ಕ್ರಿಯೇಟಿವ್ ಪಿಯು ಕಾಲೇಜಲ್ಲಿ ಸ್ವಾತಂತ್ರ್ಯದ ಹಬ್ಬ!
– ದೇಶ ಭಕ್ತಿಯ ಸಂಭ್ರಮದಲ್ಲಿ ಮುಳುಗಿದ ಕ್ರಿಯೇಟಿವ್ ಕ್ಯಾಂಪಸ್
– ನ್ಯಾಯವಾದಿ ವಿಜಯಕುಮಾರ್ ಆದರ್ಶ ಮಾತು
– ಸಾದ್ವಿನಿ ಕೊಪ್ಪ ಅವರ ಕ್ರಿಯೇಟಿವ್ ಸವಿಗಾನ!
– ಯೋಗಾಸನ ಸಾಧಕಿ ನಿಧಿ ಆಚಾರ್ ಅವರಿಗೆ ಸನ್ಮಾನ
NAMMUR EXPRESS NEWS
ಕಾರ್ಕಳ: ಕಾರ್ಕಳದ ಕ್ರಿಯೇಟಿವ್ ಪಿಯು ಕಾಲೇಜಲ್ಲಿ ಸ್ವಾತಂತ್ರ್ಯ ಸಂಭ್ರಮ ಇಡೀ ಕ್ಯಾಂಪಸ್ಸನ್ನು ದೇಶ ಭಕ್ತಿಯ ಮೆರಗಲ್ಲಿ ತೇಲಿಸಿತು. ಕ್ರಿಯೇಟಿವ್ ಕ್ಯಾಂಪಸ್ ಸಂಪೂರ್ಣ ಕೇಸರಿ, ಬಿಳಿ, ಹಸಿರು ಬಣ್ಣದಲ್ಲಿ ಕಂಗೊಳಿಸಿತು. ಕಾರ್ಕಳದ ಖ್ಯಾತ ನ್ಯಾಯವಾದಿ ವಿಜಯಕುಮಾರ್ ಅವರ ದೇಶ ಪ್ರೇಮದ ಮಾತು ವಿದ್ಯಾರ್ಥಿಗಳಿಗೆ ಹೊಸ ಹುರುಪು ನೀಡಿತು. ಕನ್ನಡದ ಖ್ಯಾತ ಗಾಯಕಿ ಸಾದ್ವಿನಿ ಕೊಪ್ಪ ಅವರ ಕ್ರಿಯೇಟಿವ್ ಸವಿಗಾನ ಮನಸೂರೆಗೊಳಿಸಿತು. ಕಾರ್ಯಕ್ರಮದಲ್ಲಿ ಯೋಗಾಸನ ಸಾಧಕಿ ನಿಧಿ ಆಚಾರ್ ಅವರಿಗೆ ಸನ್ಮಾನ ಮಾಡಲಾಯಿತು.
ಭಾರತ ಭೂಮಿಯಲ್ಲಿ ಜನಿಸಿದ್ದೆ ಪುಣ್ಯ
ಭೂಮಿಯಲ್ಲಿ ಜನಿಸಿರುವುದೇ ಪುಣ್ಯ. ಈ ದೇಶದ ಪ್ರಜೆಗಳಾಗಿ ಜೀವನವನ್ನು ಸಾರ್ಥಕ ಪಡಿಸಿಕೊಳ್ಳೋಣ ಎಂದು ಕಾರ್ಕಳದ ಖ್ಯಾತ ನ್ಯಾಯವಾದಿ ಎಂ.ಕೆ.ವಿಜಯಕುಮಾರ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಕಾರ್ಕಳ ಕ್ರಿಯೇಟಿವ್ ಪಿ ಯು ಕಾಲೇಜಿನಲ್ಲಿ ಧ್ವಜಾರೋಹಣ ನೇರವೇರಿಸಿ ಮಾತನಾಡಿ, ನಮ್ಮ ದೇಶಕ್ಕೆ ಹಿರಿಯರ ನಿಸ್ವಾರ್ಥ, ತ್ಯಾಗ, ದೇಶಪ್ರೇಮದ ಪರಾಕಾಷ್ಠೆಯ ಪರಿಣಾಮ ಇಂದು ಸ್ವತಂತ್ರ ಭಾರತದಲ್ಲಿ ನಾವು ಜೀವಿಸುತ್ತಿದ್ದೇವೆ. ಬ್ರಿಟಿಷರಿಂದ ಸ್ವಾತಂತ್ರ್ಯವನ್ನು ಪಡೆಯಲು ನಮ್ಮ ಪೂರ್ವಜರು ಭಾರತವೆಂಬುದು ಶ್ರೇಷ್ಠ ಭಾರತವಾಗಬೇಕೆಂದು ಬಲಿದಾನಗೈದರು. ಇಂತಹ ಅಮೃತಕಾಲವನ್ನು ನಾವು ಸಂಪತ್ತಿನಂತೆ ಕಾಪಾಡಿಕೊಳ್ಳಬೇಕು ಎಂದರು. ಧ್ವಜಾರೋಹಣ ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ವಿದ್ವಾನ್ ಗಣಪತಿ ಭಟ್, ಸಂಸ್ಥಾಪಕರಾದ ಅಶ್ವತ್ ಎಸ್ ಎಲ್, ಆದರ್ಶ ಎಂ.ಕೆ, ಅಮೃತ್ ರೈ, ಗಣಪತಿ ಭಟ್ ಕೆ ಎಸ್, ಉಪನ್ಯಾಸಕ ವರ್ಗ ಹಾಗೂ ಉಪನ್ಯಾಸಕೇತರ ವರ್ಗದವರು ಉಪಸ್ಥಿತರಿದ್ದರು. ಆಂಗ್ಲ ಭಾಷಾ ಉಪನ್ಯಾಸಕ ರಾಜೇಶ್ ಶೆಟ್ಟಿ ನಿರೂಪಿಸಿ ವಂದಿಸಿದರು.
ಸಾದ್ವಿನಿ ಕೊಪ್ಪ ಅವರ ಕ್ರಿಯೇಟಿವ್ ಸವಿಗಾನ!
ಧ್ವಜಾರೋಹಣ ಕಾರ್ಯಕ್ರಮದ ನಂತರ ಪ್ರಸಿದ್ಧ ಚಲನಚಿತ್ರ ಹಿನ್ನಲೆ ಗಾಯಕಿ, ಜೀ ಸರಿಗಮಪ ಸಂಗೀತ ಸ್ಪರ್ಧೆಯ ರನ್ನರ್ ಅಪ್ ಕು.ಸಾಧ್ವಿನಿ ಕೊಪ್ಪ ಮತ್ತು ತಂಡದವರಿಂದ ಸದಭಿರುಚಿಯ ಗೀತ ಗಾಯನ “ಕ್ರಿಯೇಟಿವ್ ಸವಿಗಾನ” ಕಾರ್ಯಕ್ರಮ ನೆರವೇರಿತು. ಲೋಹಿತ್ ಎಸ್ ಕೆ ನಿರೂಪಿಸಿ ವಿನಾಯಕ ಜೋಗ್ ಧನ್ಯವಾದಗೈದರು.
ಯೋಗಾಸನ ಸಾಧಕಿ ನಿಧಿ ಆಚಾರ್ ಸನ್ಮಾನ
ಅಂಡಮಾನ್ನಲ್ಲಿ ನಡೆದ ಯೋಗಾಸನ ಸ್ಪರ್ಧೆಯಲ್ಲಿ ರಾಷ್ಟ್ರವನ್ನು ಪ್ರತಿನಿಧಿಸಿ ಸಂಸ್ಥೆಗೂ ಗೌರವ
ತಂದ ಕ್ರಿಯೇಟಿವ್ ಕಾಲೇಜಿನ ಹಳೆ ವಿದ್ಯಾರ್ಥಿನಿ ನಿಧಿ ಯು ಆಚಾರ್ ಅವರನ್ನು ಸಂಸ್ಥೆಯ ವತಿಯಿಂದ ಹೆಮ್ಮೆಯಿಂದ ಸನ್ಮಾನಿಸಲಾಯಿತು.