ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಕಾಲಾವಧಿ ಜಾತ್ರಾ ಮಹೋತ್ಸವ
– ಅದ್ದೂರಿಯಾಗಿ ನಡೆದ ರಥೋತ್ಸವ ಹಾಗೂ ವಿಟ್ಲ ಬೆಡಿ ಜಾತ್ರೆ!
– ನಾಟಕ ಪ್ರದರ್ಶನ, ಯಕ್ಷಗಾನ ಬಯಲಾಟ, ಸಂಗೀತ ರಸಮಂಜರಿ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು!
NAMMUR EXPRESS NEWS
ವಿಟ್ಲ: ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಕಾಲಾವಧಿ ಜಾತ್ರಾ ಮಹೋತ್ಸವ ಬಹಳ ವಿಜೃಂಭಣೆಯಿಂದ ನಡೆಯಿತು. ಜನವರಿ 14 ರಂದು ಧ್ವಜಾರೋಹಣದೊಂದಿಗೆ ಪ್ರಾರಂಭಗೊಂಡ ಜಾತ್ರಾ ಮಹೋತ್ಸವ ಬಳಿಕ ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಬಹಳ ಅದ್ದೂರಿಯಾಗಿ ನಡೆಯಿತು.
ಜನವರಿ 18 ರಂದು ಬಯ್ಯದ ಬಲಿ ಉತ್ಸವ, ಜ. 19 ರಂದು ನಡುದೀಪೋತ್ಸವ ಕೆರೆ ಆಯನ, ಜ. 20 ರಂದು ಹೂತೇರು ಮತ್ತು ಜ. 21 ರಂದು ಮಹಾರಥೋತ್ಸವ ನಡೆಯಿತು.
ಜಾತ್ರೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಹಲವು ನಾಟಕ ತಂಡಗಳಿಂದ ನಾಟಕ ಪ್ರದರ್ಶನ, ಯಕ್ಷಗಾನ ಬಯಲಾಟ, ಸಂಗೀತ ರಸಮಂಜರಿ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಜ. 21 ರಂದು ಶ್ರೀ ದೇವರ ದರ್ಶನ ಬಲಿ ಬಟ್ಟಲು ಕಾಣಿಕೆ ನಡೆದು ಬಳಿಕ ರಾತ್ರಿ ವೈಭವದ ಮಹಾರಥೋತ್ಸವ ನಡೆಯಿತು. ಮಹಾರಥೋತ್ಸವದಲ್ಲಿ ಆಕರ್ಷಣೀಯ ಸುಡುಮದ್ದು ಪ್ರದರ್ಶನ, ವಿಟ್ಲ ಪ್ರದರ್ಶನಗೊಂಡಿತು. ಸಾವಿರಾರು ಭಕ್ತಾದಿಗಳು ಪಾಲ್ಗೊಂಡು ಶ್ರೀ ದೇವರ ಕೃಪೆಗೆ ಪಾತ್ರರಾದರು.
– ಅದ್ದೂರಿಯಾಗಿ ನಡೆದ ರಥೋತ್ಸವ ಹಾಗೂ ವಿಟ್ಲ ಬೆಡಿ!
ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ವೈಭವದ ರಥೋತ್ಸವ ವಿಟ್ಲ ಬೆಡಿ ನಡೆಯಿತು. ತೇರಿನ ಉತ್ಸವ ಅತ್ಯಂತ ವಿಜೃಂಭಣೆಯಿಂದ ನೆರವೇರಿತು. ತೇರಿನ ಉತ್ಸವ ಸುಮಾರು ವರ್ಷಗಳಿಂದ ನಡೆಸಿಕೊಂಡು ಬರಲಾಗುತ್ತಿದೆ. ಈ ಬಾರಿಯೂ ಅತ್ಯಂತ ವೈಭವದಿಂದ ರಥೋತ್ಸವ ನಡೆಯಿತು. ಭಕ್ತರ ಜನಸಾಗರವೇ ಸೇರಿದ್ದು, ಸಾವಿರಾರು ಭಕ್ತರು ತೇರಿನ ಉತ್ಸವಕ್ಕೆ ಸಾಕ್ಷಿಯಾದರು. ಉಲ್ಲಾಸ ಉತ್ಸಾಹದಿಂದ ರಥ ಎಳೆದು, ವಿಟ್ಲ ಬೆಡಿಯಲ್ಲಿ ಭಾಗಿಯಾಗಿ ಖುಷಿ ಪಟ್ಟರು. ಹರ ಹರ ಮಹಾದೇವ್ ಎಂದು ಅತ್ಯುತ್ಸಾಹದಿಂದ ರಥ ಎಳೆದಿದ್ದಾರೆ.