Author: Nammur Express Admin

ಮಂಗಳೂರು- ಸುಬ್ರಹ್ಮಣ್ಯ ಮಧ್ಯೆ ಪ್ಯಾಸೆಂಜರ್ ರೈಲು ಬರುತ್ತಾ? – ರೈಲು ಆರಂಭಿಸಲು ಸಂಸತ್ತಿನಲ್ಲಿ ಸಂಸದ ಬ್ರಿಜೇಶ್ ಚೌಟ ಒತ್ತಾಯ – ಜನತೆ ಜತೆಗೆ ಪ್ರವಾಸಿಗರಿಗೂ ಅನುಕೂಲ NAMMUR EXPRESS NEWS ಮಂಗಳೂರು- ಸುಬ್ರಹ್ಮಣ್ಯ ನಡುವೆ ಪ್ಯಾಸೆಂಜರ್ ರೈಲು ಆರಂಭಿಸಬೇಕೆಂದು ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಸಂಸತ್ತಿನಲ್ಲಿ ಒತ್ತಾಯ ಮಾಡಿದ್ದಾರೆ.ಈ ಹಿಂದೆ ಮಂಗಳೂರು- ಸುಬ್ರಹ್ಮಣ್ಯ ನಡುವೆ ಮೀಟರ್ ಗೇಜ್ ಹಳಿ ಇದ್ದಾಗ ಪ್ಯಾಸೆಂಜರ್ ರೈಲು ಓಡಾಟ ಇತ್ತು. ಬ್ರಾಡ್ ಗೇಜ್ ಹಳಿ ಮಾಡುವ ಸಲುವಾಗಿ 2005ರಲ್ಲಿ ಈ ರೈಲಿನ ಸಂಚಾರವನ್ನು ನಿಲ್ಲಿಸಲಾಗಿತ್ತು. ಆನಂತರ, ಬ್ರಾಡ್ ಗೇಜ್ ಹಳಿಯಾಗಿ ಪರಿವರ್ತನೆ ಮಾಡಲಾಗಿದೆ. ಅಂದು ಓಡುತ್ತಿದ್ದ ಪ್ಯಾಸೆಂಜರ್ ರೈಲು ಮಂಗಳೂರಿನಿಂದ ಕಬಕ- ಪುತ್ತೂರು ನಡುವೆ ಓಡಾಟ ನಡೆಸುತ್ತಿದ್ದು, ಅದನ್ನು ಸುಬ್ರಹ್ಮಣ್ಯದ ವರೆಗೆ ವಿಸ್ತರಣೆ ಮಾಡಬೇಕು. ಮಂಗಳೂರು – ಸುಬ್ರಹ್ಮಣ್ಯ ಮಧ್ಯೆ ರೈಲು ಓಡಾಟವಾದರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲೆ, ಕಾಲೇಜಿಗೆ ಹೋಗುವವರಿಗೆ ಉಪಯೋಗವಾಗಲಿದೆ. ಗ್ರಾಮಾಂತರ ಪ್ರದೇಶವಾದ ಸುಳ್ಯದಿಂದ ಮಂಗಳೂರಿಗೆ ಪ್ರತಿದಿನ ಓಡಾಟ ಮಾಡುವವರಿದ್ದಾರೆ.…

Read More

ದಾವಣಗೆರೆ ಹುಬ್ಬಳ್ಳಿ ಟಾಪ್ 3 ನ್ಯೂಸ್..! ಅರ್ಚಕ ದೇವೇಂದ್ರಪ್ಪಜ್ಜ ಕೊಲೆ ಕೇಸ್‌ ಖತಂ! – 24 ಗಂಟೆಗಳಲ್ಲಿ ಆರೋಪಿ ಅರೆಸ್ಟ್ ಹುಬ್ಬಳ್ಳಿ: ಮಾದಕ ವಸ್ತುಗಳ ಸಾಗಾಟ..! – ಐದು ಮಂದಿ ಬಂಧನ ದಾವಣಗೆರೆ : ಆನಾರೋಗ್ಯಕ್ಕೆ ಬೇಸತ್ತ ದಂಪತಿ..! – ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ NAMMUR EXPRESS NEWS ಹುಬ್ಬಳ್ಳಿ: ಹಾವಿನ ದ್ವೇಷ ಹನ್ನೆರಡು ವರ್ಷ, ನನ್ನ ರೋಷ ನೂರು ವರ್ಷ. ಇದು ನಾಗರಹಾವು ಸಿನಿಮಾದ ಒಂದು ಹಾಡು. ಅವತ್ತಿಗೂ, ಇವತ್ತಿಗೂ ಈ ಹಾಡು ತುಂಬಾ ಅರ್ಥಗರ್ಭಿತವಾಗಿದೆ. ನಾಗರ ಹಾವು ವಿಷ್ಣುವರ್ಧನ್ ಇಮೇಜ್ ಬದಲಿಸಿದ ಸಿನಿಮಾ. ಸಾಕಷ್ಟು ಹೆಸರು ತಂದು ಕೊಟ್ಟ ಸಿನಿಮಾ. ಇವಾಗ ಯಾಕೆ ಈ ಸಿನಿಮಾ ಬಗ್ಗೆ ಹೇಳತೀದಾರೆ ಅಂತೀರಾ. ಅಲ್ಲೆ ಇರೋದು ಅಸಲಿ ಕಥೆ. 26 ವರ್ಷದ ಹಿಂದಿನ ದ್ವೇಷಕ್ಕೆ ಅರ್ಚಕರೊಬ್ಬರ ಕೊಲೆಯಾಗಿದೆ. ಕೊಲೆ ಮಾಡಿದ ಆರೋಪಿ 26 ವರ್ಷದ ಸೇಡಿನ ಕಥೆ ಬಿಚ್ಚಿಟ್ಟಿದ್ದಾನೆ. ಕಳೆದ ಎರಡು ದಿನಗಳ ಹಿಂದೆ ಹುಬ್ಬಳ್ಳಿಯಲ್ಲಿ ನಡೆದ ಅರ್ಚಕನ ಕೊಲೆಗೆ ಕಾರಣ…

Read More

ಊರಿಗೆ ಬಂದ ಕಾಡಾನೆ! – ಆಲ್ದೂರು ಸಮೀಪದ ಹಂಗರವಳ್ಳಿಯಲ್ಲಿ ಘಟನೆ – ಮತ್ತೆ ಕಾಡು ಸೇರಿದ ಕಾಡಾನೆ: ಜನರಲ್ಲಿ ಭಯ NAMMUR EXPRESS NEWS ಮೂಡಿಗೆರೆ/ಆಲ್ದೂರು: ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಆಲ್ದೂರು ಸಮೀಪದ ಹಂಗರವಳ್ಳಿಯಲ್ಲಿ ಕಾಡಾನೆಯೊಂದು ಊರಿಗೆ ಬಂದು ರಸ್ತೆಯಲ್ಲಿ ಓಡಾಡಿದ್ದು ಗ್ರಾಮಸ್ಥರಲ್ಲಿ ಆತಂಕ ಸೃಷ್ಠಿಯಾಗಿದೆ. ಹಾಗೆ ಮುಂದೆ ಚಲಿಸಿದ ಕಾಡಾನೆ ಕಾಡನ್ನು ಸೇರಿದೆ.ಅರಣ್ಯಾಧಿಕಾರಿಗಳಿಗೆ ವಿಷಯ ತಿಳಿಸಿದ ಸ್ಥಳೀಯರು ಸ್ಥಳಕ್ಕೆ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

Read More

ಮೈಸೂರು ಟಾಪ್ 4 ನ್ಯೂಸ್..! – ಮಳೆಗೆ ಬಿದ್ದ ಬೃಹತ್‌ ಗಾತ್ರದ ಮರ: 700 ವರ್ಷ ಹಳೆಯ ಮಠದ ಕಟ್ಟಡ ಹಾನಿ – ಸಾರ್ವಜನಿಕರನ್ನು ಹೆದರಿಸಿ ದರೋಡೆಗೆ ಸಂಚು: ಇಬ್ಬರ ಬಂಧನ – ಸ್ಕೂಟ‌ರ್ ಲಾರಿ ಢಿಕ್ಕಿ: ವಿಕಲಚೇತನ ವ್ಯಕ್ತಿ ಮೃತ್ಯು! – ಜಾತಿ ನಿಂದನೆ ಮಾಡಿ ಕೊಲೆಗೆ ಯತ್ನ: ಆರೋಪಿಗೆ 10 ವರ್ಷ ಜೈಲು! NAMMUR EXPRESS NEWS ಹಾಸನ: ಹಾಸನ ಜಿಲ್ಲೆಯಲ್ಲಿ ಮಳೆಯ ಅಬ್ಬರ ಮುಂದುವರೆದಿದೆ. ಧಾರಾಕಾರ ಮಳೆಗೆ ನಗರದ ಸಂಗಮೇಶ್ವರ ಬಡಾವಣೆಯ ಜವೇನಹಳ್ಳಿ ಮಠದ ಈಶ್ವರ ದೇಗುಲದ ಮೇಲೆ ಬೃಹತ್ ಗಾತ್ರದ ಮರ ಬಿದ್ದಿದೆ. ಮರ ಬಿದ್ದ ಪರಿಣಾಮ ಮಠದ ಕಟ್ಟಡ ಹಾಗೂ ದೇಗುಲಕ್ಕೆ ಹಾನಿಯಾಗಿದೆ. ಮಠದಲ್ಲಿ ಯಾರೂ ಇಲ್ಲದಿದ್ದರಿಂದ ಭಾರಿ ಅನಾಹುತ ತಪ್ಪಿದೆ. ಹಳೆಯ ಮಠ ಮಳೆಗಾಲದಲ್ಲಿ ಸೋರುತ್ತಿದ್ದರಿಂದ ಮಠದ ಪೀಠಾಧ್ಯಕ್ಷ ಶ್ರೀ ಸಂಗಮೇಶ್ವರ ಸ್ವಾಮೀಜಿ ಬೇರೆಡೆ ತಂಗುತ್ತಿದ್ದರು. ಸದ್ಯ 700 ವರ್ಷ ಹಳೆಯದಾದ ಜವೇನಹಳ್ಳಿ ಮಠ ದುರಸ್ತಿ ಮಾಡುವಂತೆ ಭಕ್ತಾಧಿಗಳು ಆಗ್ರಹಿಸಿದ್ದಾರೆ. ಹಾಸನ, ಸಕಲೇಶಪುರ,…

Read More

ಮಲೆನಾಡಲ್ಲಿ ತೀರ್ಥಹಳ್ಳಿಯಲ್ಲೇ ಹೆಚ್ಚು ಮಳೆ! – ತೀರ್ಥಹಳ್ಳಿಯಲ್ಲಿ ಶೇ.24 ರಷ್ಟು ಅಧಿಕ ಮಳೆ..! – ಮರ, ಮನೆ, ಶಾಲೆಯ ಗೋಡೆ ಕುಸಿದು ಅಲ್ಲಲ್ಲಿ ಹಾನಿ – ಜುಲೈ 23ರ ವರೆಗೆ 1795.5 ಮಿ. ಮೀ ಮಳೆ NAMMUR EXPRESS NEWS ತೀರ್ಥಹಳ್ಳಿ : ತೀರ್ಥಹಳ್ಳಿ ತಾಲೂಕಿನಲ್ಲಿ ಮಳೆಯ ಬಿರುಸು ಕಳೆದ ಎರಡು ದಿನಗಳಿಂದ ಇಳಿಮುಖವಾಗಿದೆಯಾದರೂ ಬೀಸುತ್ತಿರುವ ಗಾಳಿಯಿಂದಾಗಿ ಹಲವಾರು ಮನೆಗಳ ಮೇಲೆ ಮರ ಬಿದ್ದು ಅಪಾರ ಹಾನಿ ಸಂಭವಿಸಿದೆ. ತೀರ್ಥಹಳ್ಳಿ ತಾಲೂಕಿನಲ್ಲಿ ಜುಲೈ 23ರ ವರೆಗೆ 1795.5 ಮಿ. ಮೀ ಮಳೆಯಾಗಿದ್ದು, ವಾಡಿಕೆಯ ಶೇ.24 ಅಧಿಕ ಮಳೆ ಬಿದ್ದಿದೆ. ಆಗುಂಬೆ ಹೋಬಳಿ ಹೊನ್ನೆತಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಂಟೂರಿನ ಡಾಕಮ್ಮ ಸಿದ್ದಪ್ಪಗೌಡರ ವಾಸದ ಮನೆಯ ಮಾಡು ಕುಸಿದು ಹಾನಿ ಸಂಭವಿಸಿದೆ. ಸುದೈವಶಾತ್ ಯಾವುದೇ ಅಪಾಯವಾಗಿಲ್ಲ. ಪಟ್ಟಣ ಸಮೀಪದ ಇಂದಿರಾ ನಗರದ ಮಂಜ ನಾಯ್ಕ್ ರವರ ಮನೆ ಗೋಡೆ ಕುಸಿದಿದ್ದು ಮನೆ ಬೀಳುವ ಸ್ಥಿತಿ ತಲುಪಿದೆ. ಮಂಡಗದ್ದೆ ಹೋಬಳಿ ಸಿಂಗನ ಬಿದಿರೆ ಗ್ರಾಮ…

Read More

ನಿಮ್ಮ ಆಧಾರ್ ಅಂತೆ ಬರಲಿದೆ ಭೂಮಿಗೂ ಆಧಾರ್ ಕಾರ್ಡ್! – ಜಮೀನುಗಳಿಗೂ ವಿಶೇಷ ಗುರುತಿನ ಸಂಖ್ಯೆ ಭೂ-ಆಧಾ‌ರ್ ಜಾರಿ – ಆಸ್ತಿಗಳ ಡಿಜಿಟಲೀಕರಣ: ಭೂ ಆಕ್ರಮಗಳಿಗೆ ಕಡಿವಾಣ! NAMMUR EXPRESS NEWS ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ಮಂಡಿಸಿದ ಬಜೆಟ್ ನಲ್ಲಿ ಅನೇಕ ಭೂ ಸುಧಾರಣೆ ಕಾರ್ಯಕ್ರಮ ಘೋಷಣೆ ಮಾಡಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಭೂಮಿಗೆ ವಿಶಿಷ್ಟ ಗುರುತಿನ ಸಂಖ್ಯೆ ಅಥವಾ ಭೂ ಆಧಾ‌ರ್ ನೀಡಲಾಗುವುದು. ಎಲ್ಲಾ ನಗರ ಭೂ ದಾಖಲೆಗಳ ಡಿಜಟಲೀಕರಣ ಮಾಡಲಿದ್ದು, ಈ ಮೂಲಕ ಭೂ ಆಕ್ರಮಗಳಿಗೆ ಕಡಿವಾಣ ಹಾಕಲು ಕ್ರಮ ಕೈಗೊಳ್ಳಲಾಗಿದೆ. ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಭೂಸುಧಾರಣೆ ಕೈಗೊಳ್ಳಲು ಕೇಂದ್ರವು ರಾಜ್ಯಗಳೊಂದಿಗೆ ಕೆಲಸ ಮಾಡಲಿದೆ. ಮುಂದಿನ ಮೂರು ವರ್ಷಗಳಲ್ಲಿ ಈ ಸುಧಾರಣೆ ಪೂರ್ಣಗೊಳಿಸಲಾಗುವುದು. ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಭೂ ಸಂಬಂಧಿತ ಸುಧಾರಣೆಗಳು ಮತ್ತು ಕ್ರಮಗಳನ್ನು ಎರಡು ರೀತಿಯಲ್ಲಿ ಕೈಗೊಳ್ಳಲಾಗುವುದು. ಒಂದು -ಭೂ ಆಡಳಿತ ಯೋಜನೆ ಮತ್ತು ನಿರ್ವಹಣೆ, ಎರಡು- ನಗರ ಯೋಜನೆ,…

Read More

ಕರಾವಳಿ ನ್ಯೂಸ್ – ಕರಾವಳಿ ದೈವ ಕಾರಣಿಕ ಜೀವ ಉಳಿಸಿತು! – ಕೆಸರುಗದ್ದೆ ಕ್ರೀಡಾಕೂಟದ ಸಂದರ್ಭದಲ್ಲಿ ತಪ್ಪಿದ ಭಾರೀ ಅನಾಹುತ – ಚಲಿಸುತ್ತಿದ್ದ ಲಾರಿ ಮೇಲೆ ಬಿದ್ದ ವಿದ್ಯುತ್ ಕಂಬ: ಜೀವ ಉಳಿಯಿತು! – ಕಾಡುಪ್ರಾಣಿಗಳನ್ನು ಬೇಟೆಯಾಡುತ್ತಿದ್ದ ಮೂವರು ಅರೆಸ್ಟ್! – ಟಯ‌ರ್ ಬದಲಿಸುವ ವೇಳೆ ಟಯ‌ರ್ ಸ್ಫೋಟ; ಗಾಯ NAMMUR EXPRESS NEWS ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ವರಕಬೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಜು.24 ರಂದು (ಇಂದು) ಬೆಳಗ್ಗೆ ಮದಡ್ಕ ಕಡೆಯಿಂದ ಗುರುವಾಯನಕೆರೆ ಕಡೆ ಬರುತ್ತಿದ್ದ ಲಾರಿ ಮೇಲೆ ಎರಡು ವಿದ್ಯುತ್ ಕಂಬ ಏಕಾಏಕಿ ಮುರಿದು ಬಿದ್ದಿದೆ. ಲಾರಿ ಮೇಲೆ ವಿದ್ಯುತ್ ಕಂಬ ಬೀಳುವ ವೇಳೆ ಎರಡು ಬೈಕ್‌ ಸವಾರರು ಸ್ಕಿಡ್ ಅಗಿ ರಸ್ತೆಗೆ ಬಿದ್ದಿದ್ದರು ಎನ್ನಲಾಗಿದೆ. ಘಟನೆಯಲ್ಲಿ ಬೈಕ್ ಸವಾರರಿಗೆ ಯಾವುದೇ ಗಾಯವಾಗಿಲ್ಲ. ಲಾರಿ ಮೇಲೆ ವಿದ್ಯುತ್ ಕಂಬ ಬಿದ್ದಿದ್ದರಿಂದ ಒಂದು ಗಂಟೆ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಘಟನೆಯಿಂದ ಲಾರಿ ಚಾಲಕ ಅದೃಷ್ಟವಶಾತ್ ಪರಾಗಿರುವುದು ಮಾತ್ರ ಪವಾಡವೇ ಎನ್ನಲಾಗಿದೆ.…

Read More

ಶಿವಮೊಗ್ಗ ಜಿಲ್ಲೆ ಟಾಪ್ 5 ನ್ಯೂಸ್ ಸೊರಬ: ಸರ್ಕಾರಿ ಶಾಲೆ ಗೋಡೆ ಕುಸಿತ ಮಕ್ಕಳು ಬಚಾವ್! – ಶಿಕ್ಷಣ ಸಚಿವರ ತವರಲ್ಲೇ ಘಟನೆ : ಹೆಚ್ಚಿದ ಮಳೆಗೆ ಘಟನೆ – ಶಿಕಾರಿಪುರ: ಕಾರಿಗೆ -ಬಸ್‌ ಡಿಕ್ಕಿ: ಫಾದರ್‌ ಆಂಥೋಣಿ ಫೀಟರ್‌ ಸಾವು – ಸಾಗರ : ಪ್ರೀತಿಸಿದ ಯುವತಿ ಕೊಂದು ಹೂತಿಟ್ಟ ಯುವಕ! – ಶಿವಮೊಗ್ಗ : ಆಗುಂಬೆ, ಜೋಗದಲ್ಲಿ ಟೂರಿಸ್ಟ್‌ಗೂ ಬಿತ್ತು ಫೈನ್‌! – ಹೊಸನಗರ: ಕೊಲ್ಲೂರು ಘಾಟಿಯಲ್ಲಿ ಶಾಲಾ ಬಸ್‌ ಉರುಳಿ ಹಲವರಿಗೆ ಗಾಯ NAMMUR EXPRESS NEWS ಸೊರಬ : ಶಿಕ್ಷಣ ಸಚಿವ ಮಧು ಬಂಗಾರಪ್ಪನವರ ತವರು ಕ್ಷೇತ್ರದಲ್ಲಿಯೇ ಶಾಲಾ ಕೊಠಡಿಯ ಗೋಡೆ ಕುಸಿದು ಬಿದ್ದಿದ್ದು ಅದೃಷ್ಟವಶಾತ್ ಯಾವುದೇ ಅಪಾಯವಿಲ್ಲದೇ ವಿದ್ಯಾರ್ಥಿಗಳು ಪಾರಾಗಿದ್ದಾರೆ. ತಾಲೂಕಿನ ಆನವಟ್ಟಿ ಪಟ್ಟಣದ ಸರ್ಕಾರಿ ಉರ್ದು ಪ್ರೌಢ ಶಾಲೆಯ ಗೋಡೆ ಮಂಗಳವಾರ ಕುಸಿದು ಬಿದ್ದಿದೆ. ಈ ಶಾಲೆ ಶಿಕ್ಷಣ ಸಚಿವರ ತವರು ಕ್ಷೇತ್ರ ಕುಬಟೂರನಿಂದ 2 ಕಿಮಿ ದೂರದಲ್ಲಿದೆ. ಗೋಡೆ ಕುಸಿತಕ್ಕೆ ಬೆಂಚುಗಳು…

Read More

ರೈತರ ಬದುಕು ನುಂಗಿದ ಮಾರಿ ಕಣಿವೆ! – ಸರ್ಕಾರ ನೀಡಿದ ಜಮೀನನ್ನೂ ಉಳುಮೆ ಮಾಡಲು ಬಿಡುತ್ತಿಲ್ಲ, – ನಮಗೆ ಬದುಕು ಕಲ್ಪಿಸಿ: ರೈತರಿಂದ ತಹಶೀಲ್ದಾರ್ ಗೆ ಮನವಿ NAMMUR EXPRESS NEWS ಚಿತ್ರದುರ್ಗ: ಹೊಸದುರ್ಗ ತಾಲ್ಲೂಕಿನ ಮತ್ತೋಡು ಹೋಬಳಿ ನಾಗತಿಹಳ್ಳಿ ಗ್ರಾಮದ ಬಹುತೇಕ ಜಮೀನುಗಳು ವಿವಿ ಸಾಗರ(ಮಾರಿಕಣಿವೆ) ಭರ್ತಿಯಾದ ನಂತರ ನಾವು ಬದುಕು ಕಟ್ಟಿಕೊಂಡಿದ್ದ ಜಮೀನು ಹಿನ್ನೀರಿನಿಂದ ಬಹುತೇಕ ಮುಳುಗಡೆಯಾಗಿದ್ದು ನಾವು ಕೃಷಿ ಮಾಡಿಕೊಂಡು ಬದುಕಲು ಒಂದಡಿಯೂ ಜಾಗವಿಲ್ಲ ಇತ್ತ ಸರ್ಕಾರ ನಮಗೆ ನೀಡಿರುವ ಭೂಮಿಯನ್ನು ಕಳೆದ 45 ವರ್ಷದಿಂದ ಉಳುಮೆ ಮಾಡಲೂ ಬಿಡುತ್ತಿಲ್ಲ ನಮ್ಮ ಮೇಲೆ ನಿರಂತರವಾಗಿ ದಬ್ಬಾಳಿಕೆ ನಡೆಯುತ್ತಿದೆ. ನಮ್ಮ ಜಮೀನಿಗೆ ಉಳುಮೆ ಮಾಡಲು ಹೋದರೆ, ಹಲ್ಲೆ ಮಾಡುತ್ತಾರೆ ಎಂದು ನಾಗತಿಹಳ್ಳಿ ರೈತರು ಜಿಲ್ಲಾ ಹಾಗೂ ತಾಲ್ಲೂಕು ರೈತ ಸಂಘಟನೆ ಮುಖಂಡರೊಂದಿಗೆ ತಹಶೀಲ್ದಾರ್ ಅವರ ಬಳಿ ತಮ್ಮ ನೋವಿನ ಅಳಲು ತೋಡಿಕೊಂಡರು. ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಈಚಘಟ್ಟದ ಸಿದ್ಧವೀರಪ್ಪ ಮಾತನಾಡಿ, ಈ ಹಿಂದೆ ರೈತ ಕುಟುಂಬದವರ ಮೇಲೆ…

Read More

32 ಹಲ್ಲುಗಳೊಂದಿಗಿದೆ ಜನಿಸಿದ ಮಗು.! – ತಮಾಷೆಯಲ್ಲ ನಿಜವಾದ ಘಟನೆ – ಏನಿದು ವಿಶೇಷ ಮಗು? ಹುಟ್ಟಿದ್ದು ಎಲ್ಲಿ..? NAMMUR EXPRESS NEWS ಸಾಮಾನ್ಯವಾಗಿ ಜನಿಸಿದ ಮಗುವಿಗೆ 9 ತಿಂಗಳು ಅಥವಾ ಕೆಲವರಿಗೆ ಬೆಳವಣಿಗೆ ಮೇಲೆ 10, 11 ಅಥವಾ ಒಂದು ವರ್ಷಗಳ ಬಳಿಕ ಒಂದರಿಂದ ಮೂರು ಹಲ್ಲುಗಳನ್ನು ಬರುತ್ತದೆ. ಆದರೆ ವಿಚಿತ್ರ ಎಂಬಂತೆ ಇಲ್ಲೊಬ್ಬ ಮಗು 32 ಹಲ್ಲುಗಳೊಂದಿಗೆ ಹೊಟ್ಟಿದ್ದು, ಈ ಮಗುವಿನ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗುತ್ತಿದೆ. ಮಗು ಹುಟ್ಟಿದ ಹಲವು ವರ್ಷಗಳು ಕಳೆದ ಬಳಿಕ ಆ ಮಗುವಿಗೆ ಸಂಪರ್ಣವಾಗಿ ಹಲ್ಲುಗಳು ಬರುತ್ತವೆ. ಆದರೆ ಇಲ್ಲೊಂದು ಮಗು 32 ಹಲ್ಲುಗಳೊಂದಿಗೆ ಜನಿಸಿದ್ದು, ನೋಡುಗರನ್ನು ಆಶ್ಚರ್ಯಕ್ಕೀಡು ಮಾಡಿದೆ. ಅಮೆರಿಕದ ಮಹಿಳೆಯೊಬ್ಬರು ಈ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಇದು ಬಹಳ ಅಪರೂಪದ ಘಟನೆ ಎಂದು ವೈದ್ಯರು ತಿಳಿಸಿದ್ದಾರೆ. ಅಮೆರಿಕದ ಟೆಕ್ಸಾಸ್‌ನ ಡಲ್ಲಾಸ್‌ನಲ್ಲಿ ವಾಸಿಸುತ್ತಿರುವ ನಿಕಾ ದಿವಾ ಎಂಬ ಮಹಿಳೆ ತನ್ನ ನವಜಾತ ಶಿಶುವಿನ ಅಪರೂಪದ ಸ್ಥಿತಿಯ…

Read More