ಕರುನಾಡಲ್ಲಿ ರಾಹುಲ್ ಜೋಡೋ ಯಾತ್ರೆ..! ಶುಕ್ರವಾರ ಕರ್ನಾಟಕಕ್ಕೆ ಎಂಟ್ರಿ: 21 ದಿನ ಯಾತ್ರೆಸಿದ್ದರಾಮಯ್ಯ, ಡಿಕೆಶಿ ಸೇರಿ ಎಲ್ಲಾ ನಾಯಕರು ಸಜ್ಜು NAMMUR EXPRESS NEWSಬೆಂಗಳೂರು: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಡೆಸ್ತಿರುವ ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗಿನ ಭಾರತ ಜೋಡೋ ಯಾತ್ರೆ, ಶುಕ್ರವಾರ ಕರ್ನಾಟಕಕ್ಕೆ ಎಂಟ್ರಿ ಕೊಡಲಿದೆ. ಶುಕ್ರವಾರದಿಂದ 21 ದಿನ ರಾಹುಲ್ ಗಾಂಧಿ ಕರ್ನಾಟಕದಲ್ಲಿ ಭಾರತ್ ಜೋಡೋ ಯಾತ್ರೆ ನಡೆಸಲಿದ್ದಾರೆ. ರಾಜ್ಯದಲ್ಲಿ ನಾಯಕರು ಸಿದ್ಧತೆ ನಡೆಸಿದ್ದಾರೆ.ಸೆಪ್ಟೆಂಬರ್ 8ರಂದು ತಮಿಳುನಾಡಿನ ಕನ್ಯಾಕುಮಾರಿಯಿಂದ ಈ ಭಾರತ್ ಜೋಡೋ ಯಾತ್ರೆಯನ್ನು ರಾಹುಲ್ ಗಾಂಧಿ ಆರಂಭಿಸಿದ್ರು. ಗುರುವಾರ ಈ ಭಾರತ್ ಜೋಡೋ ಯಾತ್ರೆ 22 ನೇ ದಿನಕ್ಕೆ ಕಾಲಿಟ್ಟಿದೆ. ತಮಿಳುನಾಡು ಮುಗಿಸಿ ಕೇರಳದಲ್ಲಿ ಯಾತ್ರೆ ಮಾಡಿದ್ದ ರಾಹುಲ್ ಗಾಂಧಿ ಶುಕ್ರವಾರ ಗುಂಡ್ಲುಪೇಟೆಯಿಂದ ಕರ್ನಾಟಕಕ್ಕೆ ಕಾಲಿಡಲಿದ್ದಾರೆ.ರಾಹುಲ್ ಗಾಂಧಿ ಪ್ರತಿನಿಧಿಸುವ ಕೇರಳದ ವೈನಾಡುವಿನಿಂದ ಕರ್ನಾಟಕದ ಗಡಿ ಭಾಗ ಗುಂಡ್ಲುಪೇಟೆ ತಲುಪುವ ಭಾರತ್ ಜೋಡೋ ಯಾತ್ರೆ ರಾಜ್ಯದ 8 ಜಿಲ್ಲೆಗಳಲ್ಲಿ 21 ದಿನಗಳ ಕಾಲ, 510 ಕಿಮೀ ಪಾದಯಾತ್ರೆ ನಡೆಸಲಿದೆ. ಚಾಮರಾಜ…
Author: Nammur Express Admin
ಶೃಂಗೇರಿ ಶಾಸಕ ರಾಜೇಗೌಡರಿಗೆ ಕೊಲೆ ಬೆದರಿಕೆ ಅರಣ್ಯ ಭೂಮಿ ವಿವಾದ: ಶಾಸಕರಿಗೆ ತಲೆಬಿಸಿಶೋಭಾ ಕರಂದ್ಲಾಜೆ ಹೆಸರು ಬದಲಾವಣೆ?!ಬಿಜೆಪಿ ಟಿಕೆಟ್ ಕುಮಾರ್ ಬಂಗಾರಪ್ಪಗೋ..? ರಾಜೂಗೋ? NAMMUR EXPRESS NEWSಶೃಂಗೇರಿ: ಗೋಮಾಳದ ಪ್ರದೇಶವೇನಾದರೂ ಅರಣ್ಯ ಇಲಾಖೆಗೆ ಸೇರಿದರೆ ಶಾಸಕರನ್ನು ಕೊಲೆ ಮಾಡುವುದಾಗಿ ಅನೇಕರು ಬೆದರಿಕೆ ಹಾಕಿದ್ದಾರೆ ಎಂದು ಶಾಸಕರೇ ಆತಂಕ ವ್ಯಕ್ತಪಡಿಸಿದ್ದಾರೆ.ಗೋಮಾಳ, ಕಾನು ಅರಣ್ಯಕ್ಕೆ ಸೇರಿಸುವ ಪ್ರಯತ್ನವು ಇಲಾಖೆಯಿಂದ ನಡೆದಿದೆ, ಇದರಿಂದಾಗಿ ಶೃಂಗೇರಿ ಭಾಗದ ಜನರು ಆತಂಕದಲ್ಲಿದ್ದಾರೆ, ಜಾಗವು ಅರಣ್ಯಕ್ಕೆ ಸೇರಿದರೆ ನನಗೆ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಶಾಸಕ ಟಿ.ಡಿ. ರಾಜೇಗೌಡ ಕಳವಳ ವ್ಯಕ್ತಪಡಿಸಿದ್ದಾರೆ. ಈ ಹೇಳಿಕೆ ಭಾರೀ ವಿವಾದ ಸೃಷ್ಟಿ ಮಾಡಿದೆ.ರಾಜೇಗೌಡ ಮಾತನಾಡಿ, ಸರ್ಕಾರ ಮಧ್ಯ ಪ್ರವೇಶಿಸಿ ಮಲೆನಾಡು ಭಾಗದಲ್ಲಿರುವ ಸೊಪ್ಪಿನ ಬೆಟ್ಟ, ಗೋಮಾಳಗಳ ಜಾಗಕ್ಕೆ ಸಂಬಂಧಿಸಿದಂತೆ ಇರುವ ಗೊಂದಲವನ್ನು ಪರಿಹರಿಸಬೇಕು, ಜೀವ ಕೈಯಲ್ಲಿ ಹಿಡಿದುಕೊಂಡು ಓಡಾಡಬೇಕಾದ ಸ್ಥಿತಿ ಇದ್ದರೂ ಬೆದರಿಕೆ ಹಾಕಿದವರ ಹೆಸರು ಹೇಳಲ್ಲ, ಅವರ ವಿರುದ್ಧ ದೂರನ್ನೂ ದಾಖಲಿಸುವುದಿಲ್ಲ. ಆದ್ರೆ ಸಮಸ್ಯೆ ಬಗೆ ಹರಿಯದಿದ್ದರೆ ತೊಂದರೆ ಆಗಲಿದೆ ಎಂಬುದಾಗಿ…
ತೀರ್ಥಹಳ್ಳಿ ಮುಖ್ಯ ಬಸ್ ನಿಲ್ದಾಣ: ಯಾಕೆ ಹೀಗಣ್ಣಾ..?! ಬಸ್ ಸ್ಟ್ಯಾಂಡ್ ಬಳಿ ನೂರೆಂಟು ಸಮಸ್ಯೆಧೂಳಿಗೆ ಮೂಗಿಗೆ ಬಡಿದು ಅನಾರೋಗ್ಯ ಹೆಚ್ಚಳಕುಡಿಯುಲು ನೀರಿಲ್ಲ.. ಭದ್ರತೆ ಕೇಳೋರಿಲ್ಲ…! NAMMUR EXPRESS NEWSತೀರ್ಥಹಳ್ಳಿ : ತೀರ್ಥಹಳ್ಳಿ ಪಟ್ಟಣದ ಮುಖ್ಯ ಬಸ್ ನಿಲ್ದಾಣ ಇಡೀ ಪಟ್ಟಣಕ್ಕೆ ಕಳೆ ತರುವಂತಹ ಪ್ರಮುಖ ಜಾಗ. ಪ್ರತಿ ದಿನ ಸಾವಿರಾರು ಪ್ರಯಾಣಿಕರು ಭೇಟಿ ನೀಡುತ್ತಿದ್ದಾರೆ. ಜೊತೆಗೆ ತೀರ್ಥಹಳ್ಳಿಯ ಅಂದ ಚಂದ ಹೇಳುವ ಜಾಗವು ಇದಾಗಿದೆ. ಆದರೆ ಇತ್ತೀಚೆಗೆ ಇಲ್ಲಿನ ಅವ್ಯವಸ್ಥೆಯಿಂದಾಗಿ ಪಟ್ಟಣದ ಮುಖ್ಯ ಬಸ್ ನಿಲ್ದಾಣ ಸುದ್ದಿಯಲ್ಲಿದೆ.ಕಳೆದೊಂದು ತಿಂಗಳಿಂದ ನಿಂತಿದ್ದ ತೀರ್ಥಹಳ್ಳಿ ಪಟ್ಟಣದ ಮುಖ್ಯ ಬಸ್ ನಿಲ್ದಾಣದ ಪ್ರಮುಖ ಹೋಟೆಲ್ ಮತ್ತೆ ಶುರುವಾಗಿದ್ದು, ಹೊಸ ಕಳೆ ಸಿಕ್ಕಿದೆ. ಆದ್ರೆ ಬಸ್ ನಿಲ್ದಾಣದ ಸುತ್ತಮುತ್ತಲಿನ ಅವ್ಯವಸ್ಥೆ ಈಗ ಹಲವು ಅನುಮಾನಗಳಿಗೆ ಕಾರಣವಾಗಿದೆ.ಬಸ್ ನಿಲ್ದಾಣದಲ್ಲಿ ಲೀಕೇಜ್ ಹಾಗೂ ಪ್ಲಂಬಿಂಗ್, ಸಿಸಿಟಿವಿ ಸರಿ ಇಲ್ಲ. ಇತ್ತೀಚಿಗೆ ಮಾಡಿದ ಹೊಸ ಟಾರು ಪೂರ್ತಿ ಕಿತ್ತು ಹೋಗಿದೆ. ನೀರು ಕುಡಿಯಲು ಕಷ್ಟ ಕಷ್ಟ!: ಮುಖ್ಯ ಬಸ್ ನಿಲ್ದಾಣದಲ್ಲಿರುವ ನೀರಿನ…
ಗರ್ಭಪಾತ ವಿಚಾರದಲ್ಲಿ ಮಹತ್ವದ ಆದೇಶ ನೀಡಿದ ಸುಪ್ರೀಂಕೋರ್ಟ್ NAMMUR EXPRESS NEWSನವದೆಹಲಿ: ಗರ್ಭಪಾತ ವಿಚಾರದಲ್ಲಿ ಸುಪ್ರೀಂ ಕೋರ್ಟ್ ನಿಂದ ಮಹತ್ವದ ತೀರ್ಪು ನೀಡಿದ್ದು, ಅವಿವಾಹಿತೆಗೆ ಅಬಾರ್ಷನ್ ಮಾಡಿಸಿಕೊಳ್ಳಲು ಪರ್ಮಿಷನ್ ಬೇಕಿಲ್ಲ ಎಂದಿದೆ.ಅವಿವಾಹಿತರ ಗರ್ಭಪಾತಕ್ಕೆ ಅನುಮತಿ ನೀಡಿ ಅವಕಾಶ ನೀಡಿದೆ. ಅವಿವಾಹಿತರಿಗೆ 24 ವಾರದೊಳಗೆ ಗರ್ಭಪಾತಕ್ಕೆ ಅವಕಾಶ ನೀಡಿದೆ. ಎಲ್ಲಾ ಮಹಿಳೆಯರು ಸುರಕ್ಷಿತ ಗರ್ಭಪಾತಕ್ಕೆ ಅರ್ಹರಾಗಿದ್ದಾರೆ. ಬಲವಂತದ ಗರ್ಭಧಾರಣೆ ಅತ್ಯಾಚಾರಕ್ಕೆ ಸಮವಾಗಿದೆ.ಕಾನೂನು ಬದ್ಧ ಗರ್ಭಪಾತಕ್ಕೆ ಎಲ್ಲ ಮಹಿಳೆಯರೂ ಅರ್ಹರಾಗಿದ್ದಾರೆ. ಇಚ್ಛೆಯಿಲ್ಲದ ಗರ್ಭಧಾರಣೆ ವೇಳೆ ಗರ್ಭಪಾತಕ್ಕೆ ಹಕ್ಕಿದೆ. ಪ್ರಗ್ನೆನ್ಸಿಆಕ್ಟ್ ಮತ್ತು ರೂಲ್ಸ್ ಗಳ ಅನ್ವಯ ಈ ಹಕ್ಕು ನೀಡಲಾಗಿದೆ. ವಿವಾಹಿತ ಮಹಿಳೆ, ಅವಿವಾಹಿತ ಮಹಿಳೆ ಎನ್ನುವ ಭೇದ ಮಾಡುವಂತಿಲ್ಲ. ವೈವಾಹಿಕ ಅತ್ಯಾಚಾರವನ್ನು ಅಪರಾಧೀಕರಣಗೊಳಿಸಲು ಮೊದಲ ಹೆಜ್ಜೆಯಾಗಿದೆ. ಗಂಡನಿಂದ ಅತ್ಯಾಚಾರ ನಡೆದಲ್ಲಿ ಅತ್ಯಾಚಾರ ಎಂದು ಪರಿಗಣಿಸಬಹುದು.
NAMMUR EXPRESS NEWSಬೆಂಗಳೂರು: ಕರ್ನಾಟಕದಲ್ಲಿ ಮಳೆಯ ಅಬ್ಬರ ಮತ್ತೆ ಶುರುವಾಗಲಿದೆ. ಕಳೆದೊಂದು ವಾರದಿಂದ ಕೊಂಚ ತಣ್ಣಗಾಗಿದ್ದ ಮಳೆ ಇದೀಗ ಮತ್ತೆ 2-3 ದಿನ ಸುರಿಯುವ ಸಾಧ್ಯತೆ ಇದೆ.ಬಂಗಾಳಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿ ಉಂಟಾಗಿದೆ. ಹವಾಮಾನದಲ್ಲಿ ಉಂಟಾದ ಬದಲಾವಣೆಗಳಿಂದಾಗಿ ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಮತ್ತೆ ಮಳೆಯಾಗುತ್ತಿದೆ. ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ಹಲವೆಡೆ ಅ. 2ರವರೆಗೂ ಮಳೆಯಾಗಲಿದೆ. ಬೆಳಗಾವಿ, ಹಾವೇರಿ, ಬಾಗಲಕೋಟೆ, ಗದಗ, ಯಾದಗಿರಿ, ಕೊಪ್ಪಳದಲ್ಲಿ ಗುಡುಗು ಸಹಿತ ಭಾರೀ ಮಳೆಯಾಗಲಿದೆ. ಮಲೆನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ.ಬೆಂಗಳೂರಿನಲ್ಲಿ ಇಂದು ಕೂಡ ಮಳೆಯಾಗುವ ಸಾಧ್ಯತೆಯಿದ್ದು, ಉತ್ತರ ಒಳನಾಡು, ದಕ್ಷಿಣ ಒಳನಾಡು, ಕರಾವಳಿಯಲ್ಲಿ ಮಳೆ ಸುರಿಯುವ ಸಾಧ್ಯತೆಯಿದೆ. ಜೊತೆಗೆ ನೈಋತ್ಯ ಮುಂಗಾರು ದುರ್ಬಲವಾಗಿರುವ ಹಿನ್ನೆಲೆಯಲ್ಲಿ ರಾಜ್ಯದ ಹಲವೆಡೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ರಾಜ್ಯ ಹವಾಮಾನ ಇಲಾಖೆ ಮಳೆ ಮುನ್ಸೂಚನೆ ನೀಡಿದೆ.ಕರ್ನಾಟಕದ ಬಹುತೇಕ ಎಲ್ಲ ಕಡೆಗಳಲ್ಲಿ ಕಳೆದ 2 ವಾರದಿಂದ ಮಳೆ ಸಂಪೂರ್ಣವಾಗಿ ಕಡಿಮೆಯಾಗಿತ್ತು. ಪಶ್ಚಿಮ ಬಂಗಾಳಕೊಲ್ಲಿಯಲ್ಲಿ ಎದ್ದಿರುವ ಮೇಲ್ಮೈ ಸುಳಿಗಾಳಿಯ…
ಚಿತ್ರದುರ್ಗದಲ್ಲಿ ಇಂದು ಲಿಂಗಾಯತರ ಮಹತ್ವದ ಸಭೆಲಿಂಗಾಯತ ಸಮುದಾಯದ ಪ್ರಮುಖರು ಹಾಜರ್ NAMMUR EXPRESS NEWSಚಿತ್ರದುರ್ಗ: ಲೈಂಗಿಕ ದೌರ್ಜನ್ಯದ ಆರೋಪ ಎದುರಿಸುತ್ತಿರುವ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಪೀಠತ್ಯಾಗ ಮಾಡದ ಕಾರಣಕ್ಕೆ ಸೆ.29ರಂದು ಬೆಳಗ್ಗೆ 11.30ಕ್ಕೆ ಚಿತ್ರದುರ್ಗ ತಾಲ್ಲೂಕಿನ ಸೀಬಾರದಲ್ಲಿರುವ ಮಾಜಿ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ ಸ್ಮಾರಕದ ಆವರಣದಲ್ಲಿ ವೀರಶೈವ ಲಿಂಗಾಯತ ಸಮಾಜದ ಸಭೆ ಕರೆಯಲಾಗಿದೆ. ಈ ಸಭೆಯಲ್ಲಿ ಯಾವ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.ಮಾಜಿ ಸಚಿವ ಎಚ್.ಏಕಾಂತಯ್ಯ ಅವರ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಸಭೆಯಲ್ಲಿ ವೀರಶೈವ ಲಿಂಗಾಯತ ಧುರೀಣರು ಭಾಗವಹಿಸುವ ನಿರೀಕ್ಷೆ ಇದೆ. ಸಭೆಯಲ್ಲಿ ಪೀಠತ್ಯಾಗ ಮಾಡದ ಹಿನ್ನೆಲೆಯಲ್ಲಿ ಏನು ಮಾಡಬೇಕು ಎಂಬ ಬಗ್ಗೆ ಚರ್ಚೆ ನಡೆಯಲಿದೆ. ಮುರುಘರಾಜೇಂದ್ರ ಮಠವು ಐತಿಹಾಸಿಕ, ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಹೆಸರಾಗಿದೆ. ಪೀಠಾಧ್ಯಕ್ಷ ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಗಂಭೀರ ಆರೋಪ ಎದುರಾಗಿದೆ. ಮಠದ ಗೌರವ ಹಾಗೂ ಪ್ರತಿಷ್ಠೆ ಕಾಪಾಡಲು ಪೀಠತ್ಯಾಗ ಮಾಡಿಲ್ಲ. ಮಠದ ದೈನಂದಿನ ಧಾರ್ಮಿಕ ಮತ್ತು ಆಡಳಿತಾತ್ಮಕ ಚಟುವಟಿಕೆ ನಡೆಸಲು…
ಮೈಸೂರು ದಸರಾಗೆ ಕ್ಷಣಗಣನೆ..ಸಜ್ಜಾದವು ಆನೆ! ಅದ್ದೂರಿ ದಸರಾಗೆ ಚಾಲನೆ: ರಾಷ್ಟ್ರಪತಿ ಆಗಮನ2 ವರ್ಷದಿಂದ ನಿಂತಿದ್ದ ದಸರಾ ಈ ವರ್ಷ ಜೋರುಶೃಂಗೇರಿ, ಮಂಗಳೂರು ಸೇರಿ ರಾಜ್ಯದಲ್ಲಿ ಹಬ್ಬ NAMMUR EXPRESS NEWSಮೈಸೂರು/ಬೆಂಗಳೂರು: ವಿಶ್ವ ವಿಖ್ಯಾತ ನಾಡಹಬ್ಬ ಮೈಸೂರು ದಸರಾಕ್ಕೆ ಕ್ಷಣಗಣನೆ ಆರಂಭವಾಗಿದೆ. ಜೊತೆಗೆ ರಾಜ್ಯದ ಮಂಗಳೂರು, ಶೃಂಗೇರಿ, ಸಿಗಂದೂರು, ಹೊರನಾಡು, ಧರ್ಮಸ್ಥಳ ಸೇರಿ ರಾಜ್ಯದ ಪ್ರತಿ ಊರಲ್ಲೂ ದಸರಾ ಸಂಭ್ರಮ ಶುರುವಾಗಲಿದೆ.ಮೈಸೂರಲ್ಲಿ ಸೋಮವಾರ ದಸರಾಗೆ ಚಾಲನೆ ಸಿಗಲಿದ್ದು ರಾಷ್ಟ್ರಪತಿ ದ್ರೌಪದಿ ಮುರ್ಮು ಉದ್ಘಾಟನೆ ಮಾಡಲಿದ್ದಾರೆ. ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂ ಸವಾರಿ ಮೆರವಣಿಗೆಗೆ ದಿನ ಗಣನೆ ಆರಂಭವಾಗಿದೆ. ಈ ಬಾರಿ ಜಂಬೂ ಸವಾರಿ ಮೆರವಣಿಗೆ ವಿದ್ಯುತ್ ದೀಪಾಲಂಕಾರದ ನಡುವೆ ಸಾಗಲಿರುವುದು ವಿಶೇಷ. ಮೆರವಣಿಗೆಗಾಗಿ ಕ್ಯಾಪ್ಟನ್ ಅಭಿಮನ್ಯು ಮತ್ತು ಟೀಂ ಭರ್ಜರಿ ತಾಲೀಮು ನಡೆಸುತ್ತಿವೆ. 2 ವರ್ಷದಿಂದ ಕರೋನಾದಿಂದ ದಸರಾ ಮಹೋತ್ಸವದ ಸಂಭ್ರಮ ಮಂಕಾಗಿ ಹೋಗಿದ್ದು, ದಸರಾ ಮಹೋತ್ಸವದ ಎಲ್ಲಾ ಸಾಂಸ್ಕೃತಿಕ ಕಾರ್ಯಕ್ರಮಗಳು ರದ್ದಾಗಿದ್ದವು. ಅಲ್ಲದೇ ದಸರಾ ಪ್ರಮುಖ ಆಕರ್ಷಣೆಯಾದ ಜಂಬೂ ಸವಾರಿ…
ಹುಷಾರ್… ಎಲ್ಲಾ ಕಡೆ ಇದ್ದಾರೆ ಬೈಕ್ ಕಳ್ಳರು..! ಸಿಕ್ಕಸಿಕ್ಕಲ್ಲಿ ಪಾರ್ಕಿಂಗ್ ಮಾಡಿದ್ರೆ ಬೈಕ್ ಮಾಯಕೊಪ್ಪದಲ್ಲಿ ಬೈಕ್ ಕಳ್ಳನ ಅರೆಸ್ಟ್ ದಮಾಡಿದ ಪೊಲೀಸರು NAMMUR EXPRESS NEWSಕೊಪ್ಪ: ಇತ್ತೀಚಿಗೆ ಮಲೆನಾಡಲ್ಲಿ ಬೈಕ್ ಕಳ್ಳರ ಹಾವಳಿ ಹೆಚ್ಚಾಗಿದೆ. ಪ್ರತಿ ತಾಲೂಕಿನಲ್ಲೂ ಬೈಕ್ ಕಳ್ಳತನ ಪ್ರಕರಣ ವರದಿಯಾಗುತ್ತಿವೆ. ಆದ್ದರಿಂದ ಬೈಕ್ ಸವಾರರು ಎಚ್ಚರಿಕೆ ವಹಿಸುವುದು ಅಗತ್ಯ.ಹೌದು. ಪಟ್ಟಣ ಸೇರಿ ಹಳ್ಳಿಗಳಲ್ಲೂ ಬೈಕ್ ಕಳ್ಳರು ತಮ್ಮ ಕೈಚಳಕ ತೋರಿಸುತ್ತಿದ್ದಾರೆ. ಈಗಾಗಲೇ ಹತ್ತಾರು ಬೈಕ್ ವಶಪಡಿಸಿಕೊಳ್ಳಲಾಗಿದೆ. ಕೊಪ್ಪ ತಾಲ್ಲೂಕು ಮುನಿಯೂರು ಬಂಡಿಗಡಿ ಗ್ರಾಮದಲ್ಲಿ ಮನೆಯ ಮುಂಭಾಗ ನಿಲ್ಲಿಸಿದ್ದ ರೂ. 70 ಸಾವಿರ ಬೆಲೆಯ ದ್ವಿಚಕ್ರ ವಾಹನವನ್ನು ಕಳವು ಮಾಡಿದ್ದ ಓರ್ವ ಆರೋಪಿಯನ್ನು ಹರಿಹರಪುರ ಪೊಲೀಸ್ ಠಾಣೆ ಪೊಲೀಸರು ವಶಕ್ಕೆ ಪಡೆದು, ಕಳುವಾಗಿದ್ದ ವಾಹನವನ್ನು ವಶಪಡಿಸಿಕೊಂಡಿದ್ದಾರೆ.ಹೊಸ ಬೈಕ್ ಮೇಲೆ ಕಣ್ಣು!: ಬೈಕ್ ಕಳ್ಳರು ಹೊಸ ಬೈಕ್ ಕಳ್ಳರ ಕಣ್ಣು ಬೀಳುತ್ತಿದೆ. ಕಳೆದ ವರ್ಷ ತೀರ್ಥಹಳ್ಳಿ ಸೊಪ್ಪುಗುಡ್ಡೆಯಲ್ಲಿ ಮನೆ ಮುಂದೆ ನಿಲ್ಲಿಸಿದ್ದ ರಾಯಲ್ ಎನ್ ಫಿಲ್ಡ್ ಬೈಕ್ ಬೆಳಗಾಗುವುದರೊಳಗೆ ಮಂಗಮಾಯವಾಗಿತ್ತು. ಬಳಿಕ…
ರಾಜ್ಯದ ಹಲವು ಕಡೆ ಮೋಡ ಕವಿದ ವಾತಾವರಣಒಂದು ವಾರದಿಂದ ಬಿಸಿಲಿನ ಆಗಮನ NAMMUR EXPRESS NEWSಬೆಂಗಳೂರು:ಕಳೆದ ನಾಲ್ಕೈದು ದಿನಗಳಿಂದ ರಾಜ್ಯದ ವಿವಿಧ ಭಾಗಗಳಲ್ಲಿ ಮೋಡ ಕವಿದ ವಾತಾವರಣವಿದ್ದು, ರಾಜಧಾನಿ ಬೆಂಗಳೂರು ಸೇರಿದಂತೆ ಇನ್ನೂ ಹಲವೆಡೆ ಮಳೆಯ ಯಾವುದೇ ಲಕ್ಷಣ ಗೋಚರಿಸಿಲ್ಲ. ಆದರೆ ಶುಕ್ರವಾರ ಬೆಳಗ್ಗೆಯಿಂದಲೇ ಸ್ವಲ್ಪ ಚಳಿಯ ವಾತಾವರಣವಿದ್ದು, ಹವಾಮಾನ ವರದಿಯ ಪ್ರಕಾರ ಸಂಜೆ ರಾಜ್ಯದ ಹಲವು ಭಾಗಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಹವಾಮಾನ ಇಲಾಖೆ ನೀಡಿರುವ ಮಾಹಿತಿಯ ಪ್ರಕಾರ ಶುಕ್ರವಾರ ಮತ್ತು ಶನಿವಾರ ರಾಜ್ಯದ ದಕ್ಷಿಣ ಒಳನಾಡು ಮತ್ತು ಕಲ್ಯಾಣ ಕರ್ನಾಟಕ ಭಾಗದಲ್ಲಿ ಮಳೆಯ ನಿರೀಕ್ಷೆ ಇದೆ.
ಶಿವಮೊಗ್ಗದಲ್ಲಿ ಶಂಕಿತ ಉಗ್ರರ ಭಾರೀ ಶೋಧ! ತೀರ್ಥಹಳ್ಳಿಯಲ್ಲಿ ಶೋಧ ಕಾರ್ಯಾಚರಣೆಮಂಗಳೂರಲ್ಲಿ ಓರ್ವ ಅರೆಸ್ಟ್: ಇನ್ನೋರ್ವ ನಾಪತ್ತೆಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದೇನು..? NAMMUR EXPRESS NEWSಶಿವಮೊಗ್ಗ : ಐಎಸ್‌ಐಎಸ್ ಉಗ್ರ ಸಂಘಟನೆ ಜೊತೆಸಂಬಂಧ ಹೊಂದಿರುವ ಮೂವರು ಶಿವಮೊಗ್ಗದಲ್ಲಿ ಪತ್ತೆಯಾಗಿದ್ದು ಪೊಲೀಸರು ಅವರನ್ನು ಬಂಧಿಸಿದ್ದಾರೆ.ಐಸಿಸ್ ಉಗ್ರ ಸಂಘಟನೆ ಜೊತೆ ನಿಕಟ ಸಂಪರ್ಕ ಹೊಂದಿದ್ದ ಶಿವಮೊಗ್ಗದ ಖಾಸಗಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಎಲೆಕ್ಟ್ರಿಕ್ ಇಂಜಿನಿಯರಿಂಗ್ ವಿದ್ಯಾರ್ಥಿ ಯಾಸಿನ್ ಹಾಗೂ ಮಂಗಳೂರು ಮೂಲದ ಮಾಜ್ ಎನ್ನುವರನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನೊರ್ವನನ್ನು ಮಂಗಳೂರಲ್ಲಿ ಅರೆಸ್ಟ್ ಮಾಡಲಾಗಿದೆ. ಬಾಂಬ್ ಬ್ಲಾಸ್ಟ್ ಸೇರಿದಂತೆ ಉಗ್ರ ಚಟುವಟಿಕೆಗೆ ತರಬೇತಿ ನೀಡಲಾಗುತ್ತಿದೆ ಎನ್ನುವ ಆಘಾತಕಾರಿ ಮಾಹಿತಿ ತಿಳಿದುಬಂದಿದೆ.ಮಾಜ್ ಮುನೀರ್ ಅಹಮ್ಮದ್ ,(22)ಮಂಗಳೂರು ಮತ್ತು ಸಯ್ಯದ್ ಯಾಸೀನ್ ಬೈಲು, (21) ಸಿದ್ದೇಶ್ವರ ನಗರ, ಶಿವಮೊಗ್ಗ ರವರುಗಳನ್ನು ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ಹಾಜರುಪಡಿಸಿ ಪೊಲೀಸರಿಗೆ ಒಪ್ಪಿಸಲಾಗಿದೆ. ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದೇನು? ಶಿವಮೊಗ್ಗ, ತೀರ್ಥಹಳ್ಳಿ ಭಾಗದಲ್ಲಿ ಇಂತಹ ವ್ಯಕ್ತಿಗಳಿರುವುದು ಆಶ್ಚರ್ಯಕರ. ಈ ಹಿಂದೆ ಪ್ರಕರಣಗಳನ್ನು…