ತೀರ್ಥಹಳ್ಳಿಯಲ್ಲಿ ಕೆನಲ್ ಕ್ಲಬ್ 25ನೇ ವಾರ್ಷಿಕೋತ್ಸವ!
– ರಜತ ವರ್ಷಾಚರಣೆ ಹಾಗೂ ಪುಸ್ತಕ ಬಿಡುಗಡೆ ಸಮಾರಂಭ
– ಶ್ವಾನ ಲೋಕದ ವಿಸ್ಮಯ ಪುಸ್ತಕ ಬಿಡುಗಡೆ
– ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಕಡಿದಾಳ್ ಅವರಿಂದ ಮಾಹಿತಿ
NAMMUR EXPRESD NEWS
ತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲಿ ಕೆನಲ್ ಕ್ಲಬ್ 25ನೇ ವರ್ಷದ ಸಂಭ್ರಮಾಚರಣೆಯ ಪ್ರಯುಕ್ತ ಹಲವಾರು ಕಾರ್ಯಕ್ರಮಗಳ ನ್ನು ಆಯೋಜನೆ ಮಾಡಲಾಗಿದೆ ಎಂದು ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಕಡಿದಾಳ್ ದಯಾನಂದ ಮಾಹಿತಿ ನೀಡಿದ್ದಾರೆ. ತೀರ್ಥಹಳ್ಳಿ ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ತೀರ್ಥಹಳ್ಳಿಯ ಕೆನಲ್ ಕ್ಲಬ್ 1999ರಲ್ಲಿ ಪತ್ರಕರ್ತ ಪೆ.ದೇವಣ್ಣ ಉದ್ಘಾಟನೆ ಮಾಡಿದ್ದು 25ನೇ ವರ್ಷದ ಸಂಭ್ರಮಾಚರಣೆ ಪ್ರಯುಕ್ತ ರಜತ ವರ್ಷಾಚರಣೆ ಹಾಗೂ ಪುಸ್ತಕ ಬಿಡುಗಡೆ ಸಮಾರಂಭ ಆಯೋಜಿಸಲಾಗಿದೆ. ಈ ಪ್ರಯುಕ್ತ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಜನವರಿ 26ರ ಭಾನುವಾರ ಬೆಳಿಗ್ಗೆ 11 ಗಂಟೆಗೆ ಪ್ರಾಣಿ ಕಲ್ಯಾಣ ಕಾರ್ಯಕ್ರಮದ ಜೊತೆಗೆ ಶ್ವಾನಲೋಕದ ವಿಸ್ಮಯ ಪುಸ್ತಕ ಬಿಡುಗಡೆ ಸಮಾರಂಭ ನೆರವೇರಲಿದೆ ಎಂದು ತಿಳಿಸಿದ್ದಾರೆ. ಯುವಕರು, ಹಿರಿಯ ನಾಗರೀಕರಿಗೆ ಶ್ವಾನ ಸಾಕಾಣಿಕೆ, ನಿರ್ವಹಣೆ ಕುರಿತ ಮಾಹಿತಿ ತಿಳಿಸುವ ಬದಲು ಪ್ರಸಕ್ತ ಸಾಲಿನಲ್ಲಿ ಒಂದು ಸಾವಿರ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಆಯೋಜಿಸಲಾಗಿದೆ . ವೈದ್ಯರು ಎರಡು ತಂಡವಾಗಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಿದ್ದಾರೆ. 25 ವರ್ಷಗಳ ಹಿಂದೆ ವೈದ್ಯ ಡಾ.ರಾಮಕೃಷ್ಣ ನೇತೃತ್ವದಲ್ಲಿ ಎರಡು, ಮೂರು ವರ್ಷಗಳಿಗೊಮ್ಮೆ ಶ್ವಾನಗಳ ಪ್ರದರ್ಶನ ನಿರಂತರವಾಗಿ ಮಾಡಿಕೊಂಡು ಬಂದಿದೆ. ದೇಸಿ ತಳಿಗಳ ಬೆಳವಣಿಗೆ, ತಳಿ ಉತ್ಪತ್ತಿ ಕಲ್ಯಾಣ ಕಾರ್ಯಕ್ರಮ ನಡೆಯುತ್ತಿದೆ. ರೇಬೀಸ್ ನಿಯಂತ್ರಣ ಸಂಬಂಧಿಸಿದಂತೆ ಪಶು ಸಂಗೋಪನೆ ಇಲಾಖೆಗೆ ಸಂಸ್ಥೆ ಸಹಕರಿಸಿದೆ ಎಂದು ತಿಳಿಸಿದರು. ಬೆಂಗಳೂರಿನ ಲಿಯೋ ಚಾರಿಟಬಲ್ ಸಂಸ್ಥೆ ಮುಖ್ಯಸ್ಥೆ ಶೃತಿ ರತ್ನಾಕರ್ ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಸಂಪನ್ಮೂಲ ತಜ್ಞರಾಗಿ ದೇಸಿ ಶ್ವಾನ ತಳಿಗಳ ಸಂಘದ ಅಧ್ಯಕ್ಷ ಡಾ.ಡಿ.ಟಿ.ಜಯರಾಮಯ್ಯ ಪಶುಪಾಲನಾ ಇಲಾಖೆ ನಿವೃತ್ತ ಉಪನಿರ್ದೇಶಕ ಡಾ.ಎ.ಎಂ.ಶಿವಕುಮಾರ್, ಮುಖ್ಯ ಪಶು ವೈದ್ಯಾಧಿಕಾರಿ ಡಾ.ಮುರಳೀಧರ ಕಿರಣಕೆರೆ, ಪರಿಸರಪ್ರೀಯ ಡಾ.ಎನ್ ಕಾಂತರಾಜ್ ಭಾಗವಹಿಸಲಿದ್ದಾರೆ ಎಂದರು. ಪತ್ರಿಕಾಗೋಷ್ಟಿಯಲ್ಲಿ ಕೆನೆಲ್ ಕ್ಲಬ್ ಅಧ್ಯಕ್ಷ ಎಚ್.ವಿ.ಕಾರ್ತಿಕ್ ಶರ್ಮ, ಪಶುಪಾಲನಾ ಇಲಾಖೆ ನಿವೃತ್ತ ಉಪನಿರ್ದೇಶಕ ಡಾ.ವಿ.ಕೆ.ಮಂಜುನಾಥ್, ಡಾ.ಅರುಣ್ ಕುಮಾರ್, ಬಿ.ಕೆ.ಹರ್ಷ ಮತ್ತಿತರರು ಉಪಸ್ಥಿತರಿದ್ದರು.