Author: Nammur Express Admin

ನೇರಳಕಟ್ಟೆಯ ಹೆಮ್ಮೆಯ ಕಲಾವಿದರು ರವಿರಾಜ್ ಶೆಟ್ಟರು!! * ನಮ್ಮ ಸಂಸ್ಕೃತಿ, ಪರಂಪರೆ, ಸಂಪ್ರದಾಯವನ್ನು ಉಳಿಸಿ ಬೆಳೆಸುತ್ತಿರುವ ಕಲಾವಿದ! * ಯಕ್ಷಗಾನ ಕ್ಷೇತ್ರ ಭಜನಾ ಕ್ಷೇತ್ರಗಳಲ್ಲಿ ಬೇರೆ ಬೇರೆ ಸಂಘಟನೆಗಳಿಂದ ಸನ್ಮಾನ! NAMMUR EXPRESS NEWS ಭೂಮಿ ಮೇಲಿನ ಪ್ರತಿಯೊಬ್ಬ ವ್ಯಕ್ತಿಗೂ ತಾನು ಜೀವನದಲ್ಲಿ ಏನನ್ನಾದರೂ ಸಾಧನೆ ಮಾಡಬೇಕು ಎನ್ನುವ ಮಹತ್ತರ ಕನಸು ಕೂಡ ಇರುತ್ತದೆ. ಆದರೆ, ಜವಾಬ್ದಾರಿಗಳು ಆ ಕನಸಿನ ಹಾದಿಗೆ ಅಡ್ಡಗೋಡೆಯಾಗಿ ನಿಂತು ಬಿಟ್ಟಿರುತ್ತದೆ. ಇಂತದ್ದೇ ಸಾಧನೆಯ ಕನಸು ಹೊತ್ತು ಹಳ್ಳಿಗಾಡಿನ ಪ್ರದೇಶದಲ್ಲಿ ಇದ್ದು ಸ್ವ- ಪ್ರಯತ್ನದಿಂದ ಮೇಲೆದ್ದು ಬಂದ ಯುವಕ  ರವಿರಾಜ್. ಶೆಟ್ಟಿ ಅಸೋಡಿಯ ಜೀವನದ ಕಥೆಯಾಗಿದೆ.ನೇರಳಕಟ್ಟೆ ಗುಡ್ರಿಯ ಕೊರಗಯ್ಯ ಶೆಟ್ಟಿ ಹಾಗೂ ಮೂಕಾಂಬಿಕಾ  ಶೆಟ್ಟಿ ದಂಪತಿಯ ಐದು ಜನ ಮಕ್ಕಳಲ್ಲಿ ರವಿರಾಜ್ ಶೆಟ್ಟಿಯವರು ಕೊನೆಯವರು. ಪದವಿವರೆಗೆ ವ್ಯಾಸಂಗ ಮಾಡಿದ್ದು, ಪ್ರಸ್ತುತ ಗುರುಕುಲ ವಿದ್ಯಾಸಂಸ್ಥೆ ವಕ್ವಾಡಿ ಕೋಟೇಶ್ವರದಲ್ಲಿ ಉದ್ಯೋಗಿಯಾಗಿದ್ದು. ಸಣ್ಣ ವಯಸ್ಸಿನಿಂದಲೂ ಭಜನೆ, ನಾಟಕ, ಯಕ್ಷಗಾನ ಅಂದರೆ ಸೆಳೆತ. ಅಪಹಾಸ್ಯದ ಮಾತುಗಳಿಂದ ಛಲ ಬಿಡದ ಶೆಟ್ಟರು ನೆಂಪು ಕಾಲೇಜು…

Read More

ಸೀಬಿನಕೆರೆ ಚೌಡೇಶ್ವರಿ ಅಮ್ಮನವರ ದೇಗುಲದಲ್ಲಿ ಧಾರ್ಮಿಕ ಕಾರ್ಯಕ್ರಮ – ನ.15ರಂದು ಬೆಳಿಗ್ಗೆ 9 ಕ್ಕೆ ದುರ್ಗಾಹೋಮ, ಕಲಾಹೋಮ – ಸಂಜೆ 6ಕ್ಕೆ ಕಾರ್ತಿಕ ದೀಪೋತ್ಸವ, ಸಾರ್ವತ್ರಿಕ ಅನ್ನಸಂತರ್ಪಣೆ NAMMUR EXPRESS NEWS ತೀರ್ಥಹಳ್ಳಿ: ಶ್ರೀ ಚೌಡೇಶ್ವರಿ ಅಮ್ಮನವರ ದೇವಸ್ಥಾನ (ರಿ.) ಸೀಬಿನಕೆರೆ ಇಲ್ಲಿ ಕಾರ್ತಿಕ ಶುದ್ಧ ಸಪ್ತಮಿ15-11-2024 ರ ಶುಕ್ರವಾರದಂದು ಶ್ರೀ ದೇವಿಯ ಸನ್ನಿಧಿಯಲ್ಲಿ ಬೆಳಿಗ್ಗೆ 9-00 ಗಂಟೆಗೆ “ ದುರ್ಗಾಹೋಮ, ಕಲಾಹೋಮ ” ನವಕ ಪ್ರಧಾನ ಕಲಶಾಭಿಷೇಕ, ನಂತರ ಮಹಾಮಂಗಳಾರತಿ, ತೀರ್ಥಪ್ರಸಾದ ವಿತರಣೆ ನಡೆಯಲಿದೆ. ಹಾಗೂ ಪ್ರತಿ ವರ್ಷದಂತೆ ಈ ವರ್ಷವೂ ಸಂಜೆ 6-00 ಗಂಟೆಗೆ ಶ್ರೀ ಪರಿವಾರ ದೇವರು ಹಾಗೂ ಶ್ರೀ ನಾಗದೇವರ ಸಹಿತ ಶ್ರೀ ದೇವಿಗೆ ಶ್ರೀ ದುರ್ಗಾದೀಪಾ ನಮಸ್ಕಾರ ಮತ್ತು ” ಕಾರ್ತಿಕ ದೀಪೋತ್ಸವವನ್ನು” ಏರ್ಪಡಿಸಲಾಗಿದೆ. ನಂತರ ಸಾರ್ವತ್ರಿಕ ಅನ್ನಸಂತರ್ಪಣೆ ” ಕೂಡ ಇರುತ್ತದೆ. ಈ ದೇವತಾ ಕಾರ್ಯಕ್ರಮದಲ್ಲಿ ಮಾನ್ಯ ಭಕ್ತಾಧಿಗಳು ತನು-ಮನ-ಧನದೊಂದಿಗೆ ನಿಮ್ಮ ಸೇವೆಯೊಂದಿಗೆ ಸಹಕರಿಸಿ ಸಿರಿಮುಡಿ ಗಂಧ ಪ್ರಸಾದವನ್ನು ಸ್ವೀಕರಿಸಿ ಶ್ರೀ ದೇವಿಯ…

Read More

ಸಿಗಂದೂರಲ್ಲಿ ತೆಪ್ಪ ದುರಂತ: ಮೂವರ ಶವ ಪತ್ತೆ! – ಊಟಕ್ಕೆ ಹೋಗಿ ಶರಾವತಿ ಹಿನ್ನೀರಿನಲ್ಲಿ ದುರಂತ – ಕುಟುಂಬದ ಆಕ್ರಂದನ: ಮರಣೋತ್ತರ ಪರೀಕ್ಷೆ – ಮೂಡಿಗೆರೆ: ಚಿಕಿತ್ಸೆಗೆ ಬಂದಿದ್ದ ರೋಗಿ ಸಾವು: ಪ್ರತಿಭಟನೆ NAMMUR EXPRESS NEWS ಸಾಗರ: ಸಾಗರ ತಾಲೂಕಿನ ಸಿಗಂದೂರು ಸಮೀಪದ ಕಳಸವಳ್ಳಿಯ ಶರಾವತಿ ಹಿನ್ನೀರಿನಲ್ಲಿ, ತೆಪ್ಪ ಮುಳುಗಿ ಮೂವರು ಯುವಕರು ನಾಪತ್ತೆಯಾದ ಘಟನೆ ನ.13 ಬುಧವಾರ ಸಂಜೆ ನಡೆದಿತ್ತು. ಇದೀಗ ಗುರುವಾರ ಮೂವರ ಶವ ಪತ್ತೆಯಾಗಿದೆ. ಸುಮಾರು 80 ಅಡಿಯಲ್ಲಿ ಶವ ಪತ್ತೆಯಾಗಿದೆ. ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ. ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಸ್ಥರಿಗೆ ನೀಡಲಾಗುತ್ತದೆ.ಸಂದೀಪ್ (30), ರಾಜು (28) ಹಾಗೂ ಚೇತನ್ (28) ಮೃತರು. ಘಟನೆ ವೇಳೆ ತೆಪ್ಪದಲ್ಲಿದ್ದ ಇಬ್ಬರು ಯುವಕರು ಈಜಿಕೊಂಡು ದಡ ಸೇರುವಲ್ಲಿ ಸಫಲರಾಗಿದ್ದಾರೆ ಎಂದು ತಿಳಿದುಬಂದಿದೆ. ಸಿಗಂದೂರು, ಹುಲಿದೇವರಬನ, ಗಿಣಿವಾರ ಮೂಲದವರಾಗಿದ್ದಾರೆ. ತೆಪ್ಪದಲ್ಲಿ ನದಿಯ ಒಂದು ದಡದಿಂದ ಮತ್ತೊಂದು ದಡಕ್ಕೆ ಆಗಮಿಸುವ ವೇಳೆ ದುರಂತ ಸಂಭವಿಸಿದೆ. ನಾಪತ್ತೆಯಾದ ಮೂವರಿಗೆ ಈಜಲು ಬರುತ್ತಿರಲಿಲ್ಲ…

Read More

ಉಡುಪಿ ಲಕ್ಷದೀಪೋತ್ಸವ ಸಂಭ್ರಮ ಶುರು! * ನ. 16ರ ವರೆಗೆ ನಿತ್ಯ ಲಕ್ಷದೀಪೋತ್ಸವ * ನ.13ರಂದು ಮಹಾಪೂಜೆ ಬಳಿಕ ತುಳಸಿ ಪೂಜೆ * ರಾತ್ರಿ ಆಕರ್ಷಕ ತೆಪ್ಪೋತ್ಸವ NAMMUR EXPRESS NEWS ಉಡುಪಿ: ಶ್ರೀಕೃಷ್ಣಮಠದಲ್ಲಿ ನ. 13ರಂದು ಉತ್ಥಾನ ದ್ವಾದಶಿಯಂದು ಬೆಳಗ್ಗೆ ತುಳಸೀಪೂಜೆ, ಸಂಜೆ ಕ್ಷೀರಾಬ್ಧಿ ಪೂಜೆ, ತೆಪ್ಪೋತ್ಸವ ಸಹಿತ ಲಕ್ಷದೀಪೋತ್ಸವ, ವಾರ್ಷಿಕ ರಥೋತ್ಸವ ಪರ್ಯಾಯ ಶ್ರೀಪುತ್ತಿಗೆ ಮಠದ ಶ್ರೀಸುಗುಣೇಂದ್ರತೀರ್ಥ ಶ್ರೀಪಾದರ ನೇತೃತ್ವದಲ್ಲಿ ಆರಂಭಗೊಂಡಿತು. ಸಂಜೆ ಮಧ್ವ ಸರೋವರದ ಮಧ್ಯದ ಮಂಟಪದಲ್ಲಿ ಕ್ಷೀರಾಬ್ಧಿ ಅರ್ಘ್ಯವನ್ನು ನೀಡಲಾಯಿತು. ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಹಾಗೂ ಕಿರಿಯ ಯತಿ ಶ್ರೀಸುಶ್ರೀಂದ್ರತೀರ್ಥ ಶ್ರೀಪಾದರು ಪೂಜೆಯನ್ನು ನೆರವೇರಿಸಿದರು. ಅಪರಾಹ್ನ ರಥಬೀದಿಯಲ್ಲಿ ಅಳವಡಿಸಿದ ದಳಿಗಳ ಮೇಲೆ ಗೋಮಯವನ್ನು ಇಟ್ಟು ಅದರ ಮೇಲೆ ಹಣತೆ ಇಡುವ ಮುಹೂರ್ತವನ್ನು ಸ್ವಾಮೀಜಿಯವರು ನಡೆಸಿದರು. ರಾತ್ರಿ ಆಕರ್ಷಕ ತೆಪ್ಪೋತ್ಸವ ನಡೆಯಿತು. ತೆಪ್ಪವನ್ನು ಪಾರ್ಥಸಾರಥಿ ಶೈಲಿಯಲ್ಲಿ ನಿರ್ಮಿಸಿರುವುದು ವಿಶೇಷವಾಗಿತ್ತು. ಇದೇ ವೇಳೆ ರಥಬೀದಿ, ಮಧ್ವಸರೋವರದಲ್ಲಿ ಸಾವಿರಾರು ಹಣತೆಗಳ ದೀಪಗಳು ಕಂಗೊಳಿಸಿದವು. ತೆಪ್ಪೋತ್ಸವದ ಬಳಿಕ…

Read More

ರಾಜ್ಯದಲ್ಲಿ ಮೂರು ದಿನ ಭಾರೀ ಮಳೆ! – 6 ಜಿಲ್ಲೆಗಳಿಗೆ ಎಲ್ಲೋ ಅಲರ್ಟ್ ಎಚ್ಚರಿಕೆ – ಒಂದು ಕಡೆ ಹೆಚ್ಚುತ್ತಿರುವ ಚಳಿ, ಮತ್ತೊಂದು ಕಡೆ ಬಿಸಿಲು, ಮಳೆ NAMMUR EXPRESS NEWS ಬೆಂಗಳೂರು : ಕರ್ನಾಟಕ ರಾಜ್ಯದಲ್ಲಿ ಮಳೆಯಾಟ ಮುಂದುವರಿದಿದೆ. ಕೆಲವು ದಿನಗಳ ಹಿಂದಷ್ಟೇ ಅಬ್ಬರಿಸಿ ತಣ್ಣಗಾಗಿದ್ದ ಹಿಂಗಾರು ಮಳೆ, ಇದೀಗ ಮತ್ತೆ ಆರ್ಭಟಿಸಲು ಸಜ್ಜಾಗಿದೆ. ಮುಂದಿನ ಮೂರು ದಿನಗಳ ಕಾಲ ನವೆಂಬರ್ 16 ರವರೆಗೆ ವಿವಿಧ ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಆಗಲಿದೆ. ಕೆಲವು ಜಿಲ್ಲೆಗಳಲ್ಲಿ ಭಾರಿ ಮಳೆ ಸಾಧ್ಯತೆ ಹಿನ್ನೆಲೆಯಲ್ಲಿ ಎಲ್ಲೋ ಅಲರ್ಟ್ ಎಚ್ಚರಿಕೆ’ ನೀಡಲಾಗಿದೆ. ಈಗಾಗಲೇ ಮಳೆಗೆ ನದಿಗಳು, ಕೆರೆ ಕಟ್ಟೆಗಳು, ಜಲಾಶಯಗಳು ಭರ್ತಿಯಾಗಿವೆ. ಉತ್ತರ ಕರ್ನಾಟಕ ಸೇರಿದಂತೆ ವಿವಿಧೆಡೆ ಅತೀವೃಷ್ಟಿ ಉಂಟಾಗಿತ್ತು. ಬೆಳೆಗಳು ನಾಶವಾಗಿದ್ದವು. ಇದೀಗ ಮತ್ತೆ ಮಳೆ ಅಬ್ಬರಿಸಲು ಸಜ್ಜಾಗಿದೆ. ಮುಂದಿನ ಮೂರು ದಿನ ಈ ಕೆಳಗಿನ ಜಿಲ್ಲೆಗಳಲ್ಲಿ ಅತ್ಯಧಿಕ ಮಳೆ ಬರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. – 110 ಮಿ.ಮೀ. ಮಳೆ…

Read More

ದೇಶದೆಲ್ಲೆಡೆ ಮಕ್ಕಳ ದಿನಾಚರಣೆ ಸಂಭ್ರಮ! – ಮಕ್ಕಳ ವಿವಿಧ ಕಾರ್ಯಕ್ರಮ: ಏನಿದು ಮಕ್ಕಳ ದಿನಾಚರಣೆ – ಭಾರತದ ಮೊದಲ ಪ್ರಧಾನಿ ನೆಹರೂ ಜನ್ಮ ದಿನ ಮಕ್ಕಳ ದಿನ ಆಗಿದ್ದು ಹೇಗೆ? NAMMUR EXPRESS NEWS ಬದುಕು ಎಂದರೆ ಏನು ಎಂಬ ಅರಿವೇ ಇಲ್ಲದೇ, ತಮ್ಮದೇ ಲೋಕದಲ್ಲಿ ಮುಳುಗಿ ಆಟ, ಪಾಠವ ಕಲಿಯುತ್ತಾ, ಶಾಲಾ ಸಮವಸ್ತ್ರದ ಬದಲು ಬಣ್ಣದ ಬಟ್ಟೆಯನ್ನು ತೊಟ್ಟು , ಶಾಲೆಯಲ್ಲಿ ಭಾಷಣದ ನಂತರ ಕೊಡುವ ಸಿಹಿ ತಿನಿಸುಗಾಗಿ ಕಾಯುವ ಆ ಕ್ಷಣಗಳು ಅವಿಸ್ಮರಣೀಯವಲ್ಲವೇ..? ಆದುದರಿಂದ ಮಕ್ಕಳ ದಿನಾಚರಣೆ ಮಕ್ಕಳಿಗೆ ಹೇಗೆ ವಿಶೇಷವೋ ಹಾಗೇ ಅಂದಿನ ಬಾಲ್ಯದ ನೆನಪುಗಳನ್ನು ಮೆಲುಕು ಹಾಕುವ ಮಕ್ಕಳ ದಿನಾಚರಣೆ ದೊಡ್ಡವರಿಗೂ ಒಂದು ಸುಂದರ ಅವಕಾಶವಾಗಿದೆ. ಇಂದಿನ ಮಕ್ಕಳು ನಾಳಿನ ಭಾರತವನ್ನು ರೂಪಿಸುತ್ತಾರೆ. ನಾವು ಅವುಗಳನ್ನು ಪೋಷಿಸುವ ರೀತಿ ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ ಎಂಬ ಜವಾಹರಲಾಲ್ ನೆಹರು ರವರ ನುಡಿ ಅರ್ಥಗರ್ಭಿತವಾದದ್ದು. ಭಾರತದಲ್ಲಿ ಮಾತ್ರವಲ್ಲದೇ ಜಗತ್ತಿನಾದ್ಯಂತ ಮೊದಲಿಗೆ ನವೆಂಬರ್ 20 ರಂದು ಮಕ್ಕಳ ದಿನಾಚರಣೆಯನ್ನು ಆಚರಣೆ…

Read More

ಈ ದಿನದ ರಾಶಿ ಭವಿಷ್ಯ ಹೇಗಿದೆ? – ಗುರುರಾಯರ ಕೃಪೆಯಿಂದ ಯಾವ ರಾಶಿಯವರಿಗೆ ಒಳಿತು ? ಯಾವ ರಾಶಿಯವರಿಗೆ ಕೆಡಕು ? NAMMUR EXPRESS NEWS ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು? ** ಮೇಷ ರಾಶಿ : ಇಂದು ನಿಮ್ಮಲ್ಲಿ ತಾಳ್ಮೆ ಕಡಿಮೆಯಾಗುತ್ತದೆ, ಸ್ವಯಂ ನಿಯಂತ್ರಣದಲ್ಲಿದ್ದರೆ ಒಳಿತು. ಮಾತಿನ ಪ್ರಭಾವ ಹೆಚ್ಚಾಗುತ್ತದೆ, ನೀವು ಕೆಲವು ಧಾರ್ಮಿಕ ಕಾರ್ಯಕ್ರಮಕ್ಕೆ ಹಾಜರಾಗಬೇಕಾಗಬಹುದು. ನಿಮ್ಮ ಜೀವನಶೈಲಿಯಲ್ಲಿ ನೀವು ಅಹಿತಕರವಾಗಿರುತ್ತೀರಿ ಮತ್ತು ಸಿಹಿ ಆಹಾರದ ಕಡೆಗೆ ನಿಮ್ಮ ಒಲವು ಹೆಚ್ಚಾಗುತ್ತದೆ. ಆಸ್ತಿಯಿಂದ ಆದಾಯ ಹೆಚ್ಚಾಗಬಹುದು, ಉದ್ಯೋಗದಲ್ಲಿ ಬದಲಾವಣೆ ಸಾಧ್ಯ. ಇಂದು ನಿಮ್ಮ ಕೆಲಸದಲ್ಲಿ ನೀವು ಅಧಿಕಾರಿಗಳಿಂದ ಬೆಂಬಲವನ್ನು ಪಡೆಯುತ್ತೀರಿ, ಪ್ರಗತಿಯ ಸಾಧ್ಯತೆಗಳಿವೆ. ** ವೃಷಭ ರಾಶಿ : ಇಂದು ನಿಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಾಗಬಹುದು. ಅಧ್ಯಯನದಲ್ಲಿ ಆಸಕ್ತಿ ಇರುತ್ತದೆ. ಆಸ್ತಿ ನಿರ್ವಹಣೆಗೆ ಖರ್ಚು ಹೆಚ್ಚಾಗಬಹುದು. ಸಂಗಾತಿಯ ಆರೋಗ್ಯ ಹದಗೆಡಬಹುದು…

Read More

ಮುಳ್ಳಯ್ಯನಗಿರಿಯಲ್ಲಿ ಎಣ್ಣೆ ಪಾರ್ಟಿ! – ಪ್ರವಾಸಿಗರ ಹುಚ್ಚಾಟ, ಪ್ರಶ್ನೆ ಮಾಡಿದಕ್ಕೆ ಧಮ್ಕಿ! – ಮದ್ಯವಿದ್ದ ಕಾರು ಪೊಲೀಸರ ವಶ! NAMMUR EXPRESS NEWS ಚಿಕ್ಕಮಗಳೂರು: ಪ್ರಸಿದ್ಧ ಪ್ರವಾಸಿತಾಣ ಮುಳ್ಳಯ್ಯನಗಿರಿಗೆ ಸಾಕಷ್ಟು ಪ್ರವಾಸಿಗರು ಭೇಟಿ ನೀಡುತ್ತಾರೆ. ಹೀಗಿರುವಾಗ ಕೆಲ ಪ್ರವಾಸಿಗರು ಹುಚ್ಚಾಟ ಮೆರೆಯುತ್ತಾರೆ. ಮುಳ್ಳಯ್ಯನಗಿರಿ ಭಾಗದಲ್ಲಿ ಮದ್ಯಪಾನ ನಿಷೇಧ ಮಾಡಿದ್ದರೂ ಬೆಂಗಳೂರು ಮೂಲದ ಪ್ರವಾಸಿಗರಿಂದ ಎಣ್ಣೆ ಪಾರ್ಟಿ ಮಾಡಲಾಗಿದೆ. ಇದನ್ನು ಪ್ರಶ್ನೆ ಮಾಡಿದ ಪ್ರವಾಸಿ ಮಿತ್ರ ಪಡೆಯ ಸದಸ್ಯರಿಗೆ ಧಮ್ಕಿ ಹಾಕಿರುವ ಘಟನೆ ನಡೆದಿದೆ. ಕದ್ದು ಮುಚ್ಚಿ ಡ್ರಿಂಕ್ಸ್ ತಂದು ಪಾರ್ಟಿ ಮಾಡುತ್ತಿದ್ದರು. ಇವರಿಂದಾಗಿ ಇನ್ನುಳಿದ ಪ್ರವಾಸಿಗರಿಗೂ ಕಿರಿಕಿರಿ ಉಂಟಾಗಿದೆ. ಸದ್ಯ ಮದ್ಯವಿದ್ದ ಕಾರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

Read More

ಕಾರ್ಕಳದಲ್ಲಿ ಡ್ಯಾನ್ಸ್ ಕ್ಲಾಸ್ & ಝುಂಬಾ ಏರೋಬಿಕ್ಸ್ ತರಬೇತಿ – ಶ್ರೀ ಸಾಯಿ ಡ್ಯಾನ್ಸ್ ಕ್ಲಾಸ್ ಮತ್ತು ಮಹಿಳೆಯರಿಗಾಗಿ ಏರೋಬಿಕ್ಸ್ ಝುಂಬಾ ತರಬೇತಿ ಸೆಂಟರ್ – ಮಕ್ಕಳಿಗೆ, ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗೆ ಇಲ್ಲಿ ನೃತ್ಯ ತರಬೇತಿ ಶುಭಾರಂಭಗೊಂಡಿದೆ ಕಾರ್ಕಳ ಜೋಡುರಸ್ತೆಯಲ್ಲಿರುವ ಪ್ರೈಮ್ ಮಾಲ್ ನ ಪ್ರಥಮ ಮಹಡಿಯಯಲ್ಲಿ ಶ್ರೀ ಸಾಯಿ ಡ್ಯಾನ್ಸ್ ಕ್ಲಾಸ್ ಮತ್ತು ಮಹಿಳೆಯರಿಗಾಗಿ ಏರೋಬಿಕ್ಸ್ ಝುಂಬಾ ತರಬೇತಿ ಸೆಂಟರ್ ಶುಭಾರಂಭಗೊಂಡಿದೆ. ಮಕ್ಕಳಿಗೆ, ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗೆ ಇಲ್ಲಿ ನೃತ್ಯ ತರಬೇತಿಯನ್ನು ನೀಡಲಾಗುವುದು. ಹಿಪ್ ಆಫ್, ಬಾಲಿವುಡ್ ಸ್ಟೈಲ್ ಸೆಮಿ ಕ್ಲಾಸಿಕಲ್ ಹಾಗೂ ಜನಪದ ನೃತ್ಯಗಳನ್ನು ಇಲ್ಲಿ ತರಬೇತಿಯು ಪ್ರತಿ ಶನಿವಾರ ಸಂಜೆ ಸಮಯ 4 ರಿಂದ 7ರ ವರೆಗೆ ಮತ್ತು ಆದಿತ್ಯವಾರ ಬೆಳಿಗ್ಗೆ 9 ರಿಂದ 11 ಗಂಟೆಯವರೆಗೆ ತರಗತಿಗಳು ನಡೆಯಲಿರುವುದು. ವಿಶೇಷವಾಗಿ ಮಹಿಳೆಯರಿಗಾಗಿ ಫಿಟ್ನೆಸ್ ನಲ್ಲಿ ಏರೋಬಿಕ್ಸ್ ಮತ್ತು ಝುಂಬಾ ತರಗತಿಗಳು ನಡೆಯಲಿದ್ದು, ಇಲ್ಲಿ ಅತ್ಯುತ್ತಮ ತರಬೇತಿದಾರರಿಂದ ತರಬೇತಿ ನೀಡಲಾಗುತ್ತಿದ್ದು ಆಸಕ್ತರು ಇದರ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಸಂಸ್ಥೆಯ…

Read More

ಮಂಜುಶ್ರೀ ಹಿಟ್ ಚೆಕ್ ಕಂಪನಿ ಪ್ರಕಟಣೆ ಬ್ಯಾಂಕಿಗೆ ಕಟ್ಟಲು ಕೊಟ್ಟ 5.6 ಲಕ್ಷ ಹಣ ಕದ್ದು ಪರಾರಿ ನವೀನ್ ಎಂಬಾತ ಕಂಡಲ್ಲಿ ಮಾಹಿತಿ ನೀಡುವಂತೆ ಮನವಿ ಬೆಂಗಳೂರಿನ ಪೀಣ್ಯದಲ್ಲಿರುವ ಮಂಜುಶ್ರೀ ಹಿಟ್ ಚೆಕ್ ಎಂಬ ಕಂಪನಿಯಲ್ಲಿ ನವೀನ್ ಎಂಬಾತ ಸುಮಾರು 3 ವರ್ಷಗಳ ಹಿಂದೆ ಏಜನ್ಸಿಯಿಂದ ಸೆಕ್ಯೂರಿಟಿ ಕೆಲಸ ಮಾಡಲು ಬಂದಿದ್ದು ನಂತರ ಒಂದು ವರ್ಷದಲ್ಲಿ ಕಂಪನಿಯಲ್ಲಿ ಡೈರೆಕ್ಟಾಗಿ ಸೆಕ್ಯೂರಿಟಿ ಕೆಲಸ ಮತ್ತು ಆಫೀಸ್ ಬಾಯ್ ಆಗಿ ಕೆಲಸ ಮಾಡುತ್ತಿದ್ದು ದಿನಾಂಕ -28/10/2024 ರಂದು ಕೆನರಾ ಬ್ಯಾಂಕ್ ಹೋಗಿ ಹಣ ಠೇವಣಿ ಮಾಡಲು 5 ಲಕ್ಷ ಹಣವನ್ನು ನೀಡಿದ್ದು ಮತ್ತು ಆದೆ ಬ್ಯಾಂಕ್ ಖಾತೆಯಿಂದ ಅರವತ್ತು ಸಾವಿರ ರೂಗಳನ್ನ ಡ್ರಾ ಮಾಡಿಕೊಂಡು ಬರುವಂತೆ ಚೆಕ್ ನೀಡಿದ್ದು ನಂತರ ಬ್ಯಾಂಕ್ ಗೆ ಹೋಗಿ 60 ಸಾವಿರ ರೂಗಳನ್ನ ಡ್ರಾ ಮಾಡಿಕೊಂಡು ಮತ್ತು ಜಮಾ ಮಾಡಲು ಕೊಟ್ಟಿದ್ದ 5 ಲಕ್ಷ ಹಣವನ್ನು ಸಹ ಜಮಾ ಮಾಡದೆ ಒಟ್ಟು ಐದು ಲಕ್ಷದ ಅರವತ್ತು ಸಾವಿರ ರೂಗಳನ್ನ…

Read More