Author: Nammur Express Admin

ಮಲೆನಾಡಿನ ಸಿಂಪಲ್ ರಾಜಕಾರಣಿ ಟಿಡಿಆರ್! – ಎರಡನೇ ಬಾರಿ ಶಾರದಾಂಬೆ ಕ್ಷೇತ್ರದಲ್ಲಿ ಗೆಲುವು – ಸಜ್ಜನ, ಸಹಾಯ ಮನಸಿನ ನಾಯಕನಿಗೆ ಹುಟ್ಟು ಹಬ್ಬದ ಶುಭಾಶಯಗಳು NAMMUR EXPRESS NEWS ಶೃಂಗೇರಿ: ( Sringeri )  ಶೃಂಗೇರಿ ಶಾಸಕ ಟಿ.ಡಿ ರಾಜೇಗೌಡ ರಾಜಕಾರಣದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಅನುಭವಿ ರಾಜಕಾರಣಿ. ಶೃಂಗೇರಿ ಕ್ಷೇತ್ರದಿಂದ ದ್ವಿತೀಯ ಬಾರಿಗೆ ಜನಾಶೀರ್ವಾದಿಂದ ಶಾಸಕರಾಗಿ ಆಯ್ಕೆಯಾಗಿರುವ ಜನನಾಯಕ. ಅಲ್ಲದೆ ಕಷ್ಟ ಎಂದು ಬಂದ ಜನರಿಗೆ ಕೈಯಲ್ಲಿ ಆದ ಸಹಾಯ ಮಾಡುವ ದಾನಿ. ಅವರಿಗೆ ಶುಕ್ರವಾರ ಹುಟ್ಟಿದ ಹಬ್ಬದ ಸಂಭ್ರಮ. ಕ್ಷೇತ್ರದ ಜನ, ಪ್ರಮುಖರು, ಹಿತೈಷಿಗಳು ಅವರಿಗೆ ಶುಭಾಶಯಗಳನ್ನು ಸಲ್ಲಿಸಿದ್ದಾರೆ. ಒಮ್ಮೆ ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿಯೂ ಸೇವೆ! ( Chikkamagaluru ) ಚಿಕ್ಕಮಗಳೂರಿನ ತಳ್ಳಿಹಳ್ಳದಲ್ಲಿ ಜನಿಸಿದ‌ ರಾಜೇಗೌಡರು ರಾಜಕೀಯದಲ್ಲಿ ಸ್ಥಾನ ಬಯಸಿ ಹೋದವರಲ್ಲ.‌ ಅರಸಿ ಬಂದ ಸ್ಥಾನಕ್ಕೆ ನ್ಯಾಯ ಒದಗಿಸುವ ಜನಪರ ಕಾಳಜಿಯುಳ್ಳ ನೇತಾರರು. 1 ಬಾರಿ ಖಾಂಡ್ಯ ಜಿಲ್ಲಾ ಪಂಚಾಯಿತಿ ಕ್ಷೇತ್ರದಿಂದ ಮತ್ತು 1 ಬಾರಿ ವಸ್ತಾರೆ…

Read More

ಕರಾವಳಿ ಪ್ರಮುಖ ಸುದ್ದಿಗಳು ಉಡುಪಿ ಪ್ರಕರಣ: ವಿದ್ಯಾರ್ಥಿನಿಯರಿಗೆ ಜಾಮೀನು! – ಶೌಚಾಲಯದಲ್ಲಿ ವಿಡಿಯೋ ಚಿತ್ರೀಕರಣ ಪ್ರಕರಣ – ಹೆಬ್ರಿಯಲ್ಲಿ ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ! – ಪಡುಬಿದ್ರೆ: ಕ್ರೇನ್ ದುರಂತಕ್ಕೆ ಇಬ್ಬರು ಬಲಿ! – ಬಿಜೆಪಿಯ ಕಾರ್ಯಕರ್ತನಿಗೆ ಹಲ್ಲೆ: ಓರ್ವ ಅರೆಸ್ಟ್! NAMMUR EXPRESS NEWS ಉಡುಪಿ: ( Udupi ) ನೇತ್ರಾ ಜ್ಯೋತಿ ಪ್ಯಾರಾಮೆಡಿಕಲ್ ಕಾಲೇಜಿನ ಶೌಚಾಲಯದಲ್ಲಿ ವಿಡಿಯೋ ಚಿತ್ರೀಕರಣ ಪ್ರಕರಣಕ್ಕೆ ಸಂಬಂಧಿಸಿದ ಮೂವರು ವಿದ್ಯಾರ್ಥಿನಿಯರಿಗೆ ಉಡುಪಿ ನ್ಯಾಯಾಲಯವು ಇಂದು ಷರತ್ತುಬದ್ಧ ಜಾಮೀನು ಮಂಜೂರು ಆದೇಶಿಸಿದೆ. ಆರೋಪಿ ವಿದ್ಯಾರ್ಥಿನಿಯರ ವಿರುದ್ಧ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಈ ಮೂವರು ವಿದ್ಯಾರ್ಥಿನಿಯರು ಜು. 28 ರಂದು ಉಡುಪಿಯ ಪ್ರಥಮ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಹಾಗೂ ಜೆಎಂಎಫ್ ಸಿ ನ್ಯಾಯಾಲಯದ ಮುಂದೆ ಶರಣಾಗಿದ್ದಾರೆ. ಒಂದನೇ ಹೆಚ್ಚುವರಿ ನ್ಯಾಯಾಲಯದ ನ್ಯಾಯಾಧೀಶ ಶ್ಯಾಂ ಪ್ರಕಾಶ್ ಅವರು ತೀರ್ಪು ನೀಡಿದ್ದಾರೆ. ಮೂವರು ವಿದ್ಯಾರ್ಥಿನಿಯರ ಪರವಾಗಿ ನ್ಯಾಯವಾದಿ ಅಸದುಲ್ಲ ವಾದಿಸಿದರು. ತನಿಖಾಧಿಕಾರಿಗಳಿಗೆ ತನಿಖೆಗೆ ಸಹಕರಿಸುವುದು,…

Read More

ಸಿದ್ದರಾಮಯ್ಯ ವಿರುದ್ಧ ಅವಹೇಳನಕಾರಿ ಪೋಸ್ಟ್: ಬಿಜೆಪಿ ಕಾರ್ಯಕರ್ತೆ ವಶಕ್ಕೆ! – ಮೈಸೂರಲ್ಲಿ ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ: ಇಬ್ಬರ ಸಾವು – ವಿದ್ಯುತ್ ಇಂದ ತಪ್ಪಿಸಲು ಹೋದವನು ಸಾವು NAMMUR EXPRESS NEWS ಬೆಂಗಳೂರು: ಉಡುಪಿ ವಿದ್ಯಾರ್ಥಿನಿ ವಿಡಿಯೋ ಪ್ರಕರಣ ಸಂಬಂಧ ಟ್ವಿಟ್ ಮಾಡುವಾಗ, ಸಿಎಂ ಸಿದ್ದರಾಮಯ್ಯ ಕುಟುಂಬಸ್ಥರ ವಿರುದ್ಧ ಅವಹೇಳನಕಾರಿ ಪದ ಬಳಿಸಿದ ಬಿಜೆಪಿ ಕಾರ್ಯಕರ್ತೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ತುಮಕೂರು ಮೂಲದ ಶಕುಂತಲಾ ನಟರಾಜ್ ಎಂಬಾಕೆಯನ್ನು ಬೆಂಗಳೂರಿನ ಹೈಗೌಂಡ್ಸ್ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ. ಮುಸ್ಲಿಂ ಯುವತಿಯರು ಟಾಯ್ಲೆಟ್ ನಲ್ಲಿ ಕ್ಯಾಮೆರಾ ಇಟ್ಟು ಹಿಂದೂ ಹೆಣ್ಣುಮಕ್ಕಳ ವಿಡಿಯೋ ಮಾಡಿದ್ದು ಕಾಂಗ್ರೆಸ್‌ನವರ ಪ್ರಕಾರ ಮಕ್ಕಳಾಟವಂತೆ. ಸಿದ್ದರಾಮಯ್ಯನವರ ಸೊಸೆ ಅಥವಾ ಹೆಂಡ್ತಿ ಅವರ ವಿಡಿಯೋವನ್ನು ಇದೆ ತರ ಮಾಡಿದ್ರೆ ಅದನ್ನು ಮಕ್ಕಳಾಟ ಅಂತ ಒಪ್ಪೋತೀರಾ? ಎಂದು ಟ್ವಿಟ್ ಮಾಡಿದ್ದರು. ಕಾರು ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ: ಶಾಕ್ ಹೊಡೆದು ಇಬ್ಬರು ಸಾವು ಕಾಂಪೌಂಡ್ ಹಾಗೂ ವಿದ್ಯುತ್ ಕಂಬಕ್ಕೆ…

Read More

ತೀರ್ಥಹಳ್ಳಿ ತಹಸೀಲ್ದಾರ್ ವರ್ಗಾವಣೆ! – ಬೆಂಗಳೂರಿನ ಬಿಎಂಆರ್‌ಡಿಎ ತಹಶೀಲ್ದಾರ್ ಗ್ರೇಡ್ 1 ಹುದ್ದೆಗೆ ನೇಮಕ – ಹೊಸ ಅಧಿಕಾರಿ ಯಾರು ಬರ್ತಾರೆ..? NAMMUR EXPRESS NEWS ತೀರ್ಥಹಳ್ಳಿ: ( Thirthahalli ) ತೀರ್ಥಹಳ್ಳಿ ತಾಲೂಕು ಯುವ ತಹಶೀಲ್ದಾರ್ ಅಮೃತ್ ಅತ್ರೆಶ್ ಅವರು ಬೆಂಗಳೂರಿನ ಬಿಎಂಆರ್‌ಡಿಎ ತಹಶೀಲ್ದಾರ್ ಗ್ರೇಡ್ 1 ಹುದ್ದೆಗೆ ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಅಮೃತ ಅತ್ರೆಶ್ ಅವರು ಕಳೆದ ಒಂದು ವರ್ಷಗಳಿಂದ ತೀರ್ಥಹಳ್ಳಿ ತಾಲೂಕಿನಲ್ಲಿ ತಹಶೀಲ್ದಾರ್ ಆಗಿ ಉತ್ತಮ ಸೇವೆ ಸಲ್ಲಿಸಿದ್ದಾರೆ. ಯುವ ಅಧಿಕಾರಿಯಾಗಿ ಆಡಳಿತ ವಲಯದಲ್ಲಿ ಹಲವು ಬದಲಾವಣೆ ತಂದಿದ್ದರು. ಇದೀಗ ಅವರ ಸ್ಥಾನಕ್ಕೆ ಇನ್ನು ನೇಮಕಾತಿ ಆಗಿಲ್ಲ. ಮಲೆನಾಡ ಅರಿವು ಇದ್ದವರು ಬಂದ್ರೆ ಒಳ್ಳೇದು! ತೀರ್ಥಹಳ್ಳಿ ಅರಣ್ಯ, ಕಂದಾಯ ಇಲಾಖೆ ಇಲ್ಲಿನ ಹಳ್ಳಿ ಪರಿಸರದ ಅರಿವು ಇರುವ ಅಧಿಕಾರಿ ಬಂದ್ರೆ ಇನ್ನಷ್ಟು ಸುಧಾರಣೆ ಆಗಬೇಕು. ಇದನ್ನೂ ಓದಿ : ರಾಜ್ಯದಲ್ಲಿ ಮತ್ತೆ ಸುದ್ದಿ ಮಾಡಿದ ತೀರ್ಥಹಳ್ಳಿ ಪ್ರತೀಕ್ ಗೌಡ ಕೇಸ್! HOW TO…

Read More

ಆರ್.ಎಂ.ಎಂ ಹಿಡಿತಕ್ಕೆ ಡಿಸಿಸಿ ಬ್ಯಾಂಕ್ ಕುರ್ಚಿ! – ಉಪಾಧ್ಯಕ್ಷರಾಗಿದ್ದ ಷಡಕ್ಷರಿ ಅಧ್ಯಕ್ಷರಾಗಿ ಆಯ್ಕೆ? – 9 ನಿರ್ದೇಶಕರ ಬೆಂಬಲ ಪಡೆದು ಅಧಿಕಾರ NAMMUR EXPRESS NEWS ಶಿವಮೊಗ್ಗ: ( Shivamogga DCC Bank ) ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡನೆ ಆಗಿದ್ದು, 9 ನಿರ್ದೇಶಕರ ಬೆಂಬಲದೊಂದಿಗೆ ಮತ್ತೆ ಮಾಜಿ ಅಧ್ಯಕ್ಷ, ಹಾಲಿ ನಿರ್ದೇಶಕ (Dr. R M Manjunath Gowda ) ಡಾ. ಆರ್.ಎಂ. ಮಂಜುನಾಥ ಗೌಡ ತಮ್ಮ ತೆಕ್ಕೆಗೆ ತೆಗೆದುಕೊಂಡಿದ್ದಾರೆ. ಶಿವಮೊಗ್ಗ ಜಿಲ್ಲಾ ಬ್ಯಾಂಕ್ ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಪರವಾಗಿ 9 ಮತಗಳೊಂದಿಗೆ, ಅವಿಶ್ವಾಸ ನಿರ್ಣಯಕ್ಕೆ ಜಯ ಸಿಕ್ಕಿದೆ. ಉಪಾಧ್ಯಕ್ಷರಾಗಿದ್ದ ಷಡಕ್ಷರಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. 13 ಸದಸ್ಯರಿದ್ದು ಈಗ ಗೌಡರ ಪಾಳಯ ಅಧಿಕಾರ ಹಿಡಿದಿದೆ. ಇದನ್ನೂ ಓದಿ : ರಾಜ್ಯದಲ್ಲಿ ಮತ್ತೆ ಸುದ್ದಿ ಮಾಡಿದ ತೀರ್ಥಹಳ್ಳಿ ಪ್ರತೀಕ್ ಗೌಡ ಕೇಸ್! HOW TO APPLY : NEET-UG COUNSELLING 2023

Read More

ಲೋನ್ ಆ್ಯಪ್ ಸಾಲ ಕಟ್ಟದ್ದಕ್ಕೆ ಪೋಟೋ ಅಶ್ಲೀಲಗೊಳಿಸಿ ವೈರಲ್! – ಸರ್ಕಾರ ಆಪ್ ರದ್ದುಗೊಳಿಸಿದರೂ ನಿಲ್ಲಲಿಲ್ಲ ಆಪ್ ವಂಚನೆ – ಪಡುಬಿದ್ರಿ: ಸೆಕ್ಯೂರಿಟಿ ಗಾರ್ಡ್ ಬಾವಿಗೆ ಹಾರಿ ಸಾವು – ಪಿಎಂ ಕಿಸಾನ್ ಸನ್ಮಾನ್ ಹಣ ಬಿಡುಗಡೆ NAMMUR EXPRESS NEWS ಮಂಗಳೂರು: ಸರ್ಕಾರ ಲೋನ್ ಆಪ್ ರದ್ದುಗೊಳಿಸಿದ್ದೇವೆ ಎಂದು ಹೇಳಿಕೊಂಡಿದೆ. ಆದರೆ ಲೋನ್ ಆಪ್ ಜನರ ಜೀವ ಹಿಂಡುತ್ತಿವೆ. ಇತ್ತೀಚಿಗೆ ತಾನೇ ಬೆಂಗಳೂರಲ್ಲಿ ಓರ್ವ ವಿದ್ಯಾರ್ಥಿ ಲೋನ್ ಆಪ್ ಕಿರುಕುಳಕ್ಕೆ ಬೇಸತ್ತು ಜೀವ ಕಳೆದುಕೊಂಡ ಘಟನೆ ಮಾಸುವ ಮುನ್ನ ಸಾಲ ಮರು ಪಾವತಿಸಿದರೂ ಫೋಟೋ ಅಶ್ಲೀಲಗೊಳಿಸಿದ ಘಟನೆ ಮಂಗಳೂರಲ್ಲಿ ನಡೆದಿದೆ. ಲೋನ್ ಆಪ್ ಮೂಲಕ 4,200 ರೂ. ಸಾಲ ಪಡೆದ ವ್ಯಕ್ತಿಯ ಚಿತ್ರವನ್ನು ಅಶ್ಲೀಲವಾಗಿ ಎಡಿಟ್ ಮಾಡಿ ವೈರಲ್ ಮಾಡಿರುವ ಬಗ್ಗೆ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ದೂರುದಾದರು, ತಾನು ಲೋನ್ ಆಪ್ ಮೂಲಕ 3500 ರೂ. ಸಾಲಕ್ಕೆ ಅರ್ಜಿ ಹಾಕಿದ ಬಳಿಕ ತನ್ನ ಬ್ಯಾಂಕ್ ಖಾತೆಗೆ 2800…

Read More

ಆಧಾರ್ ಸರ್ವರ್ ಡೌನ್ – ಡೌನ್ : ಮಧ್ಯರಾತ್ರಿ ಕ್ಯೂ ನಿಂತ ಜನ! – ತೀರ್ಥಹಳ್ಳಿ ಸೇರಿದಂತೆ ಬಹುತೇಕ ಕಡೆ ಆಧಾರ್, ಇತರೆ ಆನ್ ಲೈನ್ ಸರ್ವರ್ ಸ್ಥಗಿತ – ಮಧ್ಯರಾತ್ರಿಯಿಂದಲೇ ಕ್ಯೂ ನಿಂತು ಜನರ ಪರದಾಟ NAMMUR EXPRESS NEWS ತೀರ್ಥಹಳ್ಳಿ: ( Thirthahalli ) ಸರ್ಕಾರದ ವಿವಿಧ ಸೌಲಭ್ಯಗಳಿಗೆ ಆಧಾರ್ ಲಿಂಕ್ ಕಡ್ಡಾಯವಾಗಿರುವುದರಿಂದ ಇದೀಗ ಆಧಾರ್ ಲಿಂಕ್ ಮಾಡಿಸಲು ಜನ ಹಗಲು ರಾತ್ರಿ ಕ್ಯೂ ನಿಲ್ಲುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ತೀರ್ಥಹಳ್ಳಿಯ ಪೋಸ್ಟ್ ಆಫೀಸ್ ಮುಂದೆ ಸುಮಾರು 3 ಗಂಟೆಗೆ ಬಂದು ಜನ ಕ್ಯೂ ನಿಂತಿರುವ ಘಟನೆ ಗುರುವಾರ ನಡೆದಿದೆ. ಜೊತೆಗೆ ತೀರ್ಥಹಳ್ಳಿ ಮಾತ್ರವಲ್ಲದೆ ಬಹುತೇಕ ತಾಲೂಕು ಕೇಂದ್ರ ಹಾಗೂ ಹೋಬಳಿ ಕೇಂದ್ರಗಳಲ್ಲಿ ಆಧಾರ್ ಕಾರ್ಡ್ ತಿದ್ದುಪಡಿ ಜೊತೆಗೆ ಆಧಾರ್ ಲಿಂಕ್ ಮಾಡಲು ಜನ ಪರದಾಟ ಮಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಒಂದು ಕಡೆ ಆಧಾರ್ ಸೇರಿದಂತೆ ಬಹುತೇಕ ಆಪ್ ಹಾಗೂ ವೆಬ್ ಸೈಟ್ ಗಳ ಸರ್ವರ್ ಡೌನ್ ಆಗಿದ್ದು, ಕೆಲವು…

Read More

ಮಳೆ ಬಳಿಕ ಈಗ ಧರೆ ಕುಸಿತದ ಡೇಂಜರ್! – ಕೊಪ್ಪದಲ್ಲಿ 90 ಅಡಿ ಕುಸಿದ ಭೂಮಿ, ಹಲವೆಡೆ ಕುಸಿತ – ಸಾಗರದಲ್ಲಿ ಮನೆ, ಕಚೇರಿ ಕಾಪೌಂಡ್ ಕುಸಿತ – ತೀರ್ಥಹಳ್ಳಿಯಲ್ಲಿ ಶಾಲೆಯ ಕಾಪೌಂಡ್ ಕುಸಿತ NAMMUR EXPRESS NEWS ಮಲೆನಾಡು: ( Malenadu ) ಮಳೆ ಕೊಂಚ ವಿಶ್ರಾಂತಿ ಪಡೆದಿದೆ. ಆದರೆ ಮಳೆ ಬಳಿಕ ಅನಾಹುತ ಹೆಚ್ಚಿದೆ. ಶಿವಮೊಗ್ಗ ಜಿಲ್ಲೆ ಸಾಗರದಲ್ಲಿ ಮನೆಯ ಮೇಲೆಯೇ ಧರೆ ಕುಸಿತ ಪ್ರಕರಣ ಹೆಚ್ಚಿದೆ. ತೀರ್ಥಹಳ್ಳಿಯಲ್ಲಿ ( Agumbe ghat ) ಆಗುಂಬೆ ಘಾಟಿ ಸೇರಿ ಹಲವೆಡೆ ರಸ್ತೆ, ಧರೆ ಕುಸಿದಿದೆ. ಇನ್ನು ಕೊಪ್ಪ, ಮೂಡಿಗೆರೆ, ಶೃಂಗೇರಿ ಭಾಗದಲ್ಲೂ ಧರೆ, ಮನೆ ಕುಸಿತ ಹೆಚ್ಚುತ್ತಿದೆ. ಆಸರೆ ಕಳೆದುಕೊಂಡ ಕುಟುಂಬಕ್ಕೆ ಅಂಗನವಾಡಿಯ ಆಶ್ರಯ: ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನಲ್ಲಿ ವಾರದಿಂದ ಸುರಿಯುತ್ತಿರುವ ಮಳೆಗೆ ಧರೆ ಕುಸಿದು ಕೆಲವೆಡೆ ಮನೆಗಳು ಜಖಂಗೊಂಡಿದೆ. ಆನಂದಪುರ ಸಮೀಪದ ನೇದರವಳ್ಳಿ ಗ್ರಾಮದ ರವಿ ಎಂಬುವವರ ಮನೆ ನೆಲ ಸಮವಾಗಿದೆ. ಧರೆ ಕುಸಿದಿರೋದ್ರಿಂದ ಮನೆ…

Read More

ಶಿವಮೊಗ್ಗದಿಂದ ಗೋವಾ, ಹೈದ್ರಾಬಾದ್ , ತಿರುಪತಿಗೂ ವಿಮಾನ! – ವಿಮಾನ ಸೇವೆಗೆ ಶೀಘ್ರ 3 ಸಂಸ್ಥೆಗಳಿಗೆ ಪರ್ಮಿಟ್​ – ನೂತನ ವಿಮಾನ ಸೇವೆಗೆ ಬುಕ್ಕಿಂಗ್​: ಆ.31ರಿಂದ ಹಾರಾಟ NAMMUR EXPRESS NEWS ಬೆಂಗಳೂರು: ( Shivamogga Airport ) ಶಿವಮೊಗ್ಗದಿಂದ ತಿರುಪತಿ, ಗೋವಾ ಹಾಗೂ ಹೈದರಾಬಾದ್‌ಗೆ ವಿಮಾನಯಾನ ಸೇವೆ ಶೀಘ್ರ ಆರಂಭವಾಗಲಿದೆ. ಈ ಸಂಬಂಧ ಮೂರು ಸಂಸ್ಥೆಗಳಿಗೆ ಅನುಮತಿ ದೊರೆತಿದೆ ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ್​ ಹೇಳಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ಆಗಸ್ಟ್‌ 31ರಂದು ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಮೊದಲ ವಿಮಾನ ಹಾರಾಟ ನಡೆಸಲಿದೆ. ಇಂಡಿಗೊ‌ ಏರ್‌ಲೈನ್ಸ್‌ ಬುಕ್ಕಿಂಗ್‌ ಸೇವೆ ಆರಂಭಿಸಿದೆ. ಮೊದಲು ಹಾರಲಿರುವ ವಿಮಾನದಲ್ಲಿ ಪ್ರಯಾಣಿಸುವ ಅವಕಾಶಕ್ಕೆ ಸಾಕಷ್ಟು ಬೇಡಿಕೆ ಬಂದಿದೆ. ಉಡಾನ್ ಯೋಜನೆಯಡಿ ಅನುಮತಿ ಪಡೆದಿರುವ ಸ್ಪೈಸ್‌ ಜೆಟ್‌, ಸ್ಟಾರ್‌ ಏರ್‌ಲೈನ್ಸ್‌ ಹಾಗೂ ಅಲಯನ್ಸ್‌ ಸಂಸ್ಥೆಗಳು ವಿಮಾನ ಸಂಚಾರಕ್ಕೆ ಸಿದ್ಧತೆ ನಡೆಸಿವ ಎಂದು ತಿಳಿಸಿದ್ದಾರೆ. ಈ ಸಂಬಂಧ ನಾಗರಿಕ ವಿಮಾನಯಾನ ನಿರ್ದೇಶನಾಲಯದ ಅನುಮತಿ ದೊರೆತ ನಂತರ ಸೇವೆ ಆರಂಭಿಸಲಿವೆ…

Read More

ವರುಣನ ಅಬ್ಬರ ಕಡಿಮೆಯಾಯ್ತು! – 4 ದಿನದ ಬಳಿಕ ಅನೇಕ ಕಡೆಯಲ್ಲಿ ಶಾಲೆಯತ್ತ ಮಕ್ಕಳು – ಮಲೆನಾಡು, ಕರಾವಳಿಯಲ್ಲಿ ಜಿಟಿ ಜಿಟಿ ಮಳೆ – ಮಳೆ ನಿಂತರೂ ಅನಾಹುತ ನಿಂತಿಲ್ಲ! NAMMUR EXPRESS NEWS ಬೆಂಗಳೂರು: ರಾಜ್ಯದ ಕರಾವಳಿ, ಮಲೆನಾಡು ಸೇರಿ ವಿವಿಧ ಜಿಲ್ಲೆಗಳಲ್ಲಿ ವರುಣಾರ್ಭಟಕ್ಕೆ ಜನರು ಹೈರಾಣಾಗಿದ್ದು ಇದೀಗ ಎರಡು ದಿನಗಳಿಂದ ಕೊಂಚ ಕಡಿಮೆ ಆಗಿದೆ. ಗುರುವಾರ ಮಳೆರಾಯ ಕೊಂಚ ಬಿಡುವು ತೆಗೆದುಕೊಂಡಿದ್ದು, ನಾಲೈದು ದಿನದಿಂದ ಶಾಲೆಗೆ ರಜೆಯಿಂದ ಮನೆಯಲ್ಲಿ ಇದ್ದ ಮಕ್ಕಳು ಶಾಲೆಯತ್ತ ಮುಖ ಮಾಡಿದ್ದಾರೆ. ಅಲ್ಲದೆ ಜನರು ಕೂಡ ತಮ್ಮ ಸಾಮಾನ್ಯ ಚಟುವಟಿಕೆಯಲ್ಲಿ ಬ್ಯುಸಿ ಆಗಿದ್ದಾರೆ. ರಾಜ್ಯದ ದಕ್ಷಿಣ ಒಳನಾಡಿನ ಕೆಲವು ಕಡೆಗಳಲ್ಲಿ ಮಾತ್ರ ಮಳೆಯ ಆರ್ಭಟ ಜೋರಾಗಿದೆ. ಉಳಿದ ಪ್ರದೇಶಗಳಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ತಿಳಿಸಿದೆ.ಗುರುವಾರದ ವರೆಗೂ ಕೆಲವು ಕಡೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಆದರೆ, ಶುಕ್ರವಾರ ದಕ್ಷಿಣ ಒಳನಾಡಿನ ಯಾವುದೇ ಜಿಲ್ಲೆಗಳಿಗೆ ಎಚ್ಚರಿಕೆ ಅಲರ್ಟ್ ನೀಡಿರುವುದಿಲ್ಲ. ಭಾರತೀಯ ಹವಾಮಾನ ಇಲಾಖೆ…

Read More