ಅರಳಸುರಳಿಯ ಅನುಷಾ ಚಿನ್ನದ ಪದಕ ಬೇಟೆ!
– ಕುವೆಂಪು ವಿಶ್ವವಿದ್ಯಾಲಯ ನಡೆಸಿದ ಪರೀಕ್ಷೆಯಲ್ಲಿ ಪ್ರಥಮ ರ್ಯಾಂಕ್
– ರಚನಾ ರಾಜೇಶ ನಾಯಕ್ ಗೆ ಮೊದಲ ರ್ಯಾಂಕ್
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕು ಅರಳಸುರಳಿಯ ಅನುಷಾ ಎ.ಜಿ ಇವರು 2022-2023ನೇ ಸಾಲಿನಲ್ಲಿ ಕುವೆಂಪು ವಿಶ್ವವಿದ್ಯಾಲಯದವರು ನಡೆಸಿದ ಕನ್ನಡ ಸ್ನಾತಕೋತ್ತರ ಪರೀಕ್ಷೆಯಲ್ಲಿ ಜಾನಪದ ಸಾಹಿತ್ಯದಲ್ಲಿ ಅತೀ ಹೆಚ್ಚು ಅಂಕಗಳಿಸಿ ಪ್ರಥಮ ರ್ಯಾಂಕ್ ಪಡೆದಿದ್ದಾರೆ. 33ನೇ ವಾರ್ಷಿಕ ಘಟಿಕೋತ್ಸವದಲ್ಲಿ ಶ್ರೀಯುತ ಥಾವರ್ ಚಂದ್ ಗೆಹ್ಲೋಟ್ ಕರ್ನಾಟಕ ರಾಜ್ಯ ರಾಜ್ಯಪಾಲರಿಂದ ಎರಡು ಸ್ವರ್ಣ ಪದಕಗಳನ್ನು ನೀಡಿ ಗೌರವಿಸಲಾಗಿದೆ. ತೀರ್ಥಹಳ್ಳಿ ತಾಲೂಕಿನ ಅರಳಸುರಳಿಯ ಗುಡ್ಡಪ್ಪ ಮತ್ತು ಲಲಿತಾ ದಂಪತಿಗಳ ಪುತ್ರಿಯಾಗಿದ್ದಾರೆ. ಹೊಸನಗರದ ಕೊಡಚಾದ್ರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ಪ್ರಥಮ ರ್ಯಾಂಕ್ ಪಡೆದು ಕೊಡಚಾದ್ರಿ ಕಾಲೇಜಿಗೆ ಈ ಹಿಂದೆ ಕೀರ್ತಿ ತಂದಿದ್ದರು.
ರಚನಾ ರಾಜೇಶ ನಾಯಕ್ ಗೆ ಮೊದಲ ರ್ಯಾಂಕ್
ಕುವೆಂಪು ವಿಶ್ವ ವಿದ್ಯಾನಿಲಯದಲ್ಲಿ 2022ರಲ್ಲಿ ನಡೆದ ಸ್ನಾತಕೋತ್ತರ ಬಯೋ ಕೆಮಿಸ್ಟ್ರಿ ಪದವಿ ಪರೀಕ್ಷೆಯಲ್ಲಿ ಮೊದಲ ರ್ಯಾಂಕ್ ಗಳಿಸಿದ್ದಾರೆ. ತೀರ್ಥಹಳ್ಳಿ ತಾಲ್ಲೂಕು ಹುಂಚದಕಟ್ಟೆ ಗ್ರಾಮ ಪಂಚಾಯತ್ ಸದಸ್ಯೆ ಕಲಾವತಿ ಆರ್. ನಾಯಕ್ ಮತ್ತು ರಾಜೇಶ ಆರ್. ನಾಯಕ್ ಪುತ್ರಿಯಾಗಿದ್ದಾರೆ. ಇವರು ಕೂಡ 33ನೇ ವಾರ್ಷಿಕ ಘಟಿಕೋತ್ಸವದಲ್ಲಿ ಶ್ರೀಯುತ ಥಾವರ್ ಚಂದ್ ಗೆಹ್ಲೋಟ್ ಅವರಿಂದ ಪದಕ ಪಡೆದಿದ್ದಾರೆ.
ಇದನ್ನೂ ಓದಿ : ತೀರ್ಥಹಳ್ಳಿ ಹುಡುಗನ ಅನುಮಾನಾಸ್ಪದ ಸಾವು!
HOW TO APPLY : NEET-UG COUNSELLING 2023