- ಹೃದಯಾಘಾತದಿಂದ ಮಧ್ಯ ರಾತ್ರಿ ಬೆಂಗಳೂರಲ್ಲಿ ನಿಧನ
- ಉತ್ತರ ಕರ್ನಾಟಕದ ಪ್ರಭಾವಿ ಬಿಜೆಪಿ ನಾಯಕ ಇನ್ನಿಲ್ಲ
NAMMUR EXPRESS NEWS
ಬೆಂಗಳೂರು: ಎಂ. ಎಸ್ ರಾಮಯ್ಯ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ಪಡೆಯುತ್ತಿದ್ದ ಆಹಾರ ಸಚಿವ ಉಮೇಶ್ ಕತ್ತಿ ಮಂಗಳವಾರ ರಾತ್ರಿ ಮೃತಪಟ್ಟಿದ್ದಾರೆ.
ಅರಣ್ಯ ಇಲಾಖೆ ಕೂಡ ನಿರ್ವಹಿಸುತ್ತಿದ್ದ ಉಮೇಶ್ ಕತ್ತಿ ಅವರಿಗೆ ಡಾಲರ್ಸ್ ಕಾಲೋನಿ ನಿವಾಸದಲ್ಲಿ ರಾತ್ರಿ 10ಕ್ಕೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಸಿಎಂ ಬಸವರಾಜ್ ಬೊಮ್ಮಾಯಿ ಸೇರಿದಂತೆ ಬಹುತೇಕ ಸಚಿವರು, ಶಾಸಕರು ಆಸ್ಪತ್ರೆಗೆ ತೆರಳಿದ್ದಾರೆ. ರಾಮಯ್ಯ ಆಸ್ಪತ್ರೆ ವೈದ್ಯರು ಕತ್ತಿ ಅವರನ್ನು ಉಳಿಸಿಕೊಳ್ಳಲು ಪ್ರಯತ್ನಪಟ್ಟರೂ ಚಿಕಿತ್ಸೆ ಫಲ ನೀಡಲಿಲ್ಲ.
ಅರೋಗ್ಯ ಸಚಿವ ಡಾ.ಸುಧಾಕರ್, ಸಚಿವ ಅಶ್ವಥನಾರಾಯಣ ಸೇರಿ ಅನೇಕರು ಭೇಟಿ ನೀಡಿದ್ದಾರೆ.
ಡಾಲರ್ಸ್ ಕಾಲೋನಿಯಲ್ಲಿ ಅಂತಿಮ ದರ್ಶನದ ಬಳಿಕ ಬೆಳಗಾವಿಗೆ ಅಂತಿಮ ಕಾರ್ಯಕ್ಕೆ ತೆಗೆದುಕೊಂಡು ಹೋಗಲಾಗುತ್ತದೆ. ಕತ್ತಿ ಅವರಿಗೆ ಈ ಹಿಂದೆ 3 ಬಾರಿ ಹೃದಯಘಾತವಾಗಿತ್ತು.
1985ರಿಂದ ಹುಕ್ಕೇರಿ ಕ್ಷೇತ್ರದ ಶಾಸಕರಾಗಿದ್ದ 61 ವರ್ಷದ ಲ್ಲಿ 8 ಬಾರಿ ಶಾಸಕರಾಗಿದ್ದ ಕತ್ತಿ ಅವರು ಉತ್ತರ ಕರ್ನಾಟಕ ಭಾಗದಲ್ಲಿ ಪ್ರಭಾವಿ ನಾಯಕರಾಗಿದ್ದರು.
ಬಿಜೆಪಿಯ ಹಿರಿಯ ಶಾಸಕರಾಗಿ,2 ಬಾರಿ ಸಚಿವರಾಗಿ ಉತ್ತರ ಕರ್ನಾಟಕ ಭಾಗದಲ್ಲಿ ಮಾಸ್ ಲೀಡರ್ ಆಗಿದ್ದರು. 1961 ಮಾರ್ಚ್ 14ರಂದು ಜನಿಸಿದ್ದರು.
ಶೆಟ್ಟರ ಸಂಪುಟದಲ್ಲಿ ಕೃಷಿ ಸಚಿವರಾಗಿದ್ದರು. 2021 ಆಹಾರ, ಅರಣ್ಯ ಸಚಿವರಾಗಿದ್ದರು. 9 ಶಾಸಕ ಸ್ಥಾನಕ್ಕೆ ಸ್ಪರ್ದಿಸಿ 8 ಗೆದ್ದಿದ್ದರು. 6 ಬಾರಿ ಪಕ್ಷ ಬದಲು ಮಾಡಿ ಗಮನ ಸೆಳೆದಿದ್ದರು.