Author: Nammur Express Admin

90 ಕೆಜಿ ತೂಕದ ಟಗರುಮೂಡಲಗಿ ತಾಲ್ಲೂಕಿನ ಧರ್ಮಟ್ಟಿ ಗ್ರಾಮದಲ್ಲಿ ನಡೆದ ಘಟನೆ NAMMUR EXPRESS NEWSಮೂಡಲಗಿ : ಮೂಡಲಗಿ ತಾಲ್ಲೂಕಿನ ಧರ್ಮಟ್ಟಿ ಗ್ರಾಮದ ಕುರಿಗಾಯಿಯೊಬ್ಬರಿಂದ ಮೂರು ವರ್ಷದ ಟಗರನ್ನು ಒಂದು ಲಕ್ಷ ಐವತ್ತೈದು ಸಾವಿರ ರೂ.ಗಳಿಗೆ ಗದ್ದನಕೇರಿ ಗ್ರಾಮದ ವ್ಯಕ್ತಿಯೋರ್ವ ಖರೀದಿಸುವ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ.ಧರ್ಮಟ್ಟಿ ಗ್ರಾಮದ ಕುರಿಗಾಹಿ ಲಕ್ಷ್ಮಣ ಸಿದ್ಧಿಂಗಪ್ಪ ಕೊರಕಪೂಜೇರ ಎಂಬುವರಿಂದ ಗದ್ದನಕೇರಿ ಗ್ರಾಮದ ಯಮನಪ್ಪ ಸಂಗೊಂದಿಯವರು ಖರೀದಿ ಮಾಡಿದರು.ಮೂರು ವರ್ಷದ ಡೆಕ್ಕನಿ ತಳಿಯ 90 ಕೆಜಿ ತೂಕದ ಈ ಟಗರಿಗೆ ಮಾಲೀಕ, ಪ್ರತಿದಿನ 2 ಲೀಟರ್ ಹಾಲು, 5 ತತ್ತಿ, ಚಪಾತಿ, ಗೋಧಿ, ಕೆಂಪಹುರಳಿ, ಕಾರೀಕ, ಶೇಂಗಾ ಜೊತೆಗೆ ಒಣ ಹಾಗೂ ಹಸಿ ಮೇವು ನೀಡುತ್ತಿದ್ದರು. ಜಾತ್ರೆ ಹಬ್ಬಗಳಲ್ಲಿ ಜರುಗುವ ಟಗರಿನ ಸ್ಪರ್ಧೆಗಳಲ್ಲಿ ಭಾಗವಹಿಸುವ ಉದ್ದೇಶದಿಂದ ಟಗರುಗಳನ್ನು ಮೇಯಿಸುವದು ಧರ್ಮಟ್ಟಿ ಗ್ರಾಮದಲ್ಲಿ ಸಾಮಾನ್ಯವಾಗಿದೆ.ಈ ಟಗರು ನಾಗನೂರ, ಚಿಗಡೊಳ್ಳಿ, ಕುರಬಗಟ್ಟಿ, ಬಿಸನಕೊಪ್ಪ, ಮುಸಗುಪ್ಪಿ ಗ್ರಾಮಗಳ ಕಾಳಗದಲ್ಲಿ ಜಯಶಾಲಿಯಾಗಿದೆ.

Read More

ವೇದಿಕೆ ಬಳಿ ಇದ್ದ ಮಾಜಿ ಸಚಿವ ಕಿಮ್ಮನೆ ರತ್ನಾಕರ್ಡಿಕೆಶಿ ಜತೆ ಇದ್ದ ಡಾ.ಆರ್.ಎಂ.ಮಂಜುನಾಥ ಗೌಡತೀರ್ಥಹಳ್ಳಿ ಕ್ಷೇತ್ರದಿಂದ ನೂರಾರು ವಾಹನದಲ್ಲಿ ಪಯಣ NAMMUR EXPRESS NEWSಸಿದ್ದರಾಮೋತ್ಸವದಲ್ಲಿ ತೀರ್ಥಹಳ್ಳಿ ಕ್ಷೇತ್ರದ ಇಬ್ಬರು ನಾಯಕರು ಗಮನ ಸೆಳೆದರು.ಒಂದು ಕಡೆ ಕಿಮ್ಮನೆ ರತ್ನಾಕರ್ ಅವರು ಆಯೋಜಕ ಸಮಿತಿಯಲ್ಲಿ ಕಾಣಿಸಿಕೊಂಡರೆ ಡಾ.ಆರ್ ಎಂ ಮಂಜುನಾಥ ಗೌಡ ಅವರು ಡಿಕೆಶಿ ಜತೆ ಕಾಣಿಸಿಕೊಂಡರು. ಮುರುಘ ಮಠದಲ್ಲಿ ಡಿಕೆಶಿ ಅವರು ಮಂಜುನಾಥ ಗೌಡ ಅವರನ್ನು ರಾಹುಲ್ ಗಾಂಧಿ ಅವರಿಗೆ ವೆರಿ ಇಂಪಾರ್ಟೆಟ್ಸ್ ಲೀಡರ್ ಎಂದು ಪರಿಚಯ ಮಾಡಿಕೊಟ್ಟರು. ಇನ್ನು ತೀರ್ಥಹಳ್ಳಿಯಿಂದಲೂ ನೂರಾರು ಮಂದಿ ವಾಹನಗಳಲ್ಲಿ ದಾವಣಗೆರೆಗೆ ತೆರಳಿದ್ದರು.ತೀರ್ಥಹಳ್ಳಿ ಪಟ್ಟಣ ಪಂಚಾಯತ್ ಸದಸ್ಯರು, ಯುವ ನಾಯಕರು, ಪ್ರಮುಖ ನಾಯಕರು ಭಾಗಿಯಾಗಿದ್ದರು.

Read More

ಗಣೇಶೋತ್ಸವ ಸಮಿತಿ ಅಧ್ಯಕ್ಷರಾಗಿ ಅಣ್ಣಪ್ಪ ಆಯ್ಕೆ ತೀರ್ಥಹಳ್ಳಿ ತಾಲೂಕು ಮೇಲಿನ ಕುರುವಳ್ಳಿ ಶ್ರೀ ವಿದ್ಯಾಗಣಪತಿ ಸೇವ ಸಮಿತಿ ವತಿಯಿಂದ 25 ವರ್ಷದ ಬೆಳ್ಳಿಹಬ್ಬ ಸಂಭ್ರಮಾಚರಣೆ ನಡೆಯಲಿದ್ದು ಅದ್ದೂರಿ ಗಣೇಶೋತ್ಸವಕ್ಕೆ ಸಾರಥಿಯಾಗಿ ಅಣ್ಣಪ್ಪ ಮೇಲಿನ ಕುರುವಳ್ಳಿ ಆಯ್ಕೆಯಾಗಿದ್ದಾರೆ.ಮೊಟ್ಟ ಮೊದಲ ಬಾರಿಗೆ ಮೇಲಿನ ಕುರುವಳ್ಳಿಯಲ್ಲಿ 9 ದಿನಗಳ ಗಣೇಶೋತ್ಸವವನ್ನು ಗ್ರಾಮ ಪಂಚಾಯತ್ ಸದಸ್ಯರಾದ ಅಣ್ಣಪ್ಪ ಮೇಲಿನ ಕುರುವಳ್ಳಿ ಅಧ್ಯಕ್ಷತೆಯಲ್ಲಿ ಅದ್ದೂರಿಯಾಗಿ ಆಚರಿಸಲಾಗುತ್ತಿದೆ. ಶುಭಕೋರುವವರು ಪೂರ್ಣೇಶ್ ಪೂಜಾರಿ ಮೇಲಿನ ಕುರುವಳ್ಳಿಪ್ರಮೋದ್ ಪೂಜಾರಿ ಕುರುವಳ್ಳಿಪ್ರವೀಣ್ ಮಂಡಗದ್ದೆ

Read More

ಸಂತೆ ನಡೆದ ಬಳಿಕ ಕೊಳೆತು ನಾರುವ ತರಕಾರಿ, ಕಸ ಕಡ್ಡಿಸಾರ್ವಜನಿಕರಲ್ಲಿ ಕಾಯಿಲೆ ಹರಡುವ ಭೀತಿ: ಪಟ್ಟಣ ಪಂಚಾಯತ್ ನಿರ್ಲಕ್ಷ್ಯ NAMMUR EXPRESS NEWSತೀರ್ಥಹಳ್ಳಿ: ತೀರ್ಥಹಳ್ಳಿಯ ಪಟ್ಟಣ ಪಂಚಾಯಿತಿಯ ನಿರ್ಲಕ್ಷ್ಯ ದಿಂದ ತರಕಾರಿ ಮಾರುಕಟ್ಟೆಯಲ್ಲಿ ಸೋಮವಾರ ಸಂತೆ ನಡೆದ ಬಳಿಕ ಅ ಪ್ರದೇಶದಲ್ಲಿ ಕೊಳೆತುನಾರುವ ತರಕಾರಿಗಳು ಹಾಗೂ ಎಲ್ಲಿ ಬೇಕಂದರೆ ಅಲ್ಲಿ ಕಸ ಕಡ್ಡಿಗಳು ಗೋಣಿಚೀಲಗಳು ಬಿದ್ದಿರುವುದು ಇದೀಗ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.ಸೋಮವಾರ ಸಂತೆಗೆ ತೀರ್ಥಹಳ್ಳಿ ತಾಲೂಕಿನ ಮೂಲೆ ಮೂಲೆಯಿಂದ ಜನ ಬರುತ್ತಾರೆ. ಆದರೆ ಸಂತೆ ಮಾರ್ಕೆಟ್ ಕೊಳಕು ಇದೀಗ ಅನೇಕರ ಅಸಹನೆಗೆ ಕಾರಣವಾಗಿದೆ. ಸಂತೆ ಮಾರ್ಕೆಟ್ ಕಸ ವಿಲೇವಾರಿ ಸರಿಯಾಗಿ ಮಾಡದೇ ಇರುವುದು, ಪಟ್ಟಣ ಪಂಚಾಯಿತಿ ಅಧಿಕಾರಿಗಳು, ಆಡಳಿತ ವರ್ಗದವರು ಸದಸ್ಯರು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.ಜನರು ಓಡಾಡುವ ಪ್ರದೇಶದಲ್ಲಿ ಕೊಳೆತು ನಾರುವ ತರಕಾರಿಗಳು ಹಾಗೂ ಕಸ ಕಡ್ಡಿ ಇರುವುದರಿಂದ ಜನರಿಗೆ ಕಾಯಿಲೆಗಳು ಹರಡುವ ಭೀತಿ ಹೆಚ್ಚಾಗಿದೆ. ಈ ಮಾರ್ಕೆಟ್ ಪ್ರದೇಶವನ್ನು ಸ್ವಚ್ಛಗೊಳಿಸಿ ಜನರ ಆರೋಗ್ಯವನ್ನು ಕಾಪಾಡುವಂತ ಕರ್ತವ್ಯ ಪಟ್ಟಣ…

Read More

ತೀರ್ಥಹಳ್ಳಿಯ ಪ್ರತಿಷ್ಠಿತ ಆಭರಣ ಮಳಿಗೆ ತೀರ್ಥಹಳ್ಳಿಯ ಪ್ರತಿಷ್ಠಿತ ಜ್ಯೂವೆಲ್ಲರ್ಸ್ ಗಾಯತ್ರಿಜ್ಯೂವೆಲ್ಲರ್ಸ್ನಲ್ಲಿ ಕೆಲಸಕ್ಕೆ ಹುಡುಗರು ಮತ್ತು ಹುಡುಗಿಯರು ಬೇಕಾಗಿದ್ದಾರೆ. ಆಕರ್ಷಕವಾದ ಸ್ಯಾಲರಿ ಕೊಡಲಾಗುವುದು ಆಸಕ್ತಿ ಇರುವವರು ತಮ್ಮ ಬಯೋಡೇಟಾದೊಂದಿಗೆ ಮಳಿಗೆಗೆ ಬಂದು ಸಂಪರ್ಕಿಸಿ ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿಗಾಯತ್ರಿ ಜ್ಯೂವೆಲ್ಲರ್ಸ್, ತೀರ್ಥಹಳ್ಳಿ 94807259179482384131944801457208181-22992008181-228820

Read More

ಪ್ರಾಂಶುಪಾಲರಾಗಿದ್ದ ಪ್ರೊ.ನಟರಾಜ್ ನಿವೃತ್ತಿ NAMMUR EXPRESS NEWSತೀರ್ಥಹಳ್ಳಿ: ತೀರ್ಥಹಳ್ಳಿಯ ತುಂಗಾ ಮಹಾವಿದ್ಯಾಲಯದ ನೂತನ ಪ್ರಾಂಶುಪಾಲರಾಗಿ ಮೇಜರ್ ಡಾ.ಕೆ.ಅಂಜನಪ್ಪ ಆಗಸ್ಟ್‌1 ರಂದು ಅಧಿಕಾರ ಸ್ವೀಕರಿಸಿದರು. ತುಂಗಾ ಮಹಾವಿದ್ಯಾಲಯದಲ್ಲಿ ಉಪನ್ಯಾಸಕರಾಗಿ ಸುದೀರ್ಘ ಕಾಲ ಸೇವೆ ಸಲ್ಲಿಸಿರುವ ಅವರು ಎನ್‌ಸಿಸಿ ಅಧಿಕಾರಿಯಾಗಿಯೂ ಕಾರ್ಯನಿರ್ವಹಿಸಿದ್ದಾರೆ. ನೂತನ ಪ್ರಾಂಶುಪಾಲರನ್ನು ಕಾಲೇಜಿನ ಆಡಳಿತ ಮಂಡಳಿ, ಸಿಬ್ಬಂದಿ ವರ್ಗ, ವಿದ್ಯಾರ್ಥಿವೃಂದ ಅಭಿನಂದಿಸಿ ಶುಭ ಹಾರೈಸಿದ್ದಾರೆ.ನಟರಾಜ್ ಅರಳಸುರಳಿ ನಿವೃತ್ತಿ: ತುಂಗಾ ಮಹಾವಿದ್ಯಾಲಯದಲ್ಲಿ ಇಂಗ್ಲೀಷ್ ಉಪನ್ಯಾಸಕರಾಗಿ, ಸಂಸ್ಥೆಯ ಪ್ರಾಂಶುಪಾಲ ರಾಗಿ ಅನನ್ಯ ಸೇವೆ ಸಲ್ಲಿಸಿ ಸಾವಿರಾರು ವಿದ್ಯಾರ್ಥಿಗಳ ನೆಚ್ಚಿನ ಗುರುಗಳಾಗಿದ್ದ ನಟರಾಜ್ ಅರಳಸುರಳಿ ಜುಲೈ 30ರಂದು ವಯೋ ನಿವೃತ್ತಿ ಹೊಂದಿದರು. ಕಾಲೇಜು ಆಡಳಿತ ಮಂಡಳಿ-ಸಿಬ್ಬಂದಿವರ್ಗ ಶ್ರೀಮತಿ ಶ್ರೀ ನಟರಾಕ್ ಅವರನ್ನು ಸನ್ಮಾನಿಸಿ ಆತ್ಮೀಯ ಬೀಳ್ಕೊಡುಗೆ ನೀಡಿದರು.

Read More

ಬಳ್ಳಾರಿ ಎಸ್ಪಿಯಾಗಿ ಪದೋನ್ನತಿತೀರ್ಥಹಳ್ಳಿ ತಾಲೂಕಿಗೆ ಮತ್ತೊಂದು ಗರಿ NAMMUR EXPRESS NEWSಎಂ.ಎ ನಟರಾಜ್ ಮಂಗಳ ಇವರು ಡಿವೈಎಸ್ಪಿ ಹುದ್ದೆಯಿಂದ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾಗಿ ಪದನ್ನೋತಿ ಹೊಂದಿದ್ದಾರೆ.ಮೂಲತಃ ತೀರ್ಥಹಳ್ಳಿ ತಾಲೂಕಿನ ಕೋಣಂದೂರು ಸಮೀಪದ ಮಂಗಳ ಗ್ರಾಮದ ಶ್ರೀ ಅಣ್ಣಪ್ಪ ಗೌಡ ಮತ್ತು ಶ್ರೀಮತಿ ಕಮಲಮ್ಮ ಅವರ ಸುಪುತ್ರ ಎಂಎ ನಟರಾಜ್ ಅವರು ಪಿಎಸ್ಐ ಮೂಲಕ ಪೋಲಿಸ್ ಇಲಾಖೆಗೆ ಸೇರಿ ಶೃಂಗೇರಿ,ಸಾಗರ,ದಾವಣಗೆರೆ ಚಿತ್ರದುರ್ಗ,ಬೆಂಗಳೂರು ಸುರತ್ಕಲ್, ಮಂಗಳೂರಿನಲ್ಲಿ ಪೋಲಿಸ್ ಇಲಾಖೆಯ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿ ಸಾರ್ವಜನಿಕ ಮೆಚ್ಚುಗೆಯ ಪಾತ್ರರಾಗಿದ್ದು, ಇಲಾಖೆಯ ಪ್ರಶಂಸೆಗೂ ಕಾರಣರಾಗಿದ್ದಾರೆಎಂ ಎ ನಟರಾಜ್ ಅವರು ಶೃಂಗೇರಿ ಸಮೀಪದ ಮೆಣಸಿನಹಾಡ್ಯದಲ್ಲಿ ನಡೆದ ನಕ್ಸಲ್ ನಾಯಕ ಸಾಕೆತ್ ರಾಜನ್ ಎನ್ಕೌಂಟರ್ ಮಾಡಿದ ಒತಂಡದ ಮುಖ್ಯಸ್ಥರಾಗಿದ್ದರು ಎನ್ನುವುದು ಸಹ ತೀರ್ಥಹಳ್ಳಿ ಜನತೆಗೆ ಅತ್ಯಂತ ಪ್ರಶಂಸನೀಯ ವಿಚಾರ.ಪ್ರಸ್ತುತ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾಗಿ ಬಳ್ಳಾರಿ ಜಿಲ್ಲೆಗೆ ನಿಯೋಜನೆಗೊಂಡಿದ್ದಾರೆ.

Read More

NAMMUR EXPRESS NEWSಹೆಬ್ರಿ: ಕಠಿಣ ಪರಿಶ್ರಮ, ಸಮಯಪಾಲನೆ ಹಾಗೂ ಏಕಾಗ್ರತೆಯಿಂದ ವಿಷಯ ಮನನ ಮಾಡಿದಾಗ ವಿದ್ಯಾರ್ಥಿಗಳು ಉತ್ತಮ ಅಂಕ ಪಡೆಯಲು ಸಾಧ್ಯ ಬಂಟಕಲ್ಲು ಶ್ರೀ ಮಧ್ವ ವಾದಿರಾಜ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್‌ಮೆಂಟ್ ಉಪನ್ಯಾಸಕ ಡಾ. ಸಿ.ಕೆ. ಮಂಜುನಾಥ್ ಹೇಳಿದರು.ಹೆಬ್ರಿಯ ಎಸ್‌ಆರ್ ಪದವಿಪೂರ್ವ ಕಾಲೇಜಿನಲ್ಲಿ ನೀಟ್, ಸಿಇಟಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ನಡೆದ ಮಾರ್ಗದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಎಸ್‌ಆರ್ ಸಮೂಹ ಶಿಕ್ಷಣ ಸಂಸ್ಥೆಯಅಧ್ಯಕ್ಷ ಎಚ್‌. ನಾಗರಾಜ ಶೆಟ್ಟಿ ಅಧ್ಯಕ್ಷತೆ ಮಾತನಾಡಿ ‘ವಿದ್ಯಾರ್ಥಿಗಳ ಕೌಶಲ, ಪ್ರತಿಭೆಯನ್ನು ಗುರುತಿಸಿ ಹೊರ ತೆಗೆಯುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು. ಹೆತ್ತವರ ತ್ಯಾಗವನ್ನು ವಿದ್ಯಾರ್ಥಿಗಳು ಗಮನದಲ್ಲಿಟ್ಟುಕೊಂಡು ಓದಿನತ್ತ ಹೆಚ್ಚು ಗಮನ ನೀಡಬೇಕು. ವಿದ್ಯಾರ್ಥಿಗಳು ಸ್ವಪ್ರಯತ್ನದಿಂದಲೂ ಉತ್ತಮ ಸಾಧನೆ ಮಾಡಲು ಸಾಧ್ಯ. ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಉಪನ್ಯಾಸಕರು ಸಿದ್ಧರಾಗಿರುತ್ತಾರೆ’ ಎಂದರು.ಉಪ ಪ್ರಾಂಶುಪಾಲ ಗುರುಪ್ರಸಾದ್‌ ಭಟ್, ನೀಟ್ ಸಿಇಟಿ ಸಮನ್ವಯಾಧಿಕಾರಿ ಹರಿಪ್ರಸಾದ್ ಇದ್ದರು. ಉಪನ್ಯಾಸಕಿ ಭಾಗ್ಯಶ್ರೀ ಐತಾಳ್ ನಿರೂಪಿಸಿದರು.

Read More

ಡಾ. ಶೇಖರ ಅಜೆಕಾರು ಹೇಳಿಕೆ NAMMUR EXPRESS NEWSಹೆಬ್ರಿ : ಕದಿಯಲಾಗದ ವಿದ್ಯೆ, ಬದುಕು ಕಟ್ಟುವ ವಿದ್ಯೆ ಎಲ್ಲರಿಗೂ ಸಿಗಬೇಕಿದೆ. ಆ ಮೂಲಕ ನಮ್ಮ ಬದುಕನ್ನು ಕಟ್ಟಿಕೊಳ್ಳಬೇಕಿದೆ. ಹೆಬ್ರಿಯ ಎಸ್. ಆರ್. ಸಮೂಹ ಶಿಕ್ಷಣ ಸಂಸ್ಥೆಯು ಕನ್ನಡ ಸಾಹಿತ್ಯಕ್ಕೆ ಅಪಾರವಾದ ಕೊಡುಗೆಯನ್ನು ನೀಡುತ್ತಿದೆ. ಸಾಹಿತ್ಯದಿಂದ ಬದುಕಿಗೆ ಬೆಳಕಾಗಲಿ, ಸಂಸ್ಥೆಯೂ ಬೆಳಗಲಿ ಎಂದು ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿಯ ರಾಜ್ಯ ಘಟಕದ ಅಧ್ಯಕ್ಷ ಸಾಹಿತಿ ಡಾ. ಶೇಖರ ಅಜೆಕಾರು ಹೇಳಿದರು. ಹೆಬ್ರಿಯ ಎಸ್. ಆರ್. ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಜು.30ರಂದು ಕನ್ನಡ ಸಾಹಿತ್ಯ ಸಂಘ ಹಾಗೂ ಸಾಂಸ್ಕೃತಿಕ ಸಂಘವನ್ನು ಉದ್ಘಾಟಿಸಿ ಮಾತನಾಡಿದರು. ನಾವು ಇಂದು 100ರೊಂದಿಗೆ ಸೆಣಸಾಟ ಮಾಡಬೇಕಿದೆ, ನಮಗೆ ನಾವೇ ಆದರ್ಶವಾಗಿ ವಿದ್ಯೆಯ ಮೂಲಕ ಬದುಕನ್ನು ಕಟ್ಟಿಕೊಂಡು ಅತ್ಯಂತ ಸರಳ ಜೀವನ ನಡೆಸಬೇಕಿದೆ. ಅತ್ಯುತ್ತಮ ಗುಣಮಟ್ಟದ ಶಿಕ್ಷಣ ನೀಡುವ ಎಸ್. ಆರ್. ಸಂಸ್ಥೆಯಲ್ಲಿ ಕಲಿಯುವ ಭಾಗ್ಯ ದೊರೆತ ತಾವೆಲ್ಲ ಭಾಗ್ಯವಂತರು. ಆ ಪುಣ್ಯದ ಫಲದಿಂದ ವಿಶೇಷ ಸಾಧನೆ ಮಾಡಬೇಕಿದೆ,…

Read More

ಡಿ ಕೆ ಶಿವಕುಮಾರ್, ಬಿ ಕೆ ಹರಿಪ್ರಸಾದ್ ಸಾಥ್ಮುರುಘಾ ಶ್ರೀಗಳಿಂದ ರಾಹುಲ್ ಗಾಂಧಿಗೆ ಸನ್ಮಾನ NAMMUR EXPRESS NEWSಚಿತ್ರದುರ್ಗ: ಸಿದ್ಧರಾಮೋತ್ಸವ ಸಮಾವೇಶದಲ್ಲಿ ಪಾಲ್ಗೊಳ್ಳಲು ರಾಜ್ಯಕ್ಕೆ ಆಗಮಿಸಿರುವ ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ ಬುಧವಾರ ಚಿತ್ರದುರ್ಗದ ಮುರುಘಾಮಠಕ್ಕೆ ಭೇಟಿ ನೀಡಿದ್ದಾರೆ.ಬುಧವಾರ ಬೆಳಗ್ಗೆ ಹುಬ್ಬಳ್ಳಿಯಿಂದ ಚಿತ್ರದುರ್ಗಕ್ಕೆ ಬಂದಿಳಿದ ರಾಹುಲ್ ಗಾಂಧಿ ಮುರುಘಾ ಮಠಕ್ಕೆ ಭೇಟಿ ನೀಡಿ ಡಾ. ಶಿವಮೂರ್ತಿ ಮುರುಘಾ ಶರಣರ ಆಶೀರ್ವಾದ ಪಡೆದಿದ್ದಾರೆ. ರಾಹುಲ್ ಗಾಂಧಿ ಅವರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ವಿಧಾನಪರಿಷತ್ ವಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್, ಏಐಸಿಸಿ ಪ್ರದಾನ ಕಾರ್ಯದರ್ಶಿ ವೇಣುಗೋಪಾಲ್. ಕಾರ್ಯಧ್ಯಕ್ಷ ಸಲೀಂ ಆಹಮ್ಮದ್, ರಾಜ್ಯ ಕೆಪಿಸಿಸಿ ಸಹಕಾರ ವಿಭಾಗದ ಸಂಚಾಲಕರಾದ ಡಾ.ಅರ್.ಎಂ.ಮಂಜುನಾಥಗೌಡ, ಚಿತ್ರದುರ್ಗ ಡಿಸಿಸಿ ಅಧ್ಯಕ್ಷ ತಾಜ್ ಪೀರ್, ಪಿಸಿಸಿ ಪ್ರದಾನ ಕಾರ್ಯದರ್ಶಿ ಪಿ.ಓ.ಶಿವಕುಮಾರ್, ಶಿವಮೊಗ್ಗ ಜಿಲ್ಲಾ ವಕ್ತಾರ ಎಂ.ರಮೇಶ್ ಶಂಕರಘಟ್ಟ ಇದ್ದರು. ಇನ್ನು ರಾಹುಲ್ ಗಾಂಧಿಗೆ ಮುರುಘಾಶ್ರೀಗಳು ಹಾರ ಶಾಲು ಹಾಕಿ ಬಸವಣ್ಣನವರ ಫೋಟೊ ನೀಡಿ ಸನ್ಮಾನಿಸಿದರು.ರಾಹುಲ್ ಗಾಂಧಿ ಅವರು ಮಠದ ಸ್ವಾಮೀಜಿಗಳ ಜೊತೆಗೆ…

Read More