ವಿಚ್ಛೇದನ ಪ್ರಕರಣ ವರ್ಷದೊಳಗೆ ಇತ್ಯರ್ಥ! – ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶ – ಇನ್ನು ಡೈವೋರ್ಸ್ ಬೇಗ ಸಿಗುತ್ತೆ..! NAMMUR EXPRESS NEWS ಬೆಂಗಳೂರು : ವಿವಾಹ ವಿಚ್ಛೇದನ ಸೇರಿ ವೈವಾಹಿಕ ಪ್ರಕರಣಗಳ ವಿಲೇವಾರಿಯಲ್ಲಿ ವಿಳಂಬವಾಗುತ್ತಿರುವ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಹೈಕೋರ್ಟ್, ವೈವಾಹಿಕ ಪ್ರಕರಣಗಳನ್ನು ಗರಿಷ್ಠ ಒಂದು ವರ್ಷದೊಳಗೆ ಇತ್ಯರ್ಥಪಡಿಸಬೇಕು ಎಂದು ಕೌಟುಂಬಿಕ ನ್ಯಾಯಾಲಯಗಳಿಗೆ ಆದೇಶಿಸಿದೆ. ತನ್ನ ವಿವಾಹ ವಿಚ್ಛೇದನ ಅರ್ಜಿ ತ್ವರಿತಗತಿಯಲ್ಲಿಇತ್ಯರ್ಥಪಡಿಸುವಂತೆ ಕೌಟುಂಬಿಕ ನ್ಯಾಯಾಲಯಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಎನ್. ರಾಜೀವ್ ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿರುವ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಏಕಸದಸ್ಯ ಪೀಠ, ಈ ಆದೇಶ ನೀಡಿದೆ. ಎರಡೂ ಕುಟುಂಬ ಮೇಲೆ ಕೆಟ್ಟ ಪರಿಣಾಮ ಪ್ರಕರಣಗಳ ವಿಚಾರಣೆ ವಿಳಂಬ ಎರಡೂ ಕುಟುಂಬಗಳ ಮೇಲೆ ಅತ್ಯಂತ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಅಭಿಪ್ರಾಯಪಟ್ಟಿರುವ ನ್ಯಾಯಾಲಯ, ‘ಧಿ’ಮನುಷ್ಯ ಜೀವನದ ಅಲ್ಪಾವಧಿಯನ್ನು ಗಮನದಲ್ಲಿಟ್ಟುಕೊಂಡು ವೈವಾಹಿಕ ಪ್ರಕರಣಗಳ ವಿಲೇವಾರಿಯನ್ನು ಸಮರೋಪಾದಿಯಲ್ಲಿ ಕೈಗೊಳ್ಳಬೇಕಿದೆ ಎಂದು ಹೇಳಿದೆ. ಬದುಕು ತೀರಾ ಚಿಕ್ಕದು ‘ಲೈಫ್ ಈಸ್…
Author: Nammur Express Admin
ಅಪಘಾತಕ್ಕೆ ಒಂದೇ ಕುಟುಂಬದ ಮೂವರು ಬಲಿ! – ಬೆಂ.ಗ್ರಾಮಾಂತರದ ಹೊಸಕೋಟೆಯಲ್ಲಿ ಘಟನೆ – ಮೊಬೈಲ್ ಚಾರ್ಜ್ ವಿದ್ಯುತ್ ಸ್ಪರ್ಶಕ್ಕೆ ಯುವಕ ಸಾವು! – ಪ್ರಿಯಕರನ ಕಿರುಕುಳಕ್ಕೆ ಟೆಕ್ಕಿ ಸಾವಿಗೆ ಶರಣು! NAMMUR EXPRESS NEWS ಬೆಂಗಳೂರು: ಲಾರಿ ಚಾಲಕನ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿ ಚಾಲನೆಯಿಂದ ಒಂದೇ ಕುಟುಂಬದ ಮೂವರು ಬಲಿಯಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯಲ್ಲಿ ನಡೆದಿದೆ. ಮೂವರು ಬೈಕ್ ನಲ್ಲಿ ತೆರಳುತ್ತಿದ್ದಾಗ ಹಿಂಬದಿಯಿಂದ ಲಾರಿಗೆ ಡಿಕ್ಕಿ ಹೊಡೆದಿದ್ದು ಡಿಕ್ಕಿಯ ರಭಸಕ್ಕೆ ಬೈಕ್ ಹಳ್ಳಕ್ಕೆ ಬಿದ್ದು ಮೂವರು ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾರೆ. ಮೃತಪಟ್ಟ ದುರ್ದೈವಿಗಳನ್ನು ಮನೋಹರ್ (19) ಶ್ವೇತಾ (38) ಸುಕೃತಾ (4) ಎಂದು ಗುರುತಿಸಲಾಗಿದೆ. ಆರೋಗ್ಯ ಇಲ್ಲದ ಹಿನ್ನಲೆಯಲ್ಲಿ ಜಡಿಗೇನಹಳ್ಳಿಯ ಆಸ್ಪತ್ರೆಗೆ ಮೂವರು ಬೈಕಿನಲ್ಲಿ ಹೋಗುತ್ತಿದ್ದರು. ಈ ವೇಳೆ ದುರ್ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ. ಮೃತರು ಹೊಸಕೋಟೆ ತಾಲ್ಲೂಕಿನ ಗೊಣಕನಹಳ್ಳಿ ಗ್ರಾಮದವರು ಎಂದು ತಿಳಿದು ಬಂದಿದೆ. ಇನ್ನೂ ಘಟನೆ ನಡೆದ ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮೊಬೈಲ್ ಚಾರ್ಜ್…
ಪಡಿತರ ಚೀಟಿದಾರರಿಗೆ ಶೀಘ್ರವೇ ಬಿಪಿಎಲ್ ಹೆಲ್ತ್ ಕಾರ್ಡ್ – ವೈದ್ಯಕೀಯ ಸೇವೆಗೆ ಪ್ರತ್ಯೇಕ ಪಡಿತರ ಚೀಟಿ – ವೈದ್ಯಕೀಯ ಸೌಲಭ್ಯದ ಅಗತ್ಯ ಇರುವವರಿಗೆ ಆದ್ಯತೆ NAMMUR EXPRESS NEWS ಬೆಂಗಳೂರು: ವೈದ್ಯಕೀಯ ಸೇವೆಗೆ ಪ್ರತ್ಯೇಕ ಪಡಿತರ ಚೀಟಿ ನೀಡಲು ಚಿಂತನೆ ನಡೆಸಲಾಗಿದೆ. ಮನೆ ಮನೆ ಸರ್ವೆ ಮಾಡಿ ಸಲಹೆ ಪಡೆದು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ. ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಹೆಚ್.ಮುನಿಯಪ್ಪ ಹೇಳಿದರು. ಸುದ್ದಿಗಾರರ ಜೊತೆ ಮಾತನಾಡಿದ ಸಚಿವರು ಬಿಪಿಎಲ್ ( B P L Card ) ಪಡಿತರಚೀಟಿದಾರರನ್ನು ಎ, ಬಿ ಎಂದು ವರ್ಗೀಕರಿಸುವ ಬಗ್ಗೆ ಚಿಂತನೆ ಮಾಡಲಾಗಿದೆ. ಆರೋಗ್ಯ ಸೇವೆಗಾಗಿಯೇ ಪ್ರತ್ಯೇಕ ಪಡಿತರ ಚೀಟಿ ನೀಡಲು ಚಿಂತನೆ ನಡೆಸಲಾಗಿದೆ. ಈ ಬಗ್ಗೆ ಮನೆ ಮನೆ ಸರ್ವೆ ಮಾಡಿ ಸಲಹೆ ಪಡೆದು ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ. ಇದರಿಂದ ಎಷ್ಟು ಜನ ಅಕ್ಕಿ ಮತ್ತು ಆರೋಗ್ಯ ಸೇವೆ ಎರಡನ್ನೂ ಕೂಡ ಬಯಸುತ್ತಾರೆ ಎಂಬುದು ಗೊತ್ತಾಗಲಿದೆ ಎಂದರು.…
ಕೊಳಚೆ ನಗರ ಆಗ್ತಿದೆಯಾ ಕಾರ್ಕಳ!? – ಒಳ ಚರಂಡಿ ಸಮಸ್ಯೆಗೆ ಪರಿಹಾರ ಇಲ್ವಾ? – ವಾಹನ ಸವಾರರು, ಜನತೆಯ ಪೀಕಲಾಟ NAMMUR EXPRESS NEWS ಕಾರ್ಕಳ: ( Karkala ) ನೆಲದೊಳಗೆ ಒಳ ಚರಂಡಿ ನೀರು ಸೋರಿಕೆಯಾಗಿ ಕಾರ್ಕಳದಲ್ಲಿ ಸಮಸ್ಯೆ ಸೃಷ್ಟಿ ಆಗಿದೆ. ಕಾರ್ಕಳದ ಬಂಡಿ ಮಠ ಬಸ್ ನಿಲ್ದಾಣದ ಮುಂಭಾಗದ ರಸ್ತೆಯ ಒಳಚರಂಡಿ ಚೇಂಬರ್ ನಲ್ಲಿ ಮೇಲಿನ ನೀರು ಸೋರಿಕೆಯಾಗಿ ಸಮಸ್ಯೆ ಸೃಷ್ಟಿಸಿದೆ. ಇಲ್ಲಿ ಕೊಳಚೆ ನೀರು ಸೋರಿಕೆ ಕಂಡು ಹೊರ ಚಿಮ್ಮಿ ಹರಿಯುತ್ತಿರುವುದಲ್ಲದೆ ಅವೆಲ್ಲ ರಸ್ತೆ ಮೇಲೆಯೇ ಹರಿದು ಪರಿಸರ ಮಲಿನಗೊಂಡಿರುವುದಲ್ಲದೆ ಪರಿಸರ ಗಬ್ಬೆದ್ದು ನಾರುತ್ತಿದೆ. ಪುರಸಭೆ ವ್ಯಾಪ್ತಿಯ 3 ಮಾರ್ಗದಿಂದ ಬಂಡಿಮಠ ತನಕ ಯುಜಿಡಿ ಕೊಳವೆ ಮಾರ್ಗ ಎಲ್ಲೋ ಒಂದು ಕಡೆ ಬಂದ್ ಆಗಿ, ಮ್ಯಾನ್ ಹೋಲ್ ಗಳ ಮೂಲಕ ಕೊಳಚೆ ನೀರು ರಸ್ತೆ ಮೇಲೆ ಉಕ್ಕಿ ಹರಿಯುತ್ತಿರುವುದು ಮಳೆಗಾಲದಲ್ಲಿ ಸರ್ವೇಸಾಮಾನ್ಯವಾಗಿದೆ. ಕಾರ್ಕಳ ನಗರದ ಪ್ರಮುಖ ರಸ್ತೆಗಳ ಒಳಚರಂಡಿ ಚೇಂಬರ್ ಗಳು ಸೋರಿಕೆ ಕಂಡಿದ್ದು ಪುರಸಭೆ ಸಿಬ್ಬಂದಿ…
ಪುತ್ತಿಲ ಪರಿವಾರದ ವಿರುದ್ಧ ಕೇಸ್! – ಅನುಮತಿ ರಹಿತ ವಿಜಯೋತ್ಸವ ಆಚರಣೆ – ಪೊದೆಯಲ್ಲಿ ಅಪರಿಚಿತ ಮೃತದೇಹ ಪತ್ತೆ – ಸಲಿಂಗಕಾಮಿ ಉಪನ್ಯಾಸಕನಿಗೆ ಜೀವಾವಧಿ ಶಿಕ್ಷೆ NAMMUR EXPRESS NEWS ಪುತ್ತೂರು: ಪುತ್ತೂರು ನಿಡ್ನಳ್ಳಿ ಮತ್ತು ಆರ್ಯಾಪು ಪಂಚಾಯತ್ ಗಳಲ್ಲಿ ಜುಲೈ 22ರಂದು ನಡೆದ ಉಪ ಚುನಾವಣೆಯ ಫಲಿತಾಂಶ ಜುಲೈ 26ರಂದು ಹೊರ ಬಿದ್ದಿತ್ತು.ಈ ನಿಟ್ಟಿನಲ್ಲಿ ಆರ್ಯಾಪು ಪಂಚಾಯತ್ ಚುನಾವಣೆಯಲ್ಲಿ ಪುತ್ತಿಲ ಪರಿವಾರದ ಸದಸ್ಯ ಸುಬ್ರಮಣ್ಯ ಬಲ್ಯಾಯ ವಿಜಯ ಸಾದಿಸಿದ್ದರು. ಈ ನಿಟ್ಟಿನಲ್ಲಿ ಪುತ್ತೂರು ಮಿನಿ ವಿಧಾನಸೌಧದಿಂದ ಪುತ್ತಿಲ ಪಾರಿವಾರದ ಕಚೇರಿ ವರೆಗೆ ಪುತ್ತೂರಿನ ಮುಖ್ಯ ರಸ್ತೆಯಲ್ಲಿ ಅನುಮತಿ ಪಡೆಯದೇ ವಿಜಯೋತ್ಸವ ನಡೆಸಿದ್ದು ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪುತ್ತಿಲ ಪರಿವಾರದ ವಿರುದ್ಧ ಸಾರ್ವಜನಿಕ ಶಾಂತಿಭಂಗ ಕೇಸು ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಪೊದೆಯಲ್ಲಿ ಅಪರಿಚಿತ ಮೃತದೇಹ ಪತ್ತೆ ಪುತ್ತೂರು ತಾಲೂಕು ಪಾಂಗ್ಲಾಯಿ ಬಳಿ ಪೊದೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಅಪರಿಚಿತ ಮೃತದೇಹ ಪತ್ತೆಸ್ಥಿತಿಯಲ್ಲಿ ಪತ್ತೆಯಾದ ಘಟನೆ ಪಾಂಗ್ಲಾಯಿಯಲ್ಲಿ ನಡೆದಿದೆ.…
ತೀರ್ಥಹಳ್ಳಿ ವಿದ್ಯಾರ್ಥಿನಿ ಅಂಕಿತಾಗೆ ಮೊದಲ ರ್‍ಯಾಂಕ್! – ಕುವೆಂಪು ವಿವಿ ಎಂ.ಎಸ್ಸಿ ಕೈಗಾರಿಕಾ ರಾಸಾಯನಶಾಸ್ತ್ರ ವಿಭಾಗದಲ್ಲಿ ಪ್ರಥಮ ಸ್ಥಾನ NAMMUR EXPRESS NEWS ತೀರ್ಥಹಳ್ಳಿ: ( Thirthahalli ) ತೀರ್ಥಹಳ್ಳಿ ತಾಲೂಕು ಹರಳಿಮಠ ಹಾರೋಗೋಳಿಗೆಯ ಅಂಕಿತ ಎಚ್.ಸಿ (Ankitha H C ) ಅವರು ಜ್ಞಾನ ಸಹ್ಯಾದ್ರಿ ಕುವೆಂಪು ವಿಶ್ವವಿದ್ಯಾನಿಲಯದ ಎಂ.ಎಸ್ಸಿ ಕೈಗಾರಿಕಾ ರಾಸಾಯನಶಾಸ್ತ್ರ ವಿಭಾಗದಲ್ಲಿ ಪ್ರಥಮ ರಾಂಕ್ ಅನ್ನು ಪಡೆದಿರುತ್ತಾರೆ. ಇವರು ತೀರ್ಥಹಳ್ಳಿಯ ಪ್ರತಿಭೆಯಾಗಿದ್ದಾರೆ. ತಂದೆ ಚಂದ್ರಶೇಖರ್ ಕೃಷಿಕರು ಮತ್ತು ತಾಯಿ ಪ್ರತಿಮಾ. ತೀರ್ಥಹಳ್ಳಿಯ ಪ್ರತಿಭೆ ಗೆ ನಮ್ಮೂರ್ ಎಕ್ಸ್ಪ್ರೆಸ್ ಶುಭಾಶಯ ಸಲ್ಲಿಸುತ್ತದೆ. ಇದನ್ನೂ ಓದಿ : ರಾಜ್ಯದಲ್ಲಿ ಮತ್ತೆ ಸುದ್ದಿ ಮಾಡಿದ ತೀರ್ಥಹಳ್ಳಿ ಪ್ರತೀಕ್ ಗೌಡ ಕೇಸ್! HOW TO APPLY : NEET-UG COUNSELLING 2023
ಕುಮಾರಸ್ವಾಮಿ ಬಳಿಕ ಯೂರೋಪ್ಗೆ ಯಡಿಯೂರಪ್ಪ! – ರಾಜ್ಯ ರಾಜಕೀಯದಲ್ಲಿ ಹೊಸ ಬೆಳವಣಿಗೆ – ಡಿಕೆಶಿ ಹೇಳಿದ್ದು ಸರಿ ಆಯ್ತಾ…? NAMMUR EXPRESS NEWS ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಹೊಸ ಬೆಳವಣಿಗೆ ನಡೆಯುತ್ತಿದೆ. ಕಾಂಗ್ರೆಸ್ ಎಲ್ಲಾ ಶಾಸಕರ ಸಭೆ ಕರೆದಿದ್ದು ಇನ್ನೊಂದು ಕಡೆ ( Yediyurappa )ಯಡಿಯೂರಪ್ಪ ಯೂರೋಪ್ ಫ್ಲೈಟ್ ಹತ್ತಿದ್ದಾರೆ. ಜೆಡಿಎಸ್ ನಾಯಕ ( H.D. Kumaraswamy ) ಕುಮಾರಸ್ವಾಮಿ ವಿದೇಶದಲ್ಲಿರುವಾಗಲೇ ಯಡಿಯೂರಪ್ಪ ಯುರೋಪ್ ಪ್ರಯಾಣ ಮಾಡಿದ್ದಾರೆ. ಕುಮಾರಸ್ವಾಮಿ ಕುಟುಂಬ ಭಾನುವಾರ ರಾತ್ರಿ ಯೂರೋಪ್ಗೆ ತೆರಳಿದ್ದು, ಇದೀಗ ಯಡಿಯೂರಪ್ಪ ಫ್ಯಾಮಿಲಿ ಕೂಡ ಯೂರೋಪಿಗೆ ತೆರಳಿದೆ. ಬಿಎಸ್ ಯಡಿಯೂರಪ್ಪಗೆ ಪುತ್ರ ವಿಜಯೇಂದ್ರ ಸಾಥ್ ನೀಡಿದ್ದು, ಕುಟುಂಬದ ಸದಸ್ಯರು 4 ದಿನಗಳ ಪ್ರವಾಸಕ್ಕೆ ತೆರಳಿದ್ದಾರೆ. ಕುಟುಂಬ ಮತ್ತು ಕೆಲ ಆಪ್ತರ ಜೊತೆ ಯಡಿಯೂರಪ್ಪ ಪ್ರಯಾಣ ನಡೆಸಿದ್ದಾರೆ. ಡಿಕೆಶಿ ಮೊದಲೇ ಹೇಳಿದ್ದರು! ಸುಳಿವು ಸಿಕ್ಕಿಯೇ ಡಿಕೆ ಶಿವಕುಮಾರ್ ಆ ಮಾತು ಅಂದಿದ್ದಾರಾ? ಸಿಂಗಾಪುರದಲ್ಲಿ ಷಡ್ಯಂತ್ರದ ಬಗ್ಗೆ ಡಿಸಿಎಂ ಡಿಕೆಶಿ ಹೇಳಿದ್ದು ಇದೇ ಕಾರಣಕ್ಕಾ? ಯಾರಿಗೆ ಯಾರ…
ಬಿಜೆಪಿ ಸಂಸದನ ಮೊಬೈಲ್ ಕರೆ ಮಾಡಿ ಮಹಿಳೆ ನಗ್ನ! – ಸಿದ್ದೇಶ್ವರ್ ಅವರನ್ನು ಹನಿ ಟ್ರ್ಯಾಪ್ ಬೀಳಿಸಲು ಪ್ಲಾನ್! – ವಾಟ್ಸಪ್ ಕರೆ ಮಾಡಿ ನಗ್ನಳಾದ ಮಹಿಳೆ..ಏನಿದು ಕೇಸ್!? NAMMUR EXPRESS NEWS ಬೆಂಗಳೂರು: ದಾವಣಗೆರೆಯ ಬಿಜೆಪಿ ಸಂಸದ ಜಿ ಎಂ ಸಿದ್ದೇಶ್ವರ ಅವರಿಗೆ ಮಹಿಳೆ ಒಬ್ಬಳು ವಾಟ್ಸಪ್ ಕರೆ ಮಾಡಿ ಅಸಭ್ಯವಾಗಿ ವರ್ತಿಸಿದ್ದು, ವಿಡಿಯೋ ಕಾಲ್ ಬರುತ್ತಿದ್ದಂತೆ ಮಹಿಳೆ ನಗ್ನಳಾಗಿದ್ದಾಳೆ. ಘಟನೆ ಸಂಬಂಧ ಬೆಂಗಳೂರಿನ ಕಮರ್ಷಿಯಲ್ ಸ್ಟ್ರೀಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಿದ್ದೇಶ್ವರ ಅವರು ಜುಲೈ 20ರಂದು ರಾತ್ರಿನಗರದ ಯುಬಿಸಿಟಿ ಬಳಿಯ ತಮ್ಮ ಪ್ಲಾಟ್ ನಲ್ಲಿದ್ದ ಅಪರಿಚಿತ ಮಹಿಳೆ ವಾಟ್ಸಾಪ್ ಕರೆ ಮಾಡಿದ್ದಾಳೆ. ಸಿದ್ದೇಶ್ವರ ಅವರು ಕರೆ ಸ್ವೀಕರಿಸಿ ಮಾತನಾಡುತ್ತಿರುವಾಗಲೇ ಆ ಮಹಿಳೆ ನಗ್ನಳಾಗಿದ್ದಾಳೆ. ಇದರಿಂದ ಗಲಿಬಿಲಿಯಾದ ಸಂಸದರು ಜೊತೆಯಲ್ಲೇ ಇದ್ದ ತಮ್ಮ ಪತ್ನಿಗೆ ಮೊಬೈಲ್ ಕೊಟ್ಟಿದ್ದಾರೆ. ಸಿದ್ದೇಶ್ವರ ಪತ್ನಿ ಮಾತನಾಡಲು ಆರಂಭಿಸುತ್ತಿದ್ದಂತೆ ಆ ಮಹಿಳೆ ಕರೆ ಸ್ಥಗಿತಗೊಳಿಸಿದ್ದಾಳೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಆ ಮಹಿಳೆ ಜುಲೈ…
ರಾಜ್ಯದಲ್ಲಿ ಮತ್ತೆ ಸುದ್ದಿ ಮಾಡಿದ ತೀರ್ಥಹಳ್ಳಿ ಪ್ರತೀಕ್ ಗೌಡ ಕೇಸ್! – ಉಡುಪಿ ಪ್ರಕರಣದಲ್ಲಿ ಇಲಿ ಹೋಗಿದನ್ನೇ ಹುಲಿ ಹೋದಂತೆ ಬಿಂಬಿಸುತ್ತಿದ್ದಾರೆ – ಪ್ರತೀಕ್ ಸ್ಥಾನದಲ್ಲಿ ‘ಅತೀಕ್’ ಇದ್ದರೆ ಮಾತ್ರ ಇವರ ಹೋರಾಟವೇ?: ಸಚಿವ ದಿನೇಶ್ ಗುಂಡೂರಾವ್ NAMMUR EXPRESS NEWS ಬೆಂಗಳೂರು: ತೀರ್ಥಹಳ್ಳಿಯಲ್ಲಿ ಹಿಂದೂ ಯುವತಿಯರ ಅಶ್ಲೀಲ ವಿಡಿಯೋ ಹರಿಬಿಟ್ಟ ( Pratheek gowda ) ಪ್ರತೀಕ್ ಪ್ರಕರಣ ಇದೀಗ ಮತ್ತೆ ಸುದ್ದಿಗೆ ಬಂದಿದೆ. ಪ್ರತೀಕ್ ಸ್ಥಾನದಲ್ಲಿ ‘ಅತೀಕ್’ ಇದ್ದರೆ ಮಾತ್ರ ಇವರ ಹೋರಾಟವೇ ಎಂದು ಅರೋಗ್ಯ ಸಚಿವ ದಿನೇಶ್ ಗುಂಡೂರಾವ್ ( Dinesh Gundu Rao ) ಬಿಜೆಪಿಗರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಮಾಜಿ ಸಿಎಂ ಬೊಮ್ಮಾಯಿ ಸೇರಿದಂತೆ ರಾಜ್ಯ ಬಿಜೆಪಿ ನಾಯಕರು, ಉಡುಪಿ ಪ್ರಕರಣದಲ್ಲಿ ಇಲಿ ಹೋಗಿದನ್ನೇ ಹುಲಿ ಹೋದಂತೆ ಬಿಂಬಿಸುತ್ತಿದ್ದಾರೆ. ಉಡುಪಿ ಪ್ರಕರಣದಲ್ಲಿ ಇಷ್ಟು ಬಟ್ಟೆ ಹರಿದುಕೊಳ್ಳುತ್ತಿರುವ ನೀವು, ಪ್ರತೀಕ್ ಗೌಡ ಎಂಬ ತೀರ್ಥಹಳ್ಳಿಯ ಎಬಿವಿಪಿ ಘಟಕದ ಅಧ್ಯಕ್ಷ ಹಿಂದೂ ಯುವತಿಯರ ಅಶ್ಲೀಲ ವಿಡಿಯೋ ಹರಿಬಿಟ್ಟಾಗ ಎಲ್ಲಿದ್ದಿರೀ?”…
ಓಡಾಡುತ್ತಿವೆ ಮೊಸಳೆ ಹಿಂಡು! – ನದಿ ತೀರದಲ್ಲಿ ಗುಂಪು ಮೊಸಳೆ ಕಂಡು ಜನ ದಂಗು – ಚಾಮರಾಜನಗರದಲ್ಲಿ ಬಾಲಕನ ಮೇಲೆ ಚಿರತೆ ದಾಳಿ! – ಮೂಢನಂಬಿಕೆಗೆ ಬಲಿಯಾದ 10 ದಿನದ ಕಂದಮ್ಮ! NAMMUR EXPRESS NEWS ರಾಯಚೂರು: ರಾಯಚೂರು ಜಿಲ್ಲೆ ಯಾಪಲದಿನ್ನಿ ಆತಕೂರು ನದಿ ದಡದಲ್ಲಿ ಮೊಸಳೆ ಹಿಂಡುಗಳ ಓಡಾಟ ಇದೀಗ ಎಲ್ಲೆಡೆ ಸುದ್ದಿಯಾಗುತ್ತಿದೆ. ಮೊಸಳೆಗಳು ನದಿಯಿಂದ ಮೇಲೆ ಬರುತ್ತಿವೆ. ಜನ ಓಡಾಡಲು ಭಯ ಪಡುತ್ತಿದ್ದಾರೆ. ತುಂಗಾ ಭದ್ರ ನದಿ ಅಚ್ಚುಕಟ್ಟು ಪ್ರದೇಶದಲ್ಲಿ ಮೊಸಳೆ ಹಿಂಡುಗಳಿದ್ದವು. ಆದರೆ ಈಗ ರಾಯಚೂರು ಭಾಗದಲ್ಲಿ ಮೊಸಳೆ ಹಿಂಡು ಆತಂಕ ಸೃಷ್ಟಿ ಮಾಡಿವೆ. ಚಾಮರಾಜನಗರದಲ್ಲಿ ಬಾಲಕನ ಮೇಲೆ ಚಿರತೆ ದಾಳಿ! ಬಾಲಕಿ ಮೇಲೆ ಚಿರತೆ ದಾಳಿ ನಡೆಸಿ ಬಲಿ ಪಡೆದ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಅದೇ ರೀತಿ ಘಟನೆ ಯಳಂದೂರು ತಾಲೂಕಿನ ಮಲ್ಲಿಗೆಹಳ್ಳಿಯಲ್ಲಿ ಬಾಲಕನ ಮೇಲೆ ಚಿರತೆ ದಾಳಿ ನಡೆಸಿ ಗಾಯಗೊಳಿಸಿದೆ. ಮಲ್ಲಿಗೆಹಳ್ಳಿ ಗ್ರಾಮದ ಹರ್ಷಿತ್(09) ದಾಳಿಗೊಳಗಾದ ಬಾಲಕ. ಗ್ರಾಮದ ಪ್ರಾಥಮಿಕ ಶಾಲೆ ಮುಂಭಾಗದಿಂದ…