ಯಶಸ್ವಿ ರಾಮ ನಾಮ ಜಪ ಯಾತ್ರೆ..
– ಅಯೋಧ್ಯೆಯಲ್ಲಿ ಶ್ರೀರಾಮ ಪ್ರತಿಷ್ಠಾಪನೆಯ ಸಲುವಾಗಿ ಕಾರ್ಯಕ್ರಮ
– ಕಿಗ್ಗಾದಿಂದ ನೃಸಿಂಹ ಪರ್ವತಕ್ಕೆ ಕಾಲ್ನಡಿಗೆ ಜಾಥ
NAMMUR EXPRESS NEWS
ಶೃಂಗೇರಿ: ಆಯೋಧ್ಯೆ ಶ್ರೀರಾಮನ ಪಟ್ಟಾಭಿಷೇಕದ ವಾರ್ಷಿಕೋತ್ಸವದ ಸಲುವಾಗಿ ವಿಶ್ವಹಿಂದೂ ಪರಿಷದ್ ಬಜರಂಗದಳ ಶೃಂಗೇರಿ ವತಿಯಿಂದ ಕಿಗ್ಗಾ ಋಷ್ಯಶೃಂಗ ದೇವಾಲಯದಿಂದ ಋಷ್ಯಶೃಂಗರ ತಪೋ ಭೂಮಿ ನೃಸಿಂಹ ಪರ್ವತಕ್ಕೆ “ಋಷಿ ಪ್ರಜ್ಞಾ ಪ್ರದೀಪನ” ಎಂಬ ಧ್ಯೇಯದಡಿಯಲ್ಲಿ “ರಾಮ ನಾಮ ಜಪ ಯಾತ್ರೆ” ಎಂಬ ಕಾಲ್ನಡಿಗೆಯನ್ನು ಹಮ್ಮಿಕೊಂಡಿತ್ತು, ಜಾಥಾ ಯಶಸ್ವಿಯಾಗಿ ನಡೆದಿದ್ದು ನೂರಾರು ಜನ ಭಾಗವಹಿಸಿದ್ದರು. ಹಿಂದೂ ಮುಖಂಡರಾದ ವಿಶ್ವ ಹಿಂದೂ ಪರಿಷದ್ ಜಿಲ್ಲಾ ಸಂಚಾಲಕರಾದ ಸಂತೋಷ್ ಸೇರಿದಂತೆ,ಹಾಸನ ವಿಭಾಗ ಸಂಚಾಲಕರಾದ ಶಶಾಂಕ್ ಗೌಡ ಹೇರೂರು,ಬಿಜೆಪಿ ಜಿಲ್ಲಾ ಪ್ರಧಾನಕಾರ್ಯದರ್ಶಿ ಪುಣ್ಯಪಾಲ್,ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷ್ ಕೋಟ್ಯಾನ್, ವಿಶ್ವಹಿಂದೂ ಪರಿಷದ್ ಜಿಲ್ಲಾ ಕಾರ್ಯದರ್ಶಿ ದಿವೀರ್ ಮಲ್ನಾಡ್, ಹರೀಶ್ ವಿ.ಶೆಟ್ಟಿ,ಪ ಪಂ ಅಧ್ಯಕ್ಷ ವೇಣುಗೋಪಾಲ್ ಸೇರಿದಂತೆ ಅನೇಕ ಜನ ಪ್ರಮುಖರು ಭಾಗವಹಿಸಿದ್ದರು. ಪರ್ವತದ ಮೇಲಿನ ನರಸಿಂಹ ಸ್ವಾಮಿಗೆ ಪೂಜೆ ಸಲ್ಲಿಸಿ, ಭಜನೆ ಮಾಡಿ, ಸೇರಿದ್ದ ಭಕ್ತರೆಲ್ಲರಿಗೂ ಊಟ ವ್ಯವಸ್ಥೆ ಮಾಡಲಾಗಿತ್ತು. ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು.