Categories
ಮಲ್ನಾಡ್

ರಾಜ್ಯ ಸಹಕಾರಿ ಕ್ಷೇತ್ರಕ್ಕೆ ಸಹಕಾರಿ ಭೀಷ್ಮ ವಿಜಯ್ ದೇವ್ ಎಂಟ್ರಿ!

  • ಅಪೆಕ್ಸ್ ಬ್ಯಾಂಕ್ ನಿರ್ದೇಶಕರಾಗಿ ಆಯ್ಕೆ
  • ಸಿಂಪಲ್ ನಾಯಕನ ಹೊಸ ಪಯಣ

ತೀರ್ಥಹಳ್ಳಿ: ಒಂದು ಸಿಂಪಲ್ ಶರ್ಟ್..ಸಿಂಪಲ್ ಪ್ಯಾಂಟ್..ಮೊಬೈಲ್ ಬಳಕೆಯೂ ಕಡಿಮೆ.
ಸಹಕಾರಿ ಕ್ಷೇತ್ರವನ್ನು ಬುಡದಿಂದ ತಲೆವರೆಗೆ ಕಟ್ಟಿ ಹಳ್ಳಿ ಹಳ್ಳಿಗೂ ಸಹಕಾರಿ ಕ್ಷೇತ್ರದ ಮೂಲಕ ಕೊಡುಗೆ ನೀಡಿರುವ ತೀರ್ಥಹಳ್ಳಿಯ ಸಹಕಾರಿ ನಾಯಕ ವಿಜಯದೇವ್ ರಾಜ್ಯ ಅಪೆಕ್ಸ್ ಬ್ಯಾಂಕ್ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಸಹಕಾರಿ ಕ್ಷೇತ್ರದಲ್ಲಿ ಮತ್ತೊಂದು ಮೈಲುಗಲ್ಲು ನೆಟ್ಟಿದ್ದಾರೆ.
ಹಳ್ಳಿ ಜನತೆಗೆ ಅಡಿಕೆ ಮಾರಾಟಕ್ಕೆ ತೀರ್ಥಹಳ್ಳಿಯಲ್ಲಿಯೇ ವ್ಯವಸ್ಥೆ ಮಾಡಿಕೊಡುವಲ್ಲಿ ಮುಂಚೂಣಿಯಲ್ಲಿರುವ ಪ್ರತಿಷ್ಠಿತ ಸಹ್ಯಾದ್ರಿ ಸಹಕಾರ ಸಂಘದ ಅಧ್ಯಕ್ಷರಾಗಿ, ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷರೂ ಆಗಿರುವ ವಿಜಯದೇವ್ ರಾಜ್ಯದ ಹಿರಿಯ ಸಹಕಾರಿಗಳಲ್ಲಿ ಒಬ್ಬರು. ಸಾವಿರದಿಂದ ಸಾವಿರ ಕೋಟಿ ವಹಿವಾಟು ಮಾಡಿರುವ ಸಂಸ್ಥೆಯ ರೂವಾರಿ.
ನಾಲ್ಕೈದು ದಶಕಗಳಿಂದ ಸಹಕಾರಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ ಮಲೆನಾಡಿನ ಅಡಿಕೆ ಬೆಳೆಗಾರರು, ರೈತರ ನೆಚ್ಚಿನ ವಿಜಯಣ್ಣ ಆವರಿಗೆ ಮಹತ್ವದ ಹುದ್ದೆ ಲಭಿಸಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.