ಕಡೂರು ಬಿಜೆಪಿ ಯುವ ಮೋರ್ಚಾಕ್ಕೆ ನೂತನ ಸಾರಥಿಗಳ ನೇಮಕ – ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದ ನಾಯಕರು – ಅಧ್ಯಕ್ಷರಾಗಿ ಅಜಯ್ ಒಡೆಯರ್, ಪ್ರಧಾನ ಕಾರ್ಯದರ್ಶಿಗಳಾಗಿ ಕುಮಾರ್ ಪಾಟೀಲ್, ನವೀನ್ NAMMUR EXPRESS NEWS ಕಡೂರು: ಭಾರತೀಯ ಜನತಾ ಪಾರ್ಟಿ ಕಡೂರು ಮಂಡಲದ ನೂತನ ಯುವ ಮೋರ್ಚಾ ಪದಾಧಿಕಾರಿಗಳನ್ನು ಆಯ್ಕೆ ಮಾಡಿದೆ. ಕಡೂರು ಮಾಜಿ ಶಾಸಕರಾದ ಬೆಳ್ಳಿ ಪ್ರಕಾಶ್‌ರವರ ನೇತೃತ್ವದಲ್ಲಿ ಕಡೂರು ಮಂಡಲದ ಬಿಜೆಪಿ ಅಧ್ಯಕ್ಷರಾದ ಬಿ.ಪಿ ದೇವಾನಂದರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತಮ್ಮ ತಾಲೂಕು ಯುವ ಮೋರ್ಚಾ ಪದಾಧಿಕಾರಿಗನ್ನು ಆಯ್ಕೆ ಮಾಡಿದೆ. ನೂತನ ಸಮಿತಿಯ ವಿವರ ಹೀಗಿದೆ..! ಅಧ್ಯಕ್ಷರಾಗಿ ಅಜಯ್ ಒಡೆಯರ್ ಆಯ್ಕೆಯಾಗಿದ್ದು, ಪ್ರಧಾನ ಕಾರ್ಯದರ್ಶಿಗಳಾಗಿ ಕುಮಾರ್ ಪಾಟೀಲ್ .ಜಿ ಹಾಗೂ ನವೀನ್ ಎಂ.ಬಿ, ಉಪಾಧ್ಯಕ್ಷರುಗಳಾಗಿ ಮಂಜುನಾಥ್.ಕೆ, ಸುನಿಲ್ ಎಸ್.ಎಂ, ರಘು, ಗೌತಮ್ ಹೆಚ್ ಹಾಗು ಸೇತುರಾಮ್, ಕಾರ್ಯದರ್ಶಿಗಳಾಗಿ ಸಚ್ಚಿನ್, ಪೃಥ್ವಿದೇವರಾಜ್, ಕಾರ್ತಿಕ್ ಎಂ.ಹೆಚ್, ಸಂಜಯ್ ಕೆ.ಆರ್ ಹಾಗು ಸಚ್ಚಿನ್ ಮಣಿಧೀರ್, ಖಜಾಂಚಿಯಾಗಿ ಅಭಿ, ಕಾರ್ಯಕಾರಣಿ ಸದಸ್ಯರಾಗಿ ಚಂದನ್, ಪ್ರಕಾಶ್…
Author: Nammur Express Admin
ಶಿವಮೊಗ್ಗ ಟಾಪ್ 3 ನ್ಯೂಸ್…! ಇಬ್ಬರು ಮಕ್ಕಳೊಂದಿಗೆ ಹೊಳೆಗೆ ಹಾರಿದಾ ತಾಯಿ..! – ಪೊಲೀಸರ ಸಮಯ ಪ್ರಜ್ಞೆಯಿಂದ ಮೂರು ಜೀವಗಳ ರಕ್ಷಣೆ ಶಿವಮೊಗ್ಗ ಜಿಲ್ಲೆಯಲ್ಲಿ ನೆರೆ ಹಾವಳಿಯಿಂದ ಮೂವರ ಸಾವು! – ಜಾನುವಾರು, ಬೆಳೆ ಸೇರಿ ಅಪಾರ ಹಾನಿ ತೋಟಗಾರಿಕೆ ಇಲಾಖೆ ಉಪನಿರ್ದೇಶಕರ ಮನೆ ಮೇಲೆ ಲೋಕಾಯುಕ್ತ ದಾಳಿ! – ಕಂತೆ ಕಂತೆ ಹಣ ಪತ್ತೆ NAMMUR EXPRESS NEWS ಶಿವಮೊಗ್ಗ: ಪೊಲೀಸರ ಸಮಯ ಪ್ರಜ್ಞೆಯಿಂದ 3 ಜೀವಗಳ ರಕ್ಷಣೆ ಮಾಡಲಾಗಿದೆ. ಕೌಟುಂಬಿಕ ಕಲಹದಿಂದ ಬೇಸತ್ತು ಇಬ್ಬರು ಮಕ್ಕಳ ಜೊತೆ ಆತ್ಮಹತ್ಯೆಗೆ ಯತ್ನಿಸಿದ್ದ ತಾಯಿಯನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ. ಪ್ರೀತಿ(13), ಪ್ರಜ್ವಲ್(9) ಹಾಗೂ ಸಂಗೀತಾ(33) ಆತ್ಮಹತ್ಯೆಗೆ ಯತ್ನಿಸಿದ್ದವರು. ಜಿಲ್ಲೆಯ ಸಾಗರ ತಾಲೂಕಿನ ಅಣಲೇಕೊಪ್ಪ ನಿವಾಸಿಗಳು. ಮಹಿಳೆ ತನ್ನ ಮಕ್ಕಳೊಂದಿಗೆ ಆತ್ಮಹತ್ಯೆಗೆ ಯತ್ನಿಸಿದ್ದ ಕೂಡಲೇ ಸ್ಥಳೀಯರು ಪೊಲೀಸರಿಗೆ ಕರೆಮಾಡಿ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಮಹಿಳೆ ಮತ್ತು ಮಕ್ಕಳನ್ನ ರಕ್ಷಿಸಿದ್ದಾರೆ. ಸಾಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಶಿವಮೊಗ್ಗ…
ಕರಾವಳಿ ನ್ಯೂಸ್ ಭೀಕರ ಗುಡ್ಡ ಕುಸಿತ: ಮತ್ತೋರ್ವ ಮಹಿಳೆ ಬಲಿ! – ಅಕ್ಕಿ ರುಬ್ಬುವಾಗ ಗ್ರೈಂಡರ್ ಗೆ ಶಾಲು ಸಿಲುಕಿ ಮಹಿಳೆ ಮೃತ್ಯು! – ಸ್ಪ್ರಿಂಗ್ ತಯಾರಿಕಾ ಕಂಪೆನಿಯಲ್ಲಿ ಅವಘಡ: ಮಂಗಳೂರು ವ್ಯಕ್ತಿ ಸಾವು – ಮಾದಕ ವಸ್ತು ಸೇವನೆ: ಮಂಗಳೂರಿನಲ್ಲಿ 11 ಮಂದಿ ಬಂಧನ NAMMUR EXPRESS NEWS ಕಾರವಾರ : ಅಂಕೋಲ ಸಮೀಪ ಶಿರೂರಿನಲ್ಲಿ ಒಂದು ವಾರದ ಹಿಂದೆ ಸಂಭವಿಸಿದ ಭೀಕರ ಗುಡ್ಡ ಕುಸಿತ ಸಂದರ್ಭದಲ್ಲಿ ನಾಪತ್ತೆಯಾಗಿದ್ದ ಓರ್ವ ಮಹಿಳೆಯ ಶವ ಸಮೀಪದ ಗಂಗಾವಳಿ ನದಿಯಲ್ಲಿ ಪತ್ತೆಯಾಗಿದ್ದು, ಇದರೊಂದಿಗೆ ಇಷ್ಟರ ತನಕ 8 ಶವ ಸಿಕ್ಕಿದಂತಾಗಿದೆ. ಮಂಗಳವಾರ ಮುಂಜಾನೆ ವೇಳೆ ನದಿ ಸಂಗಮದ ಮಂಜುಗುಣಿ ಎಂಬಲ್ಲಿ ಮಹಿಳೆಯ ಶವ ಸಿಕ್ಕಿದೆ. ಗುಡ್ಡ ಕುಸಿದಾಗ ನದಿಯ ಇನ್ನೊಂದು ದಡದಲ್ಲಿರುವ ಉಳುವರೆ ಗ್ರಾಮದಲ್ಲೂ ಸಾಕಷ್ಟು ಅನಾಹುತ ಸಂಭವಿಸಿತ್ತು. ಈ ಸಂದರ್ಭ ಸಣ್ಣು ಎಂಬ ಮಹಿಳೆಯೊಬ್ಬರು ನಾಪತ್ತೆಯಾಗಿರುವ ಕುರಿತು ಅವರ ಮನೆಯವರು ದೂರು ನೀಡಿದ್ದರು. ಆದರೆ ಇಂದು ಪತ್ತೆಯಾದ ಶವ ಸಣ್ಣು ಅವರದ್ದೇ…
ಮುಂದಿನ 24 ಗಂಟೆ ಭಾರಿ ಮಳೆ – ಕರಾವಳಿಗೆ ಆರೆಂಜ್ ಅಲರ್ಟ್ ಘೋಷಣೆ – ಮಲೆನಾಡಿನಲ್ಲೂ ಭಾರಿ ಮಳೆ ಸಾಧ್ಯತೆ – 2 ದಿನದಿಂದ ಕಡಿಮೆಯಾಗಿದ್ದ ಮಳೆ NAMMUR EXPRESS NEWS ಬೆಂಗಳೂರು: ಕರ್ನಾಟಕದ ಕರಾವಳಿಯಲ್ಲಿ ಸಾಧಾರಣದಿಂದ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ. ಹೀಗಾಗಿ ಕರಾವಳಿಯ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿಯಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದ್ದು, ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಮಲೆನಾಡು ಜಿಲ್ಲೆಗಳಲ್ಲಿ ಚದುರಿದಂತೆ ಹಗುರದಿಂದ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ. ಮಲೆನಾಡಿನ ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಉತ್ತರ ಒಳನಾಡಿನಲ್ಲಿ ಪ್ರತ್ಯೇಕವಾಗಿ ಚದುರಿದಂತೆ ಹಗುರದಿಂದ ಮಧ್ಯಮ ಮಳೆಯಾಗುವ ಸಾಧ್ಯತೆಯಿದೆ. ಹೀಗಾಗಿ ಬೆಳಗಾವಿ, ಕಲಬುರಗಿ ಜಿಲ್ಲೆಗೂ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಬೆಳಗಾವಿಯಲ್ಲಿ ಪ್ರತ್ಯೇಕವಾಗಿ ಮಧ್ಯಮದಿಂದ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಬಾಗಲಕೋಟೆ, ಬೀದರ್, ಧಾರವಾಡ, ಗದಗ, ಸೇರಿದಂತೆ ಹಾವೇರಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ ಸಣ್ಣ ಪ್ರಮಾಣದಲ್ಲಿ ಮಳೆಯಾಗಲಿದೆ. ದಕ್ಷಿಣ ಒಳನಾಡಿನ ಸುತ್ತಮುತ್ತ ಭಾಗಶಃ…
ಚಾಲಕರ ರೀಲ್ಸ್ ಕ್ರೇಜ್: ಪ್ರಯಾಣಿಕರ ಜೀವದ ಜೊತೆ ಚೆಲ್ಲಾಟ! – ಸರ್ಕಾರದಿಂದ ಖಡಕ್ ಎಚ್ಚರಿಕೆ: ಏನಿದು ಹುಚ್ಚಾಟ? – ಇತ್ತೀಚಿಗೆ ರೀಲ್ಸ್ ಮಾಡಲು ಹೋಗಿ ಅನೇಕ ಅಪಘಾತ NAMMUR EXPRESS NEWS ಬೆಂಗಳೂರು: ಕೆಎಸ್ಆರ್ಟಿಸಿಮತ್ತು ಬಿಎಂಟಿಸಿ ಬಸ್ ಚಾಲಕರು, ನಿರ್ವಾಹಕರು ಕೂಡ ರೀಲ್ಸ್ ಮಾಡುತ್ತ ಪ್ರಯಾಣಿಕರ ಜೀವದ ಜೊತೆ ಚೆಲ್ಲಾಟ ಆಡುತ್ತಿರುವ ಪ್ರಕರಣ ಹೆಚ್ಚುತ್ತಿದೆ. ಹೀಗಾಗಿ ಸರ್ಕಾರ ಖಡಕ್ ಸೂಚನೆ ನೀಡಿದೆ.ಎದುರಿಗಿನ ಬಸ್ ಚೇಸ್ ಮಾಡೋ ರೀಲ್ಸ್, ಸಿಂಹಾಂದ್ರಿಯ ಸಿಂಹ ಸಿನಿಮಾದ ಸಿಂಹ ಸಿಂಹ ಸಾಂಗಿಗೆ ಪ್ರಯಾಣಿಕರಿಗೆ ಕೈ ಬೀಸಿಕೊಂಡು ರೀಲ್ಸ್, ರಾಕಿಂಗ್ ಸ್ಟಾರ್ ಯಶ್ ಅಭಿನಯದ ರಾಮಾಚಾರಿ ಸಿನಿಮಾದ ನುಗ್ಗೋದೆ ಸಿಂಗಲ್ಲು ಸಾಂಗ್ ಗೆ ಡ್ರೈವಿಂಗ್ ಮಾಡಿಕೊಂಡು ರೀಲ್ಸ್, ಭಯಾನಕ ಶಿರಾಡಿ ಗಾಟ್ ಸೆಕ್ಷನ್ ರೋಡ್ ನಲ್ಲಿ ಡ್ರೈವಿಂಗ್ ಮಾಡ್ಕೊಂಡು ರೀಲ್ಸ್ ಗೆ ಮಾಡಿದ ಡ್ರೈವರ್ ಗಳು ಹೀಗೆ ಡ್ರೈವಿಂಗ್ ಮಾಡುತ್ತಲೇ ಪ್ರಯಾಣಿಕರ ಪ್ರಾಣವನ್ನು ಲೆಕ್ಕಿಸದೇ ರೀಲ್ಸ್ ಮಾಡುತ್ತಿರುವ ಡ್ರೈವರ್ ಗಳ ಸಂಖ್ಯೆ ಹೆಚ್ಚಾಗಿದೆ. ಇತ್ತ ಬಿಎಂಟಿಸಿಯ ಲೇಡಿ ಕಂಡಕ್ಟರ್…
ಈ ದಿನದ ರಾಶಿ ಭವಿಷ್ಯ ಹೇಗಿದೆ? – ಯಾವ ರಾಶಿಯವರಿಗೆ ಅನುಕೂಲ ? – ಯಾವ ರಾಶಿಯವರಿಗೆ ಅನಾನುಕೂಲ ? NAMMUR EXPRESS NEWS ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು? ** ಮೇಷ ರಾಶಿ : ಇಂದು ಸಾಮಾನ್ಯ ದಿನವಾಗಿರುತ್ತದೆ. ಉದ್ಯೋಗ ಮತ್ತು ವ್ಯಾಪಾರಕ್ಕೆ ವಾತಾವರಣವು ಅನುಕೂಲಕರವಾಗಿರುತ್ತದೆ. ನಿಮ್ಮ ಆರೋಗ್ಯ ಚೆನ್ನಾಗಿರುತ್ತದೆ. ಆದಾಯ ಹೆಚ್ಚಲಿದೆ. ಆರ್ಥಿಕ ಅಂಶವು ಬಲವಾಗಿರುತ್ತದೆ. ವ್ಯಾಪಾರದಲ್ಲಿ ಲಾಭ ಇರುತ್ತದೆ. ಹಳೆಯ ಸ್ನೇಹಿತರನ್ನು ಭೇಟಿ ಮಾಡುವಿರಿ. ಪ್ರಯಾಣದ ಅವಕಾಶವಿರುತ್ತದೆ. ಕೆಲವರು ಐಷಾರಾಮಿ ವಸ್ತುಗಳನ್ನು ಖರೀದಿಸಲು ಯೋಜಿಸಬಹುದು. ಇಂದು ನೀವು ಶಕ್ತಿ ಮತ್ತು ಆತ್ಮವಿಶ್ವಾಸದಿಂದ ತುಂಬಿರುತ್ತೀರಿ. ** ವೃಷಭ ರಾಶಿ : ತಮ್ಮ ಶ್ರಮಕ್ಕೆ ತಕ್ಕ ಫಲ ಸಿಗಲಿದೆ. ಸೃಜನಶೀಲತೆ ಮತ್ತು ಹೊಸ ಆಲೋಚನೆಗಳೊಂದಿಗೆ ಮಾಡಿದ ಕೆಲಸವು ಅತ್ಯುತ್ತಮ ಫಲಿತಾಂಶಗಳನ್ನು ನೀಡುತ್ತದೆ. ಮನೆಯಲ್ಲಿ ಪಾರ್ಟಿ ಅಥವಾ ಸಣ್ಣ ಸಮಾರಂಭವನ್ನು ಆಯೋಜಿಸಬಹುದು.…
ಜನಪರ ಅಧಿಕಾರಿ ವಿನಯ್ ನಾಯ್ಕ್ ಆಗುಂಬೆಯಿಂದ ವರ್ಗಾವಣೆ – 9 ವರ್ಷಗಳ ಸುದೀರ್ಘ ಸೇವೆಯಲ್ಲಿ ಜನರ ಪರ ಕಾಳಜಿ – ಸೇವಾ ಜೀವನಕ್ಕೆ ಶುಭ ಕೋರಿದ ಆಗುಂಬೆ ಸಾರ್ವಜನಿಕರು NAMMUR EXPRESS NEWS ತೀರ್ಥಹಳ್ಳಿ: ಕುದುರೆಮುಖ ನ್ಯಾಷನಲ್ ಪಾರ್ಕ್ ವ್ಯಾಪ್ತಿಯ ಆಗುಂಬೆ ವನ್ಯ ಜೀವಿ ವಲಯದ ಉಪ ವಲಯ ಅರಣ್ಯ ಅಧಿಕಾರಿ ವಿನಯ್ ಜಿ ನಾಯ್ಕ್ ಅವರು ಕುಂದಾಪುರಕ್ಕೆ ವರ್ಗಾವಣೆಗೊಂಡಿದ್ದಾರೆ. ಆಗುಂಬೆ ವಲಯದಲ್ಲಿ ಕಳೆದ 9 ವರ್ಷದಿಂದ ಸೇವೆ ಸಲ್ಲಿಸುತ್ತಿದ್ದ ವಿನಯ್ ಅವರು ಜನರಿಗೆ ಸಹಕಾರದ ಜತೆಗೆ ಪ್ರಾಮಾಣಿಕ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಆಗುಂಬೆ ವನ್ಯ ಜೀವಿ ವಲಯದಲ್ಲಿ ಯಾವುದೇ ಸಮಸ್ಯೆ ಆದರೂ ಜನರ ಸ್ಪಂದನೆಗೆ ಸಿಗುತ್ತಿದ್ದರು. ಆಗುಂಬೆ ಜನ ಅವರ ವರ್ಗಾವಣೆ ಬಳಿಕ ಅವರ ಸೇವೆಯನನ್ನು ನೆನೆಯುತ್ತಿದ್ದಾರೆ. ಹೆಬ್ರಿ ವಲಯದ ನಾರಾಯಣ್ ನಾಯಕ್ ಇದೀಗ ಇಲ್ಲಿಗೆ ವರ್ಗಾವಣೆ ಆಗಿದ್ದಾರೆ. ವಿನಯ್ ಅವರು 9 ವರ್ಷದಲ್ಲಿ ಸಾವಿರಾರುಜನರಿಗೆ ಸಹಕಾರ ಮಾಡಿದ್ದಾರೆ. ಜತೆಗೆ ಯಾವುದೇ ತುರ್ತು ಸಂದರ್ಭದಲ್ಲಿ ಜನರ ಜತೆಗೆ ಇದ್ದಾರೆ. ಇದೀಗ…
ಚರಂಡಿಗೆ ಉರುಳಿದ ಬಸ್.: 17 ವಿದ್ಯಾರ್ಥಿಗಳಿಗೆ ಗಾಯ – ಕರಾವಳಿಯ ಕಾಲೇಜಿಗೆ ಬರುತ್ತಿದ್ದ ವಿದ್ಯಾರ್ಥಿಗಳೇ ಹೆಚ್ಚಿದ್ದರು! – ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ – ಬಂಟ್ವಾಳ : ಲಾರಿಯಲ್ಲಿದ್ದ ಸಿ.ಎನ್.ಜಿ ಗ್ಯಾಸ್ ಸೋರಿಕೆ! – ಕುಂದಾಪುರ: ಚಲಿಸುತ್ತಿದ್ದಾಗಲೇ ಕಳಚಿದ ಸರ್ಕಾರಿ ಬಸ್ಸಿನ ಟಯರ್! NAMMUR EXPRESS NEWS ಕೊಲ್ಲೂರು: ನಾಗೋಡಿ ಘಾಟಿ ಬಳಿ ಖಾಸಗಿ ಬಸ್ ಒಂದು ಚರಂಡಿಗೆ ಉರುಳಿದ ಘಟನೆ ಸೋಮವಾರ ನಡೆದಿದೆ. ಶಿವಮೊಗ್ಗದಿಂದ ಕೊಲ್ಲೂರಿನತ್ತ ಬಸ್ಸು ಬರುತ್ತಿತ್ತು. ಬಸ್ಸಿನಲ್ಲಿದ್ದ ಕೊಲ್ಲೂರು ಪ್ರೌಢಶಾಲೆಯ 7 ವಿದ್ಯಾರ್ಥಿಗಳು ಹಾಗೂ ಕೊಲ್ಲೂರು ಜೂನಿಯರ್ ಕಾಲೇಜಿನ 10 ವಿದ್ಯಾರ್ಥಿಗಳ ಸಹಿತ ಹಲವು ಪ್ರಯಾಣಿಕರಿಗೆ ಗಾಯಗಳಾಗಿವೆ. ಗಾಯಗೊಂಡವರನ್ನು ಕುಂದಾಪುರ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಗಾಯಗೊಂಡವರೆಲ್ಲರೂ ಮಲೆನಾಡು ಭಾಗದ ವಿದ್ಯಾರ್ಥಿಗಳೆಂದು ತಿಳಿದುಬ೦ದಿದೆ. ಶಾಲೆಗೆ ನಿರಂತರ ರಜೆಯಿದ್ದ ಹಿನ್ನೆಲೆಯಲ್ಲಿ ಮನೆಗೆ ತೆರಳಿದ್ದ ಅವರು ಸೋಮವಾರ ಮತ್ತೆ ಶಾಲೆಗೆ ಹಿಂದಿರುಗುತ್ತಿದ್ದರು. ಬೆಳಿಗ್ಗೆ ಮಳೆ ಹೆಚ್ಚಿದ್ದರಿಂದ ಘಾಟಿ ಬಳಿ ಚಾಲಕನ ನಿಯಂತ್ರಣ ತಪ್ಪಿ ಬಸ್ಸು ಚರಂಡಿಗೆ ನುಗ್ಗಿದೆ. ಉಡುಪಿ…
ಟಾಪ್ 3 ನ್ಯೂಸ್ ಮೈಸೂರು: ನಿರಂತರ ಮಳೆಗೆ ಮೈಸೂರಿನ ಒಲಂಪಿಯಾ ಚಿತ್ರಮಂದಿರದ ಗೋಡೆ ಕುಸಿತ ನಾಲ್ಕು ಜನರು ಗಂಭೀರ. – ಮೈಸೂರು: ಏಳಿಗೆ ಸಹಿಸದ ಸಂಬಂಧಿಕರು, ಮನೆಗೆ ನುಗ್ಗಿ ಮಹಿಳೆಯನ್ನ ಕೊಂದರು – ಹಾಸನ : ಭಾರಿ ಮಳೆಗೆ ಸೋರುತ್ತಿರುವ ಗ್ರಂಥಾಲಯ NAMMUR EXPRESS NEWS ಮೈಸೂರು: ನಿರಂತರ ಮಳೆಗೆ ಮೈಸೂರಿನ ಒಲಂಪಿಯಾ ಚಿತ್ರಮಂದಿರದ ಹಿಂಬದಿ ಗೋಡೆ ಕುಸಿದು ಬಿದ್ದಿದೆ. ಚಿತ್ರಮಂದಿರ ಪಕ್ಕದಲ್ಲೇ ಬೀದಿ ಬದಿಯಲ್ಲಿ ವ್ಯಾಪಾರ ಮಾಡುತ್ತಿದ್ದ ನಾಲ್ವರು ಗಾಯಗೊಂಡಿದ್ದಾರೆ. ಇಬ್ಬರ ಸ್ಥಿತಿ ಗಂಭೀರವಾಗಿದ್ದು, ಗಾಯಾಳುಗಳನ್ನು ಕೆಆರ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸೋಮವಾರ ಮಧ್ಯಾಹ್ನ ಈ ದುರ್ಘಟನೆ ನಡೆದಿದ್ದು, ತಬರೀಸ್ ಮತ್ತು ಅರ್ಮಾನ್ ಎಂಬುವವರು ಗಂಭೀರವಾಗಿ ಗಾಯಗೊಂಡವರು. ಸ್ಥಳಕ್ಕೆ ಪೊಲೀಸರು, ಅಗ್ನಿಶಾಮಕ ದಳ ದೌಡಾಯಿಸಿದ್ದು ಪರಿಶೀಲನೆ ನಡೆಸಿದ್ದಾರೆ. ಗೋಡೆ ಕೆಳಗೆ ಬಿದ್ದ ಪರಿಣಾಮ ಬಟ್ಟೆ ಅಂಗಡಿಯ ಸ್ಟಾಲ್‌ಗಳು ನೆಲಕಚ್ಚಿವೆ. ಜೆಸಿಬಿ ಯಂತ್ರದ ಮೂಲಕ ತೆರವು ಕಾರ್ಯಾಚರಣೆ ನಡೆಯುತ್ತಿದೆ. – ಮೈಸೂರು: ಏಳಿಗೆ ಸಹಿಸದ ಸಂಬಂಧಿಕರು, ಮನೆಗೆ ನುಗ್ಗಿ ಮಹಿಳೆಯನ್ನ ಕೊಂದರು…
ಮಲೆನಾಡಲ್ಲಿ ಕಡಿಮೆಯಾದ ಮಳೆ..! – ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಯಲ್ಲಿ ಮಳೆ ನಿಧಾನ – ಆಗುಂಬೆಯಲ್ಲಿ ನೂರು ಮಿ.ಮೀ.ಗಿಂತಲೂ ಹೆಚ್ಚು ವರ್ಷಧಾರೆ – ಮಳೆ ತಗ್ಗಿದರೂ ಅನಾಹುತ ನಿಂತಿಲ್ಲ: ವಿದ್ಯುತ್, ನೆಟ್ವರ್ಕ್ ಇಲ್ಲ NAMMUR EXPRESS NEWS ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆ ಕೊಂಚ ಕಡಿಮೆ ಆಗಿದೆ. ಜತೆಗೆ ಬಿಟ್ಟು ಬಿಟ್ಟು ಮಳೆ ಬರುತ್ತಿದೆ. ಆದರೆ ಮಳೆಯ ಅನಾಹುತ ಕಡಿಮೆ ಆಗಿಲ್ಲ. ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯ ಮಲೆನಾಡ ಭಾಗದಲ್ಲಿ ಮಳೆ ಕಡಿಮೆ ಆಗಿದೆ. ಮರಗಳು ವಿದ್ಯುತ್ ಕಂಬಗಳು ಬೀಳುತ್ತಿವೆ. ಇದರಿಂದ ವಿದ್ಯುತ್ ಮತ್ತು ನೆಟ್ವರ್ಕ್ ಇಲ್ಲದಾಗಿದೆ. ತೀರ್ಥಹಳ್ಳಿಯಲ್ಲಿ ಮಳೆ ಕಡಿಮೆ ತೀರ್ಥಹಳ್ಳಿ ತಾಲೂಕಿನಲ್ಲಿ ಮಳೆ ಕಡಿಮೆಯಾಗಿದೆ. ಕಳೆದ 24 ಗಂಟೆಯಲ್ಲಿ 36.10 ಮಿ.ಮೀ ಮಳೆಯಾಗಿದೆ. ತಾಲೂಕಿನ ಆಗುಂಬೆಯಲ್ಲಿ ಭಾರಿ ಮಳೆಯಾಗಿದೆ. ಇನ್ನು ತೀರ್ಥಹಳ್ಳಿಯ ತುಂಗಾ ನದಿಯಲ್ಲಿ ನೀರಿನ ಮಟ್ಟ ಕಮ್ಮಿಯಾಗಿದ್ದು, ಇದೀಗ ಮಲೆನಾಡು ಬಿಸಿಲಿನ ಮುಖ ನೋಡುತ್ತಿದೆ. ಎಲ್ಲೆಲ್ಲಿ ಎಷ್ಟಾಗಿದೆ? ತೀರ್ಥಹಳ್ಳಿ ತಾಲೂಕಿನ ಆಗುಂಬೆ – 124.2 ಮಿ.ಮೀ, ಆರಗ…