-ಶೇ 25 ರಿಂದ 30 ರಷ್ಟು ಕಡಿಮೆ ಮಾಡಲು ಶಿಫಾರಸು-ಶೀಘ್ರವೇ ಸರ್ಕಾರದಿಂದ ಅಧಿಕೃತ ಆದೇಶ ಬೆಂಗಳೂರು: ರಾಜ್ಯದ ಖಾಸಗಿ ಶಾಲೆಗಳ ಶುಲ್ಕವನ್ನು ಶೇ.25ರಿಂದ 30 ಕಡಿತ ಮಾಡಲು ಶಿಫಾರಸು ಮಾಡಿ ಶಿಕ್ಷಣ ಇಲಾಖೆ ಸರ್ಕಾರಕ್ಕೆ ವರದಿ ಸಲ್ಲಿಸಿದೆ.ಇತ್ತೀಚಿಗೆ ಶುಲ್ಕ ವಿಚಾರವಾಗಿ ಪಾಲಕರು ಮತ್ತು ಖಾಸಗಿ ಶಾಲೆಗಳ ಜತೆ ನಡೆದ ಸಭೆಯಲ್ಲಿ ಎಲ್ಲರ ಅಭಿಪ್ರಾಯ ಸಂಗ್ರಹಿಸಿ ಶಿಕ್ಷಣ ಸಚಿವರಿಗೆ ವರದಿ ಸಲ್ಲಿಸಲಾಗಿದೆ. ವರದಿ ಪರಿಶೀಲಿಸಿ ರಾಜ್ಯ ಸರ್ಕಾರ ಶೀಘ್ರದಲ್ಲೇ ನಿರ್ಧಾರ ಪ್ರಕಟಿಸುವುದಾಗಿ ತಿಳಿದು ಬಂದಿದೆ. ಶುಲ್ಕ ಸಂಬಂದಿಸಿದಂತೆ ಸರ್ಕಾರಕ್ಕೆ ಈಗಾಗಲೇ ವರದಿ ಯನ್ನು ಸಲ್ಲಿಸಿದ್ದೇನೆ. ವರದಿ ನೋಡಿ ಅಧಿಕೃತ ಆದೇಶವನ್ನು ಸರ್ಕಾರ ಶೀಘ್ರವೇ ಹೊರಡಿಸಲಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ವಿ.ಅನ್ಬು ಕುಮಾರ್ ಅವರು ತಿಳಿಸಿದ್ದಾರೆ.
Author: Nammur Express Admin
-ಯಾರಿಗೆ ಕೋವ್ಯಾಕ್ಸಿನ್ ಸೂಕ್ತ, ಯಾರು ಲಸಿಕೆ ತೆಗೆದುಕೊಳ್ಳಬಾರದು?-ಯಾವುದೇ ಅಡ್ಡ ಪರಿಣಾಮ ಬೀರದಂತೆ ಮುನ್ನೆಚ್ಚರಿಕೆ ನವದೆಹಲಿ: ದೇಶಾದ್ಯಂತ ಕೋವಿಡ್ ವಿರುದ್ಧ ಲಸಿಕೆ ಅಭಿಯಾನ ಆರಂಭಿಸಿದ ಎರಡು ದಿನದ ನಂತರದ ಫ್ಯಾಕ್ಟ್ ಚೆಕ್ ಬಳಿಕ ಭಾರತ್ ಬಯೋಟೆಕ್ ಮುನ್ನೆಚರಿಕೆಯ ಮಾಹಿತಿಯನ್ನು ನೀಡಿದೆ.ದುರ್ಬಲ ರೋಗ ನಿರೋಧಕ ಶಕ್ತಿ ಹೊಂದಿರುವ ಅಥವಾ ಅನಾರೋಗ್ಯಕ್ಕೆ ಒಳಗಾಗಿದ್ದರೆ ಮತ್ತು ಅಲರ್ಜಿ ಹೊಂದಿರುವ ವ್ಯಕ್ತಿಗಳು ಕೋವ್ಯಾಕ್ಸಿನ್ ಲಸಿಕೆ ತೆಗೆದುಕೊಳ್ಳುವುದು ಬೇಡ ಎಂದು ಲಸಿಕೆ ತಯಾರಿಕಾ ಭಾರತ್ ಬಯೋಟೆಕ್ ಎಚ್ಚರಿಕೆ ನೀಡಿದೆ.ಈಗಾಗಲೇ ಭಾರತದಲ್ಲಿ ಕೋವಿಡ್ ಲಸಿಕೆ ವಿತರಣೆ ಅಭಿಯಾನ ಆರಂಭಗೊಂಡಿದ್ದು, ಕೇವಲ 580 ಮಂದಿಯಲ್ಲಿ ಅಡ್ಡಪರಿಣಾಮ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಭಾರತ್ ಬಯೋಟೆಕ್ ಪರಿಶೀಲನೆ ನಡೆಸಿದ ನಂತರ ಕೋವಿಡ್ ಲಸಿಕೆಯನ್ನು ಯಾರು ತೆಗೆದುಕೊಳ್ಳಬಹುದು, ಯಾರು ಲಸಿಕೆ ತೆಗೆದುಕೊಳ್ಳಬಾರದು ಎಂಬ ಬಗ್ಗೆ ಮಾಹಿತಿ ನೀಡಿದೆ. ನೀವು ದೀರ್ಘಕಾಲದಿಂದ ಅನಾರೋಗ್ಯಕ್ಕೆ ಒಳಗಾಗಿದ್ದು ಚಿಕಿತ್ಸೆ ಪಡೆಯುತ್ತಿರುವುದಾದರೆ ಎಷ್ಟು ಸಮಯದಿಂದ ಮತ್ತು ಈಗಿನ ಆರೋಗ್ಯ ಪರಿಸ್ಥಿತಿ ಹೇಗಿದೆ ಎಂಬುದನ್ನು ತಿಳಿಸಬೇಕು. ಮತ್ತು ಕೆಳಗೆ ಹೇಳಿರುವ ಯಾವುದೇ ಲಕ್ಷಣಗಳು ಕಂಡುಬಂದರೂ…
-ನೂತನ ಸಚಿವರಿಗೆ ಖಾತೆ ಹಂಚಿಕೆ-ಇಂದು ಸಿ.ಎಂ ಬಿ.ಎಸ್ ವೈ ಮಹತ್ವದ ಸಭೆ ಬೆಂಗಳೂರು : ನೂತನ ಸಚಿವರಿಗೆ ಖಾತೆ ಹಂಚಿಕೆ ಸಂಬಂಧ ಇಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಿರಿಯ ಸಚಿವರೊಂದಿಗೆ ಮಹತ್ವದ ಸಭೆ ನಡೆಸಲಿದ್ದಾರೆ.ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಲು ಸಿಎಂ ಬಿ.ಎಸ್. ಯಡಿಯೂರಪ್ಪ ಈಗಾಗಲೇ ಮುಹೂರ್ತ ಫಿಕ್ಸ್ ಮಾಡಿದ್ದಾರೆ. ಇಂದು ಹಿರಿಯ ಸಚಿವರೊಂದಿಗೆ ಸಭೆ ನಡೆಸಲಿದ್ದು, ಬಳಿಕ ಖಾತೆ ಹಂಚಿಕೆ ಪ್ರಕಟ ಮಾಡುವುದಾಗಿ ತಿಳಿಸಿದ್ದಾರೆಸಿಎಂ ಬಿ.ಎಸ್. ಯಡಿಯೂರಪ್ಪ ಬಳಿಯೇ 13 ಖಾತೆಗಳಿದ್ದು, ಸಭೆ ಬಳಿಕ ಸಿಎಂ ಇಂದು ಸಂಜೆ ಅಥವಾ ನಾಳೆ ಖಾತೆ ಹಂಚಿಕೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.
-ಹೂವು, ತರಕಾರಿ-ಸೊಪ್ಪುಗಳ ದರದಲ್ಲಿ ಕೊಂಚ ಇಳಿಕೆ-ಇಲ್ಲಿದೆ ಸಂಪೂರ್ಣ ಮಾಹಿತಿ ಬೆಂಗಳೂರು: ಹೂವು, ತರಕಾರಿ ಮತ್ತು ಸೊಪ್ಪುಗಳ ದರದಲ್ಲಿ ಕೊಂಚ ಇಳಿಕೆಯಾಗಿದೆ.ತರಕಾರಿ ಸೊಪ್ಪುಗಳ ದರದಲ್ಲಿ ಕೊಂಚ ಇಳಿಕೆಯಾಗಿದ್ದು ಗ್ರಾಹಕರಲ್ಲಿ ಸಂತಸ ಮನೆಮಾಡಿದೆ. ಹೂವಿನ ಬೆಲೆಯಲ್ಲಿ ಕೂಡಾ ಭಾರೀ ಇಳಿಕೆಯಾಗಿದೆ. ಕ್ಯಾರಟ್, ಟೊಮೇಟೊ, ಗೋರಿಕಾಯಿ, ಬಜ್ಜಿ ಮೆಣಸಿನಕಾಯಿ, ಎಲೆಕೋಸು ಮತ್ತಿತರ ತರಕಾರಿಗಳ ದರದಲ್ಲಿ ಇಳಿಕೆಯಾಗಿದೆ.ಯಾವುದೇ ಹಬ್ಬಗಳು ಇಲ್ಲದಿರುವುದರಿಂದ ಹೂವುಗಳಿಗೆ ಬೇಡಿಕೆ ಕಡಿಮೆಯಾಗಿದೆ. ಹೀಗಾಗಿ, ಹೂವಿನ ಬೆಲೆಯಲ್ಲಿ ಭಾರೀ ಇಳಿಕೆಯಾಗಿದೆ.ಮದುವೆ, ಗೃಹಪ್ರವೇಶ ಮತ್ತಿತರ ಕಾರ್ಯಕ್ರಮಗಳಿಗೆ ಸ್ವಲ್ಪ ಮಟ್ಟಿಗೆ ಹೂವು ಬಳಕೆಯಾಗುತ್ತಿದ್ದು, ಕೊಂಚ ಬೇಡಿಕೆಯಿದೆ ಎನ್ನುತ್ತಾರೆ ಹೂವಿನ ಸಗಟು ವ್ಯಾಪಾರಿ ಕೆ.ಪಿ. ಶ್ರೀನಿವಾಸ್.ಮತ್ತೊಂದೆಡೆ ಬೆಂಡೆಕಾಯಿ, ಬೀನ್ಸ್, ನುಗ್ಗೆಕಾಯಿ, ಮೂಲಂಗಿ, ಹೀರೇಕಾಯಿ ಮತ್ತಿತರ ಕೆಲವು ತರಕಾರಿಗಳ ದರದಲ್ಲಿ ಸ್ವಲ್ಪ ಏರಿಕೆಯಾಗಿದೆ. ಸೊಪ್ಪುಗಳ ದರವೂ ಸ್ವಲ್ಪ ಮಟ್ಟಿಗೆ ಗ್ರಾಹಕರ ಕೈಗೆಟುಕುವಂತಿವೆ. ಚಿಲ್ಲರೆ ಮಾರಾಟಗಾರರು ಗುಣಮಟ್ಟದ ಸೊಪ್ಪನ್ನು ಕಂತೆಗೆ 15-20 ರೂ.ನಂತೆ ಮಾರುತ್ತಿದ್ದಾರೆ.
ಕಮಲಾ ಹ್ಯಾರಿಸ್ ರಿಂದ ಪದಗ್ರಹಣನಗರದಲ್ಲಿ ಭಾರೀ ಭದ್ರತಾ ವ್ಯವಸ್ಥೆವಾಷಿಂಗ್ಟನ್: ಅಮೆರಿಕದ 46ನೇ ಅಧ್ಯಕ್ಷರಾಗಿ ಜೋ ಬೈಡನ್ಬುಧವಾರ ಅಧಿಕಾರ ಸ್ವೀಕರಿಸುವರು. ಮೊಟ್ಟ ಮೊದಲ ಮಹಿಳಾ ಉಪಾಧ್ಯಕ್ಷೆಯಾಗಿ ಭಾರತ ಮೂಲದ ಅಮೆರಿಕನ್ಪ್ರಜೆ ಕಮಲಾ ಹ್ಯಾರಿಸ್ ಪದಗ್ರಹಣ ಮಾಡಲಿದ್ದಾರೆ.ಕ್ಯಾಪಿಟಲ್ಹಿಲ್ನ ಪಶ್ಚಿಮ ದ್ವಾರದ ಬಳಿ ನಡೆಯುವ ಸಮಾರಂಭದಲ್ಲಿ ಸುಪ್ರೀಂಕೋರ್ಟ್ಮುಖ್ಯನ್ಯಾಯಮೂರ್ತಿ ಜಾನ್ರಾಬರ್ಟ್ಸ್ಅವರು ಜೋ ಬೈಡನ್ಅವರಿಗೆ ಪ್ರತಿಜ್ಞಾವಿಧಿ ಬೋಧಿಸುವರು. ಬೈಡನ್ಅವರು ತಮ್ಮ ಕುಟುಂಬ ಹೊಂದಿರುವ 127 ವರ್ಷ ಹಳೆಯದಾದ ಬೈಬಲ್ಮೇಲೆ ಪ್ರಮಾಣ ಮಾಡುವ ಮೂಲಕ ಪ್ರತಿಜ್ಞಾ ವಿಧಿ ಸ್ವೀಕರಿಸುವರು ಎಂದು ಮೂಲಗಳು ಹೇಳಿವೆ. ಈ ಕಾರಣ ನಗರದಲ್ಲಿ ಯಾವುದೇ ತೊಂದರೆ ಆಗದಂತೆ ಬಿಗಿ ಬಂದೋಬಸ್ತ್ ಮಾಡಲಾಗಿದೆ.ಕಮಲಾ ಹ್ಯಾರಿಸ್ಅವರಿಗೆ ಸುಪ್ರೀಂಕೋರ್ಟ್ನ್ಯಾಯಮೂರ್ತಿ ಸೋನಿಯಾ ಸೋಟೊಮೇಯರ್ಪ್ರತಿಜ್ಞಾವಿಧಿ ಬೋಧಿಸುವರು ಎಂದು ಮೂಲಗಳು ತಿಳಿಸಿದೆ.
-ದೇಶದ ಮೊದಲ ಮಹಿಳಾ ಫೈಟರ್ ಪೈಲಟ್ ಆಗಿ ಭಾವನಾ ಕಾಂತ್-ಕೇಂದ್ರ ಆರೋಗ್ಯ ಸಚಿವರಿಂದ ಅಭಿನಂದನೆ ಹೊಸದಿಲ್ಲಿ: ಫ್ಲೈಟ್ ಲೆಫ್ಟಿನೆಂಟ್ ಭಾವನಾ ಕಾಂತ್ ರವರು ಗಣರಾಜ್ಯೋತ್ಸವ ಪರೇಡ್ನಲ್ಲಿ ಪಾಲ್ಗೊಳ್ಳುತ್ತಿರುವ “ಪ್ರಪ್ರಥಮ ಮಹಿಳಾ ಫೈಟರ್ ಪೈಲಟ್’’ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.ಜ. 26ರಂದು ಐಎಎಫ್ ನ ಟ್ಯಾಬ್ಲೊ ಜತೆ ಅವರು ಸಂಚರಿಸಲಿದ್ದು, ಹಗುರ ಯುದ್ಧವಿಮಾನ, ಹಗುರ ಯುದ್ಧ ಹೆಲಿಕಾಪ್ಟರ್ ಮತ್ತು ಸುಖೋಯ್-30 ಯುದ್ಧ ವಿಮಾನಗಳ ಅಣಕು ಸ್ತಬ್ಧಚಿತ್ರದೊಂದಿಗೆ ಭಾವನಾ ಪರೇಡ್ ನಡೆಸಲಿದ್ದಾರೆ.ಪ್ರಸ್ತುತ ಇವರು ರಾಜಸ್ಥಾನದ ವಾಯುನೆಲೆಯೊಂದರಲ್ಲಿ ಮಿಗ್-21 ಬೈಸನ್ ಫೈಟರ್ ಪ್ಲೇನ್ಗೆ ಪೈಲಟ್ ಆಗಿದ್ದಾರೆ. 2016ರಲ್ಲಿ ವಾಯುಪಡೆಗೆ ಆಯ್ಕೆಯಾದ “ಮೊದಲ ಫೈಟರ್ ಪೈಲಟ್’ ಖ್ಯಾತಿಯ ಭಾವನಾ ಅವರಿಗೆ ಕೇಂದ್ರ ಆರೋಗ್ಯ ಸಚಿವರು ಟ್ವಿಟರಿನಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ.
-20 ಲಕ್ಷ ಉದ್ಯೋಗ ಸೃಷ್ಟಿ-5 ಸಾವಿರ ಕೋಟಿ ಹೂಡಿಕೆ ಬೆಂಗಳೂರು: ರಾಜ್ಯದ ಸಮಗ್ರ ಅಭಿವೃದ್ಧಿಗಾಗಿ, ಮುಂದಿನ ಐದು ವರ್ಷದಲ್ಲಿ ಐದು ಸಾವಿರ ಕೋಟಿ ಹೂಡಿಕೆ ಮೂಲಕ 20 ಲಕ್ಷ ಉದ್ಯೋಗ ಸೃಷ್ಟಿಸುವ ಹೊಸ ಕೈಗಾರಿಕಾ ನೀತಿಯನ್ನು ಬಿಡುಗಡೆ ಮಾಡಲಾಗಿದೆವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯು ನಗರದ ಖಾಸಗಿ ಹೋಟೆಲ್ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೈಗಾರಿಕಾ ನೀತಿ 2020-25 ಕೈಪಿಡಿಯನ್ನು ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್ ಬಿಡುಗಡೆ ಮಾಡಿ ಮಾತನಾಡಿದರು. ”ಹೊಸ ಕೈಗಾರಿಕಾ ನೀತಿಯ ಉತ್ತೇಜನಾ ಕ್ರಮ ಹಾಗೂ ರಿಯಾಯಿತಿ ಪ್ಯಾಕೇಜ್ 2020ರ ಆಗಸ್ವ್ 13ರಿಂದಲೇ ಅನ್ವಯವಾಗುತ್ತದೆ..”ರಾಜ್ಯದ ಸಮಗ್ರ ಅಭಿವೃದ್ಧಿ ಹಾಗೂ ಬೆಂಗಳೂರಿನಿಂದ ಹೊರಗೆ ಕೈಗಾರಿಕೆಗಳನ್ನು ಎರಡು ಮತ್ತು ಮೂರನೇ ದರ್ಜೆಯ ನಗರಕ್ಕೆ ವಿಸ್ತರಿಸುವುದು ನಮ್ಮ ಉದ್ದೇಶ. ಹೂಡಿಕೆಗೆ ರಿಯಾಯಿತಿ ಒದಗಿಸಲು ರಾಜ್ಯದ ಜಿಲ್ಲೆಗಳನ್ನು ಮೂರು ವಲಯಗಳನ್ನಾಗಿ ವಿಂಗಡಿಸಲಾಗಿದೆ. ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಗಳನ್ನು ವಲಯ 3ರಲ್ಲಿ ವರ್ಗೀಕರಿಸಲಾಗಿದೆ. ಕೊಪ್ಪಳದಲ್ಲಿ ಆಟಿಕೆ ಕ್ಲಸ್ಟರ್, ಹುಬ್ಬಳ್ಳಿ ಧಾರವಾಡದಲ್ಲಿ ಎಫ್ಎಂಸಿಜಿ ಕ್ಲಸ್ಟರ್, ಯಾದಗಿರಿಯಲ್ಲಿ ಫಾರ್ಮಾ ಕ್ಲಸ್ಟರ್ ಅಭಿವೃದ್ಧಿಪಡಿಸಲಾಗಿದೆ.…
-ಪೊಲೀಸರು ತಡೆದ ಕಡೆ ರಸ್ತೆ ಬಂದ್-ಕಾಂಗ್ರೆಸ್ ಕಾರ್ಯಕರ್ತರಿಗೆ ಡಿ.ಕೆ.ಶಿ ಕರೆ ಬೆಂಗಳೂರು: ಕೃಷಿ ಕಾಯ್ದೆ ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಯನ್ನು ಬೆಂಬಲಿಸಿ ಕಾಂಗ್ರೆಸ್ ರಾಜಭವನ ಚಲೋ ಪ್ರತಿಭಟನೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಪೊಲೀಸ್ ಇಲಾಖೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಆರೋಪಿಸಿದ್ದಾರೆ. ಬೆಂಗಳೂರಿನಲ್ಲಿ ಬುಧವಾರ ಮಾತನಾಡಿರುವ ಅವರು, ‘ರಾಜ್ಯ ಸರ್ಕಾರ ಪೊಲೀಸ್ ಜನರ ಪ್ರತಿಭಟನೆ ಹಕ್ಕನ್ನು ಕಸಿಯುವ ಪ್ರಯತ್ನ ಮಾಡುತ್ತಿದೆ’ ಎಂದುಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ರೈತ ಮತ್ತು ಜನ ವಿರೋಧಿ ಕಾಯ್ದೆಗಳ ವಿರುದ್ಧದ ‘ರಾಜಭವನ ಚಲೋ’ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಬೆಂಗಳೂರಿಗೆ ಆಗಮಿಸುತ್ತಿರುವ ರೈತರು ಹಾಗೂ ಕಾಂಗ್ರೆಸ್ ಕಾರ್ಯಕರ್ತರನ್ನು ಮಂಗಳವಾರ ರಾತ್ರಿಯಿಂದಲೇ ಪೊಲೀಸರು ಮಾರ್ಗ ಮಧ್ಯದಲ್ಲೇ ತಡೆಯುತ್ತಿದ್ದಾರೆ.
-ಕೊರೋನಾ ಪರೀಕ್ಷೆ ವಿಚಾರದಲ್ಲಿ ಕೇಂದ್ರ ಸರ್ಕಾರದ ಮೆಚ್ಚುಗೆಗೆ ಪಾತ್ರವಾಗಿದ್ದ ಕರ್ನಾಟಕ-ಲಸಿಕ ಹಂಚಿಕೆಯಲ್ಲೂ ಪ್ರಥಮ ಸ್ಥಾನ! ಬೆಂಗಳೂರು: ಕೊರೋನಾ ಪರೀಕ್ಷೆ ವಿಚಾರದಲ್ಲಿ ಸೇರಿದಂತೆ, ಕೊರೋನಾ ಲಸಿಕೆ ಹಂಚಿಕೆ ವಿಚಾರದಲ್ಲಿ ಕರ್ನಾಟಕ ರಾಜ್ಯ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ.ರಾಜ್ಯದಲ್ಲಿ ಕಠಿಣ ನಿಯಮಾವಳಿ ಜಾರಿ ಮಾಡುವ ಮೂಲಕ ಕೋವಿಡ್ ಅನ್ನು ನಿಯಂತ್ರಿಸುವಲ್ಲಿ ರಾಜ್ಯ ಸರ್ಕಾರ ಯಶಸ್ವಿಯಾಗಿತ್ತು. ಆ ಬಳಿಕ ತ್ವರಿತಗತಿಯಲ್ಲಿ ರಾಜ್ಯ ಬಹುತೇಕ ಜಿಲ್ಲೆಗಳನ್ನು ಲ್ಯಾಬ್ ಗಳನ್ನು ಆರಂಭಿಸಿದ ಸರ್ಕಾರ ಕೋವಿಡ್ ಟೆಸ್ಟಿಂಗ್ ವಿಚಾರದಲ್ಲೂ ಉಳಿದ ರಾಜ್ಯಗಳಿಗೆ ಮಾದರಿಯಾಗುವ ಮೂಲಕ ಕೇಂದ್ರ ಸರ್ಕಾರದ ಮೆಚ್ಚುಗೆಗೆ ಪಾತ್ರವಾಗಿತ್ತು.ಶನಿವಾರವಷ್ಟೇ ಲಸಿಕೆ ಹಂಚಿಕೆ ಪ್ರಕ್ರಿಯೆ ಆರಂಭವಾಗಿದ್ದು, ಅಷ್ಟರಲ್ಲೇ ಕರ್ನಾಟಕದಲ್ಲಿ 80,686 ಮಂದಿ ಕೋವಿಡ್ ಲಸಿಕೆ ಪಡೆದಿದ್ದಾರೆ.
ರಿಷಭ್ ಪಂತ್ ಶುಭ್ಮನ್ ಗಿಲ್ ಹಾಗೂ ಚೇತೇಶ್ವರ್ ಪೂಜಾರ್ ಬ್ಯಾಟಿಂಗ್ ಆರ್ಭಟಕ್ಕೆ ಕಾಂಗರು ಪಾಳ್ಯ ಧೂಳಿ ಪಟ.ಬಾರ್ಡರ್ – ಗವಾಸ್ಕರ್ ಟ್ರೋಫಿಯನ್ನ ತನ್ನಲ್ಲೇ ಉಳಿದಿಕೊಂಡ ಭಾರತ. ಬ್ರಿಸ್ಬೇನ್ (ಜ. 19): ಗಬ್ಬಾದಲ್ಲಿ ನಡೆದ ಬಾರ್ಡರ್ – ಗವಾಸ್ಕರ್ ಟ್ರೋಫಿಯ ಅಂತಿಮ ನಾಲ್ಕನೇ ರೋಚಕ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾ 3 ವಿಕೆಟ್ಗಳ ಭರ್ಜರಿ ಜಯ ಸಾಧಿಸಿ ಸರಣಿ ವಶಪಡಿಸಿಕೊಂಡಿದೆ. ಎರಡನೇ ಇನ್ನಿಂಗ್ಸ್ನಲ್ಲಿ ರಿಷಭ್ ಪಂತ್ ಆಟ ಹಾಗೂ ಶುಭ್ಮನ್ ಗಿಲ್, ಚೇತೇಶ್ವರ್ ಪೂಜಾರ ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ರಹಾನೆ ಪಡೆ ಕಾಂಗರೂಗಳ ನಾಡಿನಲ್ಲಿ ಐತಿಹಾಸಿಕ ಜಯ ಸಾಧಿಸಿದೆ. ಈ ಮೂಲಕ ಬಾರ್ಡರ್ – ಗವಾಸ್ಕರ್ ಟ್ರೋಫಿಯನ್ನ ತನ್ನಲ್ಲೇ ಉಳಿದಿಕೊಂಡಿದೆ. ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ 2-1 ಮುನ್ನಡೆ ಸಾಧಿಸುವ ಮೂಲಕ ಕಾಂಗರೂಗಳ ನಾಡಿನಲ್ಲಿ ಟೆಸ್ಟ್ ಸರಣಿ ಗೆದ್ದ ವಿಶೇಷ ಸಾಧನೆ ಮಾಡಿದೆನಿನ್ನೆ ಆಸ್ಟ್ರೇಲಿಯಾವನ್ನು 294 ರನ್ಗೆ ಆಲೌಟ್ ಮಾಡಿ 328 ರನ್ಗಳ ಗುರಿ ಬೆನ್ನಟ್ಟಿದ ಭಾರತ…