Categories
ಜಿಲ್ಲಾ ವಾರ್ತೆ

ಒಂದೂವರೆ ಲಕ್ಷಕ್ಕೆ ಮಾರಾಟವಾದ ಮೂರು ವರ್ಷದ ಟಗರು!

  • 90 ಕೆಜಿ ತೂಕದ ಟಗರು
  • ಮೂಡಲಗಿ ತಾಲ್ಲೂಕಿನ ಧರ್ಮಟ್ಟಿ ಗ್ರಾಮದಲ್ಲಿ ನಡೆದ ಘಟನೆ

NAMMUR EXPRESS NEWS
ಮೂಡಲಗಿ : ಮೂಡಲಗಿ ತಾಲ್ಲೂಕಿನ ಧರ್ಮಟ್ಟಿ ಗ್ರಾಮದ ಕುರಿಗಾಯಿಯೊಬ್ಬರಿಂದ ಮೂರು ವರ್ಷದ ಟಗರನ್ನು ಒಂದು ಲಕ್ಷ ಐವತ್ತೈದು ಸಾವಿರ ರೂ.ಗಳಿಗೆ ಗದ್ದನಕೇರಿ ಗ್ರಾಮದ ವ್ಯಕ್ತಿಯೋರ್ವ ಖರೀದಿಸುವ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ.
ಧರ್ಮಟ್ಟಿ ಗ್ರಾಮದ ಕುರಿಗಾಹಿ ಲಕ್ಷ್ಮಣ ಸಿದ್ಧಿಂಗಪ್ಪ ಕೊರಕಪೂಜೇರ ಎಂಬುವರಿಂದ ಗದ್ದನಕೇರಿ ಗ್ರಾಮದ ಯಮನಪ್ಪ ಸಂಗೊಂದಿಯವರು ಖರೀದಿ ಮಾಡಿದರು.
ಮೂರು ವರ್ಷದ ಡೆಕ್ಕನಿ ತಳಿಯ 90 ಕೆಜಿ ತೂಕದ ಈ ಟಗರಿಗೆ ಮಾಲೀಕ, ಪ್ರತಿದಿನ 2 ಲೀಟರ್ ಹಾಲು, 5 ತತ್ತಿ, ಚಪಾತಿ, ಗೋಧಿ, ಕೆಂಪಹುರಳಿ, ಕಾರೀಕ, ಶೇಂಗಾ ಜೊತೆಗೆ ಒಣ ಹಾಗೂ ಹಸಿ ಮೇವು ನೀಡುತ್ತಿದ್ದರು. ಜಾತ್ರೆ ಹಬ್ಬಗಳಲ್ಲಿ ಜರುಗುವ ಟಗರಿನ ಸ್ಪರ್ಧೆಗಳಲ್ಲಿ ಭಾಗವಹಿಸುವ ಉದ್ದೇಶದಿಂದ ಟಗರುಗಳನ್ನು ಮೇಯಿಸುವದು ಧರ್ಮಟ್ಟಿ ಗ್ರಾಮದಲ್ಲಿ ಸಾಮಾನ್ಯವಾಗಿದೆ.
ಈ ಟಗರು ನಾಗನೂರ, ಚಿಗಡೊಳ್ಳಿ, ಕುರಬಗಟ್ಟಿ, ಬಿಸನಕೊಪ್ಪ, ಮುಸಗುಪ್ಪಿ ಗ್ರಾಮಗಳ ಕಾಳಗದಲ್ಲಿ ಜಯಶಾಲಿಯಾಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.