- ಶೀಘ್ರದಲ್ಲೇ ಹಾಲಿನ ದರ ಏರಿಕೆ ಸುಳಿವು
- ಗಣೇಶ ಹಬ್ಬದಲ್ಲಿ ಆಗುತ್ತಾ ಬೆಲೆ ಏರಿಕೆ?
NAMMUR EXPRESS NEWS
ಬೆಂಗಳೂರು: ಇಂಧನ ದರ ಏರಿಕೆ, ಖಾದ್ಯ ತೈಲ ದರ ಏರಿಕೆಯಿಂದಾಗಿ ತತ್ತರಿಸಿರುವ ಗ್ರಾಹಕರಿಗೆ ಮತ್ತೊಂದು ಶಾಕ್ ಕಾದಿದೆ.
ಶೀಘ್ರದಲ್ಲೇ ನಂದಿನಿ ಹಾಲಿನ ದರ ಕೂಡ ಏರಿಕೆ ಯಾಗಲಿದೆ. ಕಾಫಿ, ಟೀ ಪ್ರಿಯರಿಗೆ ಗಣೇಶ ಚತುರ್ಥಿಯ ಹೊತ್ತಿನಲ್ಲೇ ಕಾಫಿ,ಟೀ ಪ್ರಿಯರಿಗೆ ಹಾಲಿನ ದರ ಕೈಸುಡುವಂತಿದೆ. ಈಗಾಗಲೇ ಹಲವಾರು ಭಾರಿ ರಾಜ್ಯದಲ್ಲಿ ಹಾಲಿನ ದರ ಏರಿಕೆ ಸಂಗತಿ ಪ್ರಸ್ತಾವನೆಗೆ ಬಂದಿತ್ತು. ಆದರೆ ದರ ಏರಿಕೆ ಮಾತ್ರ ಆಗಿರಲಿಲ್ಲ. ಈಗ ದರ ಏರಿಕೆ ಬಹುತೇಕ ಖಚಿತ ಎನ್ನಲಾಗುತ್ತಿದೆ. ಕರ್ನಾಟಕ ಹಾಲು ಒಕ್ಕೂಟ ನಿರ್ದೇಶಕ ಸತೀಶ್ ರವರು ಮಾಹಿತಿ ನೀಡಿದ್ದು, ನಂದಿನಿ ಹಾಲಿನ ಪಾಕೆಟ್ ದರ ಹೆಚ್ಚಳಕ್ಕೆ 14 ಜಿಲ್ಲೆಗಳ ಹಾಲಿನ ಒಕ್ಕೂಟದವರು ಒತ್ತಡ ಮಾಡುತ್ತಿದ್ದಾರೆ ಎಂದಿದ್ದಾರೆ. ರಾಜ್ಯದ 14 ಜಿಲ್ಲೆಗಳ ಹಾಲಿನ ಒಕ್ಕೂಟದವರು ಹಾಲಿನ ದರ ಹೆಚ್ಚಳ ಮಾಡಿ ಎಂದು ಮನವಿ ಮಾಡಿದ್ದಾರೆ. ಅಲ್ಲದೇ ದರ ಏರಿಕೆ ಮಾಡಿದರೆ ಅದನ್ನೇ ರೈತರಿಗೆ ನೀಡುತ್ತೇವೆ ಎಂದು ತಿಳಿಸಿದ್ದಾರೆ. ನಂದಿನಿ ಹಾಲಿನ ಪಾಕೆಟ್ ದರ ಏರಿಕೆ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಳಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದಿದ್ದಾರೆ.
ಪ್ರಸ್ತುತ ಪ್ರತೀ ಲೀಟರ್ ಹಾಲಿನ ಪಾಕೆಟ್ ದರ 37 ರೂ ಇದ್ದು ಸರ್ಕಾರ ಒಪ್ಪಿದರೆ 40 ರೂ ಆಗಲಿದೆ. ಹೀಗಾಗಿ ಗ್ರಾಹಕರಿಗೆ ಸಣ್ಣ ಹೊರೆಯಾದ್ರು ಆ ದರವನ್ನು ಕಷ್ಟದಲ್ಲಿರುವ ಹಾಲು ಉತ್ಪಾದಕರಿಗೆ ನೀಡಲಾಗುತ್ತಿದ್ದು, ಗ್ರಾಹಕರ ಸಹಕರಿಸಬೇಕೆಂದು ಕೆಎಂಎಫ್ ಎಂಡಿ ಸತೀಶ್ ಮನವಿ ಮಾಡಿದ್ದಾರೆ.
ಆದರೆ ಈಗಾಗಲೇ ಜನರು ತೈಲ ಬೆಲೆ ಏರಿಕೆ ಹಾಗೂ ದಿನಸಿ ವಸ್ತುಗಳು, ಗ್ಯಾಸ್ ಸಿಲೆಂಡರ್ ದರ ಏರಿಕೆಯಿಂದ ಕಂಗಾಲಾಗಿದ್ದಾರೆ. ಇದರ ಮಧ್ಯೆ ಹಾಲಿನ ದರ ಏರಿಕೆ ಮತ್ತಷ್ಟು ಹೊರೆಯಾಗಲಿದೆ.ಈ ಹಿಂದೆಯೂ ಹಾಲಿನ ದರ ಏರಿಕೆಗೆ ಜನರು ಆಕ್ಷೇಪ ವ್ಯಕ್ತಪಡಿಸಿದ್ದರು. ಈಗಲೂ ಕೆಎಂಎಫ್ ನಿರ್ಣಯಕ್ಕೆ ವಿರೋಧ ವ್ಯಕ್ತವಾಗಿದೆ.