Author: Nammur Express Admin

NAMMUR EXPRESS NEWSಬೆಂಗಳೂರು: ಬ್ಯಾಂಕ್‌ ಸಿಬ್ಬಂದಿ ನೇಮಕಾತಿ ಸಂಸ್ಥೆ (ಐಬಿಪಿಎಸ್) 2023-24ನೇ ಸಾಲಿನ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ಪ್ರೊಬೆಷನರಿ ಆಫೀಸರ್ ಮ್ಯಾನೇಜ್‌ಮೆಂಟ್ ಟ್ರೇನಿ ಹುದ್ದೆ ಗಳ ನೇಮಕಕ್ಕೆ ಅಧಿಸೂಚನೆ ಹೊರಡಿಸಿದೆ. ಈ ಬಾರಿ 12 ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ಒಟ್ಟು 6342 ಹುದ್ದೆಗಳನ್ನು ಭರ್ತಿ ಮಾಡಲು ಐಬಿಪಿಎಸ್ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸು ತಿದ್ದು, ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಆಗಸ್ಟ್ 02ರಿಂದ ಅವಕಾಶ ನೀಡಲಾಗಿದೆ. ಕೆನರಾ ಬ್ಯಾಂಕ್ 2500ಹುದ್ದೆಗಳಿಗೆ, ಯುಕೋಬ್ಯಾಂಕ್ 2094 ಆಫೀಸರ್‌ಗಳನ್ನು ಐಬಿಪಿಎಸ್ ಮೂಲಕ ನೇಮಕ ಮಾಡಿಕೊಳ್ಳಲಿದೆ. ಅರ್ಜಿ ಸಲ್ಲಿಸಲು ಆಗಸ್ಟ್ 22 ಕೊನೆಯ ದಿನ. ಕಳೆದ ವರ್ಷ 4135 ಹುದ್ದೆಗಳಿಗೆ ನೇಮಕ ನಡೆಸಿರುವ ಐಬಿಪಿಎಸ್ ಈ ಬಾರಿ 6342 ಹುದ್ದೆಗಳಿಗೆ ಪರೀಕ್ಷೆ ನಡೆಸಲು ನಿರ್ಧರಿಸಿದೆ. ಈ ನೇಮಕ ಸಂಬಂಧ ಇದೇ ಅಕ್ಟೋಬರ್‌ನಲ್ಲಿ ಪೂರ್ವಭಾವಿ ಹಾಗೂ ಮುಖ್ಯ ಪರೀಕ್ಷೆ ನವೆಂಬರ್‌ನಲ್ಲಿ ನಡೆಸಲಾಗುವುದು ಎಂದು ಐಬಿಪಿಎಸ್ ತಿಳಿಸಿದೆ.

Read More

ವಿಶೇಷ ಎಕ್ಸ್‌ಚೇಂಜ್ ಆಫರ್ಪ್ರತಿ ವಾಹನ ಖರೀದಿಗೆ 20 ಗ್ರಾಂ ಬೆಳ್ಳಿನಾಣ್ಯಸಂಪರ್ಕಿಸಿ: 9008625488, 08181-2279990% ಬಡ್ಡಿದರದಲ್ಲಿ ಸುಲಭ ಸಾಲ ಸೌಲಭ್ಯ

Read More

ಕ್ಷೇತ್ರದಲ್ಲಿ ಅಭಿವೃದ್ಧಿ ಪರ್ವ ಅಭಿನಂದನೆಗಳು ಅರಗ ಜ್ಞಾನೇಂದ್ರ ಗೃಹ ಮಂತ್ರಿಯಾಗಿ ಒಂದು ವರ್ಷ ಪೂರೈಸಿದ್ದು ಇದೀಗ ತೀರ್ಥಹಳ್ಳಿ ಕ್ಷೇತ್ರ ಸೇರಿದಂತೆ ರಾಜ್ಯದ ಹಲವೆಡೆ ಅವರಿಗೆ ಶುಭಾಶಯಗಳ ಮಹಾಪುರ ಹರಿದು ಬರುತ್ತಿದೆ. ಬಿಜೆಪಿ ಪಕ್ಷದ ಹಿರಿಯ ನಾಯಕರಾಗಿ, ಪ್ರಾಮಾಣಿಕ, ಕಪ್ಪುಚುಕ್ಕೆ ಇಲ್ಲದ ಬಿಜೆಪಿ ಮುಖಂಡನಾಗಿ, ಜನರ ಕಷ್ಟ ಸುಖಗಳಿಗೆ ಜತೆಯಾದವರು. ಮತ್ತಷ್ಟು ಅಭಿವೃದ್ಧಿ ಕೆಲಸ ಆಗಲಿ, ಜ್ಞಾನೇಂದ್ರ ಅವರಿಗೆ ಇನ್ನಷ್ಟು ಸೇವೆ ಮಾಡುವ ಅವಕಾಶ ಸಿಗಲಿ. ಶುಭಾಶಯ ಕೋರುವವರು ಬಿಜೆಪಿ ಕಾರ್ಯಕರ್ತರು, ಮುಖಂಡರು, ತೀರ್ಥಹಳ್ಳಿ ಕ್ಷೇತ್ರ ಆರಗ ಜ್ಞಾನೇಂದ್ರ ಅವರಿಗೆ ನಮ್ಮೂರ್ ಎಕ್ಸ್ ಪ್ರೆಸ್ ಮಾಧ್ಯಮದಲ್ಲಿ ಅಭಿನಂದನಾ ಜಾಹೀರಾತು ಹಾಕಿಸಲು ಕರೆ ಮಾಡಿ ಜಾಹೀರಾತು ಸಂಖ್ಯೆ: 9480181535

Read More

ನಿರಂತರ ಏರಿಕೆ ಕಾಣುತ್ತಿರುವ ಹೊಸ ಪ್ರಕರಣಆದರೆ ಸೋಂಕು ಸಾಮಾನ್ಯ ಜ್ವರದ ಮಟ್ಟಕ್ಕೆ ಇಳಿಕೆ NAMMUR EXPRESS NEWSಬೆಂಗಳೂರು: ರಾಜ್ಯದಲ್ಲಿ ಕಳೆದ ನಾಲ್ಕು ತಿಂಗಳಿನಿಂದ ನಿರಂತರವಾಗಿ ಹೊಸ ಕೋವಿಡ್ ಸೋಂಕಿತರ ಸಂಖ್ಯೆ ಏರಿಕೆ ಕಾಣುತ್ತಿದೆ. ಏಪ್ರಿಲ್ ತಿಂಗಳಲ್ಲಿ ಒಟ್ಟಾರೆ ಎರಡು ಸಾವಿರದಷ್ಟಿದ್ದ ಹೊಸ ಪ್ರಕರಣಗಳ ಸಂಖ್ಯೆ ಜುಲೈ ಮಾಸದಲ್ಲಿ 40 ಸಾವಿರಕ್ಕೆ ಸಮೀಪಿಸಿದೆ. ಆದರೆ ಸೋಂಕಿನ ತೀವ್ರತೆ ಕಡಿಮೆ ಇದ್ದು ಕೋವಿಡ್ ಸಾಮಾನ್ಯ ವೈರಲ್ ಜ್ವರದ ಮಟ್ಟಕ್ಕೆ ಇಳಿದಿದೆ ಎಂದು ತಜ್ಞರು ಹೇಳುತ್ತಾರೆ.ಹೊಸ ಅಪಾಯಕಾರಿ ತಳಿಗಳು ಕಂಡುಬಂದಿಲ್ಲ. ಆದ್ದರಿಂದ ಮಾಸ್ಕ್ ಧಾರಣೆ, ಸಾಮಾಜಿಕ ಅಂತರ ಮತ್ತು ಲಸಿಕೆ ಪಡೆಯುವುದರಿಂದ ಸೋಂಕು ಹರಡುವುದನ್ನು ಹತೋಟಿಗೆ ತರಬಹುದು, ಬೇರೆ ಕಠಿಣ ಕ್ರಮದ ಕಠಿಣ ಕ್ರಮದ ಅಗತ್ಯವಿಲ್ಲ ಎಂದು ಸಾಂಕ್ರಾಮಿಕ ತಜ್ಞರುವಿವರಿಸುತ್ತಾರೆ. ರಾಜ್ಯದಲ್ಲಿ ಕೋವಿಡ್ ವೇಗವಾಗಿ ಹಬ್ಬಲು ಪ್ರಾರಂಭಿಸಿದ 2020ರ ಜುಲೈ ತಿಂಗಳ ಬಳಿಕದ ಕನಿಷ್ಠ ಪ್ರಕರಣ 2022ರ ಏಪ್ರಿಲ್‌ನಲ್ಲಿ ದಾಖಲಾಗಿತ್ತು. ಆದರೆ ಆ ಬಳಿಕ ನಿರಂತರವಾಗಿ ಸೋಂಕಿತರ ಸಂಖ್ಯೆ ಹೆಚ್ಚುತ್ತಲೆ ಇದೆ. ಇದೀಗರಾಜಕೀಯ ಸಮಾರಂಭಗಳು, ಹಬ್ಬಹರಿದಿನಗಳು…

Read More

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಮಧ್ಯ ಕರ್ನಾಟಕದ ಜಿಲ್ಲೆಗಳ ನಾಯಕರಿಗೆ ಸಿಕ್ಕ ದೊಡ್ಡ ಬೂಸ್ಟ್ NAMMUR EXPRESS NEWSದಾವಣಗೆರೆ : ಮಧ್ಯ ಕರ್ನಾಟಕ ದಾವಣಗೆರೆಯಲ್ಲಿ ಆ.3ರಂದು ನಡೆಯುವ ಸಿದ್ದರಾಮಯ್ಯ ಅಮೃತ ಮಹೋತ್ಸವವು ಹಳೆ ಮೈಸೂರು-ಉತ್ತರ ಕರ್ನಾಟಕ – ಮಲೆನಾಡು-ಬಯಲು ಜಿಲ್ಲೆಗಳ ಕಾಂಗ್ರೆಸ್ ಮುಖಂಡರಿಗೆ ಶಕ್ತಿ ತುಂಬುವ ಜೊತೆಗೆ ಅನೇಕರ ರಾಜಕೀಯ ಮರು ಹುಟ್ಟಿಗೂ ವೇದಿಕೆಯಾಗುವ ಸಾಧ್ಯತೆಗಳೇ ಹೆಚ್ಚಾಗಿವೆ.ಸಿದ್ದರಾಮಯ್ಯ ಕೇವಲ ಅಹಿಂದ ವರ್ಗದ ನಾಯಕನಲ್ಲ, ಎಲ್ಲಾವರ್ಗದ ಜನ ಮೆಚ್ಚುವಂತಹ ಆಡಳಿತ ನೀಡಿದ್ದ ವ್ಯಕ್ತಿ. ಈ ಹಿನ್ನೆಲೆಯಲ್ಲಿ ದಾವಣಗೆರೆ, ಚಿತ್ರದುರ್ಗ, ವಿಜಯನಗರ, ಬಳ್ಳಾರಿ, ಹಾವೇರಿ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳ ನಾಯಕರು, ಭವಿಷ್ಯದ ನಾಯಕರ ರಾಜಕೀಯ ಜೀವನಕ್ಕೆ ಸಿದ್ದರಾಮಯ್ಯ ಅಮೃತ ಮಹೋತ್ಸವವು ರಾಜಕೀಯ ದಿಕ್ಸೂಚಿ ಯಾಗುವುದು ಅಷ್ಟೇ ನಿಶ್ಚಿತ.ಚುನಾವಣೆಗೆ ರಣಕಹಳೆ: ಅಮೃತ ಮಹೋತ್ಸವಕ್ಕೆ ಎಐಸಿಸಿ ನಾಯಕ ರಾಹುಲ್ ಗಾಂಧಿ, ಕೆ.ಸಿ.ವೇಣುಗೋಪಾಲ, ಮಲ್ಲಿಕಾರ್ಜುನಖರ್ಗೆ, ಬಿ.ಕೆ.ಹರಿಪ್ರಸಾದ್, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಆಗಮಿಸಲಿದ್ದಾರೆ. ಇಡೀ ಸಮಾರಂಭದ ಕೇಂದ್ರ ಬಿಂದುವಾಗಿರುವ ಮಾಜಿ ಸಿಎಂ ಸಿದ್ದರಾಮಯ್ಯನವರ 75ನೇ ಜನ್ಮದಿನಕ್ಕೆ ಶುಭಾರೈಸುವ ಮೂಲಕಮಧ್ಯ ಕರ್ನಾಟಕದಿಂದಲೇ…

Read More

ಅರ್ಧ ರಾಜ್ಯ ತತ್ತರ, 550ಕ್ಕೂ ಹೆಚ್ಚು ಮನೆ ಜಲಾವೃತಮಳೆಯಬ್ಬರಕ್ಕೆ11 ಬಲಿ, 30ಕ್ಕೂ ಅಧಿಕ ಕೆರೆ ಕೋಡಿ NAMMUR EXPRESS NEWSಬೆಂಗಳೂರು :ಹಲವು ದಿನಗಳ ಬಿಡುವಿನ ಬಳಿಕ ರಾಜ್ಯದ 13ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮತ್ತೆ ಮಳೆ ಅಬ್ಬರಿಸಿದೆ. ಉತ್ತರ ಕನ್ನಡ ಜಿಲ್ಲೆ ಭಟ್ಕಳದ ಮನೆ ಯೊಂದರ ಮೇಲೆ ಗುಡ್ಡ ಕುಸಿದು ಒಂದೇ ಕುಟುಂಬದ ನಾಲ್ವರು ಜೀವಂತ ಸಮಾಧಿ ಆಗಿದ್ದು ಸೇರಿ. ರಾಜ್ಯದಲ್ಲಿ ಮಳೆ ಸಂಬಂಧಿ ಅನಾಹುತಕ್ಕೆ ಮಂಗಳವಾರ ಒಟ್ಟು 11 ಮಂದಿ ಬಲಿಯಾಗಿದ್ದಾರೆ. ಭಟ್ಕಳವೊಂದರಲ್ಲೇ 400ಕ್ಕೂ ಹೆಚ್ಚು ಸೇರಿ ರಾಜ್ಯಾದ್ಯಂತ 550ಕ್ಕೂ ಹೆಚ್ಚು ಮನೆಗಳು ಜಲಾವೃತವಾಗಿದ್ದು, ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ.ಬಿಡದೆ ಸುರಿದ ಮಳೆಯಿಂದಾಗಿ ರಾಜ್ಯಾದ್ಯಂತ 30ಕ್ಕೂ ಹೆಚ್ಚು ಕೆರೆಗಳು ಕೋಡಿ ಬಿದ್ದಿದ್ದು, ಬೆಂಗಳೂರು-ಮೈಸೂರು, ಭಟ್ಕಳ-ಪುಣೆ ಹೆದ್ದಾರಿ ಸೇರಿ 18ಕ್ಕೂ ಕಡೆ ರಸ್ತೆಸಂಪರ್ಕ ಕಡಿತಗೊಂಡಿದೆ. ನೂರಾರು ಹೆಕ್ಟೇರ್ ‘ರೈತರ ಹೊಲಗಳಿಗೆ ನೀರು ನುಗ್ಗಿ ಭಾರೀ ಹಾನಿಯಾಗಿದೆ. ಮಳೆಯಬ್ಬರ ಹಿನ್ನೆಲೆಯಲ್ಲಿ ಗದಗ, ಕೊಪ್ಪಳ ಹಾಗೂ ವಿಜಯನಗರ ಜಿಲ್ಲೆಗಳು ಹಾಗೂ ಭಟ್ಕಳ, ಬೈಂದೂರು, ಕುಂದಾಪುರ ತಾಲ್ಲೂಕು ಹಾಗೂ…

Read More

ಎಲ್ಲೆಡೆ ಕಟ್ಟೆಚ್ಚರ ವಹಿಸುವಂತೆ ಕೇಂದ್ರ ಗೃಹ ಇಲಾಖೆ ಸೂಚನೆಶಂಕಾಸ್ಪದ ವ್ಯಕ್ತಿಗಳ ಚಲನವಲನಗಳ ಮೇಲೆ ಹದ್ದಿನಕಣ್ಣಿಡಲು ಸೂಚನೆ NAMMUR EXPRESS NEWSಬೆಂಗಳೂರು: ರಾಜ್ಯದಲ್ಲಿ ಕೆಲವು ಸಮಾಜ ಘಾತುಕ ಶಕ್ತಿಗಳು ಸ್ವಾತಂತ್ರ್ಯ ದಿನಾಚರಣೆ ಮುನ್ನ ವಿದ್ವಂಸಕ ಕೃತ್ಯ ನಡೆಸುವ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಬೇಕೆಂದು ಕೇಂದ್ರ ಗೃಹ ಇಲಾಖೆ ಸೂಚನೆ ನೀಡಿದೆ. ಆ.15ರ ಸ್ವಾತಂತ್ರ್ಯ ದಿನಾಚರಣೆಗೂ ಮುನ್ನ ಮಂಗಳೂರು, ಉಡುಪಿ, ಕಾರವಾರ (ಭಟ್ಕಳ), ಮಡಿಕೇರಿ, ಬೆಂಗಳೂರು, ಬೆಳಗಾವಿ, ಹುಬ್ಬಳ್ಳಿ, ಶಿವಮೊಗ್ಗ, ಚಿಕ್ಕಮಗಳೂರು ಸೇರಿದಂತೆ ಮತ್ತಿತರ ಕಡೆ ಹೆಚ್ಚಿನ ಭದ್ರತೆಯನ್ನು ಕೈಗೊಳ್ಳಬೇಕೆಂದು ಗೃಹ ಇಲಾಖೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಕೇಂದ್ರ ಗುಪ್ತಚರ ವಿಭಾಗವು ಗೃಹ ಇಲಾಖೆಗೆ ಸೂಚನೆ ಕೊಟ್ಟಿದ್ದು,ಕೆಲವು ಸಮಾಜಘಾತುಕ ಶಕ್ತಿಗಳು ಸ್ವಾತಂತ್ರ್ಯ ದಿನಾಚರಣೆ ಮುನ್ನ ವಿದ್ವಂಸಕ ಕೃತ್ಯ ನಡೆಸಲು ಹೊಂಚು ಹಾಕಿ ಕುಳಿತಿವೆ.ಶಂಕಾಸ್ಪದ ವ್ಯಕ್ತಿಗಳ ಚಲನವಲನಗಳ ಮೇಲೆ ಹದ್ದಿನಕಣ್ಣಿಡಬೇಕು.ಗುಪ್ತಚರ ವಿಭಾಗ ಅಂತರಿಕ ಭದ್ರತೆಯನ್ನು ಇನ್ನಷ್ಟು ಚುರುಕುಗೊಳಿಸುವಂತೆ ಗೃಹ ಇಲಾಖೆಯು ಸೂಚನೆ ಕೊಟ್ಟಿದೆ ಎಂದು…

Read More

ಕೇಕ್ ತಿನ್ನಿಸಿ ಸಂಭ್ರಮ ಆಚರಿಸಿದ ಎಲ್ಲಾ ನಾಯಕರುಡಿಕೆಶಿ, ಹರಿಪ್ರಸಾದ್ ಸೇರಿ ಬಹುತೇಕ ನಾಯಕರು ಹಾಜರ್ NAMMUR EXPRESS NEWSಹುಬ್ಬಳ್ಳಿ: ವಿಪಕ್ಷ ನಾಯಕ ಸಿದ್ಧರಾಮಯ್ಯ ಅವರ 75ನೇ ಜನ್ಮದಿನಾಚರಣೆಯನ್ನು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು, ಮಂಗಳವಾರ ತಡ ರಾತ್ರಿಯೇ ಇಲ್ಲಿನ ವಿಮಾನ ನಿಲ್ದಾಣದ ಎದುರಿಗೆ ಇರುವ ಫಾರ್ಚೂನ್ ಹೊಟೇಲ್ ನಲ್ಲಿ ಆಚರಿಸಿ ಸಂಭ್ರಮಿಸಿದರು.ಸಿದ್ಧರಾಮಯ್ಯ ಅವರು ಕೇಕ್ ಕತ್ತರಿಸುತ್ತಿದ್ದಂತೆಯೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಸಿದ್ಧರಾಮಯ್ಯ ಅವರಿಗೆ ಕೇಕ್ ತಿನಿಸಿ ಜನ್ಮದಿನ ಶುಭಾಶಯ ಕೋರಿದರು.ಎಲ್ಲರೂ ಹ್ಯಾಪಿ ಬರ್ತ್ ಡೇ ಎಂದು ಶುಭಾಶಯ ಕೋರುತ್ತಿರುವಾಗಲೇ ಮಾಜಿ ಸಚಿವ ಕೆ.ಜೆ.ಜಾರ್ಜ್ ಅವರು ಯುನಿಟಿ ಕೇಕ್ ಎಂದು ಹೇಳುವ ನಗೆ ಚಟಾಕಿ ಹಾರಿಸಿದರು.ಪಕ್ಷದ ಹಿರಿಯ ನಾಯಕರಾದ ಆರ್.ವಿ ದೇಶಪಾಂಡೆ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ , ಮಾಜಿ ಸಚಿವ ಎಂ.ಬಿ ಪಾಟೀಲ್ , ಮಾಜಿ ಶಾಸಕ ಎನ್.ಎಚ್.ಕೋನರಡ್ಡಿ ಸೇರಿದಂತೆ ಅನೇಕ ಮುಖಂಡರಿದ್ದರು.ದಾವಣಗೆರೆಯಲ್ಲಿ ಸಿದ್ಧರಾಮೋತ್ಸವ ಕಾರ್ಯಕ್ರಮಕ್ಕೂ ಮುನ್ನವೇ ಸಿದ್ಧರಾಮಯ್ಯ ಅವರಿಗೆ ಅವರ ರಾಜಕೀಯ ಒಡನಾಡಿಗಳು ಹೊಟೇಲ್ ನಲ್ಲಿ…

Read More

ಆಧಾರ್-ವೋಟರ್ ಐಡಿ ಲಿಂಕ್‌ನ ಉದ್ದೇಶ NAMMUR EXPRESS NEWSಮತದಾರರ ಗುರುತಿನ ಚೀಟಿಯನ್ನು ಆಧಾರ್ ನೊಂದಿಗೆ ಲಿಂಕ್ ಮಾಡಲು ಭಾರತದ ಚುನಾವಣಾ ಆಯೋಗ ಅಭಿಯಾನವನ್ನು ಪ್ರಾರಂಭಿಸಿದೆ. ರಾಷ್ಟ್ರವ್ಯಾಪಿ ಈ ಅಭಿಯಾನವನ್ನು ಕೈಗೊಳ್ಳುವಂತೆ ಆಯೋಗವು ಎಲ್ಲಾ ರಾಜ್ಯಗಳ ಮುಖ್ಯ ಚುನಾವಣಾ ಅಧಿಕಾರಿಗಳಿಗೆ (ಸಿಇಒ) ಹೇಳಿದೆ. “ಚುನಾವಣಾ ಆಯೋಗದ ಸೂಚನೆಯ ಮೇರೆಗೆ, ಮತದಾರರ ಪಟ್ಟಿಯಲ್ಲಿ ದಾಖಲಾಗಿರುವ ಮತದಾರರಿಂದ ಸ್ವಯಂಪ್ರೇರಿತವಾಗಿ ಆಧಾರ್ ಸಂಖ್ಯೆಗಳನ್ನು ಸಂಗ್ರಹಿಸುವ ಪ್ರಕ್ರಿಯೆಯು ಆಗಸ್ಟ್ 1ರಿಂದ ಪ್ರಾರಂಭವಾಗಲಿದೆ’ ಎಂದು ಉತ್ತರ ಪ್ರದೇಶದ ಸಿಇಒ ಅಜಯ್ ಕುಮಾರ್ ಶುಕ್ಲಾ ಹೇಳಿದ್ದಾರೆ.ಮಾಜಿ ಮುಖ್ಯ ಚುನಾವಣಾ ಆಯುಕ್ತ ಸುಶೀಲ್ ಚಂದ್ರ ಅವರು ಆಧಾರ್ ವಿವರಗಳನ್ನು ಹಂಚಿಕೊಳ್ಳುವುದು ಸ್ವಯಂಪ್ರೇರಿತವಾಗಿರುತ್ತದೆ, ಆದರೆ ಮತದಾರರು ತಮ್ಮ ಮತದಾರರ ಗುರುತಿನ ಚೀಟಿಗೆ ವಿಶಿಷ್ಟ ಗುರುತಿನ ಸಂಖ್ಯೆಯನ್ನು ಲಿಂಕ್ ಮಾಡದಿರಲು ಸರಿಯಾದ ಕಾರಣವನ್ನು ನೀಡಬೇಕಾಗುತ್ತದೆ ಎಂದು ಪಿಟಿಐ ವರದಿಯೊಂದರಲ್ಲಿ ತಿಳಿಸಿದ್ದಾರೆ.ಸರ್ಕಾರವು ಜೂನ್‌ನಲ್ಲಿ ನಕಲಿ ನಮೂದುಗಳನ್ನು ತೆಗೆದುಹಾಕಲು ಮತ್ತು ಸೇವಾ ಮತದಾರರಿಗೆ ಚುನಾವಣಾ ಕಾನೂನನ್ನು ಲಿಂಗ ತಟಸ್ಥಗೊಳಿಸಲು ಮತದಾರರ ಪಟ್ಟಿಯೊಂದಿಗೆ ಆಧಾರ್ ವಿವರಗಳನ್ನು ಲಿಂಕ್ ಮಾಡುವ ಅವಕಾಶ…

Read More

ಮನೆ ಮನೆಯಲ್ಲೂ ಆಚರಣೆ: ದೇಗುಲಗಳಲ್ಲಿ ವಿಶೇಷ ಪೂಜೆನಾಗರಹಳ್ಳಿಯಲ್ಲಿ ಜಾತ್ರಾ ಸಡಗರ NAMMUR EXPRESS NEWSಮಲೆನಾಡು: ವರ್ಷದ ಮೊದಲ ಹಬ್ಬ ಹಿಂದೂಗಳ ಪವಿತ್ರ ಹಬ್ಬ ನಾಗರ ಪಂಚಮಿ ಹಬ್ಬವನ್ನು ಮನೆ ಮನೆಯಲ್ಲಿ ಸಂಭ್ರಮದಿಂದ ಆಚರಿಸಿದರು.ತೀರ್ಥಹಳ್ಳಿ, ಶೃಂಗೇರಿ, ಹೊಸನಗರ ಸೇರಿ ಮಲೆನಾಡಿನ ಬಹುತೇಕ ದೇಗುಲದಲ್ಲಿ ಭಕ್ತರು ಹೆಚ್ಚಾಗಿದ್ದರು. ತೀರ್ಥಹಳ್ಳಿಯ ರಾಮೇಶ್ವರ, ನಾಗರ ಕಟ್ಟೆ, ಆರಗ, ನಂಟೂರು, ಹಡ್ಸೆ ಸೇರಿ ಬಹುತೇಕ ಕಡೆ ಪೂಜೆ ನಡೆಯಿತು.ತೀರ್ಥಹಳ್ಳಿ ತಾಲೂಕು ಕೌದಳ್ಳಿ ಕ್ಷೇತ್ರದಲ್ಲಿ ನಾಗ ದೇವರಿಗೆ ಪಂಚಾಮೃತ ಅಭಿಷೇಕ ಕ್ಷೀರ ಅಭಿಷೇಕ ಹಾಗೂ ವಿಶೇಷ ಪೂಜೆ ಹಾಗೂ ನಾಗರಕ್ತೇಶ್ವರಿ ಅಮ್ಮನವರಿಗೆ ಅಭಿಷೇಕ ಪೂಜೆ ಹಾಗೂ ವಿಶೇಷ ಅಲಂಕಾರ ಪೂಜೆ ವಿಜೃಂಭಣೆಯಿಂದ ನೆರೆವೇರಿತು.ಹೊಸನಗರ ತಾಲೂಕಿನ ಹುಂಚಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಗರಹಳ್ಳಿ ಇತಿಹಾಸ ಪ್ರಸಿದ್ಧ ಶ್ರೀ ನಾಗೇಂದ್ರಸ್ವಾಮಿಯ ಮಳೆಗಾಲದ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಜರುಗಿತು.ಈ ಜಾತ್ರಾ ಮಹೋತ್ಸವವು ವರ್ಷದಲ್ಲಿ ಎರಡು ಬಾರಿ ಆಚರಿಸಲಾಗುತ್ತದೆ. ಮಳೆಗಾಲದಲ್ಲಿ ಶ್ರಾವಣ ಮಾಸದಲ್ಲಿ, ಬೇಸಿಗೆ ಕೂಳೆ ಪಂಚಮಿಯಲ್ಲಿ ವಿಶೇಷವಾಗಿ ಮಹೋತ್ಸವವು ನಡೆಯಲಿದೆ.ಮದುವೆಗಾಗಿ, ಮಕ್ಕಳ ಫಲಕ್ಕೆ ಇಲ್ಲಿಗೆ…

Read More