Author: Nammur Express Admin

ಈ ದಿನದ ರಾಶಿ ಭವಿಷ್ಯ ಹೇಗಿದೆ? – ಇಂದು ಕಾರ್ತಿಕ ಹುಣ್ಣಿಮೆ ಯಾವ ರಾಶಿಯವರಿಗೆ ಲಾಭ? ಯಾವ ರಾಶಿಯವರಿಗೆ ನಷ್ಟ? NAMMUR EXPRESS NEWS ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು? ** ಮೇಷ ರಾಶಿ : ಇಂದು ನಿಮಗೆ ಉತ್ತಮ ದಿನವಾಗಲಿದೆ. ಹಣದ ಮಹತ್ವ ನಿಮಗೆ ಇಂದು ಚೆನ್ನಾಗಿ ತಿಳಿಯಲಿದೆ. ಕೆಲಸದಲ್ಲಿ ಜನರೊಂದಿಗೆ ವ್ಯವಹರಿಸುವಾಗ ಜಾಗರೂಕರಾಗಿರಿ ಮತ್ತು ತಾಳ್ಮೆಯಿಂದಿರಿ. ಬಹಳ ದಿನಗಳಿಂದ ಬಾಕಿ ಉಳಿದಿರುವ ಮೊತ್ತ ಇಂದು ವಸೂಲಿಯಾಗಲಿದೆ. ನಿಮ್ಮ ಕುಟುಂಬದ ಜವಾಬ್ದಾರಿಗಳನ್ನು ಮರೆಯಬೇಡಿ. ಏನಾಗುತ್ತದೆ ಎಂದು ನಿರೀಕ್ಷಿಸಬೇಡಿ, ಹೊರಗೆ ಹೋಗಿ ಮತ್ತು ಹೊಸ ಅವಕಾಶಗಳಿಗಾಗಿ ನೋಡಿ. ** ವೃಷಭ ರಾಶಿ : ಇಂದು ಕುಟುಂಬದಲ್ಲಿ ವಾದ ಅಥವಾ ವಿವಾದದ ಸಾಧ್ಯತೆ ಇದೆ. ಆದ್ದರಿಂದ, ಅಂತಹ ಪರಿಸ್ಥಿತಿಯಲ್ಲಿ, ನಿಮ್ಮನ್ನು ನಿಯಂತ್ರಿಸಿಕೊಳ್ಳಿ. ಇಂದು, ಸ್ವಾರ್ಥಿಗಳು ಮತ್ತು ಮಂಗೋಪಿ ಜನರಿಂದ ದೂರವಿರಿ. ಏಕೆಂದರೆ ಅವರು…

Read More

ರಾಜಧಾನಿಯಲ್ಲಿ ಎಂಎಸ್‌ಎಮ್‌ಇ ಮತ್ತು ಸ್ಟಾರ್ಟ್‌ಅಪ್ ಕಾಂಕ್ಲೇವ್ – ಬಿಸಿನೆಸ್ ಎಕ್ಸಲೆನ್ಸ್ ಅವಾರ್ಡ್ಸ್ ಕಾರ್ಯಕ್ರಮ – ಅಂತಾರಾಷ್ಟ್ರೀಯ ಚೇಂಬರ್ ಫಾರ್ ಸರಸ್ವತ್ ಎಂಟ್ರಪ್ರನರ್ಸ್, ಮಾಹೇ ಬೆಂಗಳೂರು ಸಹಯೋಗ – ನೀವೂ ಸ್ಟಾರ್ಟ್ ಅಪ್ ಉದ್ಯಮಿಗಳಾ? ನೋಂದಾಯಿಸಿಕೊಂಡು ಪಾಲ್ಗೊಳ್ಳಿ ಅಂತಾರಾಷ್ಟ್ರೀಯ ಚೇಂಬರ್ ಫಾರ್ ಸರಸ್ವತ್ ಎಂಟ್ರಪ್ರನರ್ಸ್, ಮಾಹೇ ಬೆಂಗಳೂರು ಸಹಯೋಗದಲ್ಲಿ 2024 ನೇ ಸಾಲಿನ ಎಂಎಸ್‌ಎಮ್‌ಇ ಮತ್ತು ಸ್ಟಾರ್ಟ್‌ಅಪ್ ಕಾಂಕ್ಲೇವ್ ಮತ್ತು ಬಿಸಿನೆಸ್ ಎಕ್ಸಲೆನ್ಸ್ ಅವಾರ್ಡ್ಸ್, 16ನೇ ನವೆಂಬರ್ 2024 ರಂದು ರಾಜಧಾನಿ ಬೆಂಗಳೂರಲ್ಲಿ ನಡೆಯುತ್ತಿದೆ. ನ.16ರ ಬೆಳಿಗ್ಗೆ 9 ಗಂಟೆಗೆ ಡಾ. ರಾಮದಾಸ್ ಎಂ ಪೈ ಕನ್ವೆನ್ಶನ್ ಹಾಲ್, ಮಾಹೇ ಬೆಂಗಳೂರು ಕ್ಯಾಂಪಸ್, ಯಲಹಂಕ, ಬೆಂಗಳೂರಿನಲ್ಲಿ ಎಂಎಸ್‌ಎಮ್‌ಇ ಮತ್ತು ಸ್ಟಾರ್ಟ್‌ಅಪ್ ಕಾಂಕ್ಲೇವ್ ಆರಂಭವಾಗಲಿದೆ. ಸಾರಸ್ವತ ಸಮಾಜದ ನವೋದ್ಯಮಿಗಳು ಸೇರಿದಂತೆ ಎಲ್ಲಾ ಸಮುದಾಯದ ತಮ್ಮ ಹೆಸರನ್ನು ಕೆಳಗೆ ಕೊಟ್ಟಿರುವ ಸ್ಕ್ಯಾನರ್ ಮೂಲಕ ನೊಂದಾಯಿಸಿಕೊಳ್ಳಬಹುದು. ಈ ಕಾಂಕ್ಲೇವ್ ಸ್ಮಾಲ್ ಮತ್ತು ಮಿಡಿಯಂ ಎಂಟರ್‌ಪ್ರೈಸಸ್ ಕ್ಷೇತ್ರದ ಉದ್ಯಮಿಗಳನ್ನು, ಕೈಗಾರಿಕಾ ನಾಯಕರನ್ನು, ಉದ್ಯಮ ಕಟ್ಟುವ ಹಂಬಲವಿರುವ ಯುವ ಮನಸ್ಸುಗಳನ್ನು…

Read More

ಕರ್ನಾಟಕ ಹೋಟೆಲ್ ಕಾರ್ಮಿಕರ ಸಂಘದ ತುರ್ತು ಪ್ರಕಟಣೆ – ರಾಜ್ಯ ನಿರ್ದೇಶಕರಾದ ಸಾಧಿಕ್ ಬೆಳ್ಳಾರೆ ಸದಸ್ಯತ್ವದಿಂದ ಉಚ್ಚಾಟನೆ – ಸಂಘಟನೆಯ ಎಲ್ಲಾ ಹುದ್ದೆಗಳಿಂದ ತೆರವು: ಸದಸ್ಯರಿಗೆ ಮಾಹಿತಿ NAMMUR EXPRESS NEWS ಬೆಂಗಳೂರು: ಕರ್ನಾಟಕ ಹೋಟೆಲ್ ಕಾರ್ಮಿಕರ ಸಂಘದ ರಾಜ್ಯ ನಿರ್ದೇಶಕರಾದ ಸಾಧಿಕ್ ಬೆಳ್ಳಾರೆ ಅವರನ್ನು ಸಂಘಟನೆಯ ಎಲ್ಲಾ ಹುದ್ದೆಗಳಿಂದ ಮತ್ತು ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟನೆ ಮಾಡಲಾಗಿದೆ ಎಂದು ಸಂಘದ ಪ್ರಕಟಣೆ ತಿಳಿಸಿದೆ. ಕರ್ನಾಟಕ ಹೋಟೆಲ್ ಕಾರ್ಮಿಕರ ಸಂಘವು ತನ್ನ ನೈತಿಕ ಮತ್ತು ಸಂಘಟನಾ ಮೌಲ್ಯಗಳನ್ನು ಕಾಪಾಡಿಕೊಳ್ಳಲು ಬದ್ಧವಾಗಿದೆ. ಸಂಘದ ರಾಜ್ಯ ನಿರ್ದೇಶಕರಾದ ಸಾಧಿಕ್ ಬೆಳ್ಳಾರೆ ಅವರ ವಿರುದ್ಧ ಶಿಸ್ತಿನ ಕ್ರಮಕ್ಕೆ ಎಡವಿರುವ ವರ್ತನೆಯ ಆರೋಪದ ಹಿನ್ನೆಲೆಯಲ್ಲಿ ತಕ್ಷಣದಿಂದ ಅವರನ್ನು ಸಂಘಟನೆಯ ಎಲ್ಲಾ ಹುದ್ದೆಗಳಿಂದ ಹಾಗೂ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟನೆಗೊಳಿಸಲಾಗಿದೆ. ಈ ಕ್ರಮವು ಸಂಘಟನೆಯ ನಿಯಮಾವಳಿಗಳಿಗೆ ಹಾಗೂ ನಿಯಮಿತಗಳಿಗೆ ವಿರುದ್ಧವಾಗಿರುವ ಯಾವುದೇ ನಡೆಗಳನ್ನು ತಡೆಯಲು, ನೈತಿಕತೆಯನ್ನು ಕಾಪಾಡಲು ಮತ್ತು ಸಂಘಟನೆಯ ಶ್ರೇಯೋಭಿವೃದ್ಧಿಯನ್ನು ಕಾಪಾಡಲು ತೆಗೆದುಕೊಳ್ಳಲಾಗಿದ್ದು ಇದು ಎಲ್ಲಾ ಸದಸ್ಯರಿಗೆ ನೈತಿಕತೆ ಹಾಗೂ…

Read More

ಲಯನ್ಸ್‌ ಕ್ಲಬ್‌ ಕಾರ್ಕಳ ಸಿಟಿ ವತಿಯಿಂದ ಮಕ್ಕಳ ದಿನದ ಸಂಭ್ರಮ – ವಿವಿಧ ಆಟ: ಬಹುಮಾನ ವಿತರಣೆ: ಮಕ್ಕಳ ಖುಷಿ – ಕಾರ್ಕಳದ ವಿವಿಧ ಸಂಘ ಸಂಸ್ಥೆಗಳ ಸಹಯೋಗ NAMMUR EXPRESS NEWS ಕಾರ್ಕಳ : ಲಯನ್ಸ್‌ ಕ್ಲಬ್‌ ಕಾರ್ಕಳ ಸಿಟಿ ವತಿಯಿಂದ ನ.14 ರಂದು ಮಕ್ಕಳ ದಿನಾಚರಣೆಯನ್ನು ಗುಂಡ್ಯಡ್ಕ ಅಂಗನವಾಡಿ ಕೇಂದ್ರದಲ್ಲಿ ಆಚರಿಸಲಾಯಿತು. ಆ ಪ್ರಯುಕ್ತ ನ.13ರಂದು ಅಂಗನವಾಡಿ ಮಕ್ಕಳಿಗೆ ವಿವಿಧ ಆಟೋಟ ಸ್ಪರ್ಧೆ ಮತ್ತು 0-2 ವರ್ಷದ ಮಕ್ಕಳಿಗೆ ಆರೋಗ್ಯವಂತ ಶಿಶು ಸ್ಪರ್ಧೆಯನ್ನು ನಡೆಸಲಾಗಿತ್ತು. ವಿಜೇತರಾದ ಪುಟಾಣಿ ಮಕ್ಕಳಿಗೆ ಲಯನ್ಸ್‌ ಕ್ಲಬ್‌ ಕಾರ್ಕಳ ಸಿಟಿ ವತಿಯಿಂದ ಬಹುಮಾನ ವಿತರಿಸಲಾಯಿತು. ಸ್ಥಳೀಯ ಸ್ಟಾರ್‌ ಕ್ರಿಕೆಟ್‌ ತಂಡವು ಮಕ್ಕಳಿಗೆ ಪುಸ್ತಕ, ಸ್ಲೇಟ್‌ ಮತ್ತು ಉಪಹಾರದ ವ್ಯವಸ್ಥೆ ಮತ್ತು ಲಯನ್ಸ್‌ ಸಿಟಿ ವತಿಯಿಂದ ಸಿಹಿತಿಂಡಿ ವಿತರಿಸಲಾಯಿತು. ಲಯನ್ಸ್‌ ಸಿಟಿ ಅಧ್ಯಕ್ಷೆ ಜ್ಯೋತಿ ರಮೇಶ್‌, ಕಾರ್ಯದರ್ಶಿ ರಘುನಾಥ್‌ ಕೆ.ಎಸ್.‌, ಕೋಶಾಧಿಕಾರಿ ಟಿ.ಕೆ. ರಘುವೀರ್‌, ಬಾಲ ವಿಕಾಸ ಸಮಿತಿಯ ಹರೀಶ್‌, ಸ್ಟಾರ್‌ ಕ್ರಿಕೆಟ್‌ ತಂಡದ ಸದಸ್ಯರು…

Read More

ತೀರ್ಥಹಳ್ಳಿ ಎಸ್.ಬಿ.ಐ ಲೈಫ್ ವತಿಯಿಂದ ಮಕ್ಕಳ ದಿನಾಚರಣೆ – ಶಿಶುಮಂದಿರದ ಮಕ್ಕಳಿಗೆ ಚಿತ್ರ ಕಲೆ ಸ್ಪರ್ಧೆ: ಮಕ್ಕಳ ಸಂತಸ NAMMUR EXPRESS NEWS ತೀರ್ಥಹಳ್ಳಿ: ತೀರ್ಥಹಳ್ಳಿ ಎಸ್.ಬಿ.ಐ ಲೈಫ್ ವತಿಯಿಂದ ಮಕ್ಕಳ ದಿನಾಚರಣೆಯ ಅಂಗವಾಗಿ ಮಾಂಟೆಸರಿ ಮುಗುಳ್ನಗೆ ಹಾಗೂ ಸೇವಾಭಾರತಿ ಶಿಶುಮಂದಿರದ ಮಕ್ಕಳಿಗೆ ಚಿತ್ರ ಕಲೆ ಸ್ಪರ್ಧೆ ಏರ್ಪಡಿಸಲಾಯಿತು. ಎಸ್ ಬಿ.ಐ ಲೈಫ್ ಸೀನಿಯರ್ ಮ್ಯಾನೇಜರ್ ಶರತ್ ಟಿ.ಆರ್ ಹಾಗೂ ಬ್ರಾಂಚ್ ಮ್ಯಾನೇಜರ್ ಶೈಲೆಂದ್ರ ಸೇರಿdanತೆ ಹಲವರು ಇದ್ದರು.

Read More

ಕರಾವಳಿ ಟಾಪ್ ನ್ಯೂಸ್ – ಕಾರ್ಕಳದಲ್ಲಿ 15 ಲಕ್ಷದ ಅಕ್ರಮ ಮದ್ಯ ವಶ! – ಬಂಟ್ವಾಳ: ಬ್ರೇಕ್ ಫೇಲ್ ಆಗಿ ಬಿದ್ದ ಕಾರು, 8 ವಿದ್ಯಾರ್ಥಿಗಳಿಗೆ ಗಾಯ – ಮಂಗಳೂರು: ಪಕ್ಷಿಕೆರೆ ಪ್ರಕರಣಕ್ಕೆ ಟ್ವಿಸ್ಟ್: ಅನೇಕರಿಗೆ ಮೋಸ! – ಪುತ್ತೂರು: ಸರ್ಕಾರಿ ಬಸ್‌ ಕಂಡಕ್ಟರ್ ಗೆ ಪ್ರಯಾಣಿಕನಿಂದ ಕಪಾಳಮೋಕ್ಷ! NAMMUR EXPRESS NEWS ಕಾರ್ಕಳ: ಬೋಳ ಗ್ರಾಮದಲ್ಲಿ ಭಾರೀ ಪ್ರಮಾಣದಲ್ಲಿ ಅಕ್ರಮವಾಗಿ ದಾಸ್ತಾನಿರಿಸಿದ್ದ ಮದ್ಯದ ಬಾಕ್ಸ್‌ಗಳನ್ನು ಅಬಕಾರಿ ಇಲಾಖೆ ದಾಳಿ ಮಾಡಿದೆ. ಹಾಗೂ ಮದ್ಯದ ಬಾಟಲಿಗಳನ್ನು ವಶಕ್ಕೆ ಪಡೆದುಕೊಂಡಿದೆ. ಈ ಘಟನೆ ಗುರುವಾರ ನಡೆದಿದೆ. ಗೋವಾದಿಂದ ಅಕ್ರಮವಾಗಿ ತರಿಸಲಾಗಿದ್ದ ಸುಮಾರು 15 ಲಕ್ಷ ಮೌಲ್ಯದ್ದು ಎನ್ನಲಾಗಿದೆ. ಅಬಕಾರಿ ಉಪ ಆಯುಕ್ತ ಬಿಂದು ಅವರ ನೇತೃತ್ವದಲ್ಲಿ ಈ ದಾಳಿ ನಡೆದಿದೆ. ದುಬಾರಿ ಮೌಲ್ಯದ ಮದ್ಯದ ಬಾಟಲಿಗಳು ಬಾಕ್ಸ್ ಸಮೇತ ದಾಸ್ತಾನು ಮಾಡಲಾಗಿತ್ತು. 200 ಕ್ಕೂ ಹೆಚ್ಚು ಬಾಕ್ಸ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಬಂಟ್ವಾಳ: ಬ್ರೇಕ್ ಫೇಲ್ ಆಗಿ ಬಿದ್ದ ಕಾರು, 8 ವಿದ್ಯಾರ್ಥಿಗಳಿಗೆ ಗಾಯ…

Read More

ನ.15ರಂದು ಪಂಚದುರ್ಗಾ ಮಂತ್ರ ಹೋಮ, ಸಾರ್ವಜನಿಕ ಕಾರ್ತಿಕ ದೀಪೋತ್ಸವ – ಆಯುಷ್ಯ ಪ್ರಾಪ್ತಿಗಾಗಿ ಪಂಚದುರ್ಗಾ ಮಂತ್ರ ಹೋಮ – ಶ್ರೀ ರಾಮೇಶ್ವರ ದೇವರ ಸನ್ನಿಧಿಯಲ್ಲಿ ತೃತೀಯ ವರ್ಷದ ನಿತ್ಯ ಅನ್ನಸಂತರ್ಪಣಾ ಕಾರ್ಯದ ವಾರ್ಷಿಕೋತ್ಸವ NAMMUR EXPRESS NEWS ತೀರ್ಥಹಳ್ಳಿ: ತೃತೀಯ ವರ್ಷದ ನಿತ್ಯ ಅನ್ನಸಂತರ್ಪಣಾ ಕಾರ್ಯದ ವಾರ್ಷಿಕೋತ್ಸವ ಪ್ರಯುಕ್ತ ಪಂಚದುರ್ಗಾ ಮಂತ್ರ ಹೋಮ ಕಾರ್ತಿಕ ಶುದ್ಧ ಹುಣ್ಣಿಮೆ ನ. 15ನೇ ಶುಕ್ರವಾರದಂದು ಬೆಳಗ್ಗೆ ಗಂಟೆ 10-30ರಿಂದ ಶ್ರೀ ರಾಮೇಶ್ವರ ದೇವರ ಸನ್ನಿಧಿಯಲ್ಲಿ ಲೋಕಕಲ್ಯಾಣಾರ್ಥ ಹಾಗೂ ಅಪಮೃತ್ಯು, ರೋಗ-ರುಜನ, ಗ್ರಹಚಾರ ದೋಷ ನಿವಾರರ್ಣಾರ್ಥ ಸಮಸ್ತ ಭಕ್ತ ಮಹಾಜನರ ಶ್ರೇಯೋಭಿವೃಧಿ ಹಾಗೂ ಆರೋಗ್ಯ ಆಯುಷ್ಯ ಪ್ರಾಪ್ತಿಗಾಗಿ ಶ್ರೀ ರಾಮೇಶ್ವರ ದೇವರ ಸನ್ನಿಧಿಯಲ್ಲಿ ಸುಸಂಕಲ್ಪದ ಸಲುವಾಗಿ ಪಂಚದುರ್ಗಾ ಮಂತ್ರ ಹೋಮ, ಹಾಗೂ ರಾತ್ರಿ 7-30ಗಂಟೆಗೆ ಸಾರ್ವಜನಿಕ ಕಾರ್ತಿಕ ದೀಪೋತ್ಸವ ನೆರವೇರಲಿದೆ.ತಾವು ಶ್ರೀ ದೇವರ ಸನ್ನಿಧಿಯಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ, ತನು ಮನ ಧನ ಸಹಕಾರ ನೀಡಿ, ಶ್ರೀ ದೇವರ ಕೃಪೆಗೆ ಪಾತ್ರರಾಗಲು ಈ ಮೂಲಕ…

Read More

ಕರಾವಳಿ ಟಾಪ್ ನ್ಯೂಸ್ – ಕರಾವಳಿ ಆನ್ಲೈನ್ ಮೋಸಕ್ಕೆ ಲಕ್ಷ ಲಕ್ಷ ಡಮಾರ್! – ವಿಟ್ಲ: ಮಾಣಿ -ಮೈಸೂರು ರಾಜ್ಯ ಹೈವೇ ಸಂಚಾರ ಬಂದ್ – ಮಲ್ಪೆ : ಡ್ರಗ್ಸ್‌ ಪಾರ್ಸೆಲ್‌ ಹೆಸರಲ್ಲಿ ಬೆದರಿಸಿ 20 ಲಕ್ಷ ವಂಚನೆ – ಮಂಗಳೂರು : ಕಾಲೇಜಿನಲ್ಲಿ ಕುಸಿದು ಬಿದ್ದಿದ್ದ ಉಪನ್ಯಾಸಕಿ ಸಾವು – ಉಡುಪಿ: ಪಾರ್ಟ್‌ ಟೈಮ್ ಜಾಬ್‌ ಹೆಸರಲ್ಲಿ ಲಕ್ಷ ಲಕ್ಷ ಮೋಸ – ಸುಳ್ಯ: ಕಾರು ಪಲ್ಟಿ, ನಾಲ್ವರಿಗೆ ಗಾಯ – ಉಡುಪಿ: ಲೈಂಗಿಕ ಕಿರುಕುಳ, ಇಬ್ಬರಿಗೆ 3 ವರ್ಷ ಜೈಲು ಶಿಕ್ಷೆ NAMMUR EXPRESS NEWS ವಿಟ್ಲ: ಮಾಣಿ -ಮೈಸೂರು ರಾಜ್ಯ ಹೆದ್ದಾರಿಯ ಮಿತ್ತೂರು ಬಳಿ ಮರವೊಂದು ಲಾರಿಯ ಮೇಲೆ ಬಿದ್ದು ರಸ್ತೆ ಸಂಪೂರ್ಣ ಬ್ಲಾಕ್ ಆಗಿದೆ. ನ.13ರ ರಾತ್ರಿ ಬಂದ ಭಾರೀ ಮಳೆಗೆ ಹೆದ್ದಾರಿಯಲ್ಲಿ ತೆರಳುತ್ತಿದ್ದ ಲಾರಿ ಮೇಲೆ ಮರ ಉರುಳಿ ಬಿದ್ದಿದೆ. ಇದರಿಂದ ಮಂಗಳೂರು-ಪುತ್ತೂರು ಸಂಪರ್ಕ ಕಡಿತಗೊಂಡಿದೆ. ಪುತ್ತೂರು ಕಡೆಯಿಂದ ಬರುವ ವಾಹನ ವಿಟ್ಲ ಮೂಲಕ…

Read More

ಕರ್ನಾಟಕ ಟಾಪ್ ನ್ಯೂಸ್ – ದೀಪಾವಳಿ ನೆಪದಲ್ಲಿ ಪೆಟ್ರೋಲ್ ಸ್ಫೋಟಿಸಿ ವಿದ್ಯಾರ್ಥಿಗಳಿಂದ ಹುಚ್ಚಾಟ!! – ಮಡಿಕೇರಿ: ಪತ್ನಿ ಜೊತೆ ರಿಯಲ್‌ ಎಸ್ಟೇಟ್‌ ಉದ್ಯಮಿ ಆತ್ಮಹತ್ಯೆ! – ಅಪ್ರಾಪ್ತ ಬಾಲಕಿಗೆ ಮದುವೆಯಾಗುವಂತೆ ಕಾಟ, ಆತ್ಮಹತ್ಯೆ! NAMMUR EXPRESS NEWS ಹಾಸನ: ಏಕಾಏಕಿ ಖ್ಯಾತಿ ಪಡೆಯಬೇಕೆಂದು ರೀಲ್ಸ್​ ಗೀಳಿಗೆ ಬಿದ್ದು ಹಲವರು ತಮ್ಮ ಭವಿಷ್ಯವನ್ನೇ ಕತ್ತಲೆ ಕಡೆಗೆ ನೂಕಿದ್ದಾರೆ. ಕಾಲೇಜಿನ ವಿದ್ಯಾರ್ಥಿಯೊಬ್ಬ ದೀಪಾವಳಿ ನೆಪದಲ್ಲಿ ಪೆಟ್ರೋಲ್ ಸಿಡಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹಾಸನದ ರಾಜೀವ್ ಆಯುರ್ವೇದ ಕಾಲೇಜಿನ ಆಯುರ್ವೇದ ಮೆಡಿಸಿನ್ ಮತ್ತು ಸರ್ಜರಿ ಪದವಿ ವ್ಯಾಸಂಗ ಮಾಡುತ್ತಿರುವ ಲೋಕಕಿರಣ್ ಹೆಚ್ ಎನ್ನುವ ವಿದ್ಯಾರ್ಥಿ ತನ್ನ ಸ್ನೇಹಿತರೊಂದಿಗೆ ಸೇರಿಕೊಂಡು ಕಾಲೇಜಿನ ಪಕ್ಕದ ರಸ್ತೆಯಲ್ಲಿ ಪೆಟ್ರೋಲ್ ಬಾಂಬ್ ಸಿಡಿಸಿದ್ದಾನೆ. ವಿಡಿಯೋವನ್ನು ಲೋಕಕಿರಣ್ ಸ್ನೇಹಿತ ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದು, ವಿಡಿಯೋ ವೈರಲ್ ಆಗಿದೆ. ವಿದ್ಯಾರ್ಥಿಯು ತನ್ನ ಬೈಕ್​ನಲ್ಲಿದ್ದ ಪೆಟ್ರೋಲ್​ ತೆಗೆದು ಕವರ್​ಗೆ ತುಂಬಿ, ಅದಕ್ಕೆ ಬತ್ತಿ ಹಾಕಿ, ಬೆಂಕಿ ಕೊಟ್ಟಿದ್ದಾರೆ. ಕವರ್ ಸ್ಫೋಟಗೊಳ್ಳುತ್ತಿದ್ದಂತೆ ಸುಮಾರು 10 ಅಡಿ…

Read More