Author: Nammur Express Admin

ಈ ದಿನದ ರಾಶಿ ಭವಿಷ್ಯ ಹೇಗಿದೆ? – ಕೆಲವು ರಾಶಿಗೆ ತಾಯಿ ಲಕ್ಷ್ಮಿ ಕೃಪಾಕಟಾಕ್ಷ..! – ಯಾವ ರಾಶಿಯವರಿಗೆ ಶುಭ ? ಯಾವ ರಾಶಿಯವರಿಗೆ ಅಶುಭ ? NAMMUR EXPRESS NEWS ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು? ** ಮೇಷ ರಾಶಿ : ಅತ್ಯಂತ ಶುಭ ದಿನವಾಗಿರುತ್ತದೆ. ನಿಮ್ಮ ಸಾಮಾಜಿಕ ಸ್ಥಾನಮಾನ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ. ಕೆಲಸದಲ್ಲಿ ಉತ್ತಮ ಫಲಿತಾಂಶಗಳನ್ನು ನೀವು ಪಡೆಯುತ್ತೀರಿ. ಆದರೂ, ನೀವು ಕೆಲಸದ ನಿಮಿತ್ತ ಇದ್ದಕ್ಕಿದ್ದಂತೆ ಪ್ರಯಾಣಿಸಬೇಕಾಗಬಹುದು. ಪಾಲುದಾರಿಕೆ ವ್ಯವಹಾರದಲ್ಲಿ ಯಾರನ್ನೂ ಕುರುಡಾಗಿ ನಂಬಬೇಡಿ. ವಿಶೇಷ ಸ್ನೇಹಿತರ ಸಹಾಯದಿಂದ, ನೀವು ಹಣಕಾಸಿನ ಮುಗ್ಗಟ್ಟುಗಳಿಂದ ಪರಿಹಾರವನ್ನು ಪಡೆಯುತ್ತೀರಿ. ** ವೃಷಭ ರಾಶಿ : ಇಂದು ಯಶಸ್ಸನ್ನು ಸಾಧಿಸಲು ಹೆಚ್ಚು ಶ್ರಮಿಸಬೇಕಾಗುತ್ತದೆ. ಕೆಲಸದ ಜವಾಬ್ದಾರಿಗಳು ಹೆಚ್ಚಾಗುತ್ತವೆ. ಬಹುಕಾಲದಿಂದ ಬಾಕಿ ಉಳಿದಿರುವ ಕೆಲಸಗಳು ಯಶಸ್ವಿಯಾಗುತ್ತವೆ. ಸಂವಾದದ ಮೂಲಕ ಕುಟುಂಬದಲ್ಲಿ ಉದ್ಭವಿಸುವ ಸಮಸ್ಯೆಗಳನ್ನು…

Read More

ಕಾಫಿ ನಾಡಲ್ಲಿ ಕಾರ್ಗಿಲ್ ವಿಜಯೋತ್ಸವದ ಸಂಭ್ರಮ! – ಮೂಡಿಗೆರೆಯಿಂದ ಶೃಂಗೇರಿ, ಕೊಪ್ಪ, ಎನ್.ಆರ್.ಪುರದವರೆಗೆ ಕಾರ್ಗಿಲ್ ವಿಜಯ ಜ್ಯೋತಿ ರಥಯಾತ್ರೆ – ಸ್ವಾಗತಿಸಿ ಸಂಭ್ರಮಿಸಿದ ದೇಶ ಭಕ್ತರು: ಯೋಧರಿಗೆ ಸನ್ಮಾನ NAMMUR EXPRESS NEWS ಕೊಪ್ಪ /ಶೃಂಗೇರಿ: ಭಾರತದಲ್ಲಿ ಪ್ರತಿವರ್ಷ ಜುಲೈ 26 ಅನ್ನು ʼಕಾರ್ಗಿಲ್‌ ವಿಜಯ್‌ ದಿವಸ್‌ʼ ಎಂದು ಆಚರಿಸಲಾಗುತ್ತದೆ. ಭಾರತ-ಪಾಕಿಸ್ತಾನ ಯುದ್ಧದಲ್ಲಿ ಭಾರತದ ಗೆಲುವನ್ನು ಸಂಭ್ರಮಿಸುವ ದಿನ ಇದಾಗಿದೆ. ಮಾತ್ರವಲ್ಲ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸುವ ಸಲುವಾಗಿಯೂ ದೇಶದಾದ್ಯಂತ ಕಾರ್ಗಿಲ್‌ ವಿಜಯ ದಿನವನ್ನು ಆಚರಿಸುತ್ತಾರೆ. ಕಾರ್ಗಿಲ್‌ ವಿಜಯೋತ್ಸವಕ್ಕೀಗ 25ನೇ ವರ್ಷ. ಭಾರತೀಯ ಜನತಾ ಪಾರ್ಟಿ ಯುವ ಮೋರ್ಚ ಚಿಕ್ಕಮಗಳೂರು ಹುತಾತ್ಮ ಯೋಧರ ನೆನಪಿಗಾಗಿ 25ನೇ ವರ್ಷದ ಕಾರ್ಗಿಲ್ ವಿಜಯೋತ್ಸವದ ನಿಮಿತ್ತ ಜಿಲ್ಲೆಯಾದ್ಯಂತ ಕಾರ್ಗಿಲ್ ವಿಜಯ ಜ್ಯೋತಿ ರಥ ಯಾತ್ರೆಯನ್ನು ಆಚರಿಸಲಾಯಿತು. ಮೂಡಿಗೆರೆಯಲ್ಲಿ ಯಾತ್ರೆ ಉದ್ಘಾಟನೆಗೊಂಡು ಅಲ್ದುರ್, ಬಾಳೆಹೊನ್ನೂರು, ಬಳಿಕ ಶೃಂಗೇರಿ ಮಠದ ಮುಖ್ಯ ದ್ವಾರದಿಂದ ಕಟ್ಟೆ ಬಾಗಿಲಿನವರೆಗೂ ಮೆರವಣಿಗೆ ನಡೆಸಿ ಬಳಿಕ ಕೊಪ್ಪ, ಎನ್.ಆರ್.ಪುರದಲ್ಲಿ ಕಾರ್ಯಕ್ರಮ ನಡೆಸಲಾಯಿತು. ಶುಕ್ರವಾರ ಬೀರೂರು,…

Read More

ನಾಗರ ಹಾವು ಮುದ್ದು ಮಾಡಲು ಹೋಗಿ ಕಚ್ಚಿಸಿಕೊಂಡು ಸಾವು! – ಕುಡಿದ ಮತ್ತಿನಲ್ಲಿ ನಾಗರಹಾವಿನ ಜೊತೆ ಚೆಲ್ಲಾಟ – ಕುಡಿದು ಜಾಡಿಸಿ ಹಾವಿಗೆ ಒದ್ದಿದ್ದ ಕುಡುಕ! NAMMUR EXPRESS NEWS ಅಂದ್ರಪ್ರದೇಶ: ಕುಡಿದ ಮತ್ತಿನಲ್ಲಿ ನಾಗರಹಾವಿನ ಜೊತೆ ಚೆಲ್ಲಾಟವಾಡಿ ಯುವಕನೊಬ್ಬ ಪ್ರಾಣಕ್ಕೆ ಕುತ್ತು ತಂದುಕೊಂಡ ಘಟನೆ ಆಂದ್ರ ಪ್ರದೇಶದ ಸತ್ಯಸಾಯಿ ಜಿಲ್ಲೆಯ ಕದಿರಿಯಲ್ಲಿ ನಡೆದಿದೆ. ಯುವಕ ನಾಗರಾಜು ಕುಡಿದ ಅಮಲಿನಲ್ಲಿ ನಾಗರ ಹಾವಿನ ಜೊತೆ ಆಟವಾಡಿ ಹಾವಿಗೆ ಕೈಯಲ್ಲಿ ಅಸೆ ಮಾಡಲು ಹೋಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ನಡೆದಿದ್ದು ಏನು..? ಕದರಿಯ ಡಿಗ್ರಿ ಕಾಲೇಜು ಬಳಿ ರಸ್ತೆ ಬದಿಯಲ್ಲಿ ನಾಗರ ಹಾವೊಂದು ಕಾಣಿಸಿಕೊಂಡಿತ್ತು. ಕುಡಿದ ಅಮಲಿನಲ್ಲಿದ್ದ ನಾಗರಾಜು ಹಾವನ್ನು ಮುಟ್ಟುವ ಪ್ರಯತ್ನ ನಡೆಸಿದ್ದಾನೆ. ಅದಕ್ಕೆ ಹೊಡೆದಿದ್ದಾನೆ. ಕಾಲಿನಿಂದ ತುಳಿದಿದ್ದಾನೆ. ಕೋಪಗೊಂಡ ನಾಗರಹಾವು ಆತನ ಕೈ ಕಚ್ಚಿದೆ. ಅಕ್ಕಪಕ್ಕದಲ್ಲಿದ್ದವರು ನಾಗರಹಾವನ್ನು ಮುಟ್ಟದಂತೆ ನಾಗರಾಜುವಿಗೆ ಎಚ್ಚರಿಕೆ ನೀಡಿದ್ರೂ ಆತ ಅದನ್ನು ನಿರ್ಲಕ್ಷ್ಯಿಸಿದ್ದಾನೆ. ನಾಗರಹಾವು ಕಚ್ಚಿದಾಗ ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಗಾಬರಿಗೊಂಡ ಜನರು ಆಂಬ್ಯುಲೆನ್ಸ್‌ಗೆ ಕರೆ ಮಾಡಿ…

Read More

ಮುದ್ರಾ ಸಾಲ ಮಿತಿ ಹೆಚ್ಚಾಯ್ತು!: ನಿಮಗೂ ಸಿಗುತ್ತೆ ಲೋನ್! – ಸರ್ಕಾರದ ಷರತ್ತುಗಳೇನು? ಯಾರಿಗೆ ಪ್ರಯೋಜನ? – ಮುದ್ರಾ ಸಾಲ ಯಾವುದಕ್ಕೆ ಸಿಗುತ್ತೆ? ಬಳಕೆ ಹೇಗೆ? NAMMUR EXPRESS NEWS ಬೆಂಗಳೂರು: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿನಲ್ಲಿ ಬಜೆಟ್ ಮಂಡನೆ ವೇಳೆ ಮುದ್ರಾ ಸಾಲದ ಕುರಿತು ಮಾತನಾಡಿದ್ದು, ಅದರ ಮಿತಿಗಳನ್ನು ಹೆಚ್ಚಿಸಿರುವುದಾಗಿ ತಿಳಿಸಿದ್ದಾರೆ. ಮುದ್ರಾ ಸಾಲದ ಮಿತಿಗಳನ್ನು ಹೆಚ್ಚಿಸಿರುವುದರಿಂದ ಸಣ್ಣ ಉದ್ಯಮಿಗಳು ಮತ್ತು ಉದ್ಯಮಿಗಳು ಇದರ ಲಾಭ ಪಡೆಯಲಿದ್ದಾರೆ. ಹೆಚ್ಚಿನ ಸಾಲದ ಮಿತಿಯೊಂದಿಗೆ ಇದಕ್ಕೆ ಕೆಲವು ಷರತ್ತುಗಳನ್ನು ಸಹ ಪರಿಚಯಿಸಲಾಗಿದೆ. ಮುದ್ರಾ ಸಾಲದ ಮಿತಿಯನ್ನು 10 ಲಕ್ಷದಿಂದ 20 ಲಕ್ಷ ರೂ.ಗೆ ಹೆಚ್ಚಿಸುವುದಾಗಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ. ಇದು ಉದ್ಯಮಿಯಾಗಲು ಬಯಸುವವರಿಗೆ ವರದಾನವಾಗಿದೆ. ಷರತ್ತುಗಳು ಏನು?: ಹೆಚ್ಚಿದ ಸಾಲದ ಮಿತಿಗೆ ಅರ್ಹತೆ ಪಡೆಯಲು ಸಾಲಗಾರರು ಈ ಹಿಂದೆ ಮುದ್ರಾ ಸಾಲವನ್ನು ತೆಗೆದುಕೊಂಡು ಪೂರ್ಣವಾಗಿ ಮರುಪಾವತಿಸಿರಬೇಕು. ಹಾಗಿದ್ದರೆ ಮಾತ್ರ ಹೊಸ ಪ್ರಯೋಜನಗಳನ್ನು ಪಡೆಯಬಹುದು. ಮುದ್ರಾ ಸಾಲ ವಿಭಾಗಗಳು.!…

Read More

ಶಿವಮೊಗ್ಗ ಜಿಲ್ಲಾ ಒಕ್ಕಲಿಗರ ಸಂಘದ ಚುನಾವಣೆ ರಂಗು – ಜಿಲ್ಲಾ ನಿರ್ದೇಶಕ ಸ್ಥಾನಕ್ಕೆ ಬಂಡೆ ವೆಂಕಟೇಶ್ ಸ್ಪರ್ಧೆ – ತೀರ್ಥಹಳ್ಳಿಯ ಪ್ರಭಾವಿ ನಾಯಕ ಈಗ ಜಿಲ್ಲಾ ಕಣಕ್ಕೆ NAMMUR EXPRESS NEWS ಶಿವಮೊಗ್ಗ: ಆಗಸ್ಟ್ 11ರಂದು ನಡೆಯುವ ಶಿವಮೊಗ್ಗ ಜಿಲ್ಲಾ ಒಕ್ಕಲಿಗರ ಸಂಘದ ಚುನಾವಣೆಗೆ ತೀರ್ಥಹಳ್ಳಿ ತಾಲ್ಲೂಕಿನ ಒಕ್ಕಲಿಗ ಸಮುದಾಯದ ಜನಪ್ರಿಯ ನಾಯಕ, ಮೇಲಿನ ಕುರುವಳ್ಳಿ ಗ್ರಾಮ ಪಂಚಾಯತಿಯ ಹಾಲಿ ಅಧ್ಯಕ್ಷರು ಮತ್ತು ತೀರ್ಥಹಳ್ಳಿ ತಾಲ್ಲೂಕು ಒಕ್ಕಲಿಗರ ಸಂಘದ ಹಾಲಿ ನಿರ್ದೇಶಕರು ಹಾಗೂ ರಾಜ್ಯ ಗ್ರಾಮ ಪಂಚಾಯತಿ ಒಕ್ಕೂಟದ ಉಪಾಧ್ಯಕ್ಷರಾಗಿರುವ ಬಂಡೆ ವೆಂಕಟೇಶ್ ಅವರು ಬುಧವಾರ ನಾಮಪತ್ರ ಸಲ್ಲಿಸಿದ್ದಾರೆ. ಆಗಸ್ಟ್ 11ರಂದು ನಡೆಯಲಿರುವ ಒಕ್ಕಲಿಗರ ಸಂಘದ ಚುನಾವಣೆಯಲ್ಲಿ ಇವರ‌ ಹಿತೈಷಿಗಳು, ಸ್ನೇಹಿತರು, ಬಂಧು ಬಳಗದವರು ಮತ್ತು ಒಕ್ಕಲಿಗ ಸಮುದಾಯದ ಮತದಾರರು ತನಗೆ ಮತ ಚಲಾಯಿಸುವುದರ ಮೂಲಕ ಅತಿ ಹೆಚ್ಚು ಮತಗಳ ಅಂತರದಲ್ಲಿ ಗೆಲ್ಲಿಸಿ ಕೊಡುವುದರ ಮುಖಾಂತರ ಒಕ್ಕಲಿಗ ಸಮುದಾಯದ ಅಭಿವೃದ್ಧಿಗೆ ಶ್ರಮಿಸಲು ಅವಕಾಶ ಮಾಡಿಕೊಡಬೇಕಾಗಿ ಬಂಡೆ ವೆಂಕಟೇಶ್ ವಿನಂತಿಸಿದ್ದಾರೆ.

Read More

ಕಾರ್ಗಿಲ್ ವಿಜಯೋತ್ಸವಕ್ಕೆ 25 ವರ್ಷ..! – ದೇಶಕ್ಕಾಗಿ ಪ್ರಾಣ ಬಿಟ್ಟ ವೀರ ಯೋಧರಿಗೆ ನಮನ – ದೇಶದೆಲ್ಲೆಡೆ ಕಾರ್ಗಿಲ್ ವಿಜಯ್ ದಿವಸ್ ಆಚರಣೆ – ಯುದ್ಧದಲ್ಲಿ 527 ಮಂದಿ ಭಾರತೀಯ ಸೈನಿಕರ ವೀರ ಮರಣ NAMMUR EXPRESS NEWS ಭಾರತ-ಪಾಕಿಸ್ತಾನ ನಡುವಿನ ವೈರತ್ವ ಇಂದು ನಿನ್ನೆಯದಲ್ಲ. ದೇಶ ವಿಭಜನೆಯಾದಾಗಿನಿಂದ ಈ ವೈಮನಸ್ಸು ಮುಂದುವರಿದುಕೊಂಡು ಬಂದಿದೆ. ಆದರೆ 1999ರಲ್ಲಿ ಭಾರತ ಹಾಗೂ ಪಾಕಿಸ್ತಾನದ ನಡುವೆ ಭೀಕರ ಯುದ್ಧವಾಗಿತ್ತು. ಈ ಯುದ್ಧವು ಕಾರ್ಗಿಲ್ ಪ್ರಾಂತ್ಯದಲ್ಲಿ ನಡೆದ ಕಾರಣ ಇದಕ್ಕೆ ಕಾರ್ಗಿಲ್ ಯುದ್ಧ ಎಂದು ಹೆಸರಿಲಾಗಿದೆ. ಕಾರ್ಗಿಲ್‌ ಯುದ್ಧವು ಭಾರತಕ್ಕೆ ಜಯ ತಂದುಕೊಟ್ಟರೂ ಇದರಲ್ಲಿ ಹಲವು ಯೋಧರು ಹುತ್ಮಾತರಾಗಿದ್ದರು. ಕಾರ್ಗಿಲ್ ಯುದ್ಧದ ಗೆಲುವನ್ನು ಸಂಭ್ರಮಿಸುವ ಹಾಗೂ ಹುತ್ಮಾತ ಯೋಧರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಪ್ರತಿ ವರ್ಷ ಜುಲೈ 26 ರಂದು ಕಾರ್ಗಿಲ್ ವಿಜಯ್ ದಿವಸ್ ಎಂದು ಆಚರಿಸಲಾಗುತ್ತದೆ. ಕಾರ್ಗಿಲ್ ಯುದ್ಧ ನಡೆದು ಈ ವರ್ಷಕ್ಕೆ 25 ವರ್ಷಗಳಾಗಿವೆ. 1999ರ ಮೇ ಹಾಗೂ ಜುಲೈ ನಡುವೆ ಕಾಶ್ಮೀರದ…

Read More

ಕ್ರಿಯೇಟಿವ್ ಕಾಲೇಜಿನಲ್ಲಿ ಮಕ್ಕಳಿಗೆ ಕಾನೂನು ಅರಿವು ಪಾಠ! – ಕಾನೂನು ಅರಿವು ಕಾರ್ಯಕ್ರಮದಲ್ಲಿ ಕಾನೂನಿನ ಮಾಹಿತಿ ನೀಡಿದ ಪೊಲೀಸ್ ಅಧಿಕಾರಿಗಳು NAMMUR EXPRESS NEWS ಕಾರ್ಕಳ: ಕಾರ್ಕಳದ ಕ್ರಿಯೇಟಿವ್ ಪಿಯು ಕಾಲೇಜಿನ ಸಪ್ತಸ್ವರ ವೇದಿಕೆಯಲ್ಲಿ ಜುಲೈ 24ರಂದು ವಿದ್ಯಾರ್ಥಿಗಳ ಸಮ್ಮುಖದಲ್ಲಿ ಕಾನೂನು ಅರಿವು ಮತ್ತು ಮಾಹಿತಿ ಕಾರ್ಯಕ್ರಮ ನಡೆಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಕಾರ್ಕಳ ಪೊಲೀಸ್ ಉಪನಿರೀಕ್ಷಕರಾದ ಸುಬ್ರಹ್ಮಣ್ಯ ಎಚ್ ಮಾತನಾಡಿ, ಶಿಕ್ಷಣ ಪಡೆದಾಗ ಜ್ಞಾನ ಮೂಡುತ್ತದೆ. ಆಗ ಸಮಾಜದಲ್ಲಿ ಶಾಂತಿ ಹಾಗೂ ಸಹಬಾಳ್ವೆಯಿಂದ ಬದುಕಲು ಸಾಧ್ಯ ಎಂದರು. ಪೊಲೀಸ್ ಇಲಾಖೆಯ ಕಾನ್ಸ್ಟೇಬಲ್ ಸಂತೋಷ್ ಮಾತನಾಡಿ ವಿದ್ಯಾರ್ಥಿಗಳು ತಮ್ಮ ಓದಿನ ಜೊತೆಗೆ ತಮ್ಮ ಹಕ್ಕುಗಳು ಮತ್ತು ಕಾನೂನು ಅರಿವು ಹೊಂದುವುದು ಅತ್ಯಗತ್ಯವಾಗಿದೆ ಎಂದರು. ಸಭಾಧ್ಯಕ್ಷತೆಯನ್ನು ವಹಿಸಿದ ಪ್ರಾಂಶುಪಾಲರಾದ ವಿದ್ವಾನ್ ಗಣಪತಿ ಭಟ್ ಮಾತನಾಡಿ, ಜೀವಿಸಲು ಗಾಳಿ, ನೀರು, ಆಹಾರ ಎಷ್ಟು ಅಗತ್ಯವೋ ಸಮಾಜದಲ್ಲಿ ಬದುಕಬೇಕಾದರೆ ಕಾನೂನಿನ ಅರಿವು ಅಷ್ಟೇ ಅವಶ್ಯಕವಾಗಿದೆ ಎಂದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪೊಲೀಸ್ ಇಲಾಖೆಯ ರವೀಂದ್ರ ಹಾಗೂ…

Read More

ಕಾಡಲ್ಲೇ ಜೋಡಿಗಳ ಸರಸ.. ಛೇ ಎಂಥಾ ಕಾಲ ಮಾರ್ರೆ! – ಬಂಟ್ವಾಳದ ಕಳೆಂಜಿಮಲೆ ರಕ್ಷಿತಾರಣ್ಯದಲ್ಲಿ ಹುಡುಗ ಹುಡುಗಿ ಪರಾರಿ – ಬಟ್ಟೆ ಬಿಟ್ಟು ಪರಾರಿ: ಅನೈತಿಕ ಚಟುವಟಿಕೆ ಬಗ್ಗೆ ಸ್ಥಳೀಯರ ಆಕ್ರೋಶ – ಮಂಗಳೂರು: ಜೈಲಲ್ಲಿ 25 ಮೊಬೈಲ್,ಡ್ರಗ್ಸ್ ವಶ! – ಮಂಗಳೂರು ಕಾರಾಗೃಹದ ಮೇಲೆ ಮೇಲೆ ಪೊಲೀಸರ ದಾಳಿ – ಕಾಸರಗೋಡು: ಮೂವರು ಯುವಕರು ಆತ್ಮಹತ್ಯೆ NAMMUR EXPRESS NEWS ಬಂಟ್ವಾಳ: ಅಪ್ರಾಪ್ತ ಬಾಲಕಿಯನ್ನು ರಕ್ಷಿತಾರಣ್ಯಕ್ಕೆ ಬೈಕ್‌ ಸವಾರನೊಬ್ಬ ಕರೆತಂದು ಅಲ್ಲೇ ಸರಸದಲ್ಲಿದ್ದ ವೇಳೆ ಗ್ರಾಮಸ್ತರು ಅವರನ್ನು ಹುಡುಕುತ್ತಿದ್ದ ಬಗ್ಗೆ ಗಮನಕ್ಕೆ ಬಂದು ಬೈಕ್, ಬಟ್ಟೆ ಬರೆಗಳನ್ನು ಅಲ್ಲೇ ಬಿಟ್ಟು ಅರೆನಗ್ನರಾಗಿದ್ದ ಯುವಕ-ಯುವತಿ ಪರಾರಿಯಾದ ಘಟನೆ ವಿಟ್ಲ ಠಾಣಾ ವ್ಯಾಪ್ತಿಯ ಕಳೆಂಜಿಮಲೆ ರಕ್ಷಿತಾರಣ್ಯದಲ್ಲಿ ನಡೆದಿದೆ. ಸಾರ್ವಜನಿಕರ ಮಾಹಿತಿ ಪಡೆದು ಸ್ಥಳಕ್ಕಾಗಮಿಸಿದ ಪೊಲೀಸರು ರಕ್ಷಿತಾರಣ್ಯದಲ್ಲಿ ಅನಾಥ ಸ್ಥಿತಿಯಲ್ಲಿದ್ದ ಬೈಕ್, ಯುವತಿಯ ಬ್ಯಾಗ್‌, ನಶೆಯೇರಿಸುವ ಮಾತ್ರೆಗಳು, ಕಾಂಡೋಮುಗಳು ಮತ್ತು ಚಪ್ಪಲಿಗಳನ್ನು ವಶಕ್ಕೆ ಪಡೆದಿದ್ದಾರೆ. ಇದೀಗ ಪೊಲೀಸರು ಯುವತಿ ಮತ್ತು ಯುವಕನ ಬಗ್ಗೆ ಮಾಹಿತಿ…

Read More

ದೇಗುಲಗಳ ಘಂಟೆ ಗ್ಯಾಂಗ್ ಕಳ್ಳರ ಬಂಧನ! – ಮಾಳೂರು ಠಾಣೆ ಪೊಲೀಸರ ಕಾರ್ಯಚರಣೆ – ಚಿಡುವ, ಬಾಳಗಾರು ರಾಮೇಶ್ವರ ದೇಗುಲಗಳಲ್ಲಿ ಕಳ್ಳತನ – ಭದ್ರಾವತಿಯಿಂದ ಕಳ್ಳರ ಗ್ಯಾಂಗ್ ಆಗಮನ! NAMMUR EXPRESS NEWS ತೀರ್ಥಹಳ್ಳಿ: ದೇವಸ್ಥಾನಗಳಲ್ಲಿ ಘಂಟೆ, ಪೂಜಾ ಸಾಮಾಗ್ರಿಗಳು ಹಾಗೂ ಬೆಳ್ಳಿಯ ದೀಪಗಳನ್ನು ಕಳ್ಳತನ ಮಾಡುತ್ತಿದ್ದ ಗ್ಯಾಂಗ್ ಅನ್ನು ಮಾಳೂರು ಪೊಲೀಸರು ಸೆರೆ ಹಿಡಿದಿದ್ದಾರೆ. ಮಾಳೂರು ಠಾಣಾ ವ್ಯಾಪ್ತಿಯಲ್ಲಿನ ಚಿಡುವ ಆಂಜನೇಯ ದೇವಸ್ಥಾನ ಗಾಳಿಮಾರಮ್ಮ ದೇವಸ್ಥಾನ ಹಾಗೂ ತೀರ್ಥಹಳ್ಳಿ ಠಾಣಾ ವ್ಯಾಪ್ತಿಯ ಬಾಳಗಾರು ರಾಮೇಶ್ವರ ದೇವಸ್ಥಾನಗಳಲ್ಲಿ ಘಂಟೆ, ಪೂಜಾ ಸಾಮಾಗ್ರಿಗಳು,ಹಾಗೂ ಬೆಳ್ಳಿಯ ದೀಪಗಳನ್ನು ಕಳ್ಳತನ ಮಾಡಲಾಗಿದ್ದು ಮಾಳೂರು ಠಾಣೆಯಲ್ಲಿ ಹಾಗೂ ತೀರ್ಥಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣವನ್ನು ಬೆನ್ನುಹತ್ತಿದ ಮಾಳೂರು ಪೊಲೀಸರ ತಂಡ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಳ್ಳರಿಂದ ಅಂದಾಜು 70000 ರೂ.ಮೌಲ್ಯದ ವಸ್ತುಗಳು ಹಾಗೂ ಕೃತ್ಯಕ್ಕೆ ಬಳಸಿದ ಓಮ್ನಿ ವಾಹನ ಅಂದಾಜು ಮೌಲ್ಯ 200000₹ ನ್ನು ವಶಪಡಿಸಿಕೊಂಡಿರುತ್ತಾರೆ. ಪೊಲೀಸರ ಕ್ರಮಕ್ಕೆ ಮೆಚ್ಚುಗೆ ಕಳ್ಳರ ಬಂಧನ ಕಾರ್ಯಾಚರಣೆಯಲ್ಲಿ ಡಿವೈಎಸ್ಪಿ…

Read More

ನಂದಿನಿ ಹಾಲಿನ ದರ ಏರಿಕೆಗೆ ಹೈಕೋರ್ಟ್‌ ಅಸ್ತು..! – ಸರ್ಕಾರದ ನಿರ್ದಿಷ್ಟ ನೀತಿಯಿಂದ ನಿರ್ಣಯ – ತಜ್ಞರ ಅನಿಸಿಕೆಯಂತೆ ಏರಿಕೆ NAMMUR EXPRESS NEWS ಬೆಂಗಳೂರು: ರಾಜ್ಯದಲ್ಲಿ ನಂದಿನಿ ಹಾಲಿನ ಬೆಲೆ ಏರಿಕೆ ಮಾಡಿದ ಕರ್ನಾಟಕ ಹಾಲು ಒಕ್ಕೂಟದ (ಕೆಎಂಎಫ್) ನಿರ್ಧಾರ ರದ್ದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿ ಆದೇಶಿಸಿದೆ. ಈ ಕುರಿತಂತೆ ನಗರದ ನಿವಾಸಿ ಡಾ.ಆ‌ರ್.ಅರ್ಮಿತಲಕ್ಷ್ಮಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಅವರ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ನೀಡಿದೆ. ಬೆಲೆ ಏರಿಕೆಯು ತಜ್ಞರ ಅಭಿಪ್ರಾಯ ಹಾಗೂ ಸರ್ಕಾರದ ನಿರ್ದಿಷ್ಟ ನೀತಿಯಿಂದ ನಿರ್ಣಯವಾಗುತ್ತದೆ. ಶಾಸನಬದ್ಧ ನೀತಿಯ ಉಲ್ಲಂಘನೆಯಾದ ಸಂದರ್ಭದಲ್ಲಿ ನ್ಯಾಯಾಂಗ ಪರಿಶೀಲನೆಗೆ ಅವಕಾಶವಿರುತ್ತದೆ. ಇಲ್ಲಿ ವಾಣಿಜ್ಯ ಉದ್ದೇಶದಿಂದ ತಜ್ಞರ ಅಭಿಪ್ರಾಯದೊಂದಿಗೆ ಹೆಚ್ಚಳ ಮಾಡಲು ಕೆಎಂಎಫ್‌ ನಿರ್ಧಾರ ತೆಗೆದುಕೊಂಡಿದೆ. ಅದನ್ನು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಮೂಲಕ ಪ್ರಶ್ನೆ ಮಾಡಲಾಗದು. ಆದ್ದರಿಂದ ಅರ್ಜಿ ವಜಾಗೊಳಿಸಲಾಗುತ್ತಿದೆ ಎಂದು ಪೀಠ ತಿಳಿಸಿದೆ. ಇದಕ್ಕೂ ಮುನ್ನ ವಿಚಾರಣೆ ವೇಳೆ…

Read More