Author: Nammur Express Admin

ವಿದ್ಯುತ್ ಕಂಬಕ್ಕೆ ಡಿಕ್ಕಿ: ಕೂದಲೆಳೆ ಅಂತರದಲ್ಲಿ ಪಾರುಚಾಲಕನ ಅಜಾಗೃತಿಯಿಂದ ಅಪಘಾತ NAMMUR EXPRESS NEWSತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕು ಕಮ್ಮರಡಿ ಸಮೀಪದ ಅರೆಕಲ್ ಹತ್ತಿರ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಓರ್ವನಿಗೆ ಗಂಭೀರ ಗಾಯಗೊಂಡಿದ್ದಾನೆ.ರಸ್ತೆ ತಿರುವಿನಲ್ಲಿ ಚಾಲಕನ ನಿರ್ಲಕ್ಷ್ಯದಿಂದ ಘಟನೆ ನಡೆದಿದ್ದು ಕಾರು ಮೋರಿಗೆ ಬಿದ್ದಿದೆ. ಬಳಿಕ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಕಾರು ಚಾಲಕನ ಅಜಾಗೃತಿಯ ಡ್ರೈವಿಂಗ್ ಕಾರಣ ಎನ್ನಲಾಗಿದೆ. ಗಾಯಗೊಂಡವರು ಶಿವಮೊಗ್ಗದವರು ಎಂದು ತಿಳಿದು ಬಂದಿದೆ. ಮಲೆನಾಡಲ್ಲಿ ಮತ್ತೆ ಮಳೆ: ಅಡಿಕೆಗೆ ಕೊಳೆ! ಮಲೆನಾಡಲ್ಲಿ ಮಳೆ ಅಬ್ಬರ ಮತ್ತೆ ಹೆಚ್ಚಿದೆ. ಒಂದು ವಾರದಿಂದ ಮಳೆ ಕಡಿಮೆಯಾಗಿ ಅಡಿಕೆ ಬೆಳೆಗಾರರಲ್ಲಿ ಸಂತಸ ಮೂಡಿತ್ತು. ಕೊಳೆಯಿಂದಾಗಿ ಅನೇಕರ ತೋಟದಲ್ಲಿ ಕಾಯಿಗಳು ಉದುರುತ್ತಿವೆ. ಈಗ ಮಳೆ ಹೆಚ್ಚಳದಿಂದ ಮತ್ತಷ್ಟು ಉದುರುವ ಸಾಧ್ಯತೆ ಇದೆ. ನರಸಿಂಹರಾಜ ಪುರದಲ್ಲಿ ಕಳ್ಳರು ಅರೆಸ್ಟ್! ನ.ರಾ.ಪುರ ತಾಲ್ಲೂಕು ಮುತ್ತಿನಕೊಪ್ಪ ಗ್ರಾಮದಲ್ಲಿ ಮನೆಯಲ್ಲಿ ಕಳ್ಳತನ ಮಾಡಿದ್ದ ಎರಡು ಜನ ಆರೋಪಿಗಳನ್ನು PSI ನ.ರಾ.ಪುರ ಪೊಲೀಸ್ ಠಾಣೆ…

Read More

ಡಿಕೆಶಿಗೆ ಮತ್ತೊಂದು ಸಂಕಷ್ಟ..! ಐಟಿ ಅಧಿಕಾರಿಗಳ ಪರ ತೀರ್ಪು ನೀಡಿದ ಸುಪ್ರೀಂ ಕೋರ್ಟ್‌ NAMMUR EXPRESSನವದೆಹಲಿ: ಸೋಮವಾರ ಡಿಕೆಶಿ ಇಡಿ ಅಧಿಕಾರಿಗಳ ವಿಚಾರಣೆ ಎದುರಿಸಿದ್ದಾರೆ. ಈ ಬೆನ್ನಲೇ ಮತ್ತೊಂದು ಸಂಕಷ್ಟ ಎದುರಾಗಿದೆ. ಡಿಕೆ ಶಿವಕುಮಾರ್ ಅವರಿಗೆ ಕಾನೂನು ಕ್ರಮ ಜರುಗಿಸುವಂತಿಲ್ಲ ಎಂದು ಹೈಕೋರ್ಟ್ ಅಂದು ಕೇಸ್ ರದ್ದು ಮಾಡಿತ್ತು. ಆದರೆ ಇದೀಗ ಸುಪ್ರೀಂ ಕೋರ್ಟ್‌ ಹೈಕೋರ್ಟ್‌ ಆದೇಶಕ್ಕೆ ತಡೆ ನೀಡಿದೆ. ಈಗಲ್ ಟನ್ ರೆಸಾರ್ಟ್ ನಲ್ಲಿ ಐಟಿ ಅಧಿಕಾರಿಗಳು 2018ರಲ್ಲಿ ದಾಳಿ ನಡೆಸಿದ್ದರು. ಈ ವೇಳೆ ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಕೆಲವು ದಾಖಲೆಗಳನ್ನು ವಶಪಡಿಸಿಕೊಂಡಿದ್ದರು. ಈ ಪ್ರಕರಣ ನಡೆಸುತ್ತಿರುವಾಗಲೇ ಡಿಕೆ ಶಿವಕುಮಾರ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಐಟಿ ಅಧಿಕಾರಿಗಳ ವಿಚಾರಣೆಗೆ ತಡೆ ತಂದಿದ್ದರು. ಈ ಪ್ರಕರಣದಲ್ಲಿ ವಿಚಾರಣೆ ನಡೆಸಿದ್ದ ಹೈಕೋರ್ಟ್ ಪ್ರಕರಣವನ್ನು ವಜಾ ಮಾಡಿ, ಡಿಕೆಶಿಗೆ ಬಿಗ್ ರಿಲೀಫ್ ನೀಡಿತ್ತು. ಆದರೆ ಈ ವಿಚಾರಕ್ಕೆ ಸಂಬಂಧಿಸಿದಂತೆ ಐಟಿ ಅಧಿಕಾರಿಗು ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದರು. ಸೋಮವಾರ ತೀರ್ಪು ನೀಡಿರುವ ಸುಪ್ರೀಂ ಕೋರ್ಟ್,…

Read More

ಸೆ.20ಕ್ಕೆ ರಾಜಧಾನಿಯಲ್ಲಿ ಮಲೆನಾಡಿಗರ ಹೋರಾಟ..! ಮಲೆನಾಡು ಜನಪರ ಒಕ್ಕೂಟದಿಂದ ಪ್ರತಿಭಟನೆಮಲೆನಾಡಿಗರನ್ನು ಉಳಿಸಿ ಹೋರಾಟಕ್ಕೆ ನೀವು ಬೆಂಬಲಿಸಿ..! NAMMUR EXPRESS NEWSಬೆಂಗಳೂರು: ಸಹ್ಯಾದ್ರಿ ಕಣಿವೆಯನ್ನು ದೂರದಿಂದ ವೀಕ್ಷಿಸುವ ಸೊಬಗು ಪ್ರವಾಸಿಗರಿಗೆ ಆನಂದ ನೋಟ. ಒಮ್ಮೆಯಾದರೂ ಇಲ್ಲಿನ ಪ್ರಾಕೃತಿಕ ರಮಣೀಯ ಸೌಂದರ್ಯ ಸವಿಯುವ ಎಲ್ಲಿಲ್ಲದ ತವಕ. ಬೋರ್ಗರೆದು ಸುರಿಯುವ ಮಳೆ, ಜರಿಗಳ ಜುಳುಜುಳು ನಾದ ಕಿವಿಗೆ ಇಂಪು. ಕಣ್ಣಿಗೆ ತಂಪು. ಆಕಾಶದೆತ್ತರಕ್ಕೆ ತಲೆಎತ್ತಿ ನಿಂತ ಮರಗಳ ಸಾಲುಗಳು ಅಬ್ಬಾ ಎಂದೆನಿಸುವಷ್ಟು ವಿಸ್ಮಯ. ದೂರದ ಕಣಿವೆ ಕಾಡಿನ ವರ್ಣನೆ ಹೆಚ್ಚಾದಂತೆ ಕಣ್ಣಂಚಲ್ಲಿ ತುಂಬಿಕೊಳ್ಳುವ ತುಡಿತವೂ ಹೆಚ್ಚುತ್ತದೆ. ಮಲೆನಾಡು ಕಣಿವೆಯ ಸಂಸ್ಕೃತಿ ವಿವಿಧ ಭಾಷೆ, ನೆಲ, ಜಲದ ಸಂಸ್ಕಾರವನ್ನು ಜಗತ್ತಿಗೆ ಸಾರಿದೆ. ಇಲ್ಲಿನ ನೆಲವಾಸಿಗಳ ಮನೆಯ ಮುಂಭಾಗದ ತುಳಸಿಕಟ್ಟೆ ಅಥವಾ ಗಿಡವೂ ಕೂಡ ತನ್ನದಲ್ಲ ಎಂಬ ಕಟುಸತ್ಯವನ್ನು ಅರಿತುಕೊಂಡಾಗ ಕೋಪ ತಡೆಯಲು ಸಾಧ್ಯವೇ ಇಲ್ಲ. ಮಲೆಗಳನ್ನು ವರ್ಣಿಸುವವರಿಗೆ ಎಕ್ಕಡ ತೋರಿಸಬೇಕು ಎಂಬ ಒಳಗಿನ ಆತಂಕ ಎಚ್ಚರಗೊಳ್ಳುವಂತೆ ಮಾಡುತ್ತದೆ. ಕಾಡು ಉಳಿಸುವ ವಿಶ್ವಮಟ್ಟದ ಹೋರಾಟ ಸಫಲತೆ ಪಡೆಯಬೇಕು ಅದು…

Read More

ಜಿಪಂ ಚುನಾವಣೆ ಸದ್ಯಕ್ಕೆ ನಡೆಯಲ್ಲ! ಸದಸ್ಯರ ಸಂಖ್ಯೆಹೆಚ್ಚಳಕ್ಕೆ ವಿಧೇಯಕ ಮಂಡನೆತಾಲೂಕು ಪಂಚಾಯತ್ ಚುನಾವಣೆ ಕೂಡ ನಡೆಯಲ್ಲ? NAMMUR EXPRESS NEWSಬೆಂಗಳೂರು: ರಾಜ್ಯ ಸರ್ಕಾರವು ಗ್ರಾಮೀಣ ಜನಸಂಖ್ಯೆಯ ಆಧಾರದ ಮೇಲೆ ಮತ್ತೊಮ್ಮೆ ಜಿಲ್ಲೆಗಳ ಜಿಲ್ಲಾ ಪಂಚಾಯಿತಿ ಸದಸ್ಯರ ಸಂಖ್ಯೆ ಪರಿಷ್ಕರಣೆಗೆ ಮುಂದಾಗಿದೆ. ಹೀಗಾಗಿ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆ ಸದ್ಯಕ್ಕೆ ನಡೆಯುವ ಸಾಧ್ಯತೆಗಳಿಲ್ಲ.ಗುರುವಾರ ವಿಧಾನಸಭೆಯಲ್ಲಿ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ತಿದ್ದುಪಡಿ ವಿಧೇಯಕ – 2022 ಮಂಡಿಸಿದೆ.ಕಳೆದ ಬಜೆಟ್ ಅಧಿವೇಶನದಲ್ಲಿ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ತಿದ್ದುಪಡಿ ವಿಧೇಯಕ – 2022 ಮಂಡಿಸಿ ಅಂಗೀಕಾರ ಪಡೆದಿತ್ತು. ಬಳಿಕ ಈ ತಿದ್ದುಪಡಿ ಕಾಯ್ದೆಯ ಸೆಕ್ಷನ್ 121 ಮತ್ತು ಸೆಕ್ಷನ್ 160 ರ ತಿದ್ದುಪಡಿಗೆ ಸುಗ್ರೀವಾಜ್ಞೆ ತಂದಿತ್ತು. ಈ ಸುಗ್ರೀವಾಜ್ಞೆಗೆ ಕಾಯ್ದೆ ಸ್ವರೂಪ ನೀಡಲು ಮತ್ತೊಮ್ಮೆ ತಿದ್ದುಪಡಿ ವಿಧೇಯಕ ಮಂಡಿಸಿದೆ.ಈ ಮೂಲಕ ಮತ್ತೆ ಜಿಲ್ಲಾ ಪಂಚಾಯಿತಿ ಸದಸ್ಯರ ಸಂಖ್ಯೆ ಹೆಚ್ಚಾಗಲಿದ್ದು ಇದು ಮುಂದೆ ಕ್ಷೇತ್ರ ಪುನರ್ ವಿಂಗಡನೆ…

Read More

ಕೂಲಿಕಾರನ ಮನೆಗೆ ನುಗ್ಗಿದ ಕಳ್ಳರು! ಬೀರುವಿನಲ್ಲಿದ್ದ ಹಣ, ಬೆಳ್ಳಿ ಕಾಲು ಚೈನ್ ಕಳ್ಳತನಕೈಮರ ಸಮೀಪದ ಸುಣ್ಣದ ಮನೆಯಲ್ಲಿ ಘಟನೆಅಡಿಕೆ ಕೊಯ್ಲು ವೇಳೆ ರೈತರೇ ಎಚ್ಚರ NAMMUR EXPRESS NEWSತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕು ಹೊಸಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸುಣ್ಣದ ಮನೆಯಲ್ಲಿ ಶನಿವಾರ ಮನೆಗೆ ನುಗ್ಗಿದ ಕಳ್ಳರು ಬಾಗಿಲು ಒಡೆದು ಬೀರುನಲ್ಲಿದ್ದ ಹಣ ಕದ್ದು ಪರಾರಿಯಾಗಿದ್ದಾರೆ.ಕೂಲಿ ಕೆಲಸ ಮಾಡುವ ಸುರೇಶ ಸುಣ್ಣದ ಮನೆ ಎಂಬುವರ ಮನೆಯಲ್ಲಿ ಕಳ್ಳತನ ನಡೆದಿದ್ದು ಸುಮಾರು 6000 ರೂ ದುಡ್ಡು ಮತ್ತು 5000 ಮೌಲ್ಯದಬೆಳ್ಳಿ ಕಾಲು ಚೈನ್ ಕದಿಯಲಾಗಿದೆ.ಹೊಸಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದ ಘಟನೆಯಲ್ಲಿ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಡಿಕೆ ಸಮಯ: ಕಳ್ಳರ ಬಗ್ಗೆ ಎಚ್ಚರ ಮಲೆನಾಡಲ್ಲಿ ಅಡಿಕೆ ಸುಲಿತ ಶುರುವಾಗಲು ದಿನ ಗಣನೆ ಆರಂಭವಾಗಿದೆ. ಆರ್ಥಿಕ ಹಿಂಜರಿತ ಕಾರಣ ಜನರ ಕೈಯಲ್ಲೂ ದುಡ್ಡಿಲ್ಲ. ಇನ್ನೊಂದು ಕಡೆ ಉದ್ಯೋಗ ಇಲ್ಲ. ಹೀಗಾಗಿ ಕಳ್ಳತನ ಹೆಚ್ಚಾಗುತ್ತಿದೆ. ಆದ್ದರಿಂದ ಅಡಿಕೆ ಕೊಯ್ಲು ಅವಧಿಯಲ್ಲಿ ಜನ ಎಚ್ಚರ…

Read More

ಅಕ್ಟೋಬರ್‌ನಲ್ಲಿ ಅರ್ಧ ತಿಂಗಳು ಬ್ಯಾಂಕ್ ಬಾಗಿಲು ಅತೀ ಹೆಚ್ಚು ಹಬ್ಬ ಬರೋದು ಈ ತಿಂಗಳಲ್ಲೇ..!ಬ್ಯಾಂಕ್ ಕೆಲಸಕ್ಕೆ ಈಗಲೇ ಪ್ಲಾನ್ ಮಾಡಿಕೊಳ್ಳಿರಾಜ್ಯಾದ್ಯಂತ 15 ದಿನ ಬೃಹತ್ ಆರೋಗ್ಯ ಅಭಿಯಾನ NAMMUR EXPRESS NEWSನವ ದೆಹಲಿ: ಅಕ್ಟೋಬರ್ ತಿಂಗಳು ಅರ್ಧಕ್ಕಿಂತ ಹೆಚ್ಚು ದಿನ ಬ್ಯಾಂಕ್ ಕ್ಲೋಸ್ ಆಗಿರಲಿದೆ.ಅಕ್ಟೋಬರ್ 2, 2022 ರಂದು ಮಹಾತ್ಮಾ ಗಾಂಧಿಯವರ ಜನ್ಮದಿನದ ಸಂದರ್ಭದಲ್ಲಿ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ, ಮಹಾಸಪ್ತಮಿ, ಭಾನುವಾರವೂ ಆಗಿರುತ್ತದೆ. ಹಾಗಾಗಿ ಬ್ಯಾಂಕ್ ಕೂಡ ಬಂದ್ ಆಗಲಿದೆ.ಮಹಾಷ್ಟಮಿಯ ಕಾರಣ ಅಕ್ಟೋಬರ್ 3, 2022 ರಂದು ಸೋಮವಾರ ಬ್ಯಾಂಕ್ ಮುಚ್ಚಿರುತ್ತದೆ.ಮಹಾನವಮಿಯ ಕಾರಣ ಅಕ್ಟೋಬರ್ 4, 2022 ರಂದು ಮಂಗಳವಾರ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ.ಅಕ್ಟೋಬರ್ 5, 2022 ರಂದು ವಿಜಯ ದಶಮಿಯಂದು ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ. ಭಾನುವಾರದಿಂದ ಬುಧವಾರದವರೆಗೆ ಸತತ ನಾಲ್ಕು ದಿನಗಳ ಕಾಲ ಬ್ಯಾಂಕ್ ಮುಚ್ಚಿರುತ್ತದೆ ಪೂಜೆಯ ಮೊದಲು ಎಲ್ಲಾ ಕೆಲಸಗಳನ್ನು ಮಾಡಿ ಇಲ್ಲದಿದ್ದರೆ ನೀವು ಬಹಳಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅಕ್ಟೋಬರ್ 8, 2022, ತಿಂಗಳ ಎರಡನೇ ಶನಿವಾರದಂದು ಬ್ಯಾಂಕ್ ಅನ್ನು ಮುಚ್ಚಲಾಗುತ್ತದೆ. 9ನೇ…

Read More

ತೀರ್ಥಹಳ್ಳಿ ಪಟ್ಟಣದ ಬಳಿ ಭೀಕರ ಆಕ್ಸಿಡೆಂಟ್! ಚರಂಡಿಗೆ ಬಿದ್ದ ಕಾರು: ಓರ್ವನಿಗೆ ಗಂಭೀರ ಗಾಯಮೇಲಿನ ಕುರುವಳ್ಳಿ ಬಳಿ ದನಕ್ಕೆ ಕಾರು ಡಿಕ್ಕಿ: ಎರಡು ದನಗಳ ಸಾವು..! NAMMUR EXPRESS NEWSತೀರ್ಥಹಳ್ಳಿ: ತೀರ್ಥಹಳ್ಳಿ ಪಟ್ಟಣ ಸಮೀಪದ ಬದನೆ ಹಿತ್ಲು ಬಳಿ ಶನಿವಾರ ಮತ್ತೊಂದು ಅಪಘಾತ ಸಂಭವಿಸಿದ್ದು ಕಾರೊಂದು ಚರಂಡಿಗೆ ಬಿದ್ದು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.ಶಿವಮೊಗ್ಗ ಕಡೆ ಕಾರು ಹೊರಟಿದ್ದು ಒಬ್ಬರಿಗೆ ಗಂಭೀರ ಗಾಯಗೊಂಡಿದ್ದು ಇಬ್ಬರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಮೊನ್ನೆ ಮೊನ್ನೆ ತಾನೇ ಕಾಲೇಜು ವಿದ್ಯಾರ್ಥಿಗಳ ಕಾರು ಕೂಡಾ ಅಪಘಾತವಾಗಿ ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದರು. ತೀರ್ಥಹಳ್ಳಿ ಮುಖಾಂತರ ಶಿವಮೊಗ್ಗಕ್ಕೆ ಹೋಗುತ್ತಿದ್ದವರು ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕುಂಬಾರದಡಿಗೆ ಬಳಿ ಎರಡು ದನ ಸಾವು!: ತೀರ್ಥಹಳ್ಳಿ ಪಟ್ಟಣದ ಮೇಲಿನ ಕುರುವಳ್ಳಿ ಸಮೀಪದಲ್ಲಿ ಸ್ಕಾರ್ಪಿಯೋ ವಾಹನವೊಂದು ರಸ್ತೆಯಲ್ಲಿ ಮಲಗಿದ್ದ ದನಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಎರಡು ದನಗಳು ಮೃತಪಟ್ಟ ಘಟನೆ ಶನಿವಾರ ರಾತ್ರಿ ಸಂಭವಿಸಿದೆ. ಘಟನೆಯಲ್ಲಿ ಕಾರು ಚಾಲಕನಿಗೂ ಸಣ್ಣ ಪುಟ್ಟ ಪೆಟ್ಟಾಗಿದೆ ಎಂದು ತಿಳಿದು ಬಂದಿದೆ.

Read More

‘ಗುರು ಶಿಷ್ಯರು’ ಸಿನಿಮಾ ಸೆ. 23ಕ್ಕೆ ಬಿಡುಗಡೆ NAMMUR EXPRESS NEWSಹುಬ್ಬಳ್ಳಿ: ನಟ ಶರಣ್ ಹಾಗೂ ನಟಿ ನಿಶ್ವಿಕಾ ನಾಯ್ಡು ಅಭಿನಯದ, ಜಡೇಶ್ ಕುಮಾರ್ ಕಂಪಿ ನಿರ್ದೇಶನದ ‘ಗುರು ಶಿಷ್ಯರು’ ಸಿನಿಮಾ ಸೆ. 23ರಂದು ರಾಜ್ಯದಾದ್ಯಂತ ಬಿಡುಗಡೆಯಾಗಲಿದೆ. ಸಿನಿಮಾ ಪ್ರಚಾರಕ್ಕಾಗಿ ಶುಕ್ರವಾರ ನಗರಕ್ಕೆ ಭೇಟಿ ನೀಡಿದ ಚಿತ್ರತಂಡ, ಸಿನಿಮಾ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡಿತು. ‘ಪಾಶ್ಚಾತ್ಯ ಆಟಗಳಿಂದಾಗಿ ನಮ್ಮ ನೆಲದ ಆಟಗಳು ಮಹತ್ವ ಕಳೆದುಕೊಂಡಿವೆ. ನಮ್ಮ ನೆಲದ ಖೋ ಖೋ ಆಟವನ್ನು ಕೇಂದ್ರವಾಗಿಟ್ಟುಕೊಂಡು ಭಾವನಾತ್ಮಕ ಎಳೆಗಳೊಂದಿಗೆ ಚಿತ್ರದ ಕಥೆಯನ್ನು ಹೆಣೆಯಲಾಗಿದೆ. ಈ ಸಿನಿಮಾದಿಂದ ನಮ್ಮ ನೆಲದ ಆಟಗಳ ಬಗ್ಗೆ ಒಂದಿಷ್ಟು ಜಾಗೃತಿ ಮೂಡಿದರೆ ನಮ್ಮ ಚಿತ್ರತಂಡದ ಶ್ರಮ ಸಾರ್ಥಕವಾಗಲಿದೆ’ ಎಂದು ನಾಯಕ ನಟ ಶರಣ್ ಹೇಳಿದರು. ‘ಮನೋಹರ ಎಂಬ ದೈಹಿಕ ಶಿಕ್ಷಣ ಶಿಕ್ಷಕನ ಪಾತ್ರದಲ್ಲಿ ಚಿತ್ರದಲ್ಲಿ ವಿಭಿನ್ನವಾಗಿ ಕಾಣಿಸಿಕೊಂಡಿದ್ದೇನೆ. ನನಗೆ ಪಾಠ ಹೇಳಿಕೊಟ್ಟ ಗುರುಗಳಿಂದಿಡಿದು ನಾನು ಕೆಲಸ ಮಾಡಿದ ನೂರಕ್ಕೂ ಹೆಚ್ಚು ಸಿನಿಮಾಗಳ ನಿರ್ದೇಶಕರು ಕೂಡ ನನಗೆ ಗುರುಗಳೇ. ಅಲ್ಲದೆ, 95ರಲ್ಲಿ…

Read More

ಎಲೆ ಚುಕ್ಕಿ ರೋಗ: ರೈತರಿಗೆ ಪರಿಹಾರಕ್ಕೆ ಸರ್ಕಾರದ ಗ್ರೀನ್ ಸಿಗ್ನಲ್-ರೈತರಿಗೆ ಉಚಿತ ಔಷಧಿ ಪೂರೈಕೆ ಹಾಗೂ ಸಲಕರಣೆ ಪಡೆಯಲು ಸಹಾಯಧನ: ಸಚಿವರ ಸಭೆಯಲ್ಲಿ ಒಪ್ಪಿಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಸೇರಿ ಅನೇಕರ ಚರ್ಚೆಶಾಂತವೇರಿ ಗೋಪಾಲಗೌಡ ಶತಮಾನೋತ್ಸವಕ್ಕೆ 1 ಕೋಟಿ NAMMUR EXPRESS NEWSಬೆಂಗಳೂರು: ಮಲೆನಾಡಿನಲ್ಲಿ ಅಡಿಕೆ ಬೆಳೆಗೆ ಎಲೆ ಚುಕ್ಕೆ ರೋಗ ಕಾಣಿಸಿಕೊಂಡ ಹಿನ್ನೆಲೆಯಲ್ಲಿ, ತೋಟಗಾರಿಕಾ ಸಚಿವರಾದ ಮುನಿರತ್ನ ಅವರೊಂದಿಗೆ ಸಭೆ ನಡೆಸಿ ಚರ್ಚಿಸಲಾಯಿತು.ಹಾನಿಗೊಳಗಾದ ರೈತರಿಗೆ ಆರ್ಥಿಕ ಪರಿಹಾರ, ರೋಗದ ಹತೋಟಿ, ಸುಧಾರಿತ ಧೋಟಿ ಪೂರೈಕೆ ಬಗ್ಗೆ ಚರ್ಚೆಯಾಯಿತು. ಬೆಳೆ ಹಾನಿ ಸಮೀಕ್ಷೆ ನಡೆಸಲು ಸಭೆಯಲ್ಲಿ ನಿರ್ಧರಿಸಲಾಯಿತು.ಈ ಸಮಸ್ಯೆ ಹತೋಟಿಗೆ ತರಲು ರೈತರಿಗೆ ಉಚಿತ ಔಷಧಿ ಹಾಗೂ ಇತರ ಸಹಾಯವನ್ನು ಸರ್ಕಾರದಿಂದ ನೀಡಲು ತೀರ್ಮಾನಿಸಲಾಗಿದೆ.ಮೀನುಗಾರಿಕಾ ಸಚಿವರಾದ ಅಂಗಾರ, ತೋಟಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿರಾಜೇಂದ್ರ ಕುಮಾರ್ ಕಟಾರಿಯ, ಇತರ ಅಧಿಕಾರಿಗಳು ಉಪಸ್ಥಿತರಿದ್ದರು.ಮಲೆನಾಡಿನಲ್ಲಿ ಎಲೆ ಚುಕ್ಕಿ ರೋಗದ ಬಗ್ಗೆ ಹೋರಾಟದ ಎಚ್ಚರಿಕೆ ಕೇಳಿ ಬಂದಿತ್ತು. ಜತೆಗೆ ರೈತರಲ್ಲಿ ಆತಂಕ ಎದುರಾಗಿತ್ತು. ಅಡಿಕೆ ಟಾಸ್ಕ್…

Read More

ಶೃಂಗೇರಿ, ಸಿಗಂದೂರಲ್ಲಿ ನವರಾತ್ರಿಗೆ ಸಜ್ಜು! ಸೆ.25 ರಿಂದ ಶಾರದಾ ಶರನ್ನವರಾತ್ರಿ ಮಹೋತ್ಸವ NAMMUR EXPRESS NEWSಶೃಂಗೇರಿ: ಶೃಂಗೇರಿ ಶಾರದಾ ಪೀಠದಲ್ಲಿ ಈ ಬಾರಿ ಶಾರದಾ ಶರನ್ನವರಾತ್ರಿಗೆ ಸಿದ್ಧತೆ ಜೋರಾಗಿದೆ.ಸೆಪ್ಟೆಂಬರ್ 25ರಿಂದ ಅಕ್ಟೋಬರ್ 06ರವರೆಗೆ ಈ ಬಾರಿ ನವರಾತ್ರಿ ನಡೆಯಲಿದೆ.ಶರನ್ನವರಾತ್ರಿಯ ದಿನಗಳಲ್ಲಿ ಜಗನ್ಮಾತೆ ಶಾರದೆಗೆ ವಿಶೇಷ ಪೂಜೆ ಪುನಸ್ಕಾರಗಳು, ಸೇವೆಗಳು ನಡೆಯಲಿದ್ದು ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.ಶ್ರೀ ಮಠದ ರಾಜಗೋಪುರ, ಆವರಣ ಹಾಗೂ ಪಟ್ಟಣದ ಪ್ರಮುಖ ರಸ್ತೆಗಳು ವಿದ್ಯುತ್ ದೀಪಾಲಂಕಾರದಿಂದ ನವರಾತ್ರಿಯ ದಿನಗಳಲ್ಲಿ ಕಂಗೊಳಿಸಲಿದ್ದು, ಉತ್ಸವ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ಸಲುವಾಗಿ ರಾಜ್ಯದ, ದೇಶದ ಅನೇಕ ಕಡೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಜನರು ಶೃಂಗೇರಿಗೆ ಆಗಮಿಸುತ್ತಾರೆ.ನವರಾತ್ರಿಯ ಈ ದಿನಗಳಂದು ಶಾಸ್ತ್ರೀಯ ಸಂಗೀತ, ಹಾಡುಗಾರಿಕೆ, ವಯೋಲಿನ್ ವಾದನ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳು ಸಹ ಶ್ರೀ ಮಠದ ಆವರಣದಲ್ಲಿ ನಡೆಯಲಿದೆ. ಸಿಗಂದೂರು ದೇವಸ್ಥಾನದಲ್ಲಿ ಉತ್ಸವ 9 ದಿನವೂ ವಿವಿಧ ಮಠದ ಸ್ವಾಮೀಜಿಗಳ ಆಗಮನ ಸಾಗರ ತಾಲ್ಲೂಕಿನ ಶ್ರೀ ಕ್ಷೇತ್ರ ಸಿಗಂದೂರು ಚೌಡೇಶ್ವರಿ ದೇವಸ್ಥಾನದಲ್ಲಿ ಸೆಪ್ಟೆಂಬರ್ 26ರಿಂದ…

Read More