Author: Nammur Express Admin

ಕೊಪ್ಪ ಹಾಸ್ಟೆಲ್ ಸ್ನಾನ ಗೃಹದಲ್ಲೆ ನೇಣಿಗೆ ಶರಣು! – ಮೊರಾರ್ಜಿ ದೇಸಾಯಿ ಶಾಲೆ ವಿದ್ಯಾರ್ಥಿನಿ ಆತ್ಮಹತ್ಯೆ! – ಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು NAMMUR EXPRESS NEWS ಕೊಪ್ಪ: ( Koppa ) ಕೊಪ್ಪ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿನಿ ಸ್ನಾನ ಗೃಹದಲ್ಲಿ ನೇಣಿಗೆ ಶರಣಾದ ಘಟನೆ ನಡೆದಿದೆ. ಒಂಬತ್ತನೇ ತರಗತಿಯ ವಿದ್ಯಾರ್ಥಿನಿ ಅಮೂಲ್ಯ ಎಂಬುವವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬುಧವಾರ ರಾತ್ರಿ ಸಹಪಾಠಿಗಳೊಂದಿಗೆ ಇದ್ದ ಅಮೂಲ್ಯ. 11.30ರವರೆಗೆ ಓದಿಕೊಳ್ಳುತ್ತಿದ್ದರು. ನಂತರದಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲಾಗಿದೆ ಎಂದು ಅಂದಾಜಿಸಲಾಗಿದೆ. ಗುರುವಾರ ಬೆಳಿಗ್ಗೆ ವಿದ್ಯಾರ್ಥಿನಿಯರು ಸ್ನಾನಗೃಹ ತೆರಳಿದಾಗ ನೇಣಿನ ಸ್ಥಿತಿಯಲ್ಲಿ ಮೃತ ದೇಹ ಕಂಡಿದೆ. ನಂತರ ವಿದ್ಯಾರ್ಥಿನಿಯರು ಹಾಸ್ಟೆಲ್ ಸಿಬ್ಬಂದಿಗಳಿಗೆ ವಿಚಾರ ತಿಳಿಸಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ವಿದ್ಯಾರ್ಥಿನಿಯು ಕೊಪ್ಪ ತಾಲೂಕಿನ ನರಸೀಪುರ ಗ್ರಾ.ಪಂ ವ್ಯಾಪ್ತಿಯ ನಾರ್ವೆ ಗ್ರಾಮದವರು ಎಂದು ತಿಳಿದುಬಂದಿದೆ. ಇದನ್ನೂ ಓದಿ : ಖಾಸಗಿ ಚಾನಲ್ ವಿರುದ್ದ ಕಿಮ್ಮನೆ 5 ಕೋಟಿ…

Read More

ಕ್ರಿಕೆಟ್ ಆಯ್ತು, ಈಗ ನಟನೆಯತ್ತ ಧೋನಿ? – ಧೋನಿ ಅವರ ಚೊಚ್ಚಲ ಸಿನಿಮಾ ಶೀಘ್ರ ನಿರ್ಮಾಣ – ಧೋನಿ ಪತ್ನಿ ಕೂಡ ಬಣ್ಣ ಹಚ್ಚುತ್ತಾರಾ? NAMMUR EXPRESS NEWS ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂಎಸ್ ಧೋನಿ ಈಗ ಸಿನಿಮಾ ರಂಗಕ್ಕೆ ಕಾಲಿಡಲಿದ್ದಾರೆ. ಕ್ರಿಕೆಟ್ ಜಗತ್ತಿನಲ್ಲಿ ತಮ್ಮ ಆಟ ಮತ್ತು ಸ್ವಭಾವದ ಮೂಲಕ ವಿಶ್ವ ಮಟ್ಟದಲ್ಲಿ ಗುರುತಿಸಿಕೊಂಡಿರುವ ಮಹೇಂದ್ರ ಸಿಂಗ್ ಧೋನಿ ಈಗ ನಿವೃತ್ತಿ ಬಳಿಕ ಸಿನಿಮಾ ಕಡೆ ಆಸಕ್ತಿ ವಹಿಸಿದ್ದಾರೆ. ಧೋನಿ ಅವರು ಚೊಚ್ಚಲ ಸಿನಿಮಾ ನಿರ್ಮಾಣ ಮೂಲಕ ಸಿನಿ ಕ್ಷೇತ್ರದಲ್ಲಿ ಗುರುತಿಸಿಕೊಳ್ಳುತ್ತಿದ್ದು ನಟನೆಯನ್ನು ಮಾಡುವ ಸಾಧ್ಯತೆ ಇದೆ. ಈ ಬಗ್ಗೆ ಅವರ ಪತ್ನಿ ಸಾಕ್ಷಿ ಧೋನಿ ಅವರು ಸುಳಿವು ಬಿಟ್ಟು ಕೊಟ್ಟಿದ್ದು, ಇತ್ತೀಚೆಗೆ ತಮ್ಮ ಚೊಚ್ಚಲು ನಿರ್ಮಾಣದ ಲೆಟ್ಸ್ ಗೇಟ್ ಮ್ಯಾರಿಡ್ ತಮಿಳು ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಈ ಸಂಗತಿಯನ್ನು ಹೇಳಿದ್ದಾರೆ. ಹಲವು ವರ್ಷಗಳಿಂದ ಜಾಹೀರಾತುಗಳಲ್ಲಿ ನಟಿಸುತ್ತಿರುವ ಧೋನಿ ಅವರು ಕ್ಯಾಮರಾ ಎದುರು ನಿಲ್ಲಲು ಹಿಂಜರಿಯುವುದಿಲ್ಲ ಎನ್ನುವ ಮೂಲಕ…

Read More

ಇನ್ಮುಂದೆ ಬ್ಯಾಂಕ್‌ ವಾರಕ್ಕೆ 2 ದಿನ ಇರಲ್ವಾ? – ಬ್ಯಾಂಕ್ ಉದ್ಯೋಗಿಗಳಿಗೆ ಐದೇ ದಿನ ಕೆಲಸ? – ಜು.28ಕ್ಕೆ ಮಹತ್ವದ ಸಭೆ: ಏನಿದು ಹೊಸ ನಿಯಮ? NAMMUR EXPRESS NEWS ( Bank ) ಭಾರತದಲ್ಲಿರುವ ಬ್ಯಾಂಕುಗಳು ಇನ್ನು ಮುಂದೆ ವಾರಕ್ಕೆ ಐದು ದಿನ ಮಾತ್ರವೇ ಕಾರ್ಯನಿರ್ವಹಿಸುವ ಸಾಧ್ಯತೆ ದಟ್ಟವಾಗಿದೆ. ಬ್ಯಾಂಕ್ ನೌಕರರಿಗೆ ವಾರಕ್ಕೆ ಎರಡು ದಿನ ರಜೆ ನೀಡುವ ಕುರಿತು ಜು.28ರ ಶುಕ್ರವಾರ ಭಾರತೀಯ ಬ್ಯಾಂಕಿಂಗ್ ಸಂಘ (ಐಬಿಎ) ಹಾಗೂ ಬ್ಯಾಂಕ್ ನೌಕರರ ಒಕ್ಕೂಟಗಳ ಸಂಯುಕ್ತವೇದಿಕೆ ಮಧ್ಯೆ ಮಹತ್ವದ ಸಭೆ ನಡೆಯಲಿದ್ದು, ಅಂದು ಅಂತಿಮ ನಿರ್ಧಾರ ಹೊರಬೀಳುವ ಸಂಭವವಿದೆ. ಹಾಲಿ ಭಾನುವಾರ ಎಲ್ಲ ಬ್ಯಾಂಕುಗಳಿಗೂ ರಜೆ ಇದೆ. ಇದರ ಜತೆಗೆ 2ನೇ ಹಾಗೂ 4ನೇ ಶನಿವಾರದಂದು ಕೂಡ ರಜೆ ಸಿಗುತ್ತಿದೆ. ತಿಂಗಳಲ್ಲಿ 2 ಶನಿವಾರ ಬ್ಯಾಂಕಿಂಗ್ ಸೇವೆ ಲಭ್ಯವಿದೆ. ಇನ್ನು ಮುಂದೆ ಅದು ಕೂಡ ಇರುವುದಿಲ್ಲ. ಅದರ ಬದಲಿಗೆ ವಾರದ ಐದು ದಿನ ಹೆಚ್ಚುವರಿಯಾಗಿ 40 ನಿಮಿಷ ಕೆಲಸ ಮಾಡಬೇಕಾಗುತ್ತದೆ…

Read More

ತುಂಗಾ ಸೇತುವೆ ಬಳಿ ವ್ಯಕ್ತಿ ಆತ್ಮಹತ್ಯೆ! – ತೀರ್ಥಹಳ್ಳಿ ಪಟ್ಟಣದಲ್ಲಿ ನಡೆದ ಘಟನೆ – ಕೊಲೆಯೋ? ಆತ್ಮಹತ್ಯೆಯೋ..? NAMMUR EXPRESS NEWS ತೀರ್ಥಹಳ್ಳಿ: ( Thirthahalli ) ತುಂಗಾ ಸೇತುವೆ ಸರ್ಕಾರಿ ಕಚೇರಿ ಹೊರ ಭಾಗದಲ್ಲಿ ಅಪರಿಚಿತ ವ್ಯಕ್ತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೀರ್ಥಹಳ್ಳಿ ಪಟ್ಟಣದಲ್ಲಿ ಬುಧವಾರ ರಾತ್ರಿ ನಡೆದಿದೆ. ತೀರ್ಥಹಳ್ಳಿ ಪಟ್ಟಣದ ಪ್ರವಾಸಿ ಮಂದಿರ ರಸ್ತೆಯ ಮುಂದೆ ತುಂಗಾ ಸೇತುವೆ ಬಳಿ ಇರುವ ಕೈಗಾರಿಕಾ ವಿಸ್ತರಣೆ ಕೇಂದ್ರದ ಹೊರಭಾಗದಲ್ಲಿ ಅಪರಿಚಿತ ವ್ಯಕ್ತಿ ಒಬ್ಬರು ನೇಣು ಬಿಗಿದ ಸ್ಥಿತಿಯಲ್ಲಿ ಶವ ನೇತಾಡುತ್ತಿದ್ದು, ವ್ಯಕ್ತಿ ಯಾರು ಎಂಬುದು ಇನ್ನು ತಿಳಿದು ಬಂದಿಲ್ಲ. ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು, ತನಿಖೆ ನಡೆಯುತ್ತಿದೆ. ಸರ್ಕಾರಿ ಜಾಗದಲ್ಲಿ ಹಾಗೂ ಹಾಳು ಬಿದ್ದ ಜಾಗಗಳಲ್ಲಿ ಆತ್ಮಹತ್ಯೆ, ಅಕ್ರಮ ಚಟುವಟಿಕೆಗಳು ಹೆಚ್ಚುತ್ತಿದ್ದು ಸ್ಥಳೀಯ ಆಡಳಿತ ಈ ಬಗ್ಗೆ ಗಮನ ವಹಿಸಬೇಕಿದೆ. ಕಳೆದ ಕೆಲ ತಿಂಗಳ ಹಿಂದೆ ಪೂರ್ಣೇಶ್ ಎಂಬಾತ ಸರ್ಕಾರಿ ಮಾರುಕಟ್ಟೆ ಜಾಗದಲ್ಲಿ ಗಲಾಟೆ ಮಾಡಿಕೊಂಡು ಕೊಲೆ ಮಾಡಲಾಗಿತ್ತು.…

Read More

ಮೋದಿ ರಾಜೀನಾಮೆಗೆ ಕಾಂಗ್ರೆಸ್ ಪಟ್ಟು! – ಮಣಿಪುರ ಸೇರಿ ದೇಶದಲ್ಲಿ ಹೆಚ್ಚುತ್ತಿರುವ ಹಿಂಸಾಚಾರ – ತೀರ್ಥಹಳ್ಳಿಯಲ್ಲಿ ಕಾಂಗ್ರೆಸ್ ನಾಯಕ ರಿಂದ ಪ್ರತಿಭಟನೆ NAMMUR EXPRESS NEWS ತೀರ್ಥಹಳ್ಳಿ: ( Thirthahalli ) ಪ್ರಧಾನಮಂತ್ರಿ ನರೇಂದ್ರ ಮೋದಿಯವರ ರಾಜೀನಾಮೆ ಮತ್ತು ಮಣಿಪುರ ಬಿಜೆಪಿ ಸರ್ಕಾರ ವಜಾಗಳಿಸಲು ಅಗ್ರಹಿಸಿ ತೀರ್ಥಹಳ್ಳಿಯಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ತೀರ್ಥಹಳ್ಳಿಯಲ್ಲಿ ಪ್ರತಿಭಟನೆ ನಡೆಸಲಾಯಿತು. ಮಣಿಪುರದಲ್ಲಿ ನಡೆಯುತ್ತಿರುವ ಜನಾಂಗೀಯ ಹಿಂಸಾಚಾರಕ್ಕೆ, ಬುಡಕಟ್ಟು ಜನರ ಮೀಸಲಾತಿ ಮಾತ್ರವಲ್ಲದೆ ಮಹಿಳೆಯರ ಸ್ವಾತಂತ್ರ ಹನನವಾಗುತ್ತಿದೆ. ನೂರಾರು ಮಂದಿ ಈ ಕೃತ್ಯದಿಂದ ಸಾವಪ್ಪಿದ್ದಾರೆ, ಸಾವಿರಾರು ಮಂದಿ ಮಹಿಳೆಯರು ದೌರ್ಜನ್ಯ ಮತ್ತು ಆತ್ಯಾಚಾರಕ್ಕೆ ಒಳಪಟ್ಟಿರುವುದರಿಂದ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯೇ ಬುಡಮೇಲಾಗುತ್ತಿದೆ, ಮಹಿಳೆಯರನ್ನು ಬೆತ್ತಲೆಗೊಳಿಸಿ ರಾಕ್ಷಸಿ ಪ್ರವೃತ್ತಿ ನಡೆಸುತ್ತಿದ್ದರೂ ದೇಶದ ಜವಾಬ್ದಾರಿ ಹೊತ್ತಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಗಾಡಮೌನವಾಗಿದ್ದಾರೆ, ಪ್ರಧಾನಮಂತ್ರಿಗಳು ಈ ಕುರಿತು ಒಂದೇ ಒಂದು ಹೇಳಿಕೆ ನೀಡದಿರುವುದು ಪ್ರಜಾಪ್ರಭುತಕ್ಕೆ ಮಾಡಿದ ಅವಮಾನವಾಗಿದೆ. ಮಹಿಳೆಯರನ್ನು ರಕ್ಷಣೆ ಮಾಡಬೇಕಾದ ಪ್ರಧಾನಮಂತ್ರಿಯವರು ಕರ್ತವ್ಯದಿಂದ ನುಣಚಿಕೊಂಡು ಇಡೀ ದೇಶವೇ ತಲೆತಗ್ಗಿಸುವಂತಾಗಿದೆ, ತಕ್ಷಣವೇ…

Read More

ಆಗುಂಬೆ ಘಾಟಿ ರಸ್ತೆಯಲ್ಲಿ ಬಿರುಕು!? – ಆ.15ರವರೆಗೆ ಭಾರೀ ವಾಹನ ಸಂಚಾರಕ್ಕೆ ನಿಷೇಧ – ಮಳೆ ಕಡಿಮೆ: ಉಡುಪಿ ರಜೆ, ದಕ್ಷಿಣ ಕನ್ನಡ, ಮಲೆನಾಡು ಶಾಲಾ ಕಾಲೇಜುಗಳಿಗೆ ರಜೆ ಇಲ್ಲ! NAMMUR EXPRESS NEWS ತೀರ್ಥಹಳ್ಳಿ/ಉಡುಪಿ: ( Agumbe ghat ) ಕಳೆದೊಂದು ವಾರದಿಂದಲೂ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ತೀರ್ಥಹಳ್ಳಿ – ಉಡುಪಿ ಸಂಪರ್ಕ ಕಲ್ಪಿಸುವ ಆಗುಂಬೆ ಘಾಟ್‌ ರಸ್ತೆಯಲ್ಲಿ ಸಣ್ಣ ಬಿರುಕು ಕಾಣಿಸಿಕೊಂಡಿದ್ದು, ರಸ್ತೆ ಅಲ್ಲಲ್ಲಿ ಕುಸಿಯುವ ಭೀತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ ಜುಲೈ 27 ರಿಂದ ಅಗಸ್ಟ್‌ 15ರ ವರೆಗೆ ಭಾರೀ ವಾಹನಗಳ ಸಂಚಾರಕ್ಕೆ ನಿಷೇಧ ಹೇರಿ ಉಡುಪಿ ಜಿಲ್ಲಾದಿಕಾರಿ ಡಾ.ಕೆ.ವಿದ್ಯಾ ಕುಮಾರಿ ಅವರು ಆದೇಶ ಹೊರಡಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ ೧೬೯ ಎ ಹಾದು ಹೋಗಿರುವ ಆಗುಂಬೆ ಘಾಟ್‌ ರಸ್ತೆಯಲ್ಲಿ ಭಾರೀ ವಾಹನಗಳ ಸಂಚಾರದಿಂದಲೇ ಬಿರುಕು ಹಾಗೂ ಭೂ ಕುಸಿತ ಉಂಟಾಗುತ್ತಿದೆ. ಸಾರ್ವಜನಿಕರ ಹಿತದೃಷ್ಟಿಯಿಂದಾಗಿ ಇದೀಗ ಭಾರಿ ವಾಹನಗಳ ಸಂಚಾರಕ್ಕೆ ನಿಷೇಧ ಹೇರಲಾಗಿದ್ದು,…

Read More

ಅಡಿಕೆ, ಕಾಳು ಮೆಣಸು ದರ ಎಷ್ಟು? – ಕಾಳು ಮೆಣಸು ಇಳಿಕೆ, ಅಡಿಕೆ ದರವೂ ಇಳಿಕೆ – ಯಾವ ಮಾರುಕಟ್ಟೆ ಏನೇನ್ ದರ ಇದೆ? NAMMUR EXPRESS NEWS ಮಲೆನಾಡು: ( Adike rate ) ಕಾಳು ಮೆಣಸು ದರ ಕೆಜಿಗೆ 600 ರೂ. ಇದ್ದು , ಬುಧವಾರದ ದರ ಕೆಜಿಗೆ 590 ಆಗಿದೆ. ಶಿವಮೊಗ್ಗ ಮತ್ತು ಸಾಗರ ಮಾರುಕಟ್ಟೆಯಲ್ಲಿ ಬೆಟ್ಟೆ – 49099-54599 ಗೊರಬಲು- 17116-43250 ರಾಶಿ- 43333-56212 ಸರಕು- 45533-78119 ಸಿಪ್ಪೆಗೋಟು 20712-22699 ಚಾಲಿ – 37899-39699 ಏರುತ್ತಿರುವ ಕಾಳು ಮೆಣಸು ದರ! ಕಾಳು ಮೆಣಸಿನ ದರ ಏರಲಾರಂಭಿಸಿದೆ. ಈ ಹಿಂದೆ ಕುಸಿತದ ಹಾದಿಯಲ್ಲಿದ್ದ ಕಾಳು ಮೆಣಸಿನ ದರ ಇದೀಗ ಏರಿಕೆಯ ಹಾದಿ ಹಿಡಿದಿದ್ದು, ಕ್ವಿಂಟಲ್ ಕಾಳುಮೆಣಸಿನ ದರ 60 ಸಾವಿರ ದಾಟಿದೆ. ಕೇರಳದ ಮಾರುಕಟ್ಟೆಯಲ್ಲಿ ಸತತವಾಗಿ ದರ ಏರುತ್ತಿದೆ. ಗುಣಮಟ್ಟದ ಕಾಳುಮೆಣಸಿಗೆ ಕೊಚ್ಚಿಯಲ್ಲಿ ಶನಿವಾರ ಗರಿಷ್ಠ 540 ಇದ್ದು, ಸೋಮವಾರ ಕೆ.ಜಿ.ಗೆ ಗರಿಷ್ಠ 570 ಧಾರಣೆ ಆಗಿದೆ.…

Read More

ಮಲಗಿದ್ದ ಮಗು ಬಾಯಿಗೆ ಬಿದ್ದ ಹಲ್ಲಿ: ಮಗು ಸಾವು! – ಮಕ್ಕಳ ಬಗ್ಗೆ ಹುಷಾರು: ಈ ಘಟನೆ ಏನು..? – ಮಗು ಸಾವಿಗೆ ಹಲ್ಲಿ ವಿಷ ಕಾರಣನಾ…? NAMMUR EXPRESS NEWS ಮಲಗಿದ್ದ ಪುಟ್ಟ ಮಗು ಬಾಯಿಗೆ ಹಲ್ಲಿ ಬಿದ್ದು ಮಗು ಮೃತಪಟ್ಟಿರುವ ದಾರುಣ ಘಟನೆ ಛತ್ತೀಸ್‌ಗಢದ ಕೋಬ್ರಾದಲ್ಲಿ ನಡೆದಿದೆ. ಮಗುವಿನ ಬಾಯಿಗೆ ಹಲ್ಲಿ ನುಗ್ಗಿ 3 ವರ್ಷದ ಮಗು ಮೃತಪಟ್ಟಿದೆ. ಬಾಯಿ ಒಳಗೆ ಮಗು ಬಿದ್ದ ಪರಿಣಾಮ ಉಸಿರುಗಟ್ಟಿ ಮಗು ಸಾವನ್ನಪ್ಪಿದೆ. ರಾಜ್‌ಕುಮಾರ್ ಚಂಡೆ ಮೂರನೇ ಮಗ ಜಗದೀಶ್ ಮೃತ ದುರ್ದೈವಿ. ಘಟನೆಯ ವೇಳೆ ಎರಡೂವರೆ ವರ್ಷದ ಜಗದೀಶ್ ಮಲಗಿದ್ದ ಎನ್ನಲಾಗಿದ್ದು, ಈ ವೇಳೆ ಆತನ ತಾಯಿ ಮನೆಗೆಲಸ ಮಾಡುತ್ತಿದ್ದಳು. ಸ್ವಲ್ಪ ಸಮಯದ ನಂತರ ಮಲಗಿದ್ದ ಜಗದೀಶ ಮಗನನ್ನು ನೋಡಿದಾಗ ಆತ ನಿಶ್ಚಲವಾಗಿ ಬಿದ್ದಿದ್ದ. ಕೂಡಲೇ ಅನುಮಾನಗೊಂಡ ತಾಯಿಯು ಬಾಲಕನ ಹತ್ತಿರ ಬಂದಾಗ ಆತನ ಬಾಯಲ್ಲಿ ಹಲ್ಲಿ ಸತ್ತು ಬಿದ್ದಿರುವುದನ್ನು ಕಂಡು ಬಂದಿದೆ. ಇದರಿಂದ ಗಾಬರಿಗೊಂಡ ಮಹಿಳೆ ಜೋರಾಗಿ ಕೂಗಿಕೊಂಡಿದ್ದು,…

Read More

ಮಾಧ್ಯಮ, ಯೂಟ್ಯೂಬರ್ಸ್ ಮೇಲೆ ಡ್ರೋನ್ ಪ್ರತಾಪ್ ಕೇಸ್! – ಬಿಟಿವಿಯ ನಿರೂಪಕಿ ಸಹಿತ 3 ಜನರ ಮೇಲೆ ಬರೋಬ್ಬರಿ 30 ಲಕ್ಷ ಮಾನ ನಷ್ಟ ಕೇಸ್ – ಯಾರ ಯಾರ ಮೇಲೆ ಏನು ಕೇಸ್…?! NAMMUR EXPRESS NEWS ಬೆಂಗಳೂರು: ( Drone Prathap ) ಡ್ರೋನ್ ಪ್ರತಾಪ್. ಇದೊಂದು ಸದಾ ಚರ್ಚೆಯಲ್ಲಿರುವ ಹೆಸರು. ಇದೀಗ ಕೆಲವು ಮಾಧ್ಯಮಗಳು, ಯೂಟ್ಯೂಬರ್ಸ್ ಮೇಲೆ ಪ್ರತಾಪ್ ದೂರು ದಾಖಲಿಸಿದ್ದಾರೆ. ಹೀಗೊಂದು ಮಾಹಿತಿ ಲಭ್ಯವಾಗಿದೆ. ಒಂದಷ್ಟು ವರ್ಷಗಳ ಹಿಂದೆ ಯುವ ವಿಜ್ಞಾನಿ ಎಂದು ಗುರುತಿಸಿಕೊಂಡು ಹಲವು ವಿಧ್ಯಾ ಸಂಸ್ಥೆಗಳಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಇನ್ಸ್ಪಿರೇಷನ್ ಭಾಷಣ ಮಾಡುತ್ತಾ ವೈರಲ್ ಆಗಿದ್ದ ಡ್ರೋನ್ ಪ್ರತಾಪ್ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಕಳೆದ ಒಂದು ತಿಂಗಳಿಂದ ಮತ್ತೆ ತನ್ನ ಸಾಧನೆಗಳನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಹರಿಯಬಿಡುತ್ತಿರುವ ಡ್ರೋನ್ ಪ್ರತಾಪ್‌ ಅವರನ್ನು ಮತ್ತೆ ತರಾಟೆಗೆ ಎತ್ತಿಕೊಂಡ ಒಂದಷ್ಟು ಯೂಟ್ಯೂಬರ್ಸ್ ಹಾಗೂ ಬಿಟಿವಿಯ ನಿರೂಪಕಿಯ ಮೇಲೆ ಕೇಸು ದಾಖಲಿಸಿ ಕೋರ್ಟ್ ಮೆಟ್ಟಿಲೇರಲಿದ್ದೇನೆ ಎಂದು…

Read More

ಜಿಂಕೆ ಶಿಕಾರಿ ಇಬ್ಬರು ಅರೆಸ್ಟ್: ಕೊಪ್ಪದಲ್ಲಿ ಚಿರತೆ! – ತೀರ್ಥಹಳ್ಳಿಯ ಮಂಡಗದ್ದೆಯಲ್ಲಿ ಜಿಂಕೆ ಶಿಕಾರಿ – ಕೊಪ್ಪದ ಹುಲ್ಲುಮಕ್ಕಿ ಬಳಿ ಚಿರತೆ ಪ್ರತ್ಯಕ್ಷ NAMMUR EXPRESS NEWS ತೀರ್ಥಹಳ್ಳಿ: ( Thirthahalli )ತೀರ್ಥಹಳ್ಳಿ ತಾಲೂಕಿನ ಮಂಡಗದ್ದೆ ವಲಯ ವ್ಯಾಪ್ತಿಯಲ್ಲಿ ಜಿಂಕೆ ಶಿಕಾರಿ ಮಾಡಿ ಪಾಲು ಮಾಡಿಕೊಳ್ಳುವ ಸಂದರ್ಭದಲ್ಲಿ ಅರಣ್ಯ ಅಧಿಕಾರಿಗಳು ದಾಳಿ ಮಾಡಿ ಇಬ್ಬರ ಸೆರೆ ಹಿಡಿದಿದ್ದಾರೆ. ಸಿಂಗನಬಿದಿರೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಳ್ಳುಂಡೆ ಗ್ರಾಮದ ಶೇಡ್ ನಲ್ಲಿ ಅಕ್ರಮವಾಗಿ ಜಿಂಕೆಯನ್ನು ಶಿಕಾರಿ ಮಾಡಿ ಮಾಂಸಕ್ಕಾಗಿ ಕಡಿಯುತ್ತಿರುವ ಸಂದರ್ಭದಲ್ಲಿ ಮಂಡಗದ್ದೆ ವಲಯ ಅಧಿಕಾರಿ ಆದರ್ಶ ಅವರ ನೇತೃತ್ವದಲ್ಲಿ ಸಿಬ್ಬಂದಿಗಳು ದಾಳಿ ನಡೆಸಿರುವ ಘಟನೆ ಮಂಗಳವಾರ ರಾತ್ರಿ ನೆಡೆದಿದೆ. ದಾಳಿ ವೇಳೆ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು ಉಳಿದ ಮೂವರು ಆರೋಪಿಗಳು ಪರಾರಿಯಾಗಿದ್ದಾರೆ. ಬಂಧಿತ ಆರೋಪಿಗಳಿಂದ ಜಿಂಕೆ ಮಾಂಸ ಮತ್ತು ಎರಡು ಬೈಕ್ ಗಳನ್ನು ವಶಪಡಿಸಿಕೊಳ್ಳಲಾಗಿದೆ . ಡಿಸಿಎಫ್ ಶಿವಶಂಕರ್, ಎಸಿಎಫ್ ಪ್ರಕಾಶ್ ಮತ್ತು ಆರ್ ಎಫ್ ಒ ಆದರ್ಶ ಇವರುಗಳ ಮಾರ್ಗದರ್ಶನದಲ್ಲಿ ಉಪವಲಯ…

Read More