Author: Nammur Express Admin

32 ಹಲ್ಲುಗಳೊಂದಿಗಿದೆ ಜನಿಸಿದ ಮಗು.! – ತಮಾಷೆಯಲ್ಲ ನಿಜವಾದ ಘಟನೆ – ಏನಿದು ವಿಶೇಷ ಮಗು? ಹುಟ್ಟಿದ್ದು ಎಲ್ಲಿ..? NAMMUR EXPRESS NEWS ಸಾಮಾನ್ಯವಾಗಿ ಜನಿಸಿದ ಮಗುವಿಗೆ 9 ತಿಂಗಳು ಅಥವಾ ಕೆಲವರಿಗೆ ಬೆಳವಣಿಗೆ ಮೇಲೆ 10, 11 ಅಥವಾ ಒಂದು ವರ್ಷಗಳ ಬಳಿಕ ಒಂದರಿಂದ ಮೂರು ಹಲ್ಲುಗಳನ್ನು ಬರುತ್ತದೆ. ಆದರೆ ವಿಚಿತ್ರ ಎಂಬಂತೆ ಇಲ್ಲೊಬ್ಬ ಮಗು 32 ಹಲ್ಲುಗಳೊಂದಿಗೆ ಹೊಟ್ಟಿದ್ದು, ಈ ಮಗುವಿನ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗುತ್ತಿದೆ. ಮಗು ಹುಟ್ಟಿದ ಹಲವು ವರ್ಷಗಳು ಕಳೆದ ಬಳಿಕ ಆ ಮಗುವಿಗೆ ಸಂಪರ್ಣವಾಗಿ ಹಲ್ಲುಗಳು ಬರುತ್ತವೆ. ಆದರೆ ಇಲ್ಲೊಂದು ಮಗು 32 ಹಲ್ಲುಗಳೊಂದಿಗೆ ಜನಿಸಿದ್ದು, ನೋಡುಗರನ್ನು ಆಶ್ಚರ್ಯಕ್ಕೀಡು ಮಾಡಿದೆ. ಅಮೆರಿಕದ ಮಹಿಳೆಯೊಬ್ಬರು ಈ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಇದು ಬಹಳ ಅಪರೂಪದ ಘಟನೆ ಎಂದು ವೈದ್ಯರು ತಿಳಿಸಿದ್ದಾರೆ. ಅಮೆರಿಕದ ಟೆಕ್ಸಾಸ್‌ನ ಡಲ್ಲಾಸ್‌ನಲ್ಲಿ ವಾಸಿಸುತ್ತಿರುವ ನಿಕಾ ದಿವಾ ಎಂಬ ಮಹಿಳೆ ತನ್ನ ನವಜಾತ ಶಿಶುವಿನ ಅಪರೂಪದ ಸ್ಥಿತಿಯ…

Read More

ನಿಮ್ಮ ರಾಶಿ ಭವಿಷ್ಯ ಹೇಗಿದೆ? – ಯಾವ ರಾಶಿಯವರಿಗೆ ಒಳಿತು ? – ಯಾವ ರಾಶಿಯವರಿಗೆ ಕೆಡಕು ? NAMMUR EXPRESS NEWS ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು? ** ಮೇಷ ರಾಶಿ : ನಿಮಗೆ ಅದೃಷ್ಟ ಹೊತ್ತು ತರಲಿದೆ. ಬಹುಕಾಲದಿಂದ ಬಾಕಿ ಉಳಿದಿರುವ ಕೆಲಸಗಳು ಪ್ರಾರಂಭವಾಗಲಿವೆ. ಐಷಾರಾಮಿ ವಸ್ತುಗಳ ಖರೀದಿಗೆ ಸಾಕಷ್ಟು ಹಣ ಸಿಗಲಿದೆ. ವೃತ್ತಿಪರ ಜೀವನದಲ್ಲಿ ನೀವು ಹೆಚ್ಚಿನ ಗೌರವವನ್ನು ಪಡೆಯುತ್ತೀರಿ. ಹೊಸ ಕೆಲಸದ ಅವಕಾಶ ಸಿಗಬಹುದು. ಇಂದು ನೀವು ಹೊಸ ಕೆಲಸವನ್ನು ಪ್ರಾರಂಭಿಸಬಹುದು. ಕೆಲವರು ಕೌಟುಂಬಿಕ ಜೀವನದಲ್ಲಿ ಸಣ್ಣಪುಟ್ಟ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ** ವೃಷಭ ರಾಶಿ : ಇಂದು ಏರಿಳಿತಗಳಿಂದ ಕೂಡಿದ ದಿನವಾಗಿರುತ್ತದೆ. ಆರೋಗ್ಯದ ಬಗ್ಗೆ ಮನಸ್ಸು ಚಿಂತಿಸಲಿದೆ. ಹಣಕಾಸಿನ ವಿಚಾರದಲ್ಲಿ ಸ್ವಲ್ಪ ಜಾಗರೂಕರಾಗಿರಿ. ಕೌಟುಂಬಿಕ ಜೀವನದಲ್ಲಿ ಜವಾಬ್ದಾರಿ ಹೆಚ್ಚಲಿದೆ. ಇಂದು ಕುಟುಂಬ ಸದಸ್ಯರೊಂದಿಗೆ ಅನಗತ್ಯ ವಾದಗಳನ್ನು…

Read More

ಹೊಸ ತೆರಿಗೆ ಸ್ಲ್ಯಾಬ್: 17,500 ರೂ. ತೆರಿಗೆ ಉಳಿತಾಯ.! – ಕಸ್ಟಮ್ಸ್ ಸುಂಕ ಇಳಿಕೆ, ಚಿನ್ನ ಖರೀದಿಸುವವರಿಗೆ ಸಿಹಿ ಸುದ್ದಿ – ತೆರಿಗೆ ಯಾರಿಗೆ ಏನು… ಇಲ್ಲಿದೆ ಮಾಹಿತಿ..! NAMMUR EXPRESS NEWS ನವದೆಹಲಿ: ಉದ್ಯೋಗಿಗಳಿಗೆ, ತೆರಿಗೆ ಪಾವತಿದಾರರಿಗೆ ಅನುಕೂಲವಾಗುವ ದಿಸೆಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಲವು ಕ್ರಮಗಳನ್ನು ಘೋಷಣೆ ಮಾಡಿದ್ದಾರೆ. ಸ್ಟ್ಯಾಂಡರ್ಡ್ ಡಿಡ ಕ್ಷನ್ ಮೊತ್ತವನ್ನು 50 ಸಾವಿರ ರೂ.ನಿಂದ 75 ಸಾವಿರ ರೂ.ಗೆ ಏರಿಕೆ ಮಾಡಿರುವುದು, ಹೊಸ ತೆರಿಗೆಯ ಪದ್ಧತಿಯ ಸ್ಥಾಬ್‌ಗಳಲ್ಲಿ ಬದಲಾವಣೆ ಮಾಡಿರುವ ಕಾರಣ 6-7 ಲಕ್ಷ ರೂ. ಹಾಗೂ 9-10 ಲಕ್ಷ ರೂ. ಆದಾಯ ಪಡೆಯುವವರು ವರ್ಷಕ್ಕೆ 17,500 ರೂ. ತೆರಿಗೆ ಉಳಿತಾಯ ಮಾಡಬಹುದಾಗಿದೆ. ಹಾಗಾದರೆ, ಇಷ್ಟು ತೆರಿಗೆ ಉಳಿತಾಯ ಮಾಡುವುದು ಹೇಗೆ? ಸ್ಲಾಬ್ ಹೇಗಿದೆ ಎಂಬುದರ ಮಾಹಿತಿ ಇಲ್ಲಿದೆ. 17,500 ರೂ. ಉಳಿತಾಯ ಹೇಗೆ? ಸ್ಟಾಂಡರ್ಡ್ ಡಿಡಕ್ಷನ್ ಎಂಬುದು ತೆರಿಗೆ ವಿನಾಯಿತಿ ಆಗಿದ್ದು, ಇದಕ್ಕಾಗಿ ನೌಕರರು ಹೂಡಿಕೆ ಮಾಡಬೇಕಿಲ್ಲ. ತೆರಿಗೆ ಪಾವತಿಸಲು…

Read More

ಬೆಕ್ಕನೂರು ಬಿಜೆಪಿ ಬೂತ್ ಸಮಿತಿ ಅಧ್ಯಕ್ಷರಾಗಿ ನವನೀತ್ – ಕಾರ್ಯದರ್ಶಿಯಾಗಿ ಪ್ರವೀಣ್ ಬೆಳ್ಳಿಕೊಡಿಗೆ ಆಯ್ಕೆ – ಬೂತ್ ಸಮಿತಿಯಲ್ಲಿ ಯಾರು ಯಾರಿಗೆ ಹೊಣೆ..? NAMMUR EXPRESS NEWS ತೀರ್ಥಹಳ್ಳಿ: ಬೆಕ್ಕನೂರು ಬಿಜೆಪಿ ಬೂತ್ ಸಮಿತಿಗೆ ನವನೀತ್ ಜಿ. ವಿ ಸಿಡಿಯಾ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಪ್ರವೀಣ್ ಬೆಳ್ಳಿಕೊಡಿಗೆ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ. ಬಿ ಎಲ್ ಎ -2 ಗೆ ಭಾಸ್ಕರ್ ಹೆಗ್ಡೆ ಗಡಿಕಲ್ಲು, ಮಹಿಳಾ ಪ್ರಮುಖರಾಗಿ ರೇವತಿ ಸುಬ್ರಹ್ಮಣ್ಯ ಮುಸ್ಸಿನಕೊಪ್ಪ, ಓಬಿಸಿ ಪ್ರಮುಖರಾಗಿ ಸುರೇಶ್ ಗಡಿಕಲ್ಲು, ಎಸ್ ಟಿ ಪ್ರಮುಖರಾಗಿ ನಾಗರಾಜ್ ಕುಪ್ಪಳ್ಳಿ, ಎಸ್‌ ಸಿ ಪ್ರಮುಖರಾಗಿ ತಿಮ್ಮಪ್ಪ ಬೆಳ್ಳಿಕೊಡಿಗೆ, ಸದಸ್ಯರಾಗಿ ಮಹೇಶ್ ಗಿಣಿಯ, ಶಾಂತಿಭೂಷಣ್ ತಟ್ಟಾಪುರ, ಶ್ರೀರಾಮ್ ಮುಸ್ಸಿನಕೊಪ್ಪ, ಉಮೇಶ್ ಕರ್ಕಿ ಬೈಲು, ಸೂರ್ಯನಾರಾಯಣ ಸನ್ಯಾಸಿಕೊಡಿಗೆ, ರವಿ ಕುಪ್ಪಳ್ಳಿ, ರಾಕೇಶ್ ತಟ್ಟಾಪುರ, ಪ್ರತಿಕ್ ಸನ್ಯಾಸಿ ಕೊಡಿಗೆ, ನಾಗಾನಂದ ಗಡಿಕಲ್ಲು, ಕುಮಾರ್ ಬೆಳ್ಳಿಕೊಡಿಗೆ, ಸುಬ್ರಹ್ಮಣ್ಯ ಮುಸ್ಸಿನಕೊಪ್ಪ ಆಯ್ಕೆಯಾಗಿದ್ದಾರೆ.

Read More

ಡಿಪ್ಲೋಮಾ, ಪದವೀಧರರಿಗೆ ಗುಡ್ ನ್ಯೂಸ್..! – ಭಾರತೀಯ ರೈಲ್ವೆ ಇಲಾಖೆಯಲ್ಲಿ 7,934 ಹುದ್ದೆಗಳ ನೇಮಕಾತಿ – ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿದೆ ಮಾಹಿತಿ NAMMUR EXPRESS NEWS ನವದೆಹಲಿ : ರೈಲ್ವೆ ನೇಮಕಾತಿ ಮಂಡಳಿ 7000 ಕ್ಕೂ ಹೆಚ್ಚು ಜೂನಿಯ‌ರ್ ಎಂಜಿನಿಯ‌ರ್ ಹುದ್ದೆಗಳ ನೇಮಕಾತಿಗೆ ಶಾರ್ಟ್ ನೋಟಿಸ್ ನೀಡಿದೆ. 7934 ಹುದ್ದೆಗಳಿಗೆ ಕೇಂದ್ರ ಉದ್ಯೋಗ ಅಧಿಸೂಚನೆ ಹೊರಡಿಸಲಾಗಿದೆ. ಇದರ ಅಡಿಯಲ್ಲಿ, ಅಭ್ಯರ್ಥಿಗಳನ್ನು ವಿವಿಧ ಇಲಾಖೆಗಳಲ್ಲಿ ಜೆಇ ಹುದ್ದೆಗಳಿಗೆ ನೇಮಕ ಮಾಡಲಾಗುತ್ತದೆ. ರೈಲ್ವೆ ನೇಮಕಾತಿ ಮಂಡಳಿಯ ಜೆಇ ಹುದ್ದೆಗಳಿಗೆ ಸಂಕ್ಷಿಪ್ತ ನೋಟಿಸ್‌ ಮಾತ್ರ ನೀಡಲಾಗಿದೆ. ಅರ್ಜಿ ಪ್ರಕ್ರಿಯೆಯು ಜುಲೈ 30, 2024 ರಂದು ಪ್ರಾರಂಭವಾಗಲಿದ್ದು, ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಆಗಸ್ಟ್ 29, 2024 ಆಗಿದೆ. ಅಭ್ಯರ್ಥಿಗಳು ಈ ದಿನಾಂಕಗಳನ್ನು ಬರೆದಿಟ್ಟುಕೊಳ್ಳಬೇಕು ಮತ್ತು ಅಪ್ಲಿಕೇಶನ್ ಲಿಂಕ್ ಸಕ್ರಿಯಗೊಳಿಸಿದ ಕೂಡಲೇ ಅರ್ಜಿ ಸಲ್ಲಿಸಬೇಕು. ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ ಆಗಸ್ಟ್ 29 ಆಗಿದೆ. ಈ ವೆಬ್ ಸೈಟ್ ನಿಂದ ಅರ್ಜಿ ಸಲ್ಲಿಸಿ!…

Read More

ಚಿಕ್ಕಮಗಳೂರು ಪ್ರವಾಸಿಗರ ಗಮನಕ್ಕೆ..! – ವಾಹನ ಸಂಚಾರ ಜುಲೈ 31ರ ತನಕ ನಿರ್ಬಂಧ – ಜಿಲ್ಲಾಡಳಿತ ಮಾಹಿತಿ NAMMUR EXPRESS NEWS ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯಲ್ಲಿ ಮುಂಗಾರು ಮಳೆ ಅಬ್ಬರ ಮುಂದುವರೆದಿದೆ. ಆದ್ದರಿಂದ ಇನ್ನೂ ಒಂದು ವಾರ ಮುಳ್ಳಯ್ಯನಗಿರಿ ಪ್ರವಾಸಕ್ಕೆ ಅವಕಾಶ ಇಲ್ಲ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ. ಹಲವು ಮಾರ್ಗದಲ್ಲಿ ವಾಹನಗಳ ಸಂಚಾರವನ್ನು ನಿಷೇಧಿಸಿ ಜಿಲ್ಲಾಧಿಕಾರಿಗಳು ಆದೇಶವನ್ನು ಹೊರಡಿಸಿದ್ದಾರೆ.</p ಚಿಕ್ಕಮಗಳೂರು ಜಿಲ್ಲಾಧಿಕಾರಿ ಮೀನಾ ನಾಗರಾಜ್‌ ಈ ಕುರಿತು ಆದೇಶವನ್ನು ಹೊರಡಿಸಿದ್ದಾರೆ. ಮುಳ್ಳಯ್ಯನಗಿರಿಗೆ ಪ್ರವಾಸಿಗರ ನಿರ್ಬಂಧವನ್ನು ಜುಲೈ 29ರ ತನಕ ನಿಷೇಧಿಸಲಾಗಿದೆ. ಮಳೆಯ ಜೊತೆಗೆ ಹಲವು ಕಡೆ ಗುಡ್ಡ ಕುಸಿದಿದೆ. ಈ ಹಿನ್ನೆಲೆಯಲ್ಲಿ ರಸ್ತೆ ಕಾಮಗಾರಿಗಳನ್ನು ನಡೆಸಲು ಲೋಕೋಪಯೋಗಿ ಇಲಾಖೆ ಕಾಲಾವಕಾಶವನ್ನು ಕೇಳಿದೆ. ಜಿಲ್ಲಾಡಳಿತ ತನ್ನ ಪ್ರಕಟಣೆಯಲ್ಲಿ ಚಿಕ್ಕಮಗಳೂರು ತಾಲೂಕಿನ ಸೀತಾಳಯ್ಯನಗಿರಿ ಮತ್ತು ಮುಳ್ಳಯ್ಯನಗಿರಿ ಪ್ರದೇಶಗಳಲ್ಲಿ ಇನ್ನೂ ಮಳೆ ಬರುತ್ತಿರುವುದರಿಂದ ಹಾಗೂ ದುರಸ್ಥಿ ಕಾರ್ಯ ನಡೆಯುತ್ತಿರುವ ಹಿನ್ನಲೆಯಲ್ಲಿ ಸೀತಾಳಯ್ಯನಗಿರಿ ಮತ್ತು ಮುಳ್ಳಯ್ಯನಗಿರಿ ಹೋಗುವ ರಸ್ತೆಗಳಲ್ಲಿ ದಿನಾಂಕ 31/07/2024ರ ತನಕ ಎಲ್ಲಾ ರೀತಿಯ…

Read More

ಅಡಿಕೆ ದರ ಎಷ್ಟಿದೆ? – ಸರಕು ಎಷ್ಟು? ರಾಶಿ ಎಷ್ಟು? NAMMUR EXPRESS NEWS ಶಿವಮೊಗ್ಗ ಗೊರಬಲು – 16000 – 33333 ಬೆಟ್ಟೆ – 46509 – 55019 ರಾಶಿ – 32569 – 50368 ಸರಕು – 56199 – 87510 ಸಾಗರ ಬಿಳಿಗೊಟು – 15011 – 25699 ಚಾಲಿ – 34819 – 36119 ರಾಶಿ – 30899 – 50189 ಸಿಪ್ಪೆಗೊಟು – 13470 – 18489

Read More

ಹೊಸ ಸರ್ಕಾರದ ಮೊದಲ ಕೇಂದ್ರ ಬಜೆಟ್! – ಪ್ರತಿ ತಿಂಗಳು 300 ಯುನಿಟ್ಗಳವರೆಗೆ ಉಚಿತ ವಿದ್ಯುತ್ – ಕ್ಯಾನ್ಸರ್ ಔಷಧಿಗೆ ಶುಲ್ಕ ವಿನಾಯಿತಿ – – ಯಾವ ವಸ್ತು ದುಬಾರಿ, ಯಾವುದು ಅಗ್ಗ? NAMMUR EXPRESS NEWS ನವದೆಹಲಿ : ಸತತ 3ನೇ ಬಾರಿಗೆ ಅಧಿಕಾರಕ್ಕೆ ಬಂದಿರುವ ಎನ್ ಡಿಎ ಸರ್ಕಾರದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2024-25ನೇ ಹಣಕಾಸು ವರ್ಷದ ಕೇಂದ್ರ ಬಜೆಟ್ ಅನ್ನು ಮಂಡಿಸಿದ್ದಾರೆ. ಆ ಮೂಲಕ ಸೀತಾರಾಮನ್‌ ಅವರು ಸತತ 7ನೇ ಬಾರಿಗೆ ಬಜೆಟ್ ಮಂಡಿಸಿದ್ದಾರೆ. ಇದು ಮೋದಿ 3.0 ಸರ್ಕಾರದ ಮೊದಲ ಬಜೆಟ್. ಪ್ರತಿ ತಿಂಗಳು 300 ಯುನಿಟ್ಗಳವರೆಗೆ ಉಚಿತ ವಿದ್ಯುತ್ ಕೃಷಿ ಮತ್ತು ಸಂಬಂಧಿತ ಕ್ಷೇತ್ರಗಳಿಗೆ 1.52 ಲಕ್ಷ ಕೋಟಿ ರೂ.ಗಳನ್ನು ಹಂಚಿಕೆ ಮಾಡಲಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಉಚಿತ ಸೌರ ವಿದ್ಯುತ್ ಯೋಜನೆಯ ಬಗ್ಗೆ ಮಾತನಾಡಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, “1 ಕೋಟಿ ಕುಟುಂಬಗಳಿಗೆ ಪ್ರತಿ…

Read More

ಅಡಿಕೆ ವ್ಯಾಪಾರಸ್ಥರಿಗೆ ಮಂಗಳೂರಿನಲ್ಲಿ 2 ಕೋಟಿ ರೂ. ಗೋಲ್ಮಾಲ್! – ಅಡಿಕೆ ಖರೀದಿ ಮಾಡಿಕೊಂಡು ಹಣ ಕೊಡದೆ ವಂಚನೆ: ದೂರು ದಾಖಲು – ವಂಚನೆ ಹೇಗೆ..? ಏನು ಇತ್ತ..?.. ಇಲ್ಲಿದೆ ಡೀಟೇಲ್ಸ್ NAMMUR EXPRESS NEWS ಮಂಗಳೂರು: ಮಂಗಳೂರಿನಲ್ಲಿ ಅಡಿಕೆ ವ್ಯಾಪಾರ ನಡೆಸುತ್ತಿರುವುದರಿಂದ ಒಣ ಅಡಿಕೆ ಖರೀದಿ ಮಾಡಿರುವ ವ್ಯಾಪಾರಸ್ಥರು ಸುಮಾರು 2 ಕೋಟಿ ರೂ. ವಂಚಿಸಿರುವ ಪ್ರಕರಣ ದಾಖಲಾಗಿದೆ. ರಾಹುಲ್‌ ಗುಪ್ತಾ ಎಂಬವರು ಕಪಿಲ್‌ ಮಟ್ಟಾನಿ ಎಂಬಾತನಿಗೆ ಮಾ.29ರಂದು 61 ಚೀಲ ಅಡಿಕೆ ಮಾರಾಟ ಮಾಡಿದ್ದು, ಅದೇ ನಂಬಿಕೆ ಮೇಲೆ ಮೇ 17ರಿಂದ ಜೂ.10ರವರೆಗೆ ಸಾಕಷ್ಟು ಅಡಿಕೆ ಮಾರಾಟ ಮಾಡಿದ್ದಾರೆ. ಆದರೆ, 85,47,139ರೂ. ಬಾಕಿ ಉಳಿಸಿಕೊಂಡಿದ್ದಾರೆ. ಹಣದ ಬಗ್ಗೆ ವಿಚಾರಿಸಿದಾಗ ಅವಾಚ್ಯ ಶಬ್ದಗಳಿಂದ ಬೈದು ಕೊಲೆ ಬೆದರಿಕೆ ಕೂಡ ಹಾಕಿದ್ದಾನೆ.ಕಪಿಲ್‌ ಮಟ್ಟಾನಿ ಮತ್ತು ಕಮಲ್‌ ಮಟ್ಟಾನಿ ಸೇರಿಕೊಂಡು ಅಮಿತ್‌ ಶರ್ಮ, ವಿನಯ್‌ ಶರ್ಮ, ಸಿದ್ಧಾರ್ಥ ಶರ್ಮ ಅವರಿಂದ ಹಾಗೂ ಇತರರಿಂದ ಖರೀದಿಸಿದ ಒಣ ಅಡಿಕೆಯ ಒಟ್ಟು 1,34,71,854 ರೂ. ಬಾಕಿ…

Read More

ಮೂಡಿಗೆರೆಯಲ್ಲಿ ದೀಪಕ್ ದೊಡ್ಡಯ್ಯ ಆಸರೆ! – ಮಳೆಯಿಂದ ಹಾನಿಯಾದ ಮನೆಗಳಿಗೆ ಭೇಟಿ: ಸಾಂತ್ವನ – ಜನರ ಕಷ್ಟಕ್ಕೆ ಸರ್ಕಾರ ತಕ್ಷಣ ಸ್ಪಂದಿಸಿ ಪರಿಹಾರ ನೀಡಲು ಪಟ್ಟು NAMMUR EXPRESS NEWS ಚಿಕ್ಕಮಗಳೂರು: ಮೂಡಿಗೆರೆ ತಾಲೂಕಿನ ವಿವಿಧ ಪ್ರದೇಶಗಳಲ್ಲಿ ಮಳೆಯಿಂದ ಹಾನಿಯಾದ ಮನೆಗಳಿಗೆ ಭೇಟಿ ನೀಡಿದ ಬಿಜೆಪಿ ನಾಯಕ ದೀಪಕ್ ದೊಡ್ಡಯ್ಯ ವಸ್ತುಸ್ಥಿತಿಯನ್ನು ನೋಡಿ ನೊಂದವರಿಗೆ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ಮೂಡಿಗೆರೆ ತಾಲೂಕಿನಲ್ಲಿ ಅತಿಯಾದ ಮಳೆಯಿಂದಾಗಿ ರಸ್ತೆ,ಮನೆಗಳಿಗೆ ತೀವ್ರ ಹಾನಿಯಾಗಿದ್ದು ಜನ ಸಂಕಷ್ಟದಲ್ಲಿದ್ದಾರೆ. ಇಂತಹ ಜನರ ಕಷ್ಟಕ್ಕೆ ಸರ್ಕಾರ ತಕ್ಷಣ ಸ್ಪಂದಿಸಿ ಪರಿಹಾರ ಒದಗಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.ಈ ಸಂದರ್ಭ ಸ್ಥಳೀಯ ಜನಪ್ರತಿನಿಧಿಗಳು,ಪ್ರಮುಖರು ಉಪಸ್ಥಿತರಿದ್ದರು. ಕಳೆದೊಂದು ವಾರದಿಂದ ಸುರಿಯುತ್ತಿರುವ ಭಾರೀ ಮಳೆಗೆ ಮಲೆನಾಡಲ್ಲಿ ಭಾರೀ ನಷ್ಟವಾಗಿದ್ದು, ಮನೆ, ಅಸ್ತಿ ಪಾಸ್ತಿ ನಷ್ಟವಾಗಿದೆ. ಮೂಡಿಗೆರೆ ತಾಲೂಕಲ್ಲಿ ಕೂಡ ಅಪಾರ ನಷ್ಟವಾಗಿದೆ.

Read More