Author: Nammur Express Admin

ಶಿವಮೊಗ್ಗ ಸುಬ್ಬಣ್ಣ ಹೃದಯಘಾತದಿಂದ ವಿಧಿವಶಸಾರ್ವಜನಿಕ ದರ್ಶನ ವ್ಯವಸ್ಥೆ: ಸಂಜೆ ಅಂತ್ಯಕ್ರಿಯೆಕನ್ನಡದ ಗಾಯನ ಲೋಕದ ಮಹಾ ಕಲಾವಿದ NAMMUR EXPRESS NEWSಬೆಂಗಳೂರು: ಕನ್ನಡದ ಮತ್ತೊಂದು ಸಂಗೀತದ ಕೊಂಡಿ, ಮಲೆನಾಡಿನ ಸಾಧಕ ಖ್ಯಾತ ಗಾಯಕ, ವಕೀಲ ಶಿವಮೊಗ್ಗ ಸುಬ್ಬಣ್ಣ(83) ಗುರುವಾರ ರಾತ್ರಿ ಹೃದಯಸ್ತಂಬನದಿಂದ ವಿಧಿವಶರಾಗಿದ್ದಾರೆ.ಶುಕ್ರವಾರ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಸಾರ್ವಜನಿಕ ದರ್ಶನ ವ್ಯವಸ್ಥೆ ಮಾಡಲಾಗಿದ್ದು, ಸಂಜೆ ಅಂತ್ಯಕ್ರಿಯೆ ನಡೆಯಲಿದೆ.ಶಿವಮೊಗ್ಗ ಸುಬ್ಬಣ್ಣನವರ ಮಗ ಶ್ರೀರಂಗ ಮಾತನಾಡಿ, ಗುರುವಾರ ಸಂಜೆ ಅರೋಗ್ಯ ಸರಿ ಇರಲಿಲ್ಲ. ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದೆವು. ಅಲ್ಲಿಂದ ಜಯದೇವಕ್ಕೆ ಶಿಫ್ಟ್ ಮಾಡುವಷ್ಟರಲ್ಲಿ ಹೃದಯಘಾತವಾಗಿದೆ. ಬೆಂಗಳೂರಿನಲ್ಲೇ ಶುಕ್ರವಾರ ಅಂತ್ಯಕ್ರಿಯೆ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಹಾಡಲ್ಲಿ ರಾಷ್ಟ್ರ ಪ್ರಶಸ್ತಿ ಪಡೆದ ಕನ್ನಡದ ಮೊದಲ ಹಾಡುಗಾರ… ಕಾಡು ಕುದುರೆ ಸಿನಿಮಾದ `ಕಾಡು ಕುದುರೆ ಓಡಿಬಂದಿತ್ತಾ’ ಹಾಡಿಗೆ 1979ರಲ್ಲಿ ಸುಬ್ಬಣ್ಣ ರಾಷ್ಟ್ರ ಪ್ರಶಸ್ತಿ ಪಡೆದಿದ್ದರು. ಇದು ಹಿನ್ನೆಲೆ ಗಾಯನದಲ್ಲಿ ಕನ್ನಡಕ್ಕೆ ಒಲಿದ ಮೊದಲ ರಾಷ್ಟ್ರಪ್ರಶಸ್ತಿಯಾಗಿದೆ.ರಜತ ಕಮಲ, ಶಿಶುನಾಳ ಷರಿಫ್ ಪ್ರಶಸ್ತಿ, ರಾಜ್ಯ ಪ್ರಶಸ್ತಿ, ಅಕಾಡೆಮಿ ಪ್ರಶಸ್ತಿ ಸೇರಿ ಹಲವು…

Read More

E-KYC ಮಾಡಿಸಲು ಆ.15ರಂದು ಕೊನೆ ದಿನ NAMMUR EXPRESS NEWSಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ ನಿಧಿ ಯೋಜನೆಯಡಿ ಕೇಂದ್ರ ಸರ್ಕಾರದಿಂದ ನೇರವಾಗಿ ವಾರ್ಷಿಕ ರೂ. 6000/-ಗಳ ಆರ್ಥಿಕ ನೆರವನ್ನು ಅರ್ಹ ರೈತರ ಬ್ಯಾಂಕ್‌ ಖಾತೆಗಳಿಗೆ ನೇರ ನಗದು ಮೂಲಕ ವರ್ಗಾವಣೆ (DBT) ಮಾಡಲಾಗುತ್ತದೆ. ಮುಂದಿನ ಕಂತಿನ ಆರ್ಥಿಕ ನೆರವು ಅರ್ಹ ರೈತರ ಬ್ಯಾಂಕ್‌ ಖಾತೆಗಳಿಗೆ ವರ್ಗಾವಣೆ ಆಗಬೇಕಾದರೆ e-KYC ಮಾಡಿಸುವುದು ಕಡ್ಡಾಯವಾಗಿರುತ್ತದೆ. ಇಲ್ಲಿಯವರೆಗೆ ಜಿಲ್ಲೆಯಲ್ಲಿ 2,56,811 ಫಲಾನುಭವಿಗಳ ಪೈಕಿ ಕೇವಲ 60,455 ರೈತರು e-KYC ಮಾಡಿಕೊಂಡಿರುತ್ತಾರೆ. ಇನ್ನೂ 1,96,356 ರೈತರು e-KYC ಮಾಡಿಸಿರುವುದಿಲ್ಲ. ಅದಕ್ಕಾಗಿ e-KYC ಮಾಡಿಸದ ಫಲಾನುಭವಿ ರೈತರು ದಿನಾಂಕ 15.08.2022ರ ಒಳಗೆ e-KYC ಮಾಡಿಸಲು ವಿನಂತಿಸಲಾಗಿದೆ. ಆಂಡ್ರಾಯ್ಡ್ ಸ್ಮಾರ್ಟ ಫೋನ್ ಬಳಸುವ ರೈತರುhttps://exlink.pmkisan.gov.in/aadharekyc.aspx ಈ ಲಿಂಕ್ ಅನ್ನು ಬಳಸಿ ಓಟಿಪಿ ಆಧಾರಿತ e-KYC ಮಾಡಿಸಲು ತಿಳಿಸಿದೆ ಅಥವಾ ಹತ್ತಿರದ ಸೇವಾ ಸಿಂಧು ಸೇವಾ ಕೇಂದ್ರಗಳಿಗೆ ಭೇಟಿ ನೀಡಿ ಬಯೋಮೆಟ್ರಿಕ್‌ ಆಧಾರಿತ e-KYC ಮಾಡಿಸಲು ತಿಳಿಸಿದೆ.

Read More

ಪ್ರತಿನಿತ್ಯ ಒಪಿಡಿಗೆ ಬರ್ತಿದ್ದಾರೆ ಸಾವಿರಾರು ರೋಗಿಗಳುಸರ್ಕಾರಿ ಆಸ್ಪತ್ರೆಗಳಲ್ಲಿ ಬೇಕು ಇನ್ನಷ್ಟು ಸೌಲಭ್ಯ NAMMUR EXPRESS NEWSಮಲೆನಾಡು: ಬಿಟ್ಟೂ ಬಿಡದೆ ಸುರಿಯುತ್ತಿರುವ ಮಳೆ, ಮಂಜಿನ ಜೊತೆ ಬೀಳ್ತಿರೋ ಚಳಿ ಎಲ್ಲವೂ ಹವಾಮಾನವನ್ನೇ ಕೆಡಿಸಿದ್ದು ಜನರು ಚಳಿ ಜ್ವರ ನೆಗಡಿ ಕೆಮ್ಮಿನಂತಹ ಸಾಂಕ್ರಾಮಿಕ ಕಾಯಿಲೆಯಿಂದ ಬಳಲಾರಂಭಿಸಿದ್ದಾರೆ.ಮಲೆನಾಡಿನ ಬಹುತೇಕ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಜ್ವರ, ಥಂಡಿ ಕೆಮ್ಮಿನ ರೋಗಿಗಳ ಸಂಖ್ಯೆ ಏರಿಕೆಯಾಗ ತೊಡಗಿದ್ದು, ಕಾಳಜಿ ವಹಿಸುವಂತೆ ವೈದ್ಯರುಗಳು ಮನವಿ ಮಾಡಿದ್ದಾರೆ. ಇನ್ನು ಆಸ್ಪತ್ರೆಗಳಲ್ಲಿ ಮೂಲ ಭೂತ ಸೌಕರ್ಯ ಇನ್ನು ಹೆಚ್ಚಿಸಬೇಕಿದೆ. ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ ಪುಟ್ಟ ಪುಟ್ಟ ಕ್ಲಿನಿಕ್ ಗಳಿಂದ ಆರಂಭಿಸಿ ಜಿಲ್ಲಾ, ತಾಲೂಕು ಆಸ್ಪತ್ರೆಗಳು ಪ್ರತಿನಿತ್ಯ ನೂರಾರು ರೋಗಿಗಳು ಜ್ವರದಿಂದ ಅಡ್ಮಿಟ್‌ ಆಗ್ತಿದ್ದಾರೆ. ಔಟ್ ಪೇಶೆಂಟ್ ಗಳಾಗಿ ಚಿಕಿತ್ಸೆ ಪಡೆಯೋರ ಸಂಖ್ಯೆ ಹೆಚ್ಚಾಗಿದೆ.ಮಕ್ಕಳಲ್ಲಿ ಜ್ವರದ ಪ್ರಮಾಣ ಹೆಚ್ಚುತ್ತಲೇ ಇದೆ. ನಗರದಲ್ಲಿ ಹಿಂದಿನ ವರ್ಷಕ್ಕಿಂತ ಅಧಿಕ ಪ್ರಮಾಣದಲ್ಲಿ ಡೆಂಗ್ಯೂ ಪ್ರಕರಣಗಳು ದಾಖಲಾಗಿದ್ದು, ಇದರೊಂದಿಗೆ ವೈರಲ್ ಫಿವರ್, ಟೈಫಾಯಿಡ್ ಸೇರಿದಂತೆ ವಿವಿಧ ಬಗೆಯ ಜ್ವರಗಳು…

Read More

ಬಾಕ್ಸ್ ಆಫೀಸಿನಲ್ಲಿ 11ನೇ ದಿನವೂ ಭರ್ಜರಿ ಕಲೆಕ್ಷನ್ಭಾರತದಲ್ಲಿ ಅತ್ಯುತ್ತಮ ಪ್ರದರ್ಶನಚಿತ್ರರಂಗದ ಮೇರು ನಟರ ಮೆಚ್ಚುಗೆ NAMMUR EXPRESS NEWSಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಚಿತ್ರ ಥಿಯೇಟರ್‌ಗೆ ಕಾಲಿಟ್ಟು 11 ದಿನ ಕಳೆದಿದ್ದು ರೋಣ ಚಿತ್ರವು ವಿಶ್ವಾದ್ಯಂತ 3.5 ಕೋಟಿ ರೂಪಾಯಿಗಳನ್ನು ಗಳಿಸಿದೆ ಎಂದು ಅಂದಾಜಿಸಲಾಗಿದೆ. ಚಿತ್ರಮಂದಿರಲ್ಲಿ ಚಿತ್ರ ನೋಡಲು ಅಭಿಮಾನಿಗಳು ಹರಿದು ಬರ್ತಿದ್ದು, ಚಿತ್ರ ಕಲೆಕ್ಷನ್ 200 ಕೋಟಿ ರೂಪಾಯಿ ದಾಟುವ ಸಾಧ್ಯತೆ ಇದೆ ಎನ್ನಲಾಗಿದೆ.ಅನುಪ್ ಭಂಡಾರಿ ನಿರ್ದೇಶನದ ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಜುಲೈ 28 ರಂದು ಚಿತ್ರಮಂದಿರಗಳಲ್ಲಿ ತೆರೆಕಂಡಿದ್ದು, ಭರ್ಜರಿ ಪ್ರದರ್ಶನ ಕಾಣಿದೆ. ಚಿತ್ರಕ್ಕೆ ವಿಮರ್ಶಕರು ಮತ್ತು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆಗಳು ವ್ಯಕ್ತವಾಗ್ತಿದೆ.ವಿಕ್ರಾಂತ್ ರೋಣ ಚಿತ್ರ 11ನೇ ದಿನ ವಿಶ್ವಾದ್ಯಂತ 3.5 ಕೋಟಿ ಗಳಿಸುವಲ್ಲಿ ಯಶಸ್ವಿಯಾಗಿದೆ. ಗಲ್ಲಾಪೆಟ್ಟಿಗೆಯಲ್ಲಿ ತನ್ನ ಓಟವನ್ನು ಮುಂದುವರೆಸಿದ್ದು, ಸದ್ಯದಲ್ಲೇ ಚಿತ್ರ 200 ಕೋಟಿ ಕ್ಲಬ್ ಸೇರಲಿದೆ ಎನ್ನಲಾಗಿದೆ.ಮೊದಲ ದಿನವೇ 20-22 ಕೋಟಿ ಕಲೆಕ್ಷನ್:ಬಾಕ್ಸ್ ಆಫೀಸ್ ಟ್ರೇಡ್ ವಿಶ್ಲೇಷಕರು ‘ವಿಕ್ರಾಂತ್ ರೋಣ’…

Read More

ಐಬಿಪಿಎಸ್ ಸಾಮಾನ್ಯ ಪ್ರವೇಶ ಪರೀಕ್ಷೆಗೆ ಅರ್ಜಿಅರ್ಜಿ ಸಲ್ಲಿಸಲು ಆಗಸ್ಟ್ 22 ಕೊನೆಯ ದಿನ NAMMUR EXPRESS NEWSಬೆಂಗಳೂರು: ಬ್ಯಾಂಕ್‌ ಸಿಬ್ಬಂದಿ ನೇಮಕಾತಿ ಸಂಸ್ಥೆ (ಐಬಿಪಿಎಸ್) 2023-24ನೇ ಸಾಲಿನ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ಪ್ರೊಬೆಷನರಿ ಆಫೀಸರ್ ಮ್ಯಾನೇಜ್‌ಮೆಂಟ್ ಟ್ರೇನಿ ಹುದ್ದೆ ಗಳ ನೇಮಕಕ್ಕೆ ಅಧಿಸೂಚನೆ ಹೊರಡಿಸಿದೆ. ಈ ಬಾರಿ 12 ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ಒಟ್ಟು 6342 ಹುದ್ದೆಗಳನ್ನು ಭರ್ತಿ ಮಾಡಲು ಐಬಿಪಿಎಸ್ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸು ತಿದ್ದು, ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಆಗಸ್ಟ್ 02ರಿಂದ ಅವಕಾಶ ನೀಡಲಾಗಿದೆ.ಕೆನರಾ ಬ್ಯಾಂಕ್ 2500ಹುದ್ದೆಗಳಿಗೆ, ಯುಕೋಬ್ಯಾಂಕ್ 2094 ಆಫೀಸರ್‌ಗಳನ್ನು ಐಬಿಪಿಎಸ್ ಮೂಲಕ ನೇಮಕ ಮಾಡಿಕೊಳ್ಳಲಿದೆ. ಅರ್ಜಿ ಸಲ್ಲಿಸಲು ಆಗಸ್ಟ್ 22 ಕೊನೆಯ ದಿನ. ಕಳೆದ ವರ್ಷ 4135 ಹುದ್ದೆಗಳಿಗೆ ನೇಮಕ ನಡೆಸಿರುವ ಐಬಿಪಿಎಸ್ ಈ ಬಾರಿ 6342 ಹುದ್ದೆಗಳಿಗೆ ಪರೀಕ್ಷೆ ನಡೆಸಲು ನಿರ್ಧರಿಸಿದೆ. ಈ ನೇಮಕ ಸಂಬಂಧ ಇದೇ ಅಕ್ಟೋಬರ್‌ನಲ್ಲಿ ಪೂರ್ವಭಾವಿ ಹಾಗೂ ಮುಖ್ಯ ಪರೀಕ್ಷೆ ನವೆಂಬರ್‌ನಲ್ಲಿ ನಡೆಸಲಾಗುವುದು ಎಂದು ಐಬಿಪಿಎಸ್ ತಿಳಿಸಿದೆ.

Read More

ತುಂಬಿ ಹರಿಯುವ ಹಳ್ಳಕ್ಕೆ ಬಿದ್ದು ಮಗು ಸಾವು! ಉಡುಪಿ ಜಿಲ್ಲೆ ಬೈಂದೂರಲ್ಲಿ ನಡೆದ ಘಟನೆರಾಜ್ಯದಲ್ಲಿ ಈ ಮಳೆಗಾಲದಲ್ಲಿ ಅತೀ ಹೆಚ್ಚು ಸಾವುಮಳೆಗಾಲ: ಮಕ್ಕಳ ಬಗ್ಗೆ ಹುಷಾರು ಹುಷಾರು..! NAMMUR EXPRESS NEWSಬೈಂದೂರು: ಬೈಂದೂರು ತಾಲೂಕಿನ ಕಾಲ್ತೋಡು ಗ್ರಾಮದ ಒಂದನೇ ವಾರ್ಡ್ ನಲ್ಲಿ ಸನ್ನಿಧಿ(7) ಶಾಲೆಯಿಂದ ಮನೆಗೆ ಬರುವಾಗ ಕಾಲು ಸಂಕದಿಂದ ತುಂಬಿ ಹರಿಯುತ್ತಿರುವ ಹಳ್ಳಕ್ಕೆ ಬಿದ್ದು ಮೃತಪಟ್ಟಿದ್ದಾಳೆ. ಇದೀಗ ಈ ಘಟನೆ ಇಡೀ ದೇಶದ ಗಮನ ಸೆಳೆದಿದೆ.ಸ.ಹಿ.ಪ್ರಾ ಶಾಲೆ ಚಪ್ಪರಿಕೆಯಲ್ಲಿ ಎರಡನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿನಿ ಸನ್ನಿಧಿ ಸಂಜೆ ಶಾಲೆ ಬಿಟ್ಟು ಮನೆಗೆ ಬರುವಾಗ ಬಿಜಮಕ್ಕಿ ಎಂಬಲ್ಲಿ ಕಾಲು ಸಂಕವಿದ್ದು ಈ ಕಾಲು ಸಂಕ ದಾಟುವಾಗ ಮಗು ಆಯಾತಪ್ಪಿ ಹಳ್ಳಕ್ಕೆ ಬಿದ್ದು ಸಾವನ್ನಪ್ಪಿದೆ. ಈ ಸಾವಿಗೆ ಹೋಣೆಗಾರರು ಯಾರು? ಚುನಾವಣೆ ಸಂದರ್ಭದಲ್ಲಿ ಆಶ್ವಾಸನೆ ಕೊಡುವ ರಾಜಕಾರಣಿಗಳ ಅಥವಾ ಕೋಟಿ ಕೋಟಿ ಹಣ ಮಾಡುವ ಕೆಲವು ಭ್ರಷ್ಟ ಅಧಿಕಾರಿಗಳ ವಿರುದ್ಧ ಜನ ಇದೀಗ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜನರ ಸಂಕಷ್ಟ ಯಾರಿಗೆ ಬೇಕು..? 2018ರಲ್ಲಿ…

Read More

ಭಾರತಕ್ಕೆ 4ನೇ ಸ್ಥಾನ: ಮೊದಲ ಪಟ್ಟ ಬಿಡದ ಆಸ್ಟ್ರೇಲಿಯ22 ಚಿನ್ನ, 16 ಬೆಳ್ಳಿ, 23 ಕಂಚಿನ ಪದಕ ಸಾಧನೆ NAMMUR EXPRESS NEWSನವ ದೆಹಲಿ: ಕಾಮನ್‌ವೆಲ್ತ್ ಪಂದ್ಯಾಟ ಮುಗಿಸಿದ ಭಾರತ ಪದಕ ಪಟ್ಟಿಯಲ್ಲಿ 4ನೇ ಸ್ಥಾನ ಪಡೆದಿದೆ.ಕೊನೆಯ ದಿನವೂ ಭಾರತದ ಕಮಾಲ್ ಮಾಡಿದ್ದು 4 ಚಿನ್ನ, 1 ಬೆಳ್ಳಿ, 1 ಕಂಚು ಗೆದ್ದಿದ್ದು ಒಟ್ಟಾರೆ 22 ಚಿನ್ನ, 16 ಬೆಳ್ಳಿ, 23 ಕಂಚಿನ ಪದಕಗಳ ಜೊತೆ ಒಟ್ಟು 61 ಪದಕಗಳ ಜೊತೆ ನಾಲ್ಕನೇ ಸ್ಥಾನ ಪಡೆದು ಭಾರತಕ್ಕೆ ಮರಳಿದೆ.ಜುಲೈ 28ರಂದು ಪ್ರಾರಂಭವಾದ 18ನೇ ಕಾಮನ್‌ವೆಲ್ತ್ ಗೇಮ್ಸ್ ಸೋಮವಾರ ಮುಕ್ತಾಯವಾಗಿದ್ದು, 178 ಪದಕಗಳೊಂದಿಗೆ ಆಸ್ಟ್ರೇಲಿಯಾ ಪ್ರಥಮ ಸ್ಥಾನ ಪಡೆದಿದೆ. 175 ಪದಕಗಳೊಂದಿಗೆ ಇಂಗ್ಲೆಂಡ್ ದ್ವಿತೀಯ ಹಾಗೂ 92 ಪದಕಗಳೊಂದಿಗೆ ಕೆನಡಾ ತೃತೀಯ ಸ್ಥಾನ ಪಡೆದಿದೆ. ಆಸ್ಟ್ರೇಲಿಯಾ. ಇಂಗ್ಲೆಂಡ್, ಕೆನಡಾ ಕ್ರಮವಾ 67, 57, 26 ಚಿನ್ನದ ಪದಕಗಳನ್ನು ಪಡೆದಿವೆ. ನಾಲ್ಕ ಸ್ಥಾನ ಪಡೆದಿರುವ ಭಾರತ 22 ಚಿನ್ನ, 16 ಬೆಳ್ಳಿ ಹಾಗ 23…

Read More

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮದೇಗುಲ, ಸ್ಮಾರಕಗಳಿಗೂ ಬಂತು ಹೊಸ ಕಳೆ NAMMUR EXPRESS NEWSಹೊಸಪೇಟೆ: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಹೊಸಪೇಟೆ ತಾಲ್ಲೂಕಿನ ವಿಶ್ವವಿಖ್ಯಾತ ಹಂಪಿಯ ಐತಿಹಾಸಿಕ ಸ್ಮಾರಕಗಳು ತ್ರಿವರ್ಣ ಬೆಳಕಿನ ಚಿತ್ತಾರದಲ್ಲಿ ಕಂಗೊಳಿಸಲಾರಂಭಿಸಿವೆ.ಹಂಪಿಯ ವಿರೂಪಾಕ್ಷ ದೇವಸ್ಥಾನ, ವಿಜಯ ವಿಠಲ ದೇಗುಲದ ಪ್ರಾಂಗಣದಲ್ಲಿರುವ ಕಲ್ಲಿನ ತೇರು, ಸಂಗೀತವನ್ನು ಹೊರಹೊಮ್ಮಿಸುವ ಸಪ್ತಸ್ವರ ಮಂಟಪ, ಕಡಲೆ ಕಾಳು ಗಣಪ, ಸಾಸಿವೆ ಕಾಳು ಗಣಪ, ಸೇರಿದಂತೆ ನಾನಾ ಸ್ಮಾರಕಗಳಿಗೆ ತ್ರಿವರ್ಣದ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ.ಆಜಾದಿ ಕಾ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಆ.5 ರಿಂದ 15ರವರೆಗೆ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ ವ್ಯಾಪ್ತಿಯ ಐತಿಹಾಸಿಕ ದೇಗುಲ, ಸ್ಮಾರಕ ಹಾಗೂ ವಸ್ತು ಸಂಗ್ರಹಾಲಯಕ್ಕೆ ಸಾರ್ವಜನಿಕರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ. ಇದರ ಬೆನ್ನಲ್ಲೇ ಭಾನುವಾರ ಹಂಪಿಯ ಐತಿಹಾಸಿಕ ಸ್ಮಾರಕಗಳಿಗೆ ಕೇಸರಿ, ಬಿಳಿ ಹಾಗೂ ಹಸಿರು ಬಣ್ಣಗಳ ವಿದ್ಯುತ್ ದೀಪದ ಬೆಳಕಿನ ವ್ಯವಸ್ಥೆ ಮಾಡಿರುವುದು ಮೆರಗು ತಂದಿದೆ. ಶಿವಮೊಗ್ಗದಲ್ಲಿ ಹರ್ ಘರ್ ತಿರಂಗಾ ಅಭಿಯಾನ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಹರ್…

Read More

ಕೊಲೆ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 6ಕ್ಕೆ ಏರಿಕೆಸಕಲೇಶಪುರಪುರದಲ್ಲಿ ಆನೆ ತುಳಿತಕ್ಕೆ ವ್ಯಕ್ತಿ ಬಲಿ NAMMUR EXPRESS NEWSಮಂಗಳೂರು: ದಕ್ಷಿಣಕನ್ನಡ ಜಿಲ್ಲೆಯ ಬಿಜೆಪಿ ಯುವಮೋರ್ಚಾ ಕಾರ್ಯಕಾರಿ ಸದಸ್ಯ ಬೆಳ್ಳಾರೆ ಪ್ರವೀಣ್ ನೆಟ್ಟಾರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇನ್ನಿಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.ದಕ್ಷಿಣಕನ್ನಡ ಜಿಲ್ಲೆಯ ಸುಳ್ಯದ ನಾವೂರು ನಿವಾಸಿ ಅಬಿದ್ (22), ಬೆಳ್ಳಾರೆ ಗೌರಿಹೊಳೆ ನಿವಾಸಿ ನೌಫಲ (28) ಬಂಧಿತ ಆರೋಪಿಗಳು. ಈ ಮೂಲಕ ಪ್ರವೀಣ ನೆಟ್ಟಾರ್ ಕೊಲೆಗೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾಗಿರುವ ಆರೋಪಿಗಳ ಸಂಖ್ಯೆ ಆರಕ್ಕೆ ಏರಿದೆ.ಆರೋಪಿಗಳ ಬಂಧನಕ್ಕೆ ಸಂಬಂಧಿಸಿದಂತೆ ದಕ್ಷಿಣಕನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಸೋನಾವಣೆ ಮಾಹಿತಿ ನೀಡಿದ್ದಾರೆ. ಹತ್ಯೆಯ ದಾಳಿಕೋರರನ್ನು ಗುರುತಿಸಿರುವ ಪೊಲೀಸರು, ಹತ್ಯೆ ನಡೆಸಿದವರಿಗೆ ಶೋಧ ಮುಂದುವರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.ಕಾಡಾನೆಗೆ ಬಲಿ: ಕಾಡಾನೆ ದಾಳಿಗೆ ವೃದ್ದನೋರ್ವ ದಾರುಣವಾಗಿ ಮೃತಪಟ್ಟಿರುವ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಕಲ್ಲತೋಟ ಗ್ರಾಮದಲ್ಲಿ ನಡೆದಿದೆ.ರಾಜದೀಪ ಎಂಬುವವರ ಕಾಫಿ ತೋಟದಲ್ಲಿ ರೈಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ 70 ವರ್ಷ ಪ್ರಾಯದ ಕೇರಳ…

Read More

ಕಾರು, ಬೈಕ್ ನಡುವೆ ಅಪಘಾತದಿಂದ ಘಟನೆ NAMMUR EXPRESS NEWSತೀರ್ಥಹಳ್ಳಿ : ತೀರ್ಥಹಳ್ಳಿ ತಾಲ್ಲೂಕಿನ ಕಟ್ಟೆಹಕ್ಲು ಸಮೀಪ ನಗರವಳ್ಳಿ ಬಳಿ ಶನಿವಾರ ಕಾರು ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿ ಕಟ್ಟೆಹಕ್ಕಲು ಶಾಲೆಯ ಮುಖ್ಯ ಶಿಕ್ಷಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಕಟ್ಟೆಹಕ್ಲು ಹಿರಿಯ ಪ್ರಾಥಮಿಕ ಶಾಲೆಯ ಹೆಡ್ ಮಾಸ್ಟರ್ ವೆಂಕಟೇಶ್ ಮೂಲತಃ ಕೊಪ್ಪ ತಾಲೂಕಿನ ಹುಕ್ಕಳಿಕೆಯವರು. ಶಾಲೆ ಮುಗಿಸಿ ಬೈಕ್‌ನಲ್ಲಿ ಬರುತ್ತಿದ್ದಾಗ ಕಾರು ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ವೆಂಕಟೇಶ್‌ರವರು ಸಾವನ್ನಪ್ಪಿದ್ದಾ

Read More