Categories
ಮಲ್ನಾಡ್

ಕಮ್ಮರಡಿ ಬಳಿ ಮೋರಿಗೆ ಬಿದ್ದ ಕಾರು!

  • ವಿದ್ಯುತ್ ಕಂಬಕ್ಕೆ ಡಿಕ್ಕಿ: ಕೂದಲೆಳೆ ಅಂತರದಲ್ಲಿ ಪಾರು
  • ಚಾಲಕನ ಅಜಾಗೃತಿಯಿಂದ ಅಪಘಾತ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕು ಕಮ್ಮರಡಿ ಸಮೀಪದ ಅರೆಕಲ್ ಹತ್ತಿರ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಓರ್ವನಿಗೆ ಗಂಭೀರ ಗಾಯಗೊಂಡಿದ್ದಾನೆ.
ರಸ್ತೆ ತಿರುವಿನಲ್ಲಿ ಚಾಲಕನ ನಿರ್ಲಕ್ಷ್ಯದಿಂದ ಘಟನೆ ನಡೆದಿದ್ದು ಕಾರು ಮೋರಿಗೆ ಬಿದ್ದಿದೆ. ಬಳಿಕ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಕಾರು ಚಾಲಕನ ಅಜಾಗೃತಿಯ ಡ್ರೈವಿಂಗ್ ಕಾರಣ ಎನ್ನಲಾಗಿದೆ. ಗಾಯಗೊಂಡವರು ಶಿವಮೊಗ್ಗದವರು ಎಂದು ತಿಳಿದು ಬಂದಿದೆ.

ಮಲೆನಾಡಲ್ಲಿ ಮತ್ತೆ ಮಳೆ: ಅಡಿಕೆಗೆ ಕೊಳೆ!

ಮಲೆನಾಡಲ್ಲಿ ಮಳೆ ಅಬ್ಬರ ಮತ್ತೆ ಹೆಚ್ಚಿದೆ. ಒಂದು ವಾರದಿಂದ ಮಳೆ ಕಡಿಮೆಯಾಗಿ ಅಡಿಕೆ ಬೆಳೆಗಾರರಲ್ಲಿ ಸಂತಸ ಮೂಡಿತ್ತು. ಕೊಳೆಯಿಂದಾಗಿ ಅನೇಕರ ತೋಟದಲ್ಲಿ ಕಾಯಿಗಳು ಉದುರುತ್ತಿವೆ. ಈಗ ಮಳೆ ಹೆಚ್ಚಳದಿಂದ ಮತ್ತಷ್ಟು ಉದುರುವ ಸಾಧ್ಯತೆ ಇದೆ.

ನರಸಿಂಹರಾಜ ಪುರದಲ್ಲಿ ಕಳ್ಳರು ಅರೆಸ್ಟ್!

ನ.ರಾ.ಪುರ ತಾಲ್ಲೂಕು ಮುತ್ತಿನಕೊಪ್ಪ ಗ್ರಾಮದಲ್ಲಿ ಮನೆಯಲ್ಲಿ ಕಳ್ಳತನ ಮಾಡಿದ್ದ ಎರಡು ಜನ ಆರೋಪಿಗಳನ್ನು PSI ನ.ರಾ.ಪುರ ಪೊಲೀಸ್ ಠಾಣೆ ನೇತೃತ್ವದ ಪೊಲೀಸ್ ತಂಡ ದಸ್ತಗಿರಿ ಮಾಡಿ, ರೂ. 60,000 ರೂ ಬೆಲೆಯ ಚಿನ್ನಾಭರಣಗಳು, ಕೃತ್ಯಕ್ಕೆ ಬಳಸಿದ್ದ ಬೈಕ್ ವಶಪಡಿಸಿಕೊಳ್ಳಲಾಗಿದೆ. ಮನೆಗೆ ಯಾರೂ ಇಲ್ಲದ ವೇಳೆ ನುಗ್ಗಿದ ಕಳ್ಳರು ಕಳ್ಳತನ ಮಾಡಿದ್ದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.