Categories
ಕೃಷಿ

ಶತಕದತ್ತ ಕೆಜಿ ಟೊಮೆಟೋ ಬೆಲೆ!

  • ಬೆಳೆ ನಷ್ಟ, ಬೇಡಿಕೆ ಹೆಚ್ಚಳ ಹಿನ್ನೆಲೆ: ಏರಿದ ಬೆಲೆ

NAMMUR EXPRESS NEWS
ಬೆಂಗಳೂರು: ಟೋಮೋಟೋ ಕೆಜಿ ಬೆಲೆ ಈಗ ಶತಕ ದತ್ತ ಬಂದು ನಿಂತಿದೆ.
ಹೌದು ಈಗ ಪ್ರತೀ ಕೆಜಿ ಟೊಮೆಟೋ ಬೆಲೆ ರೂ.40ಕ್ಕೆ ಏರಿಕೆಯಾಗಿದೆ. ಹಾಪಕಾಮ್ಸ್ ಮಳಿಗೆಗಳಲ್ಲಿ ಕೆಜಿ ಟೊಮೆಟೋ ದರವು 75 ರೂ. ಆಗಿದ್ದರೂ, ಚಿಲ್ಲರೆ ವ್ಯಾಪಾರದಲ್ಲಿ, ನಾಟಿ ಮತ್ತು ಫಾರ್ಮ್ ಟೊಮೊಟೋ ಬೆಲೆ ಗಾತ್ರವನ್ನು ಅವಲಂಬಿಸಿ 80-90 ರೂ.ಗೆ ಏರಿಕೆ ಮಾಡಲಾಗಿದೆ. ಇನ್ನು ಕೆಲವೆಡೆ 100 ರೂ ಹತ್ತಿರ ಬಂದು ನಿಂತಿದೆ.
ಬೆಲೆ ಏರಿಕೆಯಿಂದ ಆತಂಕಗೊಂಡಿರುವ ಅಧಿಕಾರಿಗಳು ಬೆಲೆಗಳನ್ನು ಹೇಗೆ ಕಡಿಮೆ ಮಾಡಬಹುದು ಮತ್ತು ಹೇಗೆ ನಿಯಂತ್ರಿಸಬಹುದು ಎಂಬುದರ ಕುರಿತು ಚಿಂತನೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ. ನಮಗೂ ಹೆಚ್ಚಿನ ಬೆಲೆಗೆ ಟೊಮೆಟೋ ಸಿಗುತ್ತಿದ್ದು, ಖರೀದಿ ಕಷ್ಟಸಾಧ್ಯವಾಗುತ್ತಿದೆ. ವ್ಯಾಪಾರ ಮಾಡಲು ಸಾಧ್ಯವಾಗುತ್ತಿಲ್ಲ ಏನೂ ಮಾಡಲು ಸಾಧ್ಯವಾಗುತ್ತಿಲ್ಲ ಎನ್ನುತ್ತಿದ್ದಾರೆ ಚಿಲ್ಲರೆ ವ್ಯಾಪಾರಿಗಳು.

ತಳ್ಳು ಗಾಡಿಯಲ್ಲಿ ಟೊಮೆಟೊ ಸಿಗಲ್ಲ?!
ಬೆಲೆ ಏರಿಕೆ ಮತ್ತು ಬೇಡಿಕೆಯ ಕುಸಿತವಾಗುತ್ತಿರುವ ಹಿನ್ನೆಲೆಯಲ್ಲಿ ತಳ್ಳು ಗಾಡಿ ವ್ಯಾಪಾರಿಗಳು ಟೊಮೆಟೋ ಮಾರಾಟವನ್ನೇ ಸ್ಥಗಿತಗೊಳಿಸಿದ್ದಾರೆ. ಅತಿವೃಷ್ಟಿಯಿಂದ ಬೆಳೆಗಳು ಹಾನಿಗೊಳಗಾಗಿವೆ. ಹೀಗಾಗಿ ದರ ಏರಿಕೆಯಾಗಿದೆ ಎಂದು ರೈತರು ಹಾಗೂ ವಿತರಕರು ಹೇಳುತ್ತಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.