ದಿಶಾ ಭರತ್ ಅವರಿಗೆ ಬೆಸ್ಟ್ ವೆಯಿಟ್ ಲಿಫ್ಟರ್ 2024 ಪ್ರಶಸ್ತಿ – ರಾಜ್ಯ ಮಟ್ಟದಲ್ಲಿ 3 ಚಿನ್ನದ ಪದಕಗಳೊಂದಿಗೆ ಉತ್ತಮ ಸಾಧನೆ – ಪ್ರಸಿದ್ಧ ಜಿಮ್ ಟ್ರೈನರ್ ಭರತ್ ಅವರ ಪತ್ನಿ ದಿಶಾ ಸಾಧನೆ NAMMUR EXPRESS NEWS ಬೆಂಗಳೂರು: ಕರ್ನಾಟಕ ಸ್ಟೇಟ್ ಪವರ್ ಲಿಫ್ಟರ್ ಅಸೋಶಿಯೇಶನ್, ಪವರ್ ಲಿಫ್ಟರ್ ಫೆಡರೇಷನ್ ಇಂಡಿಯಾ ಸಹಯೋಗದಲ್ಲಿ ನಡೆದ ಸ್ಟೇಟ್ ಲೆವೆಲ್ ಪವರ್ ಲಿಫ್ಟಿಂಗ್ ಕಾಂಪಿಟೇಶನ್ 2024 ರಲ್ಲಿ ಮಹಿಳೆ ಮತ್ತು ಪುರುಷರ ವಿಭಾಗದ ಸ್ಪರ್ಧೆಯಲ್ಲಿ ಪಿ.ಕೆ.ಕ್ಲಾಸಿಕ್ 2024 ಮಹಿಳಾ ವಿಭಾಗದಲ್ಲಿ ದಿಶಾ ಭರತ್ ಅವರು ಮೂರು ಚಿನ್ನದ ಪದಕಗಳೊಂದಿಗೆ ಬೆಸ್ಟ್ ವೆಯಿಟ್ ಲಿಫ್ಟರ್ 2024 ಪ್ರಶಸ್ತಿ ಪಡೆದಿದ್ದಾರೆ. ಈ ಸ್ಪರ್ಧೆಯಲ್ಲಿ ಪುಶ್ ಫುಲ್ ಪ್ರೆಸ್ ಅಂಡ್ ಡೆಡ್ಲಿ ಫಸ್ಟ್ ಪ್ಲೇಸ್, ಪುಶ್ ಓನ್ಲಿ ಬೆಂಚ್ ಪ್ರೆಸ್ ಫಸ್ಟ್ ಪ್ಲೇಸ್, ಪುಶ್ ಫುಲ್ ಓನ್ಲಿ ಡೆಡ್ ಲಿಫ್ಟ್ ಫಸ್ಟ್ ಪ್ಲೇಸ್, ಕರ್ನಾಟಕದ ಬೆಸ್ಟ್ ವೇಟ್ ಲಿಫ್ಟರ್ ಪ್ರಶಸ್ತಿಯನ್ನ ವುಮೆನ್ ಮಹಿಳಾ ವಿಭಾಗದಲ್ಲಿ ಪಡೆದುಕೊಂಡಿದ್ದಾರೆ. ಕರ್ನಾಟಕ…
Author: Nammur Express Admin
ಕಾಂಗ್ರೆಸ್ಸಲ್ಲಿ ಕೆಲ ಪ್ರಾಮಾಣಿಕ ಯುವ ಕಾರ್ಯಕರ್ತರಿಗೆ ಅನ್ಯಾಯ? – ತೀರ್ಥಹಳ್ಳಿ ಪಟ್ಟಣದಲ್ಲಿ ಸಕ್ರಿಯರಾಗಿರುವ ಯುವ ಮುಖಂಡರು – ಯುವ ಮುಖಂಡ ಶ್ರೀಕಾಂತ್ ಅವರಿಗೆ ಸಿಗದ ಸ್ಥಾನಮಾನ NAMMUR EXPRESS NEWS ತೀರ್ಥಹಳ್ಳಿ: ತೀರ್ಥಹಳ್ಳಿ ಕಾಂಗ್ರೆಸ್ ಪಕ್ಷದಲ್ಲಿ ಕೆಲವು ಯುವ ಕಾರ್ಯಕರ್ತರಿಗೆ ಅನ್ಯಾಯ ಆಗಿದೆ. ಈಗಾಗಲೇ ಅನೇಕ ಸಮಿತಿಗಳನ್ನು ರಚನೆ ಮಾಡಿದ್ದು, ಕೆಲವರಿಗೆ ಯಾವುದೇ ರೀತಿಯ ಹುದ್ದೆಗಳು ಸಿಕ್ಕಿಲ್ಲ ಇದರಿಂದ ಅನೇಕ ಪ್ರಾಮಾಣಿಕ ಕಾರ್ಯಕರ್ತರಿಗೆ ಬೇಸರಗೊಂಡಿದ್ದಾರೆ ಎನ್ನಲಾಗಿದೆ. ಇದೀಗ ತೀರ್ಥಹಳ್ಳಿಯ ಯುವ ಮುಖಂಡರು ಹಾಗೂ ಕಾಂಗ್ರೆಸ್ ಪಕ್ಷದ ಎಲ್ಲಾ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ತೀರ್ಥಹಳ್ಳಿ ಯುವ ಕಾಂಗ್ರೆಸ್ ಉಪಾಧ್ಯಕ್ಷ ಶ್ರೀಕಾಂತ್ ಬೆಟ್ಟಮಕ್ಕಿ ಅವರಿಗೆ ಯಾವುದೇ ರೀತಿಯ ಸ್ಥಾನಮಾನ ಸಿಗದೇ ಇರುವುದು ಅವರ ಸ್ನೇಹಿತ ವಲಯದಲ್ಲಿ ಬೇಸರಕ್ಕೆ ಕಾರಣವಾಗಿದೆ. ತೀರ್ಥಹಳ್ಳಿ ಪಟ್ಟಣದಲ್ಲಿ ನಡೆಯುವ ಪಕ್ಷದ ಯಾವುದೇ ಸಭೆ ಪ್ರತಿಭಟನೆ ಕಾರ್ಯಕ್ರಮದಲ್ಲಿ ಶ್ರೀಕಾಂತ ಮುಂಚೂಣಿಯಲ್ಲಿರುತ್ತಾರೆ. ಕಳೆದ ಒಂದು ದಶಕದಿಂದ ಪಕ್ಷದ ಪರವಾಗಿ ಬ್ಯಾನರ್ ಹಿಡಿಯುವ ಪ್ರಮುಖರಾಗಿದ್ದಾರೆ. ಆದರೆ ಅವರಿಗೆ ಪಕ್ಷದಲ್ಲಿ ಯಾವುದೇ ರೀತಿಯ ಹೊಣೆ ನೀಡದೆ ಇರುವುದು…
ಅಯ್ಯೋ ಕರೆಂಟ್ ಶಾಕ್: 3 ಕರಡಿ ದುರಂತ ಸಾವು! – ಆಹಾರ ಹುಡುಕಿ ಬಂದಿದ್ದ ಮೂಕ ಪ್ರಾಣಿಗಳು ಒದ್ದಾಡಿ… ಒದ್ದಾಡಿ… ಜೀವ ತೆತ್ತವು! – ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಸಾದರಹಳ್ಳಿಯಲ್ಲಿ ಘಟನೆ NAMMUR EXPRESS NEWS ಅರಸೀಕೆರೆ: ಧಾರಾಕಾರ ಮಳೆ-ಗಾಳಿಯಿಂದಾಗಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಮೂರು ಕರಡಿಗಳು ದಾರುಣವಾಗಿ ಸಾವನ್ನಪ್ಪಿರುವ ದುರಂತ ಘಟನೆ ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಕಲ್ಲು ಸಾದರಹಳ್ಳಿ ಬಳಿ ನಡೆದಿದೆ. ಆಹಾರ ಅರಸಿ ಅಲೆದಾಡುತ್ತಿದ್ದ 7 ವರ್ಷದ ಎರಡು ಜೋರಿ ಕರಡಿ ಹಾಗೂ ಒಂದು ವರ್ಷದ ಮರಿ ಜಾಂಬವಂತ ಹಸಿವು ನೀಗಿಸಿಕೊಳ್ಳುವ ಮುನ್ನವೇ ಜೀವ ಕಳೆದುಕೊಂಡಿವೆ. ಈ ದುರಂತ ನಿಜಕ್ಕೂ ಪ್ರತಿಯೊಬ್ಬರೂ ಮಮ್ಮಲ ಮರುವಂತೆ ಮಾಡಿದೆ. ಕಳೆದ ಹಲವು ದಿನಗಳಿಂದ ಅರಸೀಕೆರೆ ಭಾಗದಲ್ಲಿ ಕರಡಿ ಕಾಟ ತುಸು ಮಿತಿ ಮೀರಿದೆ. ಆಹಾರ-ನೀರು ಅರಸಿ ಜಾಂಬವ ಪಡೆ ಕಾಡಿನಿಂದ ನಾಡಿಗೆ ಬರುವುದು ಸಾಮಾನ್ಯವಾಗಿದೆ. ಹೀಗೆಯೇ ಕಾಡಿನಿಂದ ಬಂದು ಅರಣ್ಯದಂಚಿನಲ್ಲೇ ಇದ್ದ ಕಲ್ಲು ಸಾದರಹಳ್ಳಿಯ ರೈತರೊಬ್ಬರ…
ಮಾನವೀಯತೆ ಮೆರೆದ ನಿಲುವಾಗಿಲು ಹುಡುಗರು! – ಕಳೆದುಕೊಂಡ ಹಣ ಮತ್ತು ಪರ್ಸ್ ಹಿಂತಿರುಗಿಸಿ ನಿಷ್ಠೆ ಮೆರದ ಯುವಕರು! – ಹರಿಹರಪುರದಲ್ಲಿ ಸಿಕ್ಕ ಪರ್ಸ್ ಹಾಗೂ ಅದರಲ್ಲಿದ್ದ 16,000/- ರೂ.ಹಣ NAMMUR EXPRESS NEWS ಕೊಪ್ಪ: ಕೊಪ್ಪ ತಾಲೂಕು ನಿಲುವಾಗಿಲು ಹುಡುಗರು ಈಗ ಮಾನವೀಯತೆ ಮೂಲಕ ಸುದ್ದಿಯಲ್ಲಿದ್ದಾರೆ. ಹರಿಹರಪುರ ಮುಖ್ಯರಸ್ತೆಯಲ್ಲಿ ಸಿಕ್ಕ ಪರ್ಸ್ ಹಾಗೂ ಅದರಲ್ಲಿದ್ದ 16,000/-ರೂ ಕಳೆದುಕೊಂಡವರಿಗೆ ಹಿಂತಿರುಗಿಸಿ ಯುವಕರು ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ನಿಲುವಾಗಿಲು ಗ್ರಾಮದ ಶರತ್ ಹಾಗೂ ಮುರಳಿ ಎಂಬುವರಿಗೆ ಹರಿಹರಪುರದಲ್ಲಿ ಪರ್ಸ್ ಹಾಗೂ ಅದರಲ್ಲಿ 16,000/- ರೂ. ಹಣ ಸಿಕ್ಕಿತ್ತು. ಪ್ರಾಮಾಣಿಕತೆ ಮೆರೆದ ಯುವಕರು ಹರಿಹರಪುರ ಪೋಲೀಸ್ ಠಾಣೆಗೆ ಒಪ್ಪಿಸಿ ನಂತರ ಪೋಲೀಸರ ಸಮ್ಮುಖದಲ್ಲಿ ಪರ್ಸ್‌ನ ವಾರಸುದಾರರಾದ ಕಮ್ಮರಡಿ ಮೂಲದ ವ್ಯಕ್ತಿಗೆ ಹಿಂದಿರುಗಿಸಿದ್ದಾರೆ. ಈ ಯುವಕರ ಪ್ರಾಮಾಣಿಕತೆಗೆ ಎಲ್ಲೆಡೆಯಿಂದ ಪ್ರಶಂಸೆ ಲಭಿಸಿದೆ.
ಬೀಸಲಿದೆ ಬಿರುಗಾಳಿ….ಸುರಿಯಲಿದೆ ಭಾರೀ ಮಳೆ! – ಬಿರುಗಾಳಿಯೊಂದಿಗೆ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆ – ಕರಾವಳಿ, ಮಲೆನಾಡಿಗೆ ಅಲರ್ಟ್: ಮಳೆ ಅಡಿಕೆಗೆ ಕೊಳೆ! NAMMUR EXPRESS NEWS ಬೆಂಗಳೂರು: ರಾಜ್ಯದಲ್ಲಿ ಕಳೆದ ಒಂದು ವಾರದಿಂದ ಮಳೆ ಅಬ್ಬರ ಹೆಚ್ಚಾಗಿದೆ. ಪ್ರತೀ ದಿನ ಸಂಜೆ ಮಳೆ ಸುರಿಯುತ್ತಿದೆ. ಇನ್ನು ದಕ್ಷಿಣ ಒಳನಾಡು, ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ಗುಡುಗು ಸಹಿತ ಚದುರಿದಂತೆ ಸಾಧಾರಣ ಮಳೆಯೊಂದಿಗೆ, ವ್ಯಾಪಕವಾಗಿ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಒಳನಾಡಿನಲ್ಲೂ ಗುಡುಗು ಸಹಿತ ಹಗುರದಿಂದ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ನೀಡಿದೆ. ದಕ್ಷಿಣ ಒಳನಾಡಿನಲ್ಲೂ ಸಾಧಾರಣ ಮಳೆಯಾಗುವ ಸಂಭವವಿದೆ. ಪ್ರತ್ಯೇಕವಾಗಿ ಭಾರಿ ಮಳೆಯಾಗಲಿದೆ. ದಕ್ಷಿಣ ಒಳನಾಡಿನಲ್ಲಿ ತುಮಕೂರು, ರಾಮನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಬಳ್ಳಾರಿ, ಮೈಸೂರು, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ ಮೈಸೂರು ಸೇರಿದಂತೆ ವಿಜಯನಗರದಲ್ಲಿ ಮಳೆಯಾಗಲಿದೆ. ಉತ್ತರ ಒಳನಾಡಿನ ಬೆಳಗಾವಿ, ಬಾಗಲಕೋಟೆ ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗಲಿದೆ. ವಿಜಯಪುರ,…
ಅಡಿಕೆ ದರ ಎಷ್ಟಿದೆ? – ಬೆಟ್ಟೆ ಎಷ್ಟು? ರಾಶಿ ಎಷ್ಟು? NAMMUR EXPRESS NEWS ಸರಕು 53610-82996 ಬೆಟ್ಟೆ 46100-53300-54899 ರಾಶಿ 40099-47860-49000 ಗೊರಬಲು 18000-32400-33269 ಹೊಸ ರಾಶಿ 42669-32400-33269
ತೀರ್ಥಹಳ್ಳಿ ಶ್ರೀ ರಾಮೇಶ್ವರ ದಸರಾ ರಂಗು! * ಕಣ್ಮನ ಸೆಳೆಯುವ ಆಕರ್ಷಕ ದಸರಾ ಮೆರವಣಿಗೆ * ಸಭಾ ಕಾರ್ಯಕ್ರಮದ ನಂತರ ಯುವ ದಸರಾ * ಗಿಚ್ಚಿ ಗಿಲಿಗಿಲಿ ಸ್ಪರ್ಧೆ ವಿಜೇತ ಹುಲಿ ಕಾರ್ತಿಕ್ ಸೇರಿ ಅನೇಕರಿಗೆ ಗೌರವ NAMMUR EXPRESS NEWS ತೀರ್ಥಹಳ್ಳಿ: ತೀರ್ಥಹಳ್ಳಿ ದಸರಾ ಉತ್ಸವ ವಿಜೃಂಭಣೆ ಹಾಗೂ ವಿಭಿನ್ನ ರೀತಿಯಲ್ಲಿ ಆಚರಿಸಲು ಸಿದ್ಧತೆ ನಡೆಯುತ್ತಿದೆ. ಇಡೀ ತೀರ್ಥಹಳ್ಳಿ ಪಟ್ಟಣ ದಸರಾಗೆ ಸಿಂಗಾರಗೊಳ್ಳುತ್ತಿದೆ. ತೀರ್ಥಹಳ್ಳಿ ಪಟ್ಟಣದ ಉದ್ದಕ್ಕೂ ವಿದ್ಯುತ್ ಅಲಂಕಾರ ಮಾಡಲಾಗಿದೆ. ದಸರಾ ನಡೆಯುವ ಕುಶಾವತಿ ಪಾರ್ಕ್ ಕೂಡ ಅಲಂಕಾರ ನಡೆಯುತ್ತಿದೆ ತೀರ್ಥಹಳ್ಳಿಯ ಸಂಪ್ರಾದಾಯಿಕ ಶ್ರೀ ರಾಮೇಶ್ವರ ದಸರಾ ಉತ್ಸವವನ್ನು ಪ್ರತಿ ವರ್ಷದಂತೆ ಈ ವರ್ಷವೂ ವೈವಿಧ್ಯಮಯವಾಗಿ ವಿಜೃಂಭಣೆಯಿಂದ ಆಚರಿಸಲಾಗುವುದೆಂದು ದಸರಾ ಸಮಿತಿಯ ಮುಖ್ಯ ಸಂಚಾಲಕ ಸಂದೇಶ್ ಜವಳಿ ಮಾಹಿತಿ ನೀಡಿದ್ದಾರೆ. ಈ ಬಾರಿ ದಸರಾ ಆಕರ್ಷಣೆಯಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಅಂತರ ಜಿಲ್ಲಾ ದಸರಾ ಕವಿಗೋಷ್ಠಿ ಮತ್ತು ಅ.10-2024 ರ ಚಾಮುಂಡೇಶ್ವರಿ ದೇವಿಯ ಅಂಬಾರಿಯೊಂದಿಗೆ ಶ್ರೀ ರಾಮೇಶ್ವರ…
ಹರಿಯಾಣದಲ್ಲಿ ಕಮಲ ಕಿಲಕಿಲ! * ತೀರ್ಥಹಳ್ಳಿಯಲ್ಲಿ ಕಾರ್ಯಕರ್ತರ ಭರ್ಜರಿ ವಿಜಯೋತ್ಸವ * ಸತತ 3 ಬಾರಿ ಜಯ ಸಾಧಿಸಿದ ಬಿಜೆಪಿ: ಆರಗ ಸಂತಸ NAMMUR EXPRESS NEWS ತೀರ್ಥಹಳ್ಳಿ: ಭಾರತ ಜನತಾ ಪಾರ್ಟಿ ಬಿಜೆಪಿ ಹರಿಯಾಣದ ಗೆಲುವಿನ ಪ್ರಯುಕ್ತ ಕೊಪ್ಪ ಸರ್ಕಲ್ ನಲ್ಲಿ ಬಿಜೆಪಿ ಮುಖಂಡರು ಪಟಾಕಿ ಹೊಡೆದು, ವಿಜಯೋತ್ಸವ ಆಚರಣೆ ನಡೆಸಿದರು. ವಿಜಯೋತ್ಸವದಲ್ಲಿ ಮಾಜಿ ಗೃಹ ಸಚಿವ, ಶಾಸಕರು ಆರಗ ಜ್ಞಾನೇಂದ್ರ ಮಾತನಾಡಿ ದೇಶದಲ್ಲಿ ಭಾರತ ಜನತಾ ಪಾರ್ಟಿ ಹರಿಯಾಣದಲ್ಲಿ ಮೂರನೇ ಬಾರಿ ವಿಜಯವನ್ನು ಸಾಧಿಸಿದೆ. ಜನರು ಆಶೀರ್ವಾದದ ಮೂಲಕ ದೇಶದ ಸಂಘಟನೆ ಮತ್ತು ಶಕ್ತಿ ಇಡಿ ಜಗತ್ತೇ ನೋಡುವ ರೀತಿ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷ ಹರಿಯಾಣ ಮತ್ತು ಜಮ್ಮು ಕಾಶ್ಮೀರದಲ್ಲಿ ಗೆದ್ದೇ ಗೆಲ್ಲುವಂತೆ ಬೀಗುತ್ತಿದ್ದು,ಹಲವಾರು ಕಡೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಸಭೆ ನಡೆಸಿ ವಿವಿಧ ರೀತಿಯಲ್ಲಿ ಟೀಕೆಯನ್ನು ಮಾಡಿದ್ದರು.ಆದರೆ ಫಲಿತಾಂಶವು ಅವರಿಗೆ ಉತ್ತರವನ್ನು ನೀಡಿದೆ. ಸಮೀಕ್ಷೆ ಪರಿಶೀಲನೆ ನೋಡಿ ಬೆಳಗ್ಗಿನ ಸಂದರ್ಭ ಆರಂಭದಲ್ಲಿ ಲೀಡ್ ಹೊಂದಿದ್ದ ಕಾಂಗ್ರೆಸ್…
ಅರಣ್ಯ ಜಾಗದಲ್ಲಿ ರಸ್ತೆ ಮಾಡಿ ಮದ್ಯದ ಅಂಗಡಿ ನಿರ್ಮಾಣ! – ಮದ್ಯದಂಗಡಿಗೆ ಪರವಾನಿಗೆ ನೀಡಬಾರದು ಎಂದು ಹೋರಾಟ – ಕೆಸ್ಲೂರು ಗ್ರಾಮದ ಹೊರಣಿಬೈಲು ನಿವಾಸಿಗಳ ವಿರೋಧ – ನಮ್ಮೂರಿಗೆ ಮದ್ಯದಂಗಡಿ ಬೇಡ: ಅಧಿಕಾರಿಗಳಿಗೆ ಗ್ರಾಮಸ್ಥರ ಪತ್ರ NAMMUR EXPRESS NEWS ತೀರ್ಥಹಳ್ಳಿ: ತೀರ್ಥಹಳ್ಳಿ ತಾಲ್ಲೂಕು, ಆಗುಂಬೆ ಹೋಬಳಿ ಅರೆಹಳ್ಳಿ ಪಂಚಾಯತಿಯ ಕೆಸ್ಲೂರು ಗ್ರಾಮದ ಹೊರಣಿಬೈಲಲ್ಲಿ ಅರಣ್ಯ ಭೂಮಿ ಕಡಿದು ಅಲ್ಲಿಗೆ ರಸ್ತೆ ನಿರ್ಮಾಣ ಮಾಡಿ ಮದ್ಯದಂಗಡಿ ತೆರೆಯುವ ಹುನ್ನಾರ ನಡೆಯುತ್ತಿದೆ. ಈ ಬಗ್ಗೆ ತಕ್ಷಣ ಗಮನ ಹರಿಸಿ ಮದ್ಯದ ಅಂಗಡಿ ನಿರ್ಮಾಣಕ್ಕೆ ಅವಕಾಶ ನೀಡಬಾರದು ಎಂದು ಗ್ರಾಮಸ್ಥರು ಅಗ್ರಹಿಸಿದ್ದಾರೆ. ಗ್ರಾಮದಲ್ಲಿ ಸುಮಾರು 50 ಕುಟುಂಬಗಳಿದ್ದು, ಇವರಲ್ಲಿ ವಿವಿಧ ಧರ್ಮ, ವಿವಿಧ ಜಾತಿ ನಾಗರೀಕರಿದ್ದಾರೆ. ಹಿಂದಿನಿಂದಲು ಸೌಹಾರ್ದಯುತವಾಗಿ ಅನೋನ್ಯವಾಗಿ ಜೀವಿಸುತ್ತಿದ್ದು, ನೆಮ್ಮದಿಯ ಜೀವನಕ್ಕೆ ಧಕ್ಕೆ ತರಲೆಂದೇ,ಈ ಗ್ರಾಮದ ವ್ಯಾಪ್ತಿಯಲ್ಲಿ ನೂತನವಾಗಿ ಮದ್ಯದಂಗಡಿ ತೆರೆಯುವ ಹುನ್ನಾರ ನಡೆಯುತ್ತಿದೆ. ಈ ಉದ್ದೇಶಿತ ಮದ್ಯದಂಗಡಿಯು ಕಲ್ಮನೆ, ಶೃಂಗೇರಿ ರಾಜ್ಯ ಹೆದ್ದಾರಿಯ ಸಮೀಪದಲ್ಲೆ ಇದ್ದು, ಇದನ್ನು ಮರೆಮಾಚಿ, ಸರ್ವೆ…
ಕೊಪ್ಪದಲ್ಲಿ ಸಾಲ ಬಾಧೆಗೆ ರೈತ ಬಲಿ! * ಜೀವನಕ್ಕಾಗಿ ಸ್ವಲ್ಪ ಒತ್ತುವರಿ ಮಾಡಿದ್ದ ರೈತ: ನೊಂದು ಆತ್ಮಹತ್ಯೆ * ಮನೆಯ ಬಳಿಯೇ ನೇಣಿಗೆ ಕೊರಳೊಡ್ಡಿದ ರೈತ! NAMMUR EXPRESS NEWS ಕೊಪ್ಪ: ಸಾಲ ಬಾಧೆ ಮತ್ತು ಒತ್ತುವರಿ ತೆರವಿನ ಆತಂಕದಿಂದ ರೈತರೊಬ್ಬರು ಆತ್ಮಹತ್ಯೆಗೆ ಶರಣಾದ ಘಟನೆ ತಾಲ್ಲೂಕಿನ ಮೇಗುಂದಾ ಹೋಬಳಿಯ ಮೇಗೂರಿನಲ್ಲಿ ನಡೆದಿದೆ. ಕರುಣಾಕರ ಆತ್ಮಹತ್ಯೆಗೆ ಶರಣಾದ ರೈತ. ರೈತ ಕರುಣಾಕರ ರವರು ಜೀವನ ನಿರ್ವಹಣೆಗಾಗಿ ಸ್ವಲ್ಪ ಪ್ರಮಾಣದ ಒತ್ತುವರಿ ಮಾಡಿಕೊಂಡಿದ್ದರು, ಸ್ಥಳೀಯ ಸೊಸೈಟಿ,ಬ್ಯಾಂಕ್ ಮತ್ತು ಒಂದಷ್ಟು ಕೈಸಾಲ ಸಹ ಮಾಡಿಕೊಂಡಿದ್ದ ರೈತ ಮಗಳ ಮದುವೆ ಸಹ ಮಾಡಬೇಕಾಗಿತ್ತು, ಇವರ ಬದುಕಿಗೆ ಜಮೀನಿನಿಂದ ಬರುತಿದ್ದ ಅಲ್ಪಸ್ವಲ್ಪ ಆದಾಯದವೇ ಆಧಾರವಾಗಿತ್ತು ಎನ್ನಲಾಗಿದೆ.ಆದರೆ ಕಳೆದ ಒಂದು ತಿಂಗಳಿನಿಂದ ಕ್ಷೇತ್ರದಾದ್ಯಂತ ಕೇಳುತ್ತಿದ್ದ ಒತ್ತುವರಿ ತೆರವು ವಿಷಯದ ಸುದ್ದಿ ಕೇಳಿ ಚಿಂತಿತರಾಗಿದ್ದರು, ತಾನು ಸ್ವಲ್ಪ ಪ್ರಮಾಣದ ಒತ್ತುವರಿ ಮಾಡಿದ್ದರಿಂದ ಸದ್ಯದಲ್ಲೇ ಆ ಒತ್ತುವರಿ ತೆರವು ಮಾಡೇ ಮಾಡುತ್ತಾರೆ, ಮಗಳ ಮದುವೆ ಆಗಿಲ್ಲ, ಸಾಲ ತೀರಿಸಲು ಬೇರೆ ದಾರಿ…