Author: Nammur Express Admin

ಕರಾವಳಿ ಟಾಪ್ 5 ನ್ಯೂಸ್ – ಮಂಗಳೂರು: ಗಂಡನಿಗೆ ಮೆಸೇಜ್ ಮಾಡಿ ಹೆಂಡತಿ ನಾಪತ್ತೆ.! – ಕಾಸರಗೋಡು: ಆತ್ಮಹತ್ಯೆ ವೇಳೆ ತುಂಡಾದ ಹಗ್ಗ: ಮಹಿಳೆ ಸಾವು – ಕಾಪು: ಬಾಲ್ಯ ವಿವಾಹ : ಪತಿ, ಹೆತ್ತವರ ವಿರುದ್ಧ ಕೇಸ್ – ಸುರತ್ಕಲ್: ಕಾರ್ಗೊ ಶಿಪ್‌ಗೆ ಬೆಂಕಿ,, ತೈಲ ಸೋರಿಕೆ ಭೀತಿ – ಆವರ್ಸೆ: ಬಸ್ ಡಿಕ್ಕಿಯಾಗಿ ಗಾಯಗೊಂಡ ಕಾಡುಕೋಣ NAMMUR EXPRESS NEWS ಮಂಗಳೂರು: ನಗರದ ಕಾಲೇಜೊಂದರಲ್ಲಿ ಫಿಸಿಯೋಥೆರಪಿ ವ್ಯಾಸಂಗ ಮಾಡುತ್ತಿದ್ದ ಮಂಗಳಾದೇವಿ ನಿವಾಸಿ ಯುವತಿಯೋರ್ವಳು ತನ್ನ ಪತಿಗೆ ತಾನು ಮತ್ತೊಬ್ಬನೊಂದಿಗೆ ಹೋಗುತ್ತಿದ್ದೇನೆ ಎಂದು ವಾಟ್ಸಾಪ್ ಮೆಸೇಜ್ ಮಾಡಿ ನಾಪತ್ತೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿದೆ. ಪ್ರಿಯಾ ರಂಜಿತ್ (25) ನಾಪತ್ತೆಯಾದ ಯುವತಿ. ಪ್ರಿಯಾ ರಂಜಿತ್ ನಗರದ ಕಾಲೇಜೊಂದರಲ್ಲಿ ಅಂತಿಮ ವರ್ಷದ ಫಿಸಿಯೋಥೆರಪಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಜುಲೈ 17ರಂದು ಬೆಳಗ್ಗೆ 7:45ಕ್ಕೆ ಮನೆಯಿಂದ ಕಾಲೇಜಿಗೆ ಹೋಗುವುದಾಗಿ ತಿಳಿಸಿ ಹೋಗಿದ್ದರು. ಆದರೆ ಸಂಜೆ 5 ಗಂಟೆಗೆ ತಾನು ಅಮಿತ್ ಎಂಬಾತನೊಂದಿಗೆ ಹೋಗುತ್ತಿದ್ದೇನೆ. ತಾಯಿ ಮತ್ತು…

Read More

ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆ ರೌದ್ರಾವತಾರ! – ಎಲ್ಲಾ ಕಡೆ ಧರೆ, ರಸ್ತೆ ಕುಸಿತ: ಮರ, ಕಂಬ ಬಿದ್ದು ಹಾನಿ – ಮೂಡಿಗೆರೆ : ಮರ ಬಿದ್ದು ಎರಡು ಕಾರುಗಳು ಜಖಂ – ವಾರದಿಂದ ಕತ್ತಲೆಯಲ್ಲಿ ಮುಳುಗಿದ ಊರುಗಳು! – ನಾಳೆಯೂ ರಜೆ ಮುಂದುವರಿಯುವ ಸಾಧ್ಯತೆ!? NAMMUR EXPRESS NEWS ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಹಲವು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆ ಹಾಗೂ ಗಾಳಿಯಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಎಲ್ಲೆಡೆ ಭೂಕುಸಿತ ಮರ ಬಿದ್ದು ಹಾನಿ ಉಂಟಾದ ಘಟನೆಗಳು ವರದಿಯಾಗಿವೆ. ಇನ್ನು ಪ್ರತಿ ಊರಲ್ಲೂ ವಿದ್ಯುತ್, ನೆಟ್ವರ್ಕ್ ಇಲ್ಲದೆ ಊರುಗಳು ಕತ್ತಲೆಯಲ್ಲಿ ಮುಳುಗಿದೆ. ಬಾಳೆಹೊನ್ನೂರು ಭಾಗದಲ್ಲಿ ಮನೆ ಮೇಲೆ ಮರ ಬಿದ್ದಿದ್ದು ಹಲವಡೆ ಭೂಕುಸಿತ ಸಂಭವಿಸಿದೆ, ಇದರಿಂದ ರಸ್ತೆ ಸಂಚಾರಕ್ಕೆ ತೊಂದರೆ ಉಂಟಾಗಿದೆ. ಶೃಂಗೇರಿ ತಾಲೂಕಲ್ಲಿ ಅಪಾರ ಹಾನಿ ಶೃಂಗೇರಿ ತಾಲೂಕಿನ ಆನೆಗುಂದ ಸಮೀಪ ರಾಷ್ಟ್ರೀಯ ಹೆದ್ದಾರಿ 169 ಅಗಲೀಕರಣ ಕಾಮಗಾರಿ ವೇಳೆ ತೆರೆವುಗೊಳಿಸಿದ್ದ ರಸ್ತೆಬದಿಯ ಗುಡ್ಡ ದಿನೇ ದಿನೇ ಕುಸಿಯುತ್ತಿದ್ದು ರಸ್ತೆ…

Read More

ಶಿರುಪತಿಯಲ್ಲಿ ಮರ ಬಿದ್ದರೂ ಕ್ಯಾರೆ ಎನ್ನದ ಆಡಳಿತ! ಶಿರುಪತಿಯಲ್ಲಿ ಮರ ಬಿದ್ದರೂ ಕ್ಯಾರೆ ಎನ್ನದ ಆಡಳಿತ! – ಕೆಇಬಿ ಅವರಿಗೆ ಕರೆ ಮಾಡಿದರೂ ಕೂಡ ಯಾವುದೇ ಉತ್ತರ ಸಿಗುತ್ತಿಲ್ಲ – ಮಕ್ಕಳು, ಜನರು ಓಡಾಡುವಾಗ ಅಪಾಯ NAMMUR EXPRESS NEWS ತೀರ್ಥಹಳ್ಳಿ: ಮಲೆನಾಡಿನಲ್ಲಿ ಮಳೆ ಹೆಚ್ಚಾಗಿದ್ದು, ಪಟ್ಟಣ ಸಮೀಪದ ನೆರಟೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಶಿರುಪತಿಯಲ್ಲಿ ದೊಡ್ಡ ಮರ ರಸ್ತೆಗೆ ಬಿದ್ದು ಕೆಲ ಕಾಲ ಜನ ತೊಂದರೆಗೆ ಒಳಗಾದರು. ಶಿರುಪತಿಯಿಂದ ಖುಷ್ಕಿ ರೋಡಿನಲ್ಲಿ ಮರ ಬಿದ್ದಿದ್ದು ಕೆಇಬಿ ಅವರಿಗೆ ಕರೆ ಮಾಡಿದರೂ ಕೂಡ ಯಾವುದೇ ಉತ್ತರ ಸಿಗುತ್ತಿಲ್ಲ. ಇದರಿಂದ ಗ್ರಾಮಸ್ಥರಿಗೆ ತೊಂದರೆಯಾಗಿದ್ದು ನೆರಟೂರು ಗ್ರಾಮ ಪಂಚಾಯತ್ ಅವರಿಗೂ ಕೂಡ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ದೂರಿದ್ದಾರೆ. ಅಂಗನವಾಡಿ ಹಾಗೂ ಶಾಲೆಗೆ ಹೋಗುವ ಮಕ್ಕಳು ಬಿದ್ದ ಮರದ ಕೆಳಗಡೆ ನುಗ್ಗಿ ಹೋಗುವ ಪರಿಸ್ಥಿತಿ ಇದ್ದು, ಆದರೂ ಕೂಡ ಸಂಬಂಧಪಟ್ಟವರು ಗಮನಿಸುತ್ತಿಲ್ಲ. ಪದೇಪದೇ ಇಂತ ಘಟನೆಗಳು ನಡೆಯುತ್ತಿದ್ದರು ಕೂಡ ಮರವನ್ನು ತೆಗೆಸುವ ಕೆಲಸ…

Read More

ತೀರ್ಥಹಳ್ಳಿಯಲ್ಲಿ ಯಂತ್ರಶ್ರೀ ನಾಟಿ ಉದ್ಘಾಟನೆ! – ರೈತರ ಸಮಯ, ಶ್ರಮ ಉಳಿತಾಯಕ್ಕಾಗಿ ಯಾಂತ್ರಿಕೃತ ಭತ್ತ ಬೇಸಾಯ ಪದ್ಧತಿ – ಕಂತುಗದ್ದೆ ನಾಗೇಶ್ ರವರ ಮನೆಯಲ್ಲಿ ಯಂತ್ರಶ್ರೀ ನಾಟಿ ಬೇಸಾಯ NAMMUR EXPRESS NEWS ತೀರ್ಥಹಳ್ಳಿ: ರೈತರ ಸಮಯ, ಶ್ರಮ ಉಳಿತಾಯಕ್ಕಾಗಿ ಯಾಂತ್ರಿಕೃತ ಭತ್ತ ಬೇಸಾಯ ಪದ್ಧತಿ ಅಳವಡಿಸಲು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಜು. 25ರಂದು ತೀರ್ಥಹಳ್ಳಿ ತಾಲೂಕಿನ ಮೇಳಿಗೆ ಸಮೀಪದ ಕಂತುಗದ್ದೆ ನಾಗೇಶ್ ರವರ ಮನೆಯಲ್ಲಿ ಯಂತ್ರಶ್ರೀ ನಾಟಿ ಉದ್ಘಾಟನೆ ಕಾರ್ಯಕ್ರಮ ನಡೆಸಲಾಯಿತು. ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದ ಯೋಜನೆಯ ಶಿವಮೊಗ್ಗ ಜಿಲ್ಲಾ ನಿರ್ದೇಶಕ ಮುರಳೀಧರ ಶೆಟ್ಟಿ ಅವರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೊದಲು ಶ್ರೀ ಪದ್ಧತಿ ಬೇಸಾಯ ಪರಿಚಯ ಮಾಡಿತ್ತು. ಅದು ಹೆಚ್ಚಿನ ಮಾನವ ಸಂಪನ್ಮೂಲಗಳು ಅವಶ್ಯಕತೆ ಇದ್ದುದ್ದರಿಂದ ಈ ಪದ್ಧತಿ ಹೆಚ್ಚಿನ ಯಶಸ್ಸು ಸಾದಿಸಲಿಲ್ಲ. ಹಾಗಾಗಿ ರೈತರಿಗೆ ಹೆಚ್ಚಿನ ಸಮಯ ಉಳಿತಾಯ, ಶ್ರಮ ಉಳಿತಾಯಕ್ಕಾಗಿ ಯಾಂತ್ರಿಕೃತ ಬತ್ತ ಬೇಸಾಯ ಪದ್ಧತಿ ಯನ್ನು 2019-20 ನೇ ಸಾಲಿನಲ್ಲಿ ಪರಿಚಯ ಮಾಡಲಾಯಿತು…

Read More

ಮುಳುಗಿದ ಸೇತುವೆ ಮೇಲೆ ಜೀಪ್‌ ಓಡಿಸಿ ಅರೆಸ್ಟ್! – ಕಳಸ-ಹೊರನಾಡು ಮದ್ಯೆ ಇರುವ ಭದ್ರಾ ನದಿಯ ಹೆಬ್ಬಾಳೆ ಸೇತುವೆ – ವ್ಯಕ್ತಿ ಬಂಧಿಸಿದ ಕಳಸ ಪೊಲೀಸರು: ಏನಿದು ಕೇಸ್? – ಪೊಲೀಸ್ ನಿಯಮ ಮೀರಿದ್ರೆ ಕೇಸ್ ದಾಖಲು NAMMUR EXPRESS NEWS ಕಳಸ: ನಿರಂತರವಾಗಿ ಸುರಿಯುತ್ತಿರುವ ಮಳೆಯ ಕಾರಣ ಕಳಸ-ಹೊರನಾಡು ಮದ್ಯೆ ಇರುವ ಭದ್ರಾ ನದಿಯ ಹೆಬ್ಬಾಳೆ ಸೇತುವೆ ಮೇಲೆ ಜೀಪ್ ಚಾಲನೆ ಮಾಡಿದ ವ್ಯಕ್ತಿಯನ್ನು ಕಳಸ ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ಪೊಲೀಸರು ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಕಳಸದಿಂದ ಹೊರನಾಡಿಗೆ ಸಂಪರ್ಕ ಕಲ್ಪಿಸುವ ಹೆಬ್ಬಾಳೆ ಸೇತುವೆಯು ಭದ್ರಾ ನದಿಯ ನೀರಿನಿಂದ ತುಂಬಿ ಸೇತುವೆ ಮೇಲೆ ಹರಿಯುತ್ತಿತ್ತು.ಕಳಸ ದಿಂದ ಹೊರನಾಡಿಗೆ ಹೋಗುವ ರಸ್ತೆಯು ಸಂಪರ್ಕ ಕಡಿತಗೊಂಡಿತ್ತು. ಈ ಬಗ್ಗೆ ಮುಂಜಾಗೃತತಾ ಕ್ರಮವಾಗಿ ಹೆಬ್ಬಾಳೆ ಸೇತುವೆಯ ಮೇಲೆ ಸಾರ್ವಜನಿಕರು ಹಾಗೂ ವಾಹನ ಸಂಚಾರವನ್ನು ನಿಷೇಧಿಸಿ ಯಾವುದೆ ಪ್ರಾಣ ಹಾನಿಯಾಗದಂತೆ ತಡೆಗಟ್ಟುವ ಸಲುವಾಗಿ ಕಳಸ ಹೊರನಾಡು ಸಂಪರ್ಕ ಕಲ್ಪಿಸುವ ಹೆಬ್ಬಾಳೆ ಸೇತುವೆಯ ಎರಡೂ ಬದಿಯಲ್ಲಿ…

Read More

ಹೊಸನಗರ ತಾಲೂಕಿನಲ್ಲಿ ಮಳೆಗೆ ಜನ ಪರದಾಟ! – ಚಲಿಸುತ್ತಿದ್ದ ಸರ್ಕಾರಿ ಬಸ್‌ ಮೇಲೆ ಉರುಳಿದ ವಿದ್ಯುತ್‌ ಕಂಬ – ಗೌರಿಕೆರೆ- ಕಟ್ಟಿನಹೊಳೆ ಮಾರ್ಗದಲ್ಲಿ ಭೂಕುಸಿತ – ಕೃಷಿ ಜಮೀನಿಗೆ ನುಗ್ಗಿದ ಮಳೆ ನೀರು: ಕಂಗಾಲಾದ ರೈತ NAMMUR EXPRESS NEWS ಹೊಸನಗರ: ಹೊಸನಗರ ತಾಲೂಕಿನಾದ್ಯಂತ ಕಳೆದೆರಡು ದಿನಗಳಿಂದ ಬಿರುಗಾಳಿ ಸಹಿತ ಭಾರಿ ಮಳೆಯಾಗುತ್ತಿದ್ದು ಅಲ್ಲಲ್ಲಿ ಅನಾಹುತಗಳು ನಡೆಯುತ್ತಿವೆ. ಇಂದು ಬೆಳಗ್ಗೆ ಚಲಿಸುತ್ತಿದ್ದ ಸರ್ಕಾರಿ ಬಸ್ ಮೇಲೆ ವಿದ್ಯುತ್ ಕಂಬ ಉರುಳಿ ಬಿದ್ದ ಘಟನೆ ೩ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಸಂಪೇಕಟ್ಟೆ – ನಿಟ್ಟೂರು ಮಾರ್ಗದಲ್ಲಿ ನಡೆದಿದೆ. ಬಸ್‌ನ ಹಿಂಬದಿಯ ಒಂದು ಬದಿಗೆ ವಿದ್ಯುತ್ ಕಂಬ ತಂತಿ ಸಮೇತ ಬಿದ್ದಿದ್ದು ಅದೃಷ್ಟವಶಾತ್ ಈ ವೇಳೆ ವಿದ್ಯುತ್‌ ಸಂಪರ್ಕ ಕಡಿತಗೊಂಡಿದ್ದರಿಂದ ಯಾವುದೇ ಅನಾಹುತ ಸಂಭವಿಸಿಲ್ಲ. ಬಸ್ ಬೆಂಗಳೂರಿನಿಂದ ಹೊಸನಗರ – ನಗರ ಮಾರ್ಗವಾಗಿ ಕೊಲ್ಲೂರು ಕಡೆ ಚಲಿಸುತ್ತಿತ್ತು. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಮೆಸ್ಕಾಂ ಸಿಬ್ಬಂದಿಗಳು ವಿದ್ಯುತ್ ಕಂಬ ತೆರವುಗೊಳಿಸಿ ಸಂಚಾರ ಅನುವುಮಾಡಿಕೊಟ್ಟರು. ಹೊಸನಗರ:…

Read More

ಮಳೆ ಅಬ್ಬರಕ್ಕೆ ನಲುಗಿದ ತೀರ್ಥಹಳ್ಳಿ! – ಅಲ್ಮನೆ, ಶಿರುಪತಿ ಸೇರಿ ಹಲವೆಡೆ ಮರ ಬಿದ್ದು, ಸಂಚಾರ ಅಸ್ತವ್ಯಸ್ತ – ಭಾರೀ ಮಳೆಗೆ ಎಲ್ಲೆಡೆ ಅನಾಹುತ: ವಿದ್ಯುತ್, ನೆಟ್ವರ್ಕ್ ಇಲ್ಲ – ಶಾಲಾ, ಕಾಲೇಜುಗಳಿಗೆ ವಾರದಿಂದ ರಜೆ NAMMUR EXPRESS NEWS ತೀರ್ಥಹಳ್ಳಿ: ಮಲೆನಾಡಿನಲ್ಲಿ ಮಳೆ ಹೆಚ್ಚಾಗಿದ್ದು, ಕಳೆದ ಮೂರ್ನಾಲ್ಕು ದಿನಗಳಿಂದ ಕತ್ತಲಲ್ಲಿರುವ ಇರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ರಸ್ತೆಯ ಮೇಲೆ ಅಲ್ಲಲ್ಲಿ ಮರಗಳು ವಿದ್ಯುತ್ ಕಂಬಗಳು ಬೀಳುತ್ತಿದ್ದು ಇದರಿಂದ ವಿದ್ಯುತ್ ಸಂಪರ್ಕ ಕಡಿತಗೊಳ್ಳುವುದಲ್ಲದೆ ಸಂಚಾರಕ್ಕೂ ಕೂಡ ಅಡ್ಡಿಯಾಗಿದೆ. ತೀರ್ಥಹಳ್ಳಿ ಸೇರಿ ಮಲೆನಾಡು ಭಾಗದಲ್ಲಿ ಕಳೆದ 15 ದಿನಗಳಿಂದಲೂ ಕೂಡ ಧಾರಾಕಾರ ಮಳೆ ಹಾಗೂ ಭಾರಿ ಗಾಳಿ ಬೀಸುತ್ತಿದೆ. 3-4 ದಿನಗಳಿಂದ ಮಲೆನಾಡು ಭಾಗದಲ್ಲಿ ಒಂದಷ್ಟು ಬಿಡುವು ನೀಡಿದ್ದ ವರುಣದೇವ ಕಳೆದ ರಾತ್ರಿಯಿಂದ ಮತ್ತೆ ಅಬ್ಬರಿಸಿದ್ದಾನೆ. ಕಳೆದ ಮೂರ್ನಾಲ್ಕು ದಿನಗಳಿಂದ ಮಲೆನಾಡು ಭಾಗದಲ್ಲಿ ಭಾರೀ ಗಾಳಿಗೆ ವಿದ್ಯುತ್ ತಂತಿಯ ಮೇಲೆ ಮರಗಳು ಬಿದ್ದು ವಿದ್ಯುತ್‌ ಸಂಪರ್ಕ ಕೂಡ ಕಡಿತಗೊಂಡಿದೆ. ಹಾಗಾಗಿ, ಮಲೆನಾಡ ಕೆಲ ಗ್ರಾಮಗಳು…

Read More

ಲವ್.. ಕಿರಿಕ್.. ಮತ್ತೆ ಕೊಲೆ! – ಪ್ರೇಯಸಿ ಹೂತು ಹಾಕಿದ್ದ ಪ್ರಿಯಕರ: ಶವ ತೆಗೆದ ಪೊಲೀಸರು! – ಆನಂದಪುರದ ರೈಲ್ವೆ ಟ್ರ್ಯಾಕ್ ಬಳಿ ಗುಂಡಿ ತೆಗೆದು ಹೂತಿದ್ದ – ಲವ್ ಮಾಡಿ ಮದುವೆಯಾಗಲು ಆಗದಕ್ಕೆ ಕೊಲೆ ಮಾಡಿದ! NAMMUR EXPRESS NEWS ಶಿವಮೊಗ್ಗ: ಪ್ರೀತಿಸಿದ್ದ ಯುವತಿ ಮದುವೆಗೆ ಒತ್ತಾಯ ಮಾಡಿದ್ದಕ್ಕೆ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿದ್ದಲ್ಲದೆ, ಗುಂಡಿ ತೆಗೆದು ಹೂತಿಟ್ಟಿದ್ದ ಪ್ರಕರಣದಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಮೃತದೇಹವನ್ನು ನ್ಯಾಯಾಧೀಶರ ಅನುಮತಿ ಪಡೆದು ಗುರುವಾರ ಹೊರ ತೆಗೆಯಲಾಯಿತು. ಈ ಘಟನೆ ಮಲೆನಾಡಲ್ಲಿ ಭಾರೀ ಸದ್ದು ಮಾಡಿದೆ. ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಅಚ್ಚರಡಿ ಗ್ರಾಮದ ಸೌಮ್ಯಾ(27) ಮೃತ ಯುವತಿ. ಇದೀಗ ಆಕೆಯ ಪ್ರಿಯಕರ ತಾಳುಗುಪ್ಪದ ಸೃಜನ್‌ನನ್ನು ಬಂಧಿಸಲಾಗಿದ್ದು, 20 ದಿನದ ಬಳಿಕ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಪ್ರಿಯಕರನ ಭೇಟಿ ಮಾಡಲು ಸೌಮ್ಯಾ ಜು.2ರಂದು ಸಾಗರಕ್ಕೆ ಬಂದಿದ್ದಳು. ಈ ವೇಳೆ ಇಬ್ಬರ ನಡುವೆ ಮದುವೆ ವಿಚಾರದಲ್ಲಿ ವಾಗ್ವಾದ ನಡೆದಿತ್ತು. ಕೊಪಿತಗೊಂಡ ಆತ…

Read More

ಹೆಬ್ರಿಯಲ್ಲಿ ಮಳೆ ಅಬ್ಬರ, ಅವಾಂತರ! – ಹೆಬ್ರಿ ತಾಲೂಕಿನಾದ್ಯಂತ ಶಾಲಾ- ಕಾಲೇಜಿಗೆ ರಜೆ ಘೋಷಣೆ – ಚಲಿಸುತ್ತಿದ್ದ ಬಸ್ಸಿನ ಮೇಲೆ ಬಿದ್ದ ಮರ : ತಪ್ಪಿದ ಅನಾಹುತ – ಅಪಾಯದತ್ತ ನದಿಗಳು: ಜನರಿಗೆ ಆಡಳಿತದ ಎಚ್ಚರಿಕೆ NAMMUR EXPRESS NEWS ಹೆಬ್ರಿ: ಉಡುಪಿ ಜಿಲ್ಲೆ ಹೆಬ್ರಿಯಲ್ಲಿ ಭಾರೀ ಮಳೆ ಆಗುತ್ತಿದ್ದು, ಭಾರೀ ಗಾಳಿ ಮಳೆಗೆ ಹಲವೆಡೆ ಅನಾಹುತ ಸಂಭವಿಸಿದೆ. ನದಿ, ಹಳ್ಳಗಳು ಅಪಾಯ ಮಟ್ಟದಲ್ಲಿ ಹರಿಯುತ್ತಿವೆ. ಮರಗಳು ಧರೆಗೆ ಉರುಳುತ್ತಿವೆ. ಗುಡ್ಡ ಕುಸಿತ ಸಂಭವಿಸುತ್ತಿದೆ. ಹೆಬ್ರಿ ತಾಲೂಕಿನಾದ್ಯಂತ ಶಾಲಾ- ಕಾಲೇಜಿಗೆ ರಜೆ ಘೋಷಣೆ ಭಾರೀ ಗಾಳಿಮಳೆ ಹಿನ್ನಲೆ ಹೆಬ್ರಿ ತಾಲೂಕಿನ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ, ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳಿಗೆ (ಇಂದು)ಜು.26ರ ಶುಕ್ರವಾರ ರಜೆ ಘೋಷಿಸಲಾಗಿದೆ. ಉಳಿದಂತೆ ಎಲ್ಲಾ ಪದವಿ, ಸ್ನಾತಕೊತ್ತರ ಪದವಿ, ಡಿಪ್ಲೋಮ, ಇಂಜಿನಿಯರಿಂಗ್ ಐ.ಟಿ.ಐ. ವಿದ್ಯಾರ್ಥಿಗಳಿಗೆ ಎಂದಿನಂತೆ ತರಗತಿಗಳು ನಡೆಯಲಿವೆ ಎಂದು ಹೆಬ್ರಿ ತಹಶೀಲ್ದಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಗಾಳಿ ಮಳೆಯಿಂದ ತರಗತಿ ನಡೆಸಲು ಅನಾನುಕೂಲವಾಗುತ್ತಿದ್ದಲ್ಲಿ, ಅಥವಾ ಮಳೆ ಜೋರಾಗಿದ್ದಲ್ಲಿ…

Read More

ಕರಾವಳಿ ಕಡಲ ತೀರ ಪ್ರವಾಸೋದ್ಯಮಕ್ಕೆ ಪ್ಲಾನ್! – ಕಡಲ ತೀರದ ದ‌.ಕ ಜಿಲ್ಲೆಯ ಸಾಮರ್ಥ್ಯ ಜಗತ್ತಿಗೆ ಪರಿಚಯಿಸಲು ಯೋಜನೆ – ಕೇಂದ್ರ ಪ್ರವಾಸ ಸಚಿವರ ಜತೆಗೆ ಕ್ಯಾಪ್ಟನ್ ಬ್ರಿಜೇಶ್ ಚೌಟ ಚರ್ಚೆ NAMMUR EXPRESS NEWS ಮಂಗಳೂರು: ಭಾರತದ ಪಶ್ಚಿಮ ಕರಾವಳಿಯ ಅದ್ಭುತ ತಾಣ ಮಂಗಳೂರಿನ ಪ್ರವಾಸೋದ್ಯಮಕ್ಕೆ ಒತ್ತು ನೀಡುವಂತೆ ಕೇಂದ್ರ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಬಳಿ ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಮನವಿ ಮಾಡಿದ್ದಾರೆ. ‘ಸಸಿಹಿತ್ಲು ಬೀಚ್‌ನಲ್ಲಿ ಸಾಹಸ ಪ್ರವಾಸೋದ್ಯಮವನ್ನು ಪರಿಚಯಿಸಬೇಕು ಹಾಗೂ ಭಾರತದಲ್ಲಿ ಪ್ರಥಮ ವಿಶ್ವ ಮಟ್ಟದ ಪ್ಯಾಡ್ಲಿಂಗ್ ಸ್ಪರ್ಧೆ ಆಯೋಜನೆಗೊಂಡ ಸಸಿಹಿತ್ಲು ಬೀಚ್‌ಗೆ ಬ್ಲೂ ಫ್ಲ್ಯಾಗ್ ಪ್ರಮಾಣೀಕರಣ ನೀಡಬೇಕು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತಷ್ಟು ‘ಯುವ ಪ್ರವಾಸೋದ್ಯಮ ಕ್ಲಬ್’ಗಳನ್ನು ಸ್ಥಾಪಿಸುವತ್ತ ಗಮನಹರಿಸಬೇಕು’. ಇದರ ಕುರಿತು ತಕ್ಷಣ ಗಮನಹರಿಸಿ ಕ್ರಮ ಕೈಗೊಳ್ಳುವಂತೆ ಸಂಸದರು ಸಚಿವರ ಬಳಿ ಮನವಿ ಮಾಡಿದ್ದಾರೆ. ಪಶ್ಚಿಮ ಘಟ್ಟ, ಸುಂದರವಾದ ಕಡಲತೀರ, ಹೆಸರಾಂತ ಧಾರ್ಮಿಕ ಕೇಂದ್ರಗಳು,…

Read More