ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ ಮಲೆನಾಡು ಮೂಲದ ಸಾಹಿತಿಕನ್ನಡದ ನಂ 1 ವಿಮರ್ಶಕ ಸ್ಥಾನ ಪಡೆದಿದ್ದರುಪತ್ರಕರ್ತರಾಗಿ, ಸಾಹಿತಿಯಾಗಿ ನಾಡಿಗೆ ಅಪಾರ ಸೇವೆ NAMMUR EXPRESS NEWSಶಿವಮೊಗ್ಗ: ಖ್ಯಾತ ವಿಮರ್ಶಕ, ‘ಗಾಂಧಿ ಕಥನ’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ ಪಡೆದಿದ್ದ ಸಾಹಿತಿ ಡಿಎಸ್ ನಾಗಭೂಷಣ ಅವರು ನಿಧನರಾಗಿದ್ದಾರೆ. ನೇರ ನಡೆ ನುಡಿಯ ಲೇಖಕರಾಗಿದ್ದ 70 ವರ್ಷದ ಡಿಎಸ್ ನಾಗಭೂಷಣ ಅವರು ಆನಾರೋಗ್ಯ ಕಾರಣ ಬುಧವಾರ ತಡರಾತ್ರಿ ನಿಧನರಾಗಿದ್ದು, ಗುರುವಾರ ಸಂಜೆ 4 ಗಂಟೆಗೆ ಶಿವಮೊಗ್ಗದಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ.ಕಲ್ಲಹಳ್ಳಿ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.ಹತ್ತು ವರ್ಷ ‘ಹೊಸ ಮನುಷ್ಯ’ ಪತ್ರಿಕೆ ಸಂಪಾದಕರಾಗಿ ಕಾರ್ಯ ನಿರ್ವಹಿಸಿದ್ದ ನಾಗಭೂಷಣ ಅವರು, ರೂಪರೂಪಗಳನ್ನು ದಾಟಿ, ವಿಧವಿಧ, ಇಂದಿಗೆ ಬೇಕಾದ ಗಾಂಧಿ ಕೃತಿಗಳನ್ನು ರಚನೆ ಮಾಡಿದ್ದಾರೆ. ಈ ಕೃತಿಗಳು ನಿಷ್ಠರ ವಿಮರ್ಶೆಯ ಧ್ವನಿಯಾಗಿದ್ದವು. ಇನ್ನು ಶ್ರೀಮತಿ ಸವಿತಾ ನಾಗಭೂಷಣ ಸಹ ಕನ್ನಡದ ಖ್ಯಾತ ಲೇಖಕಿ ಮತ್ತು ಕವಿಯಾಗಿದ್ದಾರೆ. ಸುಮಾರು 20 ವರ್ಷದ ಹಿಂದೆ ನಾಗಭೂಷಣರು ಆಕಾಶವಾಣಿಯ ಕೆಲಸದಿಂದಸ್ವಯಂನಿವೃತ್ತಿ…
Author: Nammur Express Admin
ದೂರವಾಣಿ ಭತ್ಯೆ 20 ಸಾವಿರ ರೂ.: ಎಷ್ಟೆಷ್ಟು ಹಣಸಂಪೂರ್ಣ ಡೀಟೇಲ್ಸ್ ಇಲ್ಲಿದೆ ನೋಡಿ ಸಾರ್..! NAMMUR EXPRESS NEWSಬೆಂಗಳೂರು: ಕಳೆದ ವಿಧಾನಸಭೆ ಅಧಿವೇಶನದಲ್ಲಿ ಶಾಸಕರ ವೇತನ ಪರಿಷ್ಕರಣೆಗೊಂಡಿದ್ದು, ಇದೇ ಏಪ್ರಿಲ್ ನಿಂದ ಮಾಸಿಕ ವೇತನ 2,05,000 ರೂ.ಗೆ ಎರಿಕೆ ಆಗಿದೆ. ಅದರಲ್ಲಿ ದೂರವಾಣಿ ಭತ್ಯೆ 20 ಸಾವಿರ ರೂ. ನೀಡುತ್ತಿರುವುದು ಅಚ್ಚರಿಗೆ ಕಾರಣವಾಗಿದೆ. ಅಂತೆಯೇ, ಅಂಚೆ ವೆಚ್ಚ ತಿಂಗಳಿಗೆ 5 ಸಾವಿರ ರೂ. ನೀಡಲಾ ಗುತ್ತಿರುವುದೂ ಚರ್ಚೆಗೆ ಗ್ರಾಸವಾಗಿದೆ.ಶಾಸಕರಿಗೆ ಮೂಲ ವೇತನ 40 ಸಾವಿರ ರೂ.. ಕ್ಷೇತ್ರ ಭತ್ಯೆಯಾಗಿ 60 ಸಾವಿರ ರೂ., ಚುನಾವಣಾ ಕ್ಷೇತ್ರದ ಪ್ರಯಾಣ ಭತ್ಯೆಯಾಗಿ 50 ಸಾವಿರ ರೂ. ಆಪ್ತ ಸಹಾಯಕ ಮತ್ತು ಕೊಠಡಿ ಸೇವಕನ ಭತ್ಯೆ ಯಾಗಿ 20 ಸಾವಿರ ರೂ., ಅಂಚೆ ವೆಚ್ಚ 5 ಸಾವಿರ ರೂ. ದೂರವಾಣಿ ವೆಚ್ಚ 20 ಸಾವಿರ ರೂ. ಇದೆ. ಶಾಸಕರಿಗೆ ಯಾವ ಭತ್ಯೆ ಎಷ್ಟು?ಏಪ್ರಿಲ್-2022 ರಿಂದ ಜಾರಿಗೆ ಬರುವಂತೆ ಮಾಹೆಯಾನ ಪಾವತಿಸಲಾಗುತ್ತಿರುವ ವೇತನ/ಭತ್ಯೆಗಳ ವಿವರವು ಈ ಕೆಳಕಂಡಂತಿವೆ.…
ಹಿಜಾಬ್ ವಿವಾದ ಹಿನ್ನೆಲೆಯಲ್ಲಿ ವಸ್ತ್ರಸಂಹಿತೆ ಜಾರಿಪಿಯು ಪ್ರವೇಶಕ್ಕೆ ಮಾರ್ಗಸೂಚಿ ಬಿಡುಗಡೆ NAMMUR EXPRESS NEWSಬೆಂಗಳೂರು : ಪದವಿ ಪೂರ್ವ ಶಿಕ್ಷಣ ಇಲಾಖೆಯು 2022-23 ನೇ ಸಾಲಿನ ಪಿಯುಸಿ ದಾಖಲಾತಿ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದ್ದು, ಹಿಜಾಬ್ ವಿವಾದ ಹಿನ್ನೆಲೆಯಲ್ಲಿ ಕಾಲೇಜುಗಳಲ್ಲಿ ಹೈಕೋರ್ಟ್ ನೀಡಿರುವ ತೀರ್ಪಿನ ಅನ್ವಯ ಸಮವಸ್ತ್ರಗಳನ್ನು ಧರಿಸುವಂತೆ ಸೂಚಿಸಿದೆ.ಎಸ್ ಎಸ್ ಎಲ್ ಸಿ 2022 ರ ವಾರ್ಷಿಕ ಪರೀಕ್ಷೆಯ ಪಲಿತಾಂಶ ಮೇ 19 ರಂದು ಪ್ರಕಟವಾಗಲಿದ್ದು,20 ಕ್ಕೆ ಪ್ರಥಮ ಪಿಯು ಪ್ರವೇಶ ಪ್ರಕ್ರಿಯೆ ಪ್ರಾರಂಭವಾಗಲಿದೆ.ಕಾಲೇಜುಗಳಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ನಿಗದಿಪಡಿಸಿರುವ ಸಮವಸ್ತ್ರ ದರಿಸಬೇಕು ಒಂದುವೇಳೆ ನಿಗದಿಪಡಿಸಿಲ್ಲವಾದರೆ, ಸಮಾನತೆ ಮತ್ತು ಐಕ್ಯತೆಯನ್ನು ಕಾಪಾಡಿಕೊಂಡು ಹಾಗೂ ಸಾರ್ವಜನಿಕ ಶಾಂತಿ ಸುವ್ಯವಸ್ಥೆಗೆ ಧಕ್ಕೆ ಬಾರದಂತೆ ಉಡುಪುಗಳನ್ನು ಧರಿಸಬೇಕು ಎಂದು ಶೈಕ್ಷಣಿಕ ಮಾರ್ಗಸೂಚಿಯಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ.ಪ್ರತಿವರ್ಷದ ಮಾರ್ಗಸೂಚಿಯಲ್ಲಿ ಈ ಅಂಶ ಇರುತ್ತಿರಲಿಲ್ಲ, ಈ ಬಾರಿ ಹಿಜಾ ವಿವಾದ ಹಿನ್ನೆಲೆಯಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆ ಈ ಅಂಶವನ್ನು ಸೇರಿಸಿದೆ, ಮೊದಲ ಅವಧಿ ಜೂನ್ 9 ರಿಂದ ಸೆಪ್ಟೆಂಬರ್ 30ರವರೆಗೆ…
ಗುಜರಾತ್ ಯುವ ನಾಯಕನ ಹೊಸ ಹೆಜ್ಜೆಆಪ್ ಪಕ್ಷಕ್ಕೆ ಬರ್ತಾರಾ ಯುವ ನಾಯಕ NAMMUR EXPRESS NEWSಅಹಮದಾಬಾದ್: “ನಾನು ಬುಧುವಾರ ಕಾಂಗ್ರೆಸ್ ಪಕ್ಷದ ಹುದ್ದೆ ಹಾಗೂ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ನನ್ನ ಈ ನಿರ್ಧಾರವನ್ನು ನನ್ನೆಲ್ಲಾ ಬೆಂಬಲಿಗರು ಹಾಗೂ ಗುಜರಾತ್ ಜನತೆ ಸ್ವಾಗತ ಮಾಡುತ್ತದೆ ಎಂಬ ಖಾತ್ರಿ ಇದೆ. ನನ್ನ ಈ ಹೆಜ್ಜೆಯಿಂದ ಭವಿಷ್ಯದಲ್ಲಿ ಗುಜರಾತ್ ಗೋಸ್ಕರ ಸಕಾರಾತ್ಮಕ ರೂಪದಲ್ಲಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ ಎಂದು ನಂಬುತ್ತೇನೆ” ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಬರೆದಿರುವ ತಮ್ಮ ರಾಜೀನಾಮೆ ಪತ್ರವನ್ನು ಹಾರ್ದಿಕ್ ಪಟೇಲ್ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ. ಪಾಟಿದಾರ್ ಪರ ಹೋರಾಟಗಾರ ಪಟೇಲ್ 2019 ರಲ್ಲಿ ಲೋಕಸಭೆ ಚುನಾವಣೆಗೆ ಮುನ್ನ ಕಾಂಗ್ರೆಸ್ ಸೇರಿದ್ದರು. ಪಟೇಲ್ ಅವರು ಕಳೆದ ಕೆಲವು ವಾರಗಳಿಂದ ಗುಜರಾತ್ ಕಾಂಗ್ರೆಸ್ ಘಟಕದಲ್ಲಿ ಆಂತರಿಕ ಕಲಹದ ಬಗ್ಗೆ ದೂರು ನೀಡುವ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದರು.
ಮೇ 19ರಂದು ಫಲಿತಾಂಶ : ವಿದ್ಯಾರ್ಥಿಗಳಿಗೆ ಕಾತುರಭಯ ಬೇಡ, ಸೋತವರೇ ಗೆದ್ದಿದ್ದು ಹೆಚ್ಚು…! NAMMUR EXPRESS NEWSಬೆಂಗಳೂರು: 2021-22ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ಗುರುವಾರ (ಮೇ 19) ಪ್ರಕಟವಾಗಲಿದೆ. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಗುರುವಾರ ಮಧ್ಯಾಹ್ನ 12.30ಕ್ಕೆ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಕಚೇರಿಯಲ್ಲಿ ಫಲಿತಾಂಶ ಪಕಟಿಸಲಿದ್ದಾರೆ. ಬಳಿಕ ವಿವಿಧ ವೆಬ್‌ಸೈಟ್‌ಗಳಲ್ಲಿ ಫಲಿತಾಂಶ ಪ್ರಕಟವಾಗಲಿದೆ.ಮಾರ್ಚ್ 28ರಿಂದ ಏಪ್ರಿಲ್ 11ರವರೆಗೆ ನಡೆದಿದ್ದ ಪರೀಕ್ಷೆಯಲ್ಲಿ ರಾಜ್ಯದ ಒಟ್ಟು 15,387 ಶಾಲೆಗಳ 8.73 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಫಲಿತಾಂಶ ನೋಡೋದು ಹೇಗೆ? ಫಲಿತಾಂಶವನ್ನು http://kseeb. kar.nic.in. http://sslc. karnataka.gov.in, http:// karresults.nic.in ವೆಬ್ ಸೈಟ್‌ಗಳಲ್ಲಿ ವೀಕ್ಷಿಸಬಹುದಾಗಿದೆ. ನಂತರ ಮೊಬೈಲ್ ಸಂಖ್ಯೆಗೂ ಸಂದೇಶ ತಲುಪಲಿದೆ. ಭಯ ಬೇಡ, ಸೋತವನೆ ಗೆಲ್ಲೋದು!ಫಲಿತಾಂಶ ಏನೇ ಇರಲಿ, ಭಯ ಬೇಡ, ಕಡಿಮೆ ಅಂಕ ಬಂದರೆ, ಮೊದಲಿಗರರಾಗದಿದ್ದರೆ ಆತಂಕ ಬೇಡ, ಪ್ರಪಂಚದಲ್ಲಿ ಸೋತವನೆ ಗೆದ್ದಿರೋದು ಹೆಚ್ಚು. ಹಾಗಾಗಿ ಮತ್ತೆ ಹೆಚ್ಚಿನ ಪ್ರಯತ್ನ ಮಾಡಿ. ಎಲ್ಲಾ ವಿದ್ಯಾರ್ಥಿಗಳಿಗೆ…
ಬೆಳೆ ನಷ್ಟ, ಬೇಡಿಕೆ ಹೆಚ್ಚಳ ಹಿನ್ನೆಲೆ: ಏರಿದ ಬೆಲೆ NAMMUR EXPRESS NEWSಬೆಂಗಳೂರು: ಟೋಮೋಟೋ ಕೆಜಿ ಬೆಲೆ ಈಗ ಶತಕ ದತ್ತ ಬಂದು ನಿಂತಿದೆ.ಹೌದು ಈಗ ಪ್ರತೀ ಕೆಜಿ ಟೊಮೆಟೋ ಬೆಲೆ ರೂ.40ಕ್ಕೆ ಏರಿಕೆಯಾಗಿದೆ. ಹಾಪಕಾಮ್ಸ್ ಮಳಿಗೆಗಳಲ್ಲಿ ಕೆಜಿ ಟೊಮೆಟೋ ದರವು 75 ರೂ. ಆಗಿದ್ದರೂ, ಚಿಲ್ಲರೆ ವ್ಯಾಪಾರದಲ್ಲಿ, ನಾಟಿ ಮತ್ತು ಫಾರ್ಮ್ ಟೊಮೊಟೋ ಬೆಲೆ ಗಾತ್ರವನ್ನು ಅವಲಂಬಿಸಿ 80-90 ರೂ.ಗೆ ಏರಿಕೆ ಮಾಡಲಾಗಿದೆ. ಇನ್ನು ಕೆಲವೆಡೆ 100 ರೂ ಹತ್ತಿರ ಬಂದು ನಿಂತಿದೆ.ಬೆಲೆ ಏರಿಕೆಯಿಂದ ಆತಂಕಗೊಂಡಿರುವ ಅಧಿಕಾರಿಗಳು ಬೆಲೆಗಳನ್ನು ಹೇಗೆ ಕಡಿಮೆ ಮಾಡಬಹುದು ಮತ್ತು ಹೇಗೆ ನಿಯಂತ್ರಿಸಬಹುದು ಎಂಬುದರ ಕುರಿತು ಚಿಂತನೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ. ನಮಗೂ ಹೆಚ್ಚಿನ ಬೆಲೆಗೆ ಟೊಮೆಟೋ ಸಿಗುತ್ತಿದ್ದು, ಖರೀದಿ ಕಷ್ಟಸಾಧ್ಯವಾಗುತ್ತಿದೆ. ವ್ಯಾಪಾರ ಮಾಡಲು ಸಾಧ್ಯವಾಗುತ್ತಿಲ್ಲ ಏನೂ ಮಾಡಲು ಸಾಧ್ಯವಾಗುತ್ತಿಲ್ಲ ಎನ್ನುತ್ತಿದ್ದಾರೆ ಚಿಲ್ಲರೆ ವ್ಯಾಪಾರಿಗಳು. ತಳ್ಳು ಗಾಡಿಯಲ್ಲಿ ಟೊಮೆಟೊ ಸಿಗಲ್ಲ?!ಬೆಲೆ ಏರಿಕೆ ಮತ್ತು ಬೇಡಿಕೆಯ ಕುಸಿತವಾಗುತ್ತಿರುವ ಹಿನ್ನೆಲೆಯಲ್ಲಿ ತಳ್ಳು ಗಾಡಿ ವ್ಯಾಪಾರಿಗಳು ಟೊಮೆಟೋ ಮಾರಾಟವನ್ನೇ ಸ್ಥಗಿತಗೊಳಿಸಿದ್ದಾರೆ. ಅತಿವೃಷ್ಟಿಯಿಂದ…
ರಿಪ್ಪಿನಪೇಟೆಯ ಯುವ ಪ್ರತಿಭೆ ಪೂಜಿತಾ ಸಾಧನೆಕರ್ನಾಟಕ ಮಹಿಳಾ ಹಾಕಿ ತಂಡದ ಸಹ ಆಟಗಾರ್ತಿ NAMMUR EXPRESS NEWSರಿಪ್ಪನ್ ಪೇಟೆ(ಹೊಸನಗರ): ಗ್ರಾಮೀಣ ಭಾಗವೊಂದರ ಹುಡುಗಿ ರಿಪ್ಪನ್ ಪೇಟೆಯ ಬರುವೆ ಗ್ರಾಮದ ಪೂಜಿತಾ ಹಾಕಿ ಕ್ಷೇತ್ರದಲ್ಲಿ ಇದೀಗ ರಾಷ್ಟ್ರದ ಗಮನ ಸೆಳೆದಿದ್ದಾಳೆ.ರಿಪ್ಪನ್‌ಪೇಟೆ ಬರುವೆ ಗ್ರಾಮದ ನಿವಾಸಿಗಳಾದ ನಾಗೇಶ್ ಗೌಡ ಹಾಗೂ ಪೂರ್ಣಿಮಾ ದಂಪತಿಗಳ ಮಗಳಾದ ಪೂಜಿತ ರಾಷ್ಟ್ರ ಮಟ್ಟದಲ್ಲಿ ಹಾಕಿ ಕ್ರೀಡೆಯಲ್ಲಿ ಮಿಂಚುತ್ತಿದ್ದಾಳೆ. ಅಲ್ಲದೆ ಕರ್ನಾಟಕದ ಸ್ಟಾರ್ ಆಟಗಾರ್ತಿಯಾಗಿದ್ದಾಳೆ.ಮಧ್ಯ ಪ್ರದೇಶದ ಭೂಫಾಲ್ ನಲ್ಲಿ ನಡೆಯುತ್ತಿರುವ ರಾಷ್ಟ್ರ ಮಟ್ಟದ ಹಾಕಿ ಪಂದ್ಯಾವಳಿಯಲ್ಲಿ ಕರ್ನಾಟಕ ತಂಡವು ಮಂಗಳವಾರ ಹರಿಯಾಣ ತಂಡವನ್ನು ಮಣಿಸಿ ಫೈನಲ್ ಹಂತಕ್ಕೆ ತಲುಪಿದೆ.ಈ ಪಂದ್ಯಾವಳಿಯಲ್ಲಿ ಪೂಜಿತಾ ಉತ್ತಮವಾಗಿ ಆಡಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.ಬುಧವಾರ ಒಡಿಸ್ಸಾ ತಂಡದ ವಿರುದ್ಧ ಫೈನಲ್ ಪಂದ್ಯಾವಳಿ ನಡೆಯಲಿದೆ.ರಿಪ್ಪನ್ ಪೇಟೆಯ ಬರುವೆ ಗ್ರಾಮದ ಬಡ ಕುಟುಂಬದಲ್ಲಿ ಜನಿಸಿ ಕಷ್ಟ ಸುಖ, ನೋವುಗಳನ್ನು ನೋಡಿ ಕೃಷಿ ಆಧರಿಸಿ ಜೀವನ ಸಾಗಿಸಿಕೊಂಡು ಬಂದಂತಹ ನಾಗೇಶ್ ಗೌಡ ಪತ್ನಿ ಪೂರ್ಣಿಮಾ ಈ ದಂಪತಿಗಳ…
ಗದಗದ ಮುಂಡರಗಿ ತಾಲೂಕಿನಲ್ಲಿ ನಡೆದ ಘಟನೆರಾತ್ರಿಯೆಲ್ಲಾ ಮೊಬೈಲ್ ನೋಡಬೇಡ ಎಂದಿದ್ದಕ್ಕೆ ಆತ್ಮಹತ್ಯೆಫ್ಯಾಟ್ ಸರ್ಜರಿ ವೇಳೆ ಯುವ ನಟಿ ಸಾವು NAMMUR EXPRESS NEWSಬೆಂಗಳೂರು: ರಾಜ್ಯದಲ್ಲಿ ನೀರಿನ ಅನಾಹುತಗಳು ಹೆಚ್ಚಾಗುತ್ತಿವೆ. ಮೋಜು ಮಸ್ತಿ, ಅಜಾಗೂರೂಕತೆಯಿಂದ ನೀರಿಗೆ ಬಿದ್ದು ಹಲವರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಈ ನಡುವೆ ರಾಜ್ಯದಲ್ಲಿ ಮೂವರು ಮಕ್ಕಳು ಬಲಿಯಾಗಿದ್ದಾರೆ.ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಅತ್ತಿಕಟ್ಟಿ ತಾಂಡಾದ ಹೊರವಲಯದಲ್ಲಿರುವ ಕೃಷಿ ಹೊಂಡದಲ್ಲಿ ಕಾಲು ಜಾರಿ ಬಿದ್ದು ಮೂವರ ಬಾಲಕಿಯರ ಮೃತಪಟ್ಟಿದ್ದಾರೆ. ಅತ್ತಿಕಟ್ಟಿ ತಾಂಡಾದ ಸುನಿತಾ ಲಮಾಣಿ (13) ಅಂಕಿತಾ ಲಮಾಣಿ (10) ಹಾಗೂ ಡೋಣಿ ತಾಂಡಾದ ಸುನಿತಾ (11) ಮೃತ ಬಾಲಕಿಯರು ಎಂದು ತಿಳಿದು ಬಂದಿದೆ. ಕುರಿ ಮರಿ ಮೇಯಿಸಲು ಜಮೀನಿಗೆ ತೆರಳಿದ ಮೂವರು ಬಾಲಕಿಯರು,ಆಟವಾಡುತ್ತ ಕೃಷಿ ಹೊಂಡಕ್ಕೆ ಬಾಯಾರಿಕೆಯಾಗಿ ನೀರುಕುಡಿದು ಕೈಕಾಲು ಮುಖ ತೊಳೆದುಕೊಳ್ಳಲು ಮುಂದಾಗಿದ್ದರು.ಆಯತಪ್ಪಿ ಹೊಂಡದಲ್ಲಿ ಬಿದ್ದ ಮೃತ ಪಟ್ಟ ಬಗ್ಗೆ ಸಂಶಯ ವ್ಯಕ್ತವಾಗಿದೆ. ಅತ್ತಿಕಟ್ಟಿ ತಾಂಡಾದ ಲಕ್ಷ್ಮಣ ಲಮಾಣಿ ಗೋವಾದಲ್ಲಿ ಕೆಲಸ ಮಾಡುತ್ತಿದ್ದರು. ತಮ್ಮ ಗೋವಿಂದನ ಮದುವೆ ಹಿನ್ನೆಲೆ…
ಬಾಗೇಪಲ್ಲಿ ತಾಲ್ಲೂಕಿನ ಹಲವೆಡೆ ಭೀಕರ ಶಬ್ದಕಳೆದ ಕೆಲ ವರ್ಷದಿಂದ ಏನಾಗ್ತಿದೆ..?! NAMMUR EXPRESS NEWSಚಿಕ್ಕಬಳ್ಳಾಪುರ: ರಾಜ್ಯದ ಗಡಿಯ ಹತ್ತಾರು ಗ್ರಾಮಗಳಲ್ಲಿ ಪದೇ ಪದೇ ಭೂಮಿಯೊಳಗೆ ಭಾರೀ ಸ್ಫೋಟದ ಸದ್ದು ಕೇಳಿ ಬರ್ತಿದ್ದು ಜನ ಆತಂಕದಿಂದ ಕಾಲ ಕಳೆಯುವಂತಾಗಿದೆ. ಇನ್ನುಭೂಮಿಯ ಒಳಗೆ ಏನಾಗ್ತಿದೆ ಎಂಬ ರಹಸ್ಯವೂ ಇದೆ.ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲ್ಲೂಕಿನ ಹತ್ತಾರು ಹಳ್ಳಿಗಳಲ್ಲಿ ಭಾನುವಾರ ರಾತ್ರಿಯಿಂದ ಭೂಮಿಯ ಅಂತರಾಳದಿಂದ ವಿಚಿತ್ರ ಸದ್ದು ಕೇಳಿಬರುತ್ತಿದೆ. ಆ ಸದ್ದಿಗೆ ಭೂಮಿಯೇ ಗಡ ಗಡ ನಡುಗುತ್ತಿದೆ. ಇದ್ರಿಂದ ಜನರಿಗೆ ಭೂಕಂಪನದ ಅನುಭವ ಆಗುತ್ತಿದೆ. ರಾತ್ರಿ 8 ಗಂಟೆಯಿಂದ ಸಣ್ಣ ಪ್ರಮಾಣದಲ್ಲಿ ಆರಂಭವಾದ ಸದ್ದು ರಾತ್ರಿ 9.30 ಹಾಗೂ 9.45 ರಲ್ಲಿ ಬಹಳಷ್ಟು ಜೋರಾಗಿ ಕೇಳಿಬಂದಿದೆ. ಇದರಿಂದ ಭೂಮಿಯೇ ಅಲುಗಾಡಿದ ಅನುಭವ ಆಗಿ ಮನೆಯಲ್ಲಿದ್ದವರೆಲ್ಲಾ ಕೀರಾಚಾಡುತ್ತಾ ಹೊರಗೆ ಬಂದಿದ್ದಾರೆ. ಮನೆಯಲ್ಲಿದ್ದ ಪಾತ್ರೆ ಸಾಮಾನುಗಳಲ್ಲೆವೂ ಅಲುಗಾಡತೊಡಗಿವೆ. ಮಕ್ಕಳು ಭಯಭೀತರಾಗಿ ಚೀರಾಡಿ ಕಣ್ಣೀರು ಹಾಕಿದ್ದಾರೆ. ದಿಕ್ಕು ತೋಚದ ಜನ ಇಡೀ ರಾತ್ರಿ ಮನೆಯ ಹೊರಭಾಗದಲ್ಲೇ ಕಾಲ ಕಳೆದು ಜಾಗರಣೆ ಮಾಡಿದ್ದಾರೆ.ಬಾಗೇಪಲ್ಲಿ…
ಸಾಗರದಲ್ಲಿ ನಡೆದ ಅಚ್ಚರಿ ಘಟನೆತೀರ್ಥಹಳ್ಳಿಯ ಆಗುಂಬೆಯಲ್ಲಿ ಅಪರಿಚಿತ ಶವ ಪತ್ತೆ NAMMUR EXPRESS NEWSಸಾಗರ : ಯುವಕನೊಬ್ಬ ಹಾವು ಹಿಡಿಯಲು ಹೋಗಿ ಆಸ್ಪತ್ರೆ ಸೇರಿದ್ದಾನೆ. ತಾಲ್ಲೂಕಿನ ಶ್ರೀಧರ ನಗರದಲ್ಲಿ ಹಾವು ಹಿಡಿಯಲು ಹೋಗಿ ಯುವಕನೋರ್ವ ಕಚ್ಚಿಸಿಕೊಂಡಿದ್ದಾನೆ. ಶ್ರೀಧರ ನಗರದ 1ನೇ ಕ್ರಾಸ್‌ನ ಮನೆಯೊಂದರಲ್ಲಿ ಭಾನುವಾರ ರಾತ್ರಿ ನಾಗರಹಾವು ಕಾಣಿಸಿಕೊಂಡಿತ್ತು. ಈ ವೇಳೆ ದಿಲ್ಯಾದ್ ರೊನಾಲ್ಡ್ ಎಂಬ ಯುವಕ ಯಾವುದೇ ಮುನ್ನಚರಿಕೆ ಕ್ರಮ ವಹಿಸದೇ ಆ ಹಾವು ಹಿಡಿಯಲು ಹೋಗಿದ್ದಾನೆ. ಈ ವೇಳೆ ನಾಗರಹಾವು ಕಚ್ಚಿದೆ.ದಿಲ್ಕಾದ್ ಹಾವು ಕಚ್ಚಿದೊಡನೆ, ಆ ಸ್ಥಳವನ್ನು ಬ್ಲೆಡ್ ನಿಂದ ಕುಯ್ದು ಕೊಂಡಿದ್ದಾನೆ. ಮನೆಯ ಮಾಲೀಕ ಕೂಡಲೇ ದಿಲ್ಯಾದ್‌ನನ್ನು ಸಾಗರ ಉಪವಿಭಾಗೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇಲ್ಲಿ ಪ್ರಾಥಮಿಕ ಚಿಕಿತ್ಸೆ ಬಳಿಕ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಗಿದೆ. ಸಾಗರ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.ಅಪರಿಚಿತ ಶವ ಪತ್ತೆ!: ತೀರ್ಥಹಳ್ಳಿ ತಾಲೂಕು ಆಗುಂಬೆ ಟವರ್ ಬಳಿ ವಿಷ ಸೇವಿಸಿದ ವೃದ್ಧ(60) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಪರಿಚಿತ ಶವವಾಗಿದ್ದು ತಿಳಿದವರು ಅಥವಾ…