Categories
ಬೆಂಗಳೂರು

4 ತಿಂಗಳಲ್ಲಿ ಕೊರೋನಾ ಪ್ರಕರಣ ಭಾರಿ ಏರಿಕೆ

  • ನಿರಂತರ ಏರಿಕೆ ಕಾಣುತ್ತಿರುವ ಹೊಸ ಪ್ರಕರಣ
  • ಆದರೆ ಸೋಂಕು ಸಾಮಾನ್ಯ ಜ್ವರದ ಮಟ್ಟಕ್ಕೆ ಇಳಿಕೆ

NAMMUR EXPRESS NEWS
ಬೆಂಗಳೂರು: ರಾಜ್ಯದಲ್ಲಿ ಕಳೆದ ನಾಲ್ಕು ತಿಂಗಳಿನಿಂದ ನಿರಂತರವಾಗಿ ಹೊಸ ಕೋವಿಡ್ ಸೋಂಕಿತರ ಸಂಖ್ಯೆ ಏರಿಕೆ ಕಾಣುತ್ತಿದೆ. ಏಪ್ರಿಲ್ ತಿಂಗಳಲ್ಲಿ ಒಟ್ಟಾರೆ ಎರಡು ಸಾವಿರದಷ್ಟಿದ್ದ ಹೊಸ ಪ್ರಕರಣಗಳ ಸಂಖ್ಯೆ ಜುಲೈ ಮಾಸದಲ್ಲಿ 40 ಸಾವಿರಕ್ಕೆ ಸಮೀಪಿಸಿದೆ. ಆದರೆ ಸೋಂಕಿನ ತೀವ್ರತೆ ಕಡಿಮೆ ಇದ್ದು ಕೋವಿಡ್ ಸಾಮಾನ್ಯ ವೈರಲ್ ಜ್ವರದ ಮಟ್ಟಕ್ಕೆ ಇಳಿದಿದೆ ಎಂದು ತಜ್ಞರು ಹೇಳುತ್ತಾರೆ.
ಹೊಸ ಅಪಾಯಕಾರಿ ತಳಿಗಳು ಕಂಡುಬಂದಿಲ್ಲ. ಆದ್ದರಿಂದ ಮಾಸ್ಕ್ ಧಾರಣೆ, ಸಾಮಾಜಿಕ ಅಂತರ ಮತ್ತು ಲಸಿಕೆ ಪಡೆಯುವುದರಿಂದ ಸೋಂಕು ಹರಡುವುದನ್ನು ಹತೋಟಿಗೆ ತರಬಹುದು, ಬೇರೆ ಕಠಿಣ ಕ್ರಮದ ಕಠಿಣ ಕ್ರಮದ ಅಗತ್ಯವಿಲ್ಲ ಎಂದು ಸಾಂಕ್ರಾಮಿಕ ತಜ್ಞರು
ವಿವರಿಸುತ್ತಾರೆ. ರಾಜ್ಯದಲ್ಲಿ ಕೋವಿಡ್ ವೇಗವಾಗಿ ಹಬ್ಬಲು ಪ್ರಾರಂಭಿಸಿದ 2020ರ ಜುಲೈ ತಿಂಗಳ ಬಳಿಕದ ಕನಿಷ್ಠ ಪ್ರಕರಣ 2022ರ ಏಪ್ರಿಲ್‌ನಲ್ಲಿ ದಾಖಲಾಗಿತ್ತು. ಆದರೆ ಆ ಬಳಿಕ ನಿರಂತರವಾಗಿ ಸೋಂಕಿತರ ಸಂಖ್ಯೆ ಹೆಚ್ಚುತ್ತಲೆ ಇದೆ. ಇದೀಗರಾಜಕೀಯ ಸಮಾರಂಭಗಳು, ಹಬ್ಬಹರಿದಿನಗಳು ಕಳೆಗಟ್ಟುತ್ತಿರುವ ಆಗಸ್ಟ್ ಹೊತ್ತಿಗೆ ಸೋಂಕಿತರ ಸಂಖ್ಯೆ ಮತ್ತು ಮರಣದ ಸಂಖ್ಯೆಯೂ ಏರಿದೆ.
ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ಮುಖ್ಯಸ್ಥ ಡಾ.ಎಂ.ಕೆ.ಸುದರ್ಶನ್ ಅವರು, ಕೋವಿಡ್ ಸಂಖ್ಯೆ ಹೆಚ್ಚಳವಾಗುತ್ತಿದೆ. ಆದರೆ ಆಸ್ಪತ್ರೆಯ ದಾಖಲೀಕರಣ ಕಡಿಮೆಯೇ ಇದೆ. ಜುಲೈನಲ್ಲಿ 29 ಮಂದಿ ಮೃತರಾಗಿದ್ದು ಈ ಪೈಕಿ 26 ಮಂದಿ ಸಹ ಅಸ್ವಸ್ಥತೆಯಿಂದ ಬಳಲುತ್ತಿದ್ದರು. ಸೋಂಕಿತರ ಸಂಖ್ಯೆ ಪತ್ತೆ ಆಗುತ್ತಿದ್ದರೂ ಸೋಂಕಿನ ಗುಣ ಲಕ್ಷಣ ಗಂಭೀರವಾಗಿಲ್ಲ. ಜಗತ್ತಿನ ಯಾವುದೇ ಭಾಗದಲ್ಲಿ ಕೋವಿಡ್ ತೀವ್ರತೆ ಹೆಚ್ಚಿಸುವ ತಳಿ ಸದ್ಯಕ್ಕೆ ವರದಿ ಆಗಿಲ್ಲ. ಆದ್ದರಿಂದ ಜನರು ಈ ಬಗ್ಗೆ ಹೆಚ್ಚಿನ ಆತಂಕ ಪಡುವ ಅಗತ್ಯವಿಲ್ಲ. ಹೊಸ ಕಠಿಣ ಕ್ರಮಗಳ ಅಗತ್ಯ ಕೂಡ ಇಲ್ಲ ಎಂದು ಹೇಳುತ್ತಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.