹುದು, ಅವುಗಳನ್ನು ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಳ್ಳಬೇಕು. ಸಿರಿಧಾನ್ಯಗಳು ಉತ್ತಮ ಪೋಷಕಾಂಶವುಳ್ಳ ಆಹಾರವಾಗಿರುವುದರಿಂದ ಇದರ ಸೇವನೆಯ ಜೊತೆಗೆ ಸಿರಿಧಾನ್ಯಗಳನ್ನು ಬೆಳೆಯಲು ರೈತರು ಮುಂದಾಗಬೇಕು ಎಂಬುಹುದರ ಬಗ್ಗೆ ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಶ್ರೀನಿವಾಸ್ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ನಗರಸಭಾ ಸದಸ್ಯ ವಿಜಯ್ ಕೊಡವೂರು, ಅಪರ ಜಿಲ್ಲಾಧಿಕಾರಿ ನಾಗರಾಜ ವಿ ನಾಯಕ್, ಜಂಟಿ ಕೃಷಿ ನಿರ್ದೇಶಕಿ ಪೂರ್ಣಿಮಾ ಜಿ.ಸಿ, ಉಪ ಕೃಷಿ…

Read More

ಉಡುಪಿ, ಕಟಪಾಡಿಯ ತ್ರಿಶಾ ವಿದ್ಯಾ ಕಾಲೇಜಿನ ಕನ್ನಡ ಪ್ರಾಧ್ಯಾಪಕರಾದ ಧೀರಜ್ ಬೆಳ್ಳಾರೆ ಇವರಿಗೆ ಕರ್ನಾಟಕ ಅಚೀವರ್ಸ್ ಬುಕ್ ಆಫ್ ರೆಕಾರ್ಡ್ಸ್ (KABR) ವತಿಯಿಂದ ಜನವರಿ 10, 2025 ರಂದು, ರಾಷ್ಟ್ರೀಯ ದಾಖಲೆ ಪ್ರಮಾಣಪತ್ರವನ್ನು ನೀಡಿ ಗೌರವಿಸಲಾಯಿತು . ಇವರು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನ ಕಳಂಜದ ಯುವ ಮತ್ತು ಉತ್ಸಾಹಭರಿತ ಬರಹಗಾರಾಗಿದ್ದು,”ಸ್ಟೇಟಸ್ ಕಥೆಗಳು” ಎಂಬ ಶೀರ್ಷಿಕೆಯ ಸರಣಿಯಡಿಯಲ್ಲಿ ಜುಲೈ 2020 ರಿಂದ ಡಿಸೆಂಬರ್ 2024 ವರೆಗೆ 1,635 ಸಣ್ಣ ಕಥೆಗಳನ್ನು ಬರೆಯುವ ಮೂಲಕ ಈ ಗಮನಾರ್ಹ ಸಾಧನೆಯನ್ನು ಮಾಡಿದ್ದಾರೆ. ಈ ಕಥೆಗಳು ಕನ್ನಡ ವೆಬ್ಸೈಟ್ ನಲ್ಲಿ ನಿರಂತರವಾಗಿ ಪ್ರಕಟವಾಗುತ್ತಿದ್ದು, ನೈತಿಕ ಮೌಲ್ಯಗಳು, ಜೀವನ ಪಾಠಗಳು ಮತ್ತು ಪ್ರಬಲ ಸಾಮಾಜಿಕ ಸಂದೇಶಗಳನ್ನು ಉತ್ತೇಜಿಸಲು ಹೆಸರುವಾಸಿಯಾದ ಇವರ ಕಥೆಗಳು ಓದುಗರನ್ನು ಶ್ರೀಮಂತಗೊಳಿಸುವುದಲ್ಲದೆ, ಸಾಮಾಜಿಕ ಯೋಗಕ್ಷೇಮಕ್ಕೂ ಪ್ರಮುಖ ಕೊಡುಗೆ ನೀಡಿವೆ. ಇವರ ಮೊದಲ‌ ನೂರು ಕತೆಗಳನ್ನ ಕನ್ನಡ ಪುಸ್ತಕ ಪ್ರಾಧಿಕಾರದಿಂದ ಪ್ರಕಟಿಸಲಾಗಿದೆ.ಕತೆ ಬರವಣಿಗೆ ಜೊತೆ, ನಾಟಕ, ಅಭಿನಯದಲ್ಲೂ ತನ್ನ ಛಾಪು ಮೂಡಿಸುತ್ತಿರುವ ಬಹುಮುಖ ಪ್ರತಿಭೆ.…

Read More

ಆಳ್ವಾಸ್‌ನಲ್ಲಿ ವಿಜಿಎಸ್‌ಟಿ ಪ್ರಾಯೋಜಕತ್ವದ ಏಫ್‌ಡಿಪಿ ಕಾರ್ಯಗಾರ ಮೂಡಬಿದಿರೆ: ಅರೆವಾಹಕ ಚಿಪ್‌ಗಳು(ಸೆಮಿಕಂಡಕ್ಟಡ್ ಚಿಪ್) ಅತ್ಯಂತ ಅಗತ್ಯವಾಗಿದ್ದು ಅದನ್ನು ವಿದೇಶದಿಂದ ಆಮದು ಮಾಡಿಕೊಳ್ಳುವುದು ಇಲ್ಲಿ ತಯಾರಿಸುವುದಕ್ಕಿಂತ ಅಧಿಕವಾಗುತ್ತದೆ. ಪ್ರಸ್ತುತ ಭಾರತ ಸರಕಾರ ಅರೆವಾಹಕ ಚಿಪ್‌ಗಳನ್ನು ತಯಾರಿಸಲು ಎಪ್ಪತ್ತಾರು ಸಾವಿರ ಕೋಟಿ ರೂಪಾಯಿ ಹಣವನ್ನು ಮೀಸಲಿಟ್ಟಿದ್ದು ಇದು ಮುಂಬರುವ ದಿನಗಳಲ್ಲಿ ಭಾರತ ತಂತ್ರಜ್ಞಾನದ ಮಹತ್ವದ ಬೆಳವಣಿಗೆಗೆ ಕಾರಣವಾಗುತ್ತದೆ ಎಂದು ಬೆಂಗಳೂರಿನ ಡಿಆರ್‌ಡಿಒ ಹಾಗೂ ಸಿತಾರ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ರವಿ ಎಂ. ಆರ್. ಹೇಳಿದರು. ಕರ್ನಾಟಕ ಸರಕಾರದ ವಿಜನ್ ಗ್ರೂಪ್ ಫಾರ್ ಸೈನ್ಸ್ ಅಂಡ್ ಟೆಕ್ನಾಲಜಿಯ ಅನುದಾನದೊಂದಿಗೆ ಆಳ್ವಾಸ್ ಇಂಜಿನಿಯರಿAಗ್ ಕಾಲೇಜಿನ ಎಲೆಕ್ಞಾçನಿಕ್ ಮತ್ತು ಕಮ್ಯುನಿಕೇಶನ್ ಇಂಜಿನಿಯರಿAಗ್ ವಿಭಾಗವು ಆಯೋಜಿಸಿದ “ಮೆಮ್ಸ್ ಕ್ಯಾರಕ್ಟರೈಸೇಶನ್ ಟೆಕ್ನಿಕ್” ಎಂಬ ನಾಲ್ಕು ದಿನಗಳ ಉಪನ್ಯಾಸಕರ ಕೌಶಲ್ಯಾಭಿವೃದ್ಧಿ(ಎಫ್‌ಡಿಪಿ)ಕಾರ್ಯಾಗಾರವನ್ನು ಮಿಜಾರಿನ ಆಳ್ವಾಸ್ ಇಂಜಿನಿಯರಿAಗ್ ಕಾಲೇಜಿನ ಸಭಾಂಗಣದಲ್ಲಿ ಉದ್ಘಾಟಿಸಿ ಮಾತನಾಡಿದರು.ಭಾರತದಲ್ಲಿ ಜ್ಞಾನದ ಸಂಪತ್ತು ಹೇರಳವಾಗಿದ್ದು, ಮೇಮ್ಸ್ ಹಾಗೂ ಸೆಮಿಕಂಡಕ್ಟರ್‌ಗೆ ಸಂಬAದಿಸಿದ ನೂರೈವತ್ತುಕ್ಕೂ ಅಧಿಕ ಸಂಸ್ಥೆಗಳು ಬೆಂಗಳೂರಿನಲ್ಲಿವೆ. ನಾವು ಅನೇಕ ತಂತ್ರಜ್ಞಾನವನ್ನು ಕಂಡುಕೊAಡಿದ್ದೇವೆ. ಭಾರತದಲ್ಲಿ ಉಡಾವಣೆಗೊಳ್ಳುವ…

Read More

ಕಾರ್ಕಳ: ಮಲೆನಾಡು ಹಾಗೂ ಕರಾವಳಿ ಸಂಪರ್ಕಿಸುವ  ರಾಷ್ಟ್ರೀಯ ಹೆದ್ದಾರಿ  169ಎ  ಅಗುಂಬೆ ಘಾಟಿ ವ್ಯಾಪ್ತಿಯಲ್ಲಿ  ‌ಸುರಂಗ ನಿರ್ಮಾಣ ಕಾರ್ಯ ವೊ ಅಥವಾ ಮುಖ್ಯ ರಸ್ತೆ ಅಗಲಿಕರಣವೊ ಎಂಬುದು ಇನ್ನೂ ಅಂತಿಮ ವಾಗಿಲ್ಲ. ಕೇಂದ್ರ ಸಾರಿಗೆ ಮಂತ್ರಾಲಯ ದಿಂದ ಅಧ್ಯಯನ ನಡೆಸಿದ ಬಳಿಕ  ಸುರಂಗ ಮಾರ್ಗ ವೊ ರಸ್ತೆ ಅಗಲೀಕರಣ ವೊ ಎಂಬುದು ಅಂತಿಮ ವಾಗಲಿದೆ. ಪರಿಸರ ಹಾಗು ಭೂಸ್ವರೂಪದ ಅಧ್ಯಯನಕ್ಕಾಗಿ ಜನವರಿ ಫೆಬ್ರವರಿ ತಿಂಗಳಿನಲ್ಲಿ ಉನ್ನತಮಟ್ಟದ ತಾಂತ್ರಿಕ ಅಧ್ಯಯನ ತಂಡವು ಬೇಟಿ ನೀಡಿ ಪರಿಶೀಲನೆ ನಡೆಸಲಿದೆ.  ಕಳೆದ ವರ್ಷ 2024ರಲ್ಲಿ  ರಸ್ತೆ ಅಗಲೀಕರಣ ಕ್ಕಾಗಿ     ಪೂರ್ವ ಸಿದ್ದತ ಯೋಜನಾ ವರದಿ ತಯಾರಿಗಾಗಿ ಟೆಂಡರ್ ಕರೆದಿದ್ದರು ಏಜೆನ್ಸಿ ಗಳು ಸ್ಪರ್ಧಿಸಿದ್ದರೂ   ಫಲಿತಾಂಶ  ನೀಡುವಲ್ಲಿ ಯು  ವಿಫಲವಾಗಿದೆ ಎನ್ನಲಾಗಿದೆ.  ಪೂರ್ವ ಸಿದ್ದತ ಯೋಜನಾ ವರದಿ ತಯಾರಿಗಾಗಿ ಸುಮಾರು 2 ಕೋಟಿ ರೂಪಾಯಿ ಮೀಸಲಿಡಲಾಗಿದೆ. ಸುರಂಗ ವೋ /ಹೆದ್ದಾರಿ ಅಗಲೀಕರಣವೋ| ;; ಆಗುಂಬೆ ಮಾರ್ಗವಾಗಿ ಸಾಗುವ ರಾಷ್ಟ್ರೀಯ ಹೆದ್ದಾರಿ 169 ಎ ಯು  ಪ್ರಸ್ತುತ ಹೆದ್ದಾರಿಯು…

Read More

ಕಾರ್ಕಳ : ಇನ್ಸ್ಟಿಟ್ಯೂಟ್ ಆಫ್ ಕಂಪೆನಿ ಸೆಕ್ರೇಟರೀಸ್ ಇನ್ ಇಂಡಿಯಾ ಅವರು ನಡೆಸಿದ ಸಿ.ಎಸ್.ಇ.ಇ.ಟಿ(ಕಂಪೆನಿ ಸೆಕ್ರೇಟರಿ ಎಕ್ಸಿಕ್ಯೂಟಿವ್ ಎಂಟ್ರೆನ್ಸ್ ಟೆಸ್ಟ್)ಪರೀಕ್ಷೆಯಲ್ಲಿ ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಅಂಕಗಳೊoದಿಗೆ ತೇರ್ಗಡೆ ಹೊಂದಿದ್ದು, ಸಾಧಕ 28 ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಉಡುಪಿಯ ಸಿ.ಎ ಮಹೇಂದ್ರ ಶೆಣೈ ಪಿ ಸಾಧಕ ವಿದ್ಯಾರ್ಥಿಗಳನ್ನು ಅಭಿನಂದಿಸಿ, ಕಂಪೆನಿ ಸೆಕ್ರೇಟರಿ, ಚಾರ್ಟೆಂಟ್ ಅಕೌಂಟೆನ್ಸ್ನ ಅವಕಾಶಗಳ ಬಗ್ಗೆ ಹೇಳಿದರು. ಕಾರ್ಯಕ್ರಮದಲ್ಲಿ ಸಾಧಕ ವಿದ್ಯಾರ್ಥಿಗಳಾದ ಕು.ರಕ್ಷಾ ರಾಮಚಂದ್ರ, ಖತಿಜಾತುಲ್ ರಾಫಿಯಾ, ಹೃಷಿಕೇಶ್ ಸತೀಶ್ ಶೆಟ್ಟಿ, ಮ್ಯಾಕ್ಲಿನ್ ಜಾಕ್ ಡಿ’ಮೆಲ್ಲೊ, ಶ್ರೀಧಾ ಶೆಟ್ಟಿ, ರಕ್ಷಿತಾ ಜನ್ನೆ, ಶೋಧನ್ ಕುಮಾರ್ ಶೆಟ್ಟಿ, ಶ್ರಜಿತ್ ಕುಲಾಲ್, ಶ್ರಾವಂತ್ ಕುಮಾರ್ ಶೆಟ್ಟಿ, ಪ್ರಥಮ್ ನಾಯಕ್, ರಕ್ಷಿತ್ ಆರ್, ಪ್ರಜನ್, ಅಜಯ್ ಡಿ. ನಾಯಕ್, ಆಯುಶ್ ಶೆಟ್ಟಿ, ನಮೀಶ್ ಎನ್ ಶೆಟ್ಟಿ, ವಿಘ್ನೇಶ್, ಕೆ.ಆಂಕಿತಾ ಪೈ, ಪ್ರೇರಣಾ ಸುಿಲ್ ಕುಮಾರ್, ಮರ್ಥ್ ವಿಜಯ್ ದೇವಾಡಿಗ, ಅಪೇಕ್ಷಾ, ಹುದಾಹಮ್ರಾ, ಕಾವ್ಯ ಸೆಲ್ಲಾಮುತು,…

Read More

ಕಾರ್ಕಳ: ಮಂಗಳೂರು ನಗರದ ಕೆಪಿಟಿಯಲ್ಲಿ ಇತ್ತೀಚೆಗೆ ನಡೆದ 45ನೇ ರಾಜ್ಯಮಟ್ಟದ ಅಂತರ ಪಾಲಿಟೆಕ್ನಿಕ್ ಅಥ್ಲೆಟಿಕ್ ಕ್ರೀಡಾಕೂಟ 2025ರಲ್ಲಿ ನಿಟ್ಟೆಯ ಎನ್ ಆರ್ ಎಎಂ ಪಾಲಿಟೆಕ್ನಿಕ್ ಕಾಲೇಜು ಗಮನಾರ್ಹ ಯಶಸ್ಸನ್ನು ಗಳಿಸಿದೆ. ವಿವಿಧ ಸ್ಪರ್ಧೆಗಳಲ್ಲಿ ಅಸಾಧಾರಣ ಪ್ರತಿಭೆಯನ್ನು ಪ್ರದರ್ಶಿಸುವ ಮೂಲಕ ಸಂಸ್ಥೆಯು ಒಟ್ಟಾರೆ ಚಾಂಪಿಯನ್ ಶಿಪ್ ವಿಭಾಗದಲ್ಲಿ ಎರಡನೇ ಸ್ಥಾನವನ್ನು ಗಳಿಸಿತು. ವೈಯಕ್ತಿಕ ಸಾಧನೆಗಳು ಪೈಕಿ : ಅಪೇಕ್ಷಾ (4 ನೇ ಸೆಮಿಸ್ಟರ್ ಕಂಪ್ಯೂಟರ್ ಸೈನ್ಸ್) 100 ಮೀಟರ್ ಓಟದಲ್ಲಿ 3ನೇ ಸ್ಥಾನ, 400 ಮೀಟರ್ ಓಟದಲ್ಲಿ 2ನೇ ಸ್ಥಾನ ಹಾಗೂ 4×400 ಮೀಟರ್ ರಿಲೇಯಲ್ಲಿ 3ನೇ ಸ್ಥಾನ ಗಳಿಸಿರುತ್ತಾರೆ. ಸ್ವಸ್ತಿ (4 ನೇ ಸೆಮಿಸ್ಟರ್ ಕಂಪ್ಯೂಟರ್ ಸೈನ್ಸ್) ಲಾಂಗ್ ಜಂಪ್ ನಲ್ಲಿ 3ನೇ ಸ್ಥಾನ, ಹೈಜಂಪ್ ನಲ್ಲಿ 3ನೇ ಸ್ಥಾನ, ವರ್ಷಾ (2 ನೇ ಸೆಮಿಸ್ಟರ್ ಉಡುಪು ವಿನ್ಯಾಸ ಮತ್ತು ಫ್ಯಾಬ್ರಿಕೇಷನ್ ಟೆಕ್ನಾಲಜಿ) 200 ಮೀಟರ್ ಓಟದಲ್ಲಿ 3ನೇ ಸ್ಥಾನ, 4×400 ಮೀಟರ್ ರಿಲೇಯಲ್ಲಿ 3ನೇ ಸ್ಥಾನ, ದೀಕ್ಷಾ (4 ನೇ…

Read More

ವಿದ್ಯಾಗಿರಿ: ನವದೆಹಲಿಯಲ್ಲಿ ನಡೆಯಲಿರುವ 2025 ರ ಗಣರಾಜ್ಯೋತ್ಸವ ದಿನದ ಪಥಸಂಚಲನ ಶಿಬಿರಕ್ಕೆ (ಆರ್‌ಡಿಸಿ) ಆಳ್ವಾಸ್ ಶಿಕ್ಷಣ ಸಂಸ್ಥೆಯ ಎನ್‌ಸಿಸಿ ಘಟಕದ ಐದು ಕೆಡೆಟ್‌ಗಳು ಆಯ್ಕೆಯಾಗಿದ್ದಾರೆ. ವಾಯುದಳ ವಿಭಾಗದಲ್ಲಿ ಎನ್‌ಸಿಸಿ ಕರ್ನಾಟಕ ಹಾಗೂ ಗೋವಾ ನಿರ್ದೇಶನಾಲಯವನ್ನು ಪ್ರತಿನಿಧಿಸಲಿರುವ ಹಾರ್ದಿಕ್ ಶೆಟ್ಟಿ, ನಿರೂಪ್ ಎಸ್., ಜೇವಿಟಾ ಪರ್ಲ್ ಹಾಗೂ ಪ್ರಶಸ್ತಿ ಪಾಲ್ಗೊಳ್ಳಲಿದ್ದಾರೆ. ಪ್ರಮುಖವಾಗಿ ಪ್ರಶಸ್ತಿ ಈ ಬಾರಿಯ ಪ್ರಧಾನ ಮಂತ್ರಿ ರ‍್ಯಾಲಿಯಲ್ಲಿ ಪಾಲ್ಗೊಳ್ಳಲಿದ್ದಾಳೆ.ನೌಕಾದಳ ವಿಭಾಗದಲ್ಲಿ 5ನೇ ಕರ್ನಾಟಕ ನೌಕಾ ಘಟಕವನ್ನು ಪ್ರತಿನಿಧಿಸಲಿರುವ ಅಜ್‌ರಾಜ್ ಆಯ್ಕೆಯಾಗಿದ್ದಾರೆ. ಆಳ್ವಾಸ್‌ನಿಂದ ಒಟ್ಟು 49 ಕೆಡೆಟ್‌ಗಳು ಭಾಗಿ. ಇಲ್ಲಿಯವರೆಗೆ ಸಂಸ್ಥೆಯಿAದ 44 ಕೆಡೆಟ್‌ಗಳು ಗಣರಾಜ್ಯೋತ್ಸವ ದಿನದ ಪಥಸಂಚಲನ ಶಿಬಿರದಲ್ಲಿ ಪಾಲ್ಗೊಂಡಿದ್ದು, ಈ ಬಾರಿಯ 5 ಜನರು ಸೇರಿದಂತೆ ಒಟ್ಟು 45 ವಿದ್ಯಾರ್ಥಿಗಳು ಆಳ್ವಾಸ್ ಒಂದೇ ಸಂಸ್ಥೆಯಿOದ ಪಾಲ್ಗೊಳ್ಳುತ್ತಿರುವುದು ಉಲ್ಲೇಖಾರ್ಹ ಸಾಧನೆಯಾಗಿದೆ.ಆಳ್ವಾಸ್ ವಿದ್ಯಾರ್ಥಿಗಳ ಕೊಡುಗೆಆಳ್ವಾಸ್ ಸಂಸ್ಥೆಯಲ್ಲಿ ಇಲ್ಲಿಯವರೆಗೆ 57ಕ್ಕೂ ಅಧಿಕ ಸೇನಾ ಶಿಬಿರಗಳು ನಡೆದಿದ್ದು, ಐದು ಸೇನಾ ನೇಮಕಾತಿ ರ‍್ಯಾಲಿಗಳು, ಅಗ್ನಥ ೇಮಕಾತಿ ಪರೀಕ್ಷೆ ಸೇರಿದಂತೆ ಹತ್ತು ಹಲವು ಎನ್‌ಸಿಸಿಯ ಚಟುವಟಿಕೆಗಳು…

Read More

ಕಾರ್ಕಳ: ಚಿಕ್ಕಮಗಳೂರು ಅಥ್ಲೆಟಿಕ್ಸ್ ಅಸೋಸಿಯೇಷನ್ ಮತ್ತು ತಿಲಕ್ ರೋಡ್ ಫ್ರೆಂಡ್ಸ್, ಕೊಪ್ಪ, ಚಿಕ್ಕಮಗಳೂರು ಇವರ ಸಂಯುಕ್ತಾಶ್ರಯದಲ್ಲಿ ಜ.19 ರಂದು ನಡೆದ ಕೊಪ್ಪ ಮ್ಯಾರಥಾನ್ ನಲ್ಲಿ ಭಾಗವಹಿಸಿದ ನಿಟ್ಟೆ ಕ್ರೀಡಾಪಟುಗಳ ಪೈಕಿ ಮಹಿಳೆಯರ ಮುಕ್ತ 10 ಕಿ.ಮೀ ಓಟದಲ್ಲಿ ನಿಟ್ಟೆಯ ಡಾ.ಎನ್.ಎಸ್.ಎ.ಎಂ ಪ್ರಥಮ ದರ್ಜೆ ಕಾಲೇಜಿನ ಪ್ರಥಮ ಬಿಕಾಂ ವಿದ್ಯಾರ್ಥಿನಿ ನಂದಿನಿ ಜಿ., 15,000/- ರೂ.ಗಳ ನಗದು ಬಹುಮಾನದೊಂದಿಗೆ ಚಿನ್ನದ ಪದಕವನ್ನು ಪಡೆದರು. ಮಹಿಳೆಯರ ಮುಕ್ತ 10 ಕಿ.ಮೀ ಓಟದಲ್ಲಿ ನಿಟ್ಟೆಯ ಡಾ.ಎನ್.ಎಸ್.ಎ.ಎಂ ಪ್ರಥಮ ದರ್ಜೆ ಕಾಲೇಜಿನ 3ನೇ ಬಿಕಾಂ ವಿದ್ಯಾರ್ಥಿನಿ ಪ್ರತೀಕ್ಷಾ ಬೆಳ್ಳಿ ಪದಕ ಹಾಗೂ 10,000 ರೂ.ಗಳ ನಗದು ಬಹುಮಾನ ಪಡೆದರು. ಮಹಿಳೆಯರ ಮುಕ್ತ 20 ಕಿ.ಮೀ ಓಟದಲ್ಲಿ ನಿಟ್ಟೆಯ ಡಾ.ಎನ್.ಎಸ್.ಎ.ಎಂ ಕನ್ನಡ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ದೀಕ್ಷಿತಾ ಕಂಚಿನ ಪದಕ ಹಾಗೂ 5,000 ರೂ.ಗಳ ನಗದು ಬಹುಮಾನ ಪಡೆದರು. ಪುರುಷರ ಮುಕ್ತ 10 ಕಿ.ಮೀ ಓಟದಲ್ಲಿ ನಿಟ್ಟೆಯ ಡಾ. ಎನ್.ಎಸ್.ಎ.ಎಂ ಪಿಯು ಕಾಲೇಜಿನ ಪ್ರಥಮ ಕಾಮರ್ಸ್ ವಿದ್ಯಾರ್ಥಿ…

Read More

ನಿಟ್ಟೆ: ಬೆಳಗಾವಿಯಲ್ಲಿ ಇತ್ತೀಚೆಗೆ ನಡೆದ ಪ್ರತಿಷ್ಠಿತ ಲೋಕಮಾನ್ಯ ಮ್ಯಾರಥಾನ್ ಕಾರ್ಯಕ್ರಮವನ್ನು ಭಾರತದ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಉದ್ಘಾಟಿಸಿದರು. ಈ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ನಿಟ್ಟೆಯ ವಿದ್ಯಾರ್ಥಿಗಳ ಸಾಧನೆ ಈ ಕೆಳಗಿನಂತಿದೆ.ನಿಟ್ಟೆಯ ಡಾ.ಎನ್.ಎಸ್.ಎ.ಎಂ ಕನ್ನಡ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ದೀಕ್ಷಿತಾ ಗಣಪತಿ ನಾಯ್ಕ್ 17 ವರ್ಷದೊಳಗಿನ ಬಾಲಕಿಯರ 3 ಕಿ.ಮೀ ಓಟದಲ್ಲಿ ಚಿನ್ನದ ಪದಕ ಪಡೆದಿದ್ದಾರೆ. ನಿಟ್ಟೆಯ ಡಾ.ಎನ್.ಎಸ್.ಎ.ಎಂ ಪ್ರಥಮ ದರ್ಜೆ ಕಾಲೇಜಿನ 3ನೇ ವರ್ಷದ B.Com ವಿದ್ಯಾರ್ಥಿನಿ ಪ್ರತೀಕ್ಷಾ ಆಚಾರ್ಯ 5 ಕಿ.ಮೀ ಮುಕ್ತ ವಿಭಾಗದಲ್ಲಿ ಬೆಳ್ಳಿ ಪದಕ ಗಳಿಸಿದ್ದಾರೆ. ನಿಟ್ಟೆಯ ಡಾ.ಎನ್.ಎಸ್.ಎ.ಎಂ ಆಂಗ್ಲ ಮಾಧ್ಯಮ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿ ರಕ್ಷಿತ್ ಆರ್.ಬಂಗೇರ 17 ವರ್ಷದೊಳಗಿನ ಬಾಲಕರ 5 ಕಿ.ಮೀ ಓಟದಲ್ಲಿ ಕಂಚಿನ ಪದಕ ಗೆದ್ದಿದ್ದಾರೆ.ನಿಟ್ಟೆಯ ಡಾ.ಎನ್.ಎಸ್.ಎ.ಎಂ ಕನ್ನಡ ಮಾಧ್ಯಮ ಪ್ರೌಢಶಾಲೆಯ 8ನೇ ತರಗತಿ ವಿದ್ಯಾರ್ಥಿನಿ ದೀಪಿಕಾ 14 ವರ್ಷದೊಳಗಿನ ಬಾಲಕಿಯರ 3 ಕಿ.ಮೀ ಓಟದಲ್ಲಿ 4ನೇ ಸ್ಥಾನ ಪಡೆದಿದ್ದಾರೆ.

Read More