ಜೋಗ ಅಭಿವೃದ್ಧಿಗೆ 120 ಕೋಟಿ ಹಣಸಾಗರ ಭೇಟಿ ವೇಳೆ ಸಿಎಂ ಘೋಷಣೆ ಸಾಗರ: ವಿಶ್ವವಿಖ್ಯಾತ ಜೋಗ ಇನ್ಮುಂದೆ ಮತ್ತಷ್ಟು ಅಭಿವೃದ್ಧಿಯಾಗಲಿದೆ. 120 ಕೋಟಿ ರೂ.ವೆಚ್ಚದಲ್ಲಿ ಅಭಿವೃದ್ಧಿ ಮಾಡಿ ದೇಶದ ಅತ್ಯುತ್ತಮ ಪ್ರವಾಸಿತಾಣವನ್ನಾಗಿಸಲು ರಾಜ್ಯ ಸರ್ಕಾರ ಯೋಜನೆ ರೂಪಿಸಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಸಾಗರದ ನಗರಸಭೆ ಪೌರ ಸನ್ಮಾನ ಸ್ವೀಕರಿಸಿ ಈ ಘೋಷಣೆ ಮಾಡಿದ್ದಾರೆ. ಸಮಗ್ರ ಸಾಗರ ಅಭಿವೃದ್ಧಿಗೆ ಅನುಮೋದನೆ ನೀಡಲಾಗಿದೆ. ತಕ್ಷಣವೇ ಸಾಗರದ ರಸ್ತೆ ಅಭಿವೃದ್ಧಿಗೆ 30 ಕೋಟಿ ಬಿಡುಗಡೆ ಮಾಡಲಾಗುವುದು ಎಂದಿದ್ದಾರೆ. ಇತ್ತೀಚೆಗೆ ತಾನೇ ಸಿಗಂದೂರು ಸೇತುವೆ ನಿರ್ಮಾಣಕ್ಕೆ ಅನುದಾನ ನೀಡಲಾಗಿತ್ತು. ಈಗಾಗಲೇ ಕಾಮಗಾರಿ ಶುರುವಾಗಿದೆ.
Author: Nammur Express Admin
ರುಚಿಕರ, ಸ್ವಾದಿಷ್ಟಕರಹುಟ್ಟು ಹಬ್ಬ, ವಿಶೇಷ ಸಮಾರಂಭಕ್ಕೆ ವಿಶೇಷ ಆಫರ್ ತೀರ್ಥಹಳ್ಳಿ: ಪ್ರತಿಷ್ಠಿತ ಐಸ್ ಕ್ರೀಮ್ ಬ್ರಾಂಡ್ ಒಂದಾದ ಅರುಣ್ ಐಸ್ ಕ್ರೀಮ್ಸ್ನಲ್ಲಿ ಇದೀಗ ಕೇಕ್ ಲಭ್ಯವಿದೆ.ಈಗಾಗಲೇ ಐಸ್ ಕ್ರೀಮ್, ಹಾಲು, ಮೊಸರು, ರುಚಿಕರ, ಸ್ವಾದಿಷ್ಟಕರ ಐಸ್ ಕ್ರೀಮ್ ನೀಡಿರುವ ಬ್ರಾಂಡ್ ಇದೀಗ ಕೇಕ್ ಸೌಲಭ್ಯ ಶುರು ಮಾಡಿದೆ.ಹುಟ್ಟು ಹಬ್ಬ, ವಿಶೇಷ ಸಮಾರಂಭಕ್ಕೆ ವಿಶೇಷ ಕೇಕ್ ಜೊತೆಗೆ ಎಲ್ಲಾ ರೀತಿಯ ಕೇಕ್ ಸಿಗಲಿದೆ. ಕೇಕ್ ರಿಯಾಯಿತಿ ದರದಲ್ಲಿ ಲಭ್ಯವಿದೆ.ತೀರ್ಥಹಳ್ಳಿಯ ಹಳೆ ಕೋರ್ಟ್ ಮುಂಭಾಗವಿರುವ ಅರುಣ್ ಐಸ್ ಕ್ರೀಮ್ಗೆ ಕೂಡಲೇ ಭೇಟಿ ನೀಡಿ…ಹೊಸ ರುಚಿ, ವಿಭಿನ್ನ ಡಿಸೈನ್ ಜೊತೆ ಕೇಕ್ ಸಿಗಲಿದೆ.ಮಾಹಿತಿಗಾಗಿ..9743879955ವಿಳಾಸ: ಅರುಣ್ ಐಸ್ ಕ್ರೀಮ್ಹಳೆ ಕೋರ್ಟ್, ಸೊಪ್ಪುಗುಡ್ಡೆತೀರ್ಥಹಳ್ಳಿ.
ರಾಕ್ ವ್ಯೂ ಲಾಡ್ಜಿಂಗ್ ಡಿ.7ಕ್ಕೆ ಶುಭಾರಂಭಉದ್ಯಮಿ ಕಿಮ್ಮನೆ ಆದಿತ್ಯ ಮಾಲೀಕತ್ವದ ಉದ್ಯಮ ತೀರ್ಥಹಳ್ಳಿಗೆ ಮತ್ತೊಂದು ಹೈಟೆಕ್ ಲಾಡ್ಜ್ ಶುರುವಾಗಲಿದೆ. ಆಧುನಿಕ ಶೈಲಿ, ಅತ್ಯಾಕರ್ಷಕ ವಿನ್ಯಾಸ, ಸುಸಜ್ಜಿತ ಪಾರ್ಕಿಂಗ್ ವ್ಯವಸ್ಥೆ, ಎಸಿ ಸೇವೆಯೊಂದಿಗೆ ಈ ಲಾಡ್ಜ್ ಶುರುವಾಗಿದೆ.ಮಲೆನಾಡಿನ ಪ್ರಸಿದ್ಧ ಉದ್ಯಮಿ ಕಿಮ್ಮನೆ ಆದಿತ್ಯ ಮಾಲೀಕತ್ವದ ರಾಕ್ ವ್ಯೂ ಲಾಡ್ಜಿಂಗ್ ಡಿ.7ಕ್ಕೆ ಶುಭಾರಂಭಗೊಳ್ಳಲಿದೆ.ಬಾಳೆಬೈಲಿನ ಮಲ್ನಾಡ್ ಕ್ಲಬ್ ಎದುರಿನಲ್ಲಿ ಎಸಿ ಸೌಲಭ್ಯವುಳ್ಳ ಲಾಡ್ಜ್ ಸೋಮವಾರದಿಂದ ಆರಂಭವಾಗಲಿದೆ.ಶೀಘ್ರದಲ್ಲಿ ರಾಕ್ ವ್ಯೂ ಬಾರ್ ಅಂಡ್ ರೆಸ್ಟೋರೆಂಟ್ ಪ್ರಾರಂಭಗೊಳ್ಳಲಿದೆ. ಮಾಲೀಕರಾದ ಕಿಮ್ಮನೆ ಆದಿತ್ಯ ಈ ಕಾರ್ಯಕ್ರಮಕ್ಕೆ ಸರ್ವರನ್ನು ಸ್ವಾಗತಿಸಿದ್ದಾರೆ.ನೂತನ ಉದ್ಯಮಕ್ಕೆ NAMMUR EXPRESS ಶುಭ ಕೋರಿದೆ.
ಹೋಟೆಲ್ ಮಯೂರ ಡಿಲಕ್ಸ್ ಹೋಟೆಲ್ ಜತೆ ಲಾಡ್ಜಿಂಗ್ ಶುರುಮಲೆನಾಡಿನ ಗ್ರಾಹಕರ ಮೆಚ್ಚಿನ ಹೋಟೆಲ್ ತೀರ್ಥಹಳ್ಳಿ: ಮಲೆನಾಡಿನ ಸುಂದರ ತಾಣ ತೀರ್ಥಹಳ್ಳಿಯಲ್ಲಿ ಕಳೆದ 25 ವರ್ಷದಿಂದ ಸಸ್ಯಾಹಾರಿ ಹೋಟೆಲ್ ಸೇವೆ ನೀಡುತ್ತಿರುವ ಮಯೂರ ಸಂಸ್ಥೆ ಇದೀಗ ಅತ್ಯಾಧುನಿಕ ಲಾಡ್ಜಿಂಗ್ ಸೇವೆ ಶುರು ಮಾಡಿದೆ.ತೀರ್ಥಹಳ್ಳಿಯ ಗಾಂಧಿ ಚೌಕದಲ್ಲಿರುವ ಮಯೂರ ಹೋಟೆಲ್ ಉನ್ನತೀಕರಣ ಮತ್ತು ಡಿಲಕ್ಸ್ ಲಾಡ್ಜಿಂಗ್ ಉದ್ಘಾಟನೆಯನ್ನು ಬೆಳಿಗ್ಗೆ ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯದ ಧರ್ಮಕರ್ತ ಡಾ.ಭೀಮೇಶ್ವರ ಜೋಷಿ ನೆರವೇರಿಸಿ ಶುಭ ಕೋರಿದರು. ನಾಯಕರಾದ ಆರಗ ಜ್ಞಾನೇಂದ್ರ, ಕಿಮ್ಮನೆ ರತ್ನಾಕರ್, ಮಂಜುನಾಥ ಗೌಡ ಸೇರಿದಂತೆ ಬಹುತೇಕ ಗಣ್ಯರು, ಉದ್ಯಮಿಗಳು, ಗ್ರಾಹಕರು ಭಾಗಿಯಾಗಿ ಶುಭ ಕೋರಿದರು.ಅತ್ಯಾಧುನಿಕ, ಗ್ರಾಹಕ ಸ್ನೇಹಿ ಸೌಲಭ್ಯ ನೀಡಲು ಸಂಸ್ಥೆ ಸಿದ್ಧವಾಗಿದೆ. ಎಸಿ, ಲಾಕರ್, ಡ್ರೈವರ್ ರೂಮ್ಸ್, 24/7 ಫುಡ್, ವೈಫೈ, ಲಾಂಡ್ರಿ ಸೇರಿ ಹತ್ತಾರು ಸೌಲಭ್ಯಗಳಿವೆ. ಈ ಮೂಲಕ ಮಲೆನಾಡಿನಲ್ಲೇ ಅತೀ ಹೆಚ್ಚು ಸೌಲಭ್ಯವುಳ್ಳ ಲಾಡ್ಜ್ ಇದಾಗಲಿದೆ.ಸಂಪರ್ಕ ಸಂಖ್ಯೆ : 9448724888, 8951062099, 08181-229095, 08181-295108.ಮಲೆನಾಡಿನ ಎಲ್ಲಾ ಸುದ್ದಿ, ಮಾಹಿತಿಯನ್ನು ರಾಜ್ಯದ ಪ್ರಮುಖ…
ಅಪೆಕ್ಸ್ ಬ್ಯಾಂಕ್ ನಿರ್ದೇಶಕರಾಗಿ ಆಯ್ಕೆಸಿಂಪಲ್ ನಾಯಕನ ಹೊಸ ಪಯಣ ತೀರ್ಥಹಳ್ಳಿ: ಒಂದು ಸಿಂಪಲ್ ಶರ್ಟ್..ಸಿಂಪಲ್ ಪ್ಯಾಂಟ್..ಮೊಬೈಲ್ ಬಳಕೆಯೂ ಕಡಿಮೆ.ಸಹಕಾರಿ ಕ್ಷೇತ್ರವನ್ನು ಬುಡದಿಂದ ತಲೆವರೆಗೆ ಕಟ್ಟಿ ಹಳ್ಳಿ ಹಳ್ಳಿಗೂ ಸಹಕಾರಿ ಕ್ಷೇತ್ರದ ಮೂಲಕ ಕೊಡುಗೆ ನೀಡಿರುವ ತೀರ್ಥಹಳ್ಳಿಯ ಸಹಕಾರಿ ನಾಯಕ ವಿಜಯದೇವ್ ರಾಜ್ಯ ಅಪೆಕ್ಸ್ ಬ್ಯಾಂಕ್ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಸಹಕಾರಿ ಕ್ಷೇತ್ರದಲ್ಲಿ ಮತ್ತೊಂದು ಮೈಲುಗಲ್ಲು ನೆಟ್ಟಿದ್ದಾರೆ.ಹಳ್ಳಿ ಜನತೆಗೆ ಅಡಿಕೆ ಮಾರಾಟಕ್ಕೆ ತೀರ್ಥಹಳ್ಳಿಯಲ್ಲಿಯೇ ವ್ಯವಸ್ಥೆ ಮಾಡಿಕೊಡುವಲ್ಲಿ ಮುಂಚೂಣಿಯಲ್ಲಿರುವ ಪ್ರತಿಷ್ಠಿತ ಸಹ್ಯಾದ್ರಿ ಸಹಕಾರ ಸಂಘದ ಅಧ್ಯಕ್ಷರಾಗಿ, ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷರೂ ಆಗಿರುವ ವಿಜಯದೇವ್ ರಾಜ್ಯದ ಹಿರಿಯ ಸಹಕಾರಿಗಳಲ್ಲಿ ಒಬ್ಬರು. ಸಾವಿರದಿಂದ ಸಾವಿರ ಕೋಟಿ ವಹಿವಾಟು ಮಾಡಿರುವ ಸಂಸ್ಥೆಯ ರೂವಾರಿ.ನಾಲ್ಕೈದು ದಶಕಗಳಿಂದ ಸಹಕಾರಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ ಮಲೆನಾಡಿನ ಅಡಿಕೆ ಬೆಳೆಗಾರರು, ರೈತರ ನೆಚ್ಚಿನ ವಿಜಯಣ್ಣ ಆವರಿಗೆ ಮಹತ್ವದ ಹುದ್ದೆ ಲಭಿಸಿದೆ.
ಟೆಲಿ ಸೇಲ್ಸ್ ಕ್ಷೇತ್ರದಲ್ಲಿ ಉದ್ಯೋಗ8000-15,000 ರೂ.ಸಂಬಳಡಿಗ್ರಿ ಪಾಸ್, ಫೇಲ್ ಆದವರಿಗೂ ಅವಕಾಶ ತೀರ್ಥಹಳ್ಳಿ: ಮಲೆನಾಡಿನ ಸ್ಥಳೀಯ ಉದ್ಯೋಗಾಕಾಂಕ್ಷಿ ಯುವಕ ಯುವತಿಯರಿಗೆ ಗುಡ್ ನ್ಯೂಸ್!. ತೀರ್ಥಹಳ್ಳಿಯಲ್ಲಿ ಆರಂಭವಾಗಿರುವ ಪ್ರಸಿದ್ಧ ಕಂಪನಿಯೊಂದರಲ್ಲಿ 30ಕ್ಕೂ ಹೆಚ್ಚು ಉದ್ಯೋಗ ಅವಕಾಶ ಇದೆ. ಡಿಗ್ರಿ ಪಾಸ್, ಫೇಲ್ ಆದವರಿಗೂ ಅವಕಾಶ ಇದೆ. ಟೆಲಿ ಸೇಲ್ಸ್ ಕ್ಷೇತ್ರದಲ್ಲಿ ಹೊಸ ಸಾಧನೆ ಮಾಡುತ್ತಿರುವ ಕಂಪನಿಗೆ ತಕ್ಷಣ ನೇಮಕಾತಿ ನಡೆಯುತ್ತಿದೆ.ಹುದ್ದೆ: ರಿಲೇಷನ್ಶಿಪ್ ಮ್ಯಾನೇಜರ್( ಟೆಲಿ ಸೇಲ್ಸ್)ಇಂಗ್ಲಿಷ್, ಕನ್ನಡ, ಹಿಂದಿ, ತಮಿಳು, ಮಲಯಾಳಂ, ತೆಲಗು ಭಾಷೆಯಲ್ಲಿ ಯಾವುದಾದರೊಂದು ಭಾಷೆ ಬಲ್ಲವರಾಗಿರಬೇಕು.ಉದ್ಯೋಗ ಆಕಾಂಕ್ಷಿಗಳು ತಕ್ಷಣ ಸಂಪರ್ಕ ಮಾಡಿ ನೇರ ಸಂದರ್ಶನಕ್ಕೆ ಹಾಜರಾಗಬಹುದು.ವಿಳಾಸ: ಟೆಕ್ ಏಡ್ಅನುರಾಧ ನರ್ಸಿಂಗ್ ಹೋಂ ಎದುರುಸೊಪ್ಪುಗುಡ್ಡೆ, ತೀರ್ಥಹಳ್ಳಿ.ಶಿವಮೊಗ್ಗ ಜಿಲ್ಲೆಸಂಪರ್ಕಿಸಿ: ನಿಖಿಲ್ – 9448715178.ಈ ಸುದ್ದಿಯನ್ನು ಉದ್ಯೋಗ ಬಯಸುವವರಿಗೆ ಶೇರ್ ಮಾಡಿ.
ಅಪೆಕ್ಸ್ ಬ್ಯಾಂಕ್ ನಿರ್ದೇಶಕರಾಗಿ ಆಯ್ಕೆಸಿಂಪಲ್ ನಾಯಕನ ಹೊಸ ಪಯಣ ತೀರ್ಥಹಳ್ಳಿ: ಒಂದು ಸಿಂಪಲ್ ಶರ್ಟ್..ಸಿಂಪಲ್ ಪ್ಯಾಂಟ್..ಮೊಬೈಲ್ ಬಳಕೆಯೂ ಕಡಿಮೆ.ಸಹಕಾರಿ ಕ್ಷೇತ್ರವನ್ನು ಬುಡದಿಂದ ತಲೆವರೆಗೆ ಕಟ್ಟಿ ಹಳ್ಳಿ ಹಳ್ಳಿಗೂ ಸಹಕಾರಿ ಕ್ಷೇತ್ರದ ಮೂಲಕ ಕೊಡುಗೆ ನೀಡಿರುವ ತೀರ್ಥಹಳ್ಳಿಯ ಸಹಕಾರಿ ನಾಯಕ ವಿಜಯದೇವ್ ರಾಜ್ಯ ಅಪೆಕ್ಸ್ ಬ್ಯಾಂಕ್ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಸಹಕಾರಿ ಕ್ಷೇತ್ರದಲ್ಲಿ ಮತ್ತೊಂದು ಮೈಲುಗಲ್ಲು ನೆಟ್ಟಿದ್ದಾರೆ.ಹಳ್ಳಿ ಜನತೆಗೆ ಅಡಿಕೆ ಮಾರಾಟಕ್ಕೆ ತೀರ್ಥಹಳ್ಳಿಯಲ್ಲಿಯೇ ವ್ಯವಸ್ಥೆ ಮಾಡಿಕೊಡುವಲ್ಲಿ ಮುಂಚೂಣಿಯಲ್ಲಿರುವ ಪ್ರತಿಷ್ಠಿತ ಸಹ್ಯಾದ್ರಿ ಸಹಕಾರ ಸಂಘದ ಅಧ್ಯಕ್ಷರಾಗಿ, ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷರೂ ಆಗಿರುವ ವಿಜಯದೇವ್ ರಾಜ್ಯದ ಹಿರಿಯ ಸಹಕಾರಿಗಳಲ್ಲಿ ಒಬ್ಬರು. ಸಾವಿರದಿಂದ ಸಾವಿರ ಕೋಟಿ ವಹಿವಾಟು ಮಾಡಿರುವ ಸಂಸ್ಥೆಯ ರೂವಾರಿ.ನಾಲ್ಕೈದು ದಶಕಗಳಿಂದ ಸಹಕಾರಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ ಮಲೆನಾಡಿನ ಅಡಿಕೆ ಬೆಳೆಗಾರರು, ರೈತರ ನೆಚ್ಚಿನ ವಿಜಯಣ್ಣ ಆವರಿಗೆ ಮಹತ್ವದ ಹುದ್ದೆ ಲಭಿಸಿದೆ.
ಹೇಳಿಕೆ ಬಳಿಕ ಯೂ ಟರ್ನ್ಬಿ.ಸಿ.ಪಾಟೀಲ ವಿರುದ್ಧ ಜನ ಬಿಸಿ ಬಿಸಿ! ಬೆಂಗಳೂರು: ಆತ್ಮಹತ್ಯೆ ಮಾಡಿಕೊಳ್ಳುವ ರೈತರು ಹೇಡಿಗಳು ಎಂಬ ಹೇಳಿಕೆ ವಿವಾದದ ರೂಪ ಪಡೆದುಕೊಳ್ಳುತ್ತಿದ್ದಂತೆ ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರು ಯೂ ಟರ್ನ್ ಹೊಡೆದಿದ್ದಾರೆ.ಗುರುವಾರ ಬೆಳಗ್ಗೆ ಕೊಡಗು ಜಿಲ್ಲೆ ಮಡಿಕೇರಿಯ ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಕಾರ್ಯಕ್ರಮದಲ್ಲಿ ಮಾತನಾಡಿದ ಪಾಟೀಲ್, ಸಮಸ್ಯೆಗಳಲ್ಲಿ ಸಿಲುಕಿರುವ ರೈತರು ಶ್ರಮವಹಿಸಿ ಸಮಸ್ಯೆಗಳ ಸುಳಿಯಿಂದ ಹೊರಬರುವಂತಾಗಬೇಕು.ಅದು ಬಿಟ್ಟು ಹೇಡಿಗಳಂತೆ ಸಾವಿಗೆ ಶರಣಾಗಬಾರದು. ಹೆಂಡತಿ, ಮಕ್ಕಳನ್ನು ನೋಡಿಕೊಳ್ಳಲಾಗದೇ ಆತ್ಮಹತ್ಯೆ ಮಾಡಿಕೊಳ್ಳುವಾತ ಹೇಡಿ ಎಂದು ಹೇಳಿದ್ದರು.ಇದು ವಿವಾದಕ್ಕೆ ತಿರುಗುತ್ತಿದ್ದಂತೆ ಸ್ಪಷ್ಟನೆ ನೀಡಿ, ತಾವು ರೈತರನ್ನು ಹೇಡಿ ಎಂದು ಎಂದಿಗೂ ಸಂಬೋಧಿಸಿಲ್ಲ. ಆತ್ಮಹತ್ಯೆಯಂತಹ ಕೆಲಸ ಹೇಡಿತನದ್ದು ಎಂದಿದ್ದೇನೆ. ಯಾರೇ ಆಗಲೀ ಆತ್ಮಹತ್ಯೆಯಂತಹ ಹೇಡಿತನದ ಕೆಲಸಕ್ಕೆ ಮುಂದಾಗಬಾರದು. ಕಷ್ಟನಷ್ಟಗಳನ್ನು ಈಜಿ ಜಯಿಸಬೇಕು ಎಂದು ಹೇಳಿದ್ದೇನೆ ಎಂದಿದ್ದಾರೆ. ಸಚಿವರ ಈ ಹೇಳಿಕೆ ಭಾರೀ ಗೊಂದಲ ಮೂಡಿಸಿದ್ದು ಅವರ ವಿರುದ್ಧ ರೈತರು, ಜನತೆ ತಿರುಗಿ ಬಿದ್ದಿದ್ದಾರೆ. ಪ್ರತಿ ಪಕ್ಷಗಳಿಗೆ ಗ್ರಾಮ ಪಂಚಾಯ್ತಿ ಚುನಾವಣೆಗೆ ಒಂದು ವಸ್ತು ಸಿಕ್ಕಿದೆ.
ಕರೋನಾ ವಿಶೇಷ ಪ್ಯಾಕೇಜ್ ಕಟ್ರಾಜ್ಯದ ಯೋಜನೆ ಮಾತ್ರ ಜಾರಿ ನವ ದೆಹಲಿ: ಗರೀಬ್ ಕಲ್ಯಾಣ್ ಯೋಜನೆಯಡಿ ಕರೋನಾ ತುರ್ತು ಹಿನ್ನಲೆ ಕಳೆದ ಏಳು ತಿಂಗಳಿನಿಂದ ಕೇಂದ್ರವು ಪಡಿತರ ಚೀಟಿದಾರರಿಗೆ ನೀಡುತ್ತಿದ್ದ ಉಚಿತ ಅಕ್ಕಿ, ಬೇಳೆ ಇನ್ನು ಇಲ್ಲ.ಕೊರೋನದಿಂದಾದ ಉದ್ಯೋಗ ಮತ್ತು ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಹಿನ್ನೆಲೆಯಲ್ಲಿ ಕಳೆದ ಏಪ್ರಿಲ್‌ನಿಂದ ಪಡಿತರ ಚೀಟಿ ಹೊಂದಿರುವ ರಾಜ್ಯದ ಎಲ್ಲ ಫಲಾನುಭವಿಗಳಿಗೆ ತಲಾ 5 ಕೆಜಿ ಅಕ್ಕಿ ಮತ್ತು ಕುಟುಂಬವೊಂದಕ್ಕೆ 1 ಕೆಜಿ ಕಡಲೆಕಾಳನ್ನು ಕೇಂದ್ರ ಸರ್ಕಾರ ಗರೀಬ್ ಕಲ್ಯಾಣ ಯೋಜನೆಯಡಿ ವಿತರಿಸುತ್ತಿತ್ತು.ರಾಜ್ಯದ ಪಡಿತರ ಚೀಟಿ ಫಲಾನುಭವಿಗಳಿಗೆ ತಲಾ 10 ಕೆಜಿ ಅಕ್ಕಿ ಮತ್ತು ಕುಟುಂಬಕ್ಕೆ ತಲಾ 2 ಕೆಜಿ ಗೋಧಿ, 1ಕೆಜಿ ಕಡಲೆಕಾಳು ಲಭ್ಯವಾಗುತ್ತಿತ್ತು. ಇದೀಗ ಕೇಂದ್ರ ಸರ್ಕಾರದ ಆದೇಶದಂತೆ ಇದು ನವೆಂಬರ್ ಅಂತ್ಯಕ್ಕೆ ಕೊನೆಗೊಂಡಿದೆ.ಡಿಸೆಂಬರ್‌ನಿಂದ ಅಂತ್ಯೋದಯ ಪಡಿತರ ಕಾರ್ಡ್ ಹೊಂದಿರುವ ಕುಟುಂಬಕ್ಕೆ 30 ಕೆಜಿ ಅಕ್ಕಿ, 2 ಕೆಜಿ ಗೋಧಿ ಹಾಗೂ ಬಿಪಿಎಲ್ ಪಡಿತರ ಚೀಟಿ ಫಲಾನುಭವಿಗೆ ತಲಾ 5 ಕೆಜಿ ಅಕ್ಕಿ…
ದಿನಕ್ಕೆ 2000-4000 ಸಾವುರಾಜ್ಯದಲ್ಲೂ ಹೊಸ ನಿಯಮ..? ಅಮೆರಿಕಾ: ಅಮೆರಿಕದ ಆಸ್ಪತ್ರೆಗಳಲ್ಲಿ 10 ಲಕ್ಷ ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರತಿ ದಿನ 2 ರಿಂದ ನಾಲ್ಕು ಸಾವಿರ ಮಂದಿ ಮೃತಪಡುತ್ತಿದ್ದಾರೆ. ಈ ಘಟನೆ ಇದೀಗ ಮತ್ತೊಂದು ಸುತ್ತಿನ ಆತಂಕಕ್ಕೆ ಕಾರಣವಾಗಿದೆ.ಆಸ್ಟ್ರೇಲಿಯಾ, ಇಂಗ್ಲೆಂಡ್ ಸೇರಿ ಅನೇಕ ದೇಶಗಳಲ್ಲಿ ಮತ್ತೊಂದು ಸುತ್ತಿನ ಲಾಕ್ ಡೌನ್ ಶುರುವಾಗಿದೆ. ಇತ್ತ ಭಾರತದ ಅಹಮದಾಬಾದ್ ಸೇರಿ ಅನೇಕ ಕಡೆ ರಾತ್ರಿ ಕರ್ಪ್ಯೂ ಹೇರಿಕೆಯಾಗಿದೆ. ಆದರೆ ಜನತೆ ಮತ್ತೆ ಎಲ್ಲಾ ಭಯ ಬಿಟ್ಟಿದ್ದಾರೆ.ಕರ್ನಾಟಕದಲ್ಲಿ ಕೊರೊನಾದ ಎರಡನೇ ಅಲೆ ಕಾಣಿಸಿಕೊಳ್ಳಲಿದೆ ಎನ್ನುವ ಕುರಿತು ತಜ್ಞರು ಹಾಗೂ ಅಧಿಕಾರಿಗಳ ಜತೆ ಸಭೆ ನಡೆಸಿ ನಿರ್ಧಾರಕ್ಕೆ ಕೈಗೊಳ್ಳಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ತಿಳಿಸಿದ್ದಾರೆ. ಇನ್ನು ಹೊಸ ವರ್ಷಾಚರಣೆಗೂ ಕರೋನಾ ಕರಿ ನೆರಳು ಬಿದ್ದಿದ್ದು, ಬಹುತೇಕ ಸರ್ಕಾರ ಹೆಚ್ಚಿನ ಜನ ಸೇರುವಿಕೆಗೆ ಬ್ರೇಕ್ ಹಾಕಲಿದೆ.