Author: Nammur Express Admin

ಜನಾಂಗದ ದನಿಗೆ ಅಶ್ವತ್ಥನಾರಾಯಣ, ಹಾಲಪ್ಪ ಸಾಥ್ ಬೆಳಗಾವಿ: ಲಿಂಗಾಯತ ನಿಗಮದ ಬಳಿಕ ಸರ್ಕಾರಕ್ಕೆ ಅನೇಕ ಜಾತಿಗಳು ತಮ್ಮ ಜನಾಂಗದ ನಿಗಮ ರಚಿಸ ಅಭಿವೃದ್ಧಿಪಡಿಸಬೇಕೆಂಬ ಬೇಡಿಕೆ ಇಡುತ್ತಿವೆ. ಈ ನಡುವೆ ಸರ್ಕಾರ ಒಕ್ಕಲಿಗರ ಅಭಿವೃದ್ಧಿ ನಿಗಮವನ್ನು ರಚಿಸಬೇಕು. ತಕ್ಷಣವೇ ಒಕ್ಕಲಿಗ ಸಮುದಾಯ ಅಭಿವೃದ್ಧಿ ನಿಗಮ ಮಾಡಲು ನಾನು ಒತ್ತಾಯಿಸುತ್ತೇನೆ ಎಂದು ಡಿಸಿಎಂ ಅಶ್ವತ್ಥ ನಾರಾಯಣ್ ಹೇಳಿದ್ದಾರೆ. ಇತ್ತ ಕೆಲವು ದಿನಗಳ ಹಿಂದೆ ರಾಜ್ಯದಲ್ಲಿ ಪ್ರಭಾವಿ ಸಮುದಾಯವಾಗಿರುವ ಈಡಿಗ ಸಮುದಾಯ ಕೂಡ ಹಾಲಪ್ಪ ನೇತೃತ್ವದಲ್ಲಿ ಈಡಿಗ ಅಭಿವೃದ್ಧಿ ನಿಗಮ ರಚಿಸಬೇಕೆಂದು ಸರ್ಕಾರಕ್ಕೆ ಮನವಿ ಮಾಡಿತ್ತು.ಬೆಳಗಾವಿಯಲ್ಲಿ ಮಾತನಾಡಿದ ಅಶ್ವತ್ಥನಾರಾಯಣ, ಮರಾಠರು ಕೂಡ ಕನ್ನಡಿಗರು, ಕನ್ನಡ ನಾಡಿನಲ್ಲಿರುವಂಥವರು. ಅವರಿಗೆ ಹಕ್ಕಿದೆ. ಹಾಗಾಗಿ ಅವರಿಗೆ ನಿಗಮ ರಚನೆ ಮಾಡಿದ್ದೇವೆ. ಈ ನಾಡು ಎಲ್ಲರಿಗೆ ಸೇರಿದ್ದು. ಎಲ್ಲಾ ಸಮುದಾಯಕ್ಕೆ ನಿಗಮ ಕೊಡಬೇಕು ಎಂದಿದ್ದಾರೆ.

Read More

ಚುನಾವಣಾ ಆಯೋಗದಿಂದ ಸ್ಪಷ್ಟನೆಸದಸ್ಯರ ಕುಟುಂಬದವರಿಗೂ ಅನ್ವಯ..? ಬೆಂಗಳೂರು: ರಾಜ್ಯದಲ್ಲಿ 2 ಹಂತಗಳಲ್ಲಿ ಗ್ರಾಮ ಪಂಚಾಯತ್ ಚುನಾವಣೆ ನಡೆಯಲಿದೆ. ಈ ನಡುವೆ ಗ್ರಾಮ ಪಂಚಾಯತ್ ಚುನಾವಣೆಗೆ ನಿಲ್ಲುವ ಅಭ್ಯರ್ಥಿಗಳಿಗೆ ಚುನಾವಣಾ ಆಯೋಗ ಶಾಕ್ ನೀಡಿದೆ. ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಾಮಗಾರಿ ನಿರ್ವಹಿಸುತ್ತಿರುವ ಗುತ್ತಿಗೆದಾರರು ಚುನಾವಣೆಗೆ ಸ್ಪರ್ಧಿಸುವಂತಿಲ್ಲ ಎಂದು ಆಯೋಗ ಸ್ಪಷ್ಟವಾಗಿ ಹೇಳಿದೆ.ಗುತ್ತಿಗೆದಾರರು ಪ್ರಸ್ತುತ ಗ್ರಾಮ ಪಂಚಾಯತ್ ಕಾಮಗಾರಿ ನಿರ್ವಹಿಸುತ್ತಿದ್ದಲ್ಲಿ ಅವರು ಗ್ರಾಮ ಪಂಚಾಯತ್ ಚುನಾವಣೆಗೆ ಸ್ಪರ್ಧಿಸಲು ಅನರ್ಹರಾಗುತ್ತಾರೆ. ಈ ವಿಷಯದಲ್ಲಿ ಚುನಾವಣಾಧಿಕಾರಿಗಳಿಗೆ ಮಾಹಿತಿ ಇಲ್ಲವಾದಲ್ಲಿ ಅವರು ಯಾವುದೇ ಕ್ರಮ ತೆಗೆದುಕೊಳ್ಳುವ ಅಗತ್ಯವಿಲ್ಲ. ಒಂದು ವೇಳೆ ಅಭ್ಯರ್ಥಿಯೊಬ್ಬರು ಈ ಬಗ್ಗೆ ಮಾಹಿತಿಯನ್ನು ಸೂಕ್ತ ದೃಢೀಕರಣದೊಂದಿಗೆ ನೀಡಿದಲ್ಲಿ ಕ್ರಮ ತೆಗೆದುಕೊಳ್ಳಬೇಕು ಎಂದು ಸೂಚಿಸಲಾಗಿದೆ. ನಿಯಮಗಳೇನು?: ಚುನಾವಣಾ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ಗಂಡ ಸರ್ಕಾರಿ ನೌಕರನಾಗಿದ್ದರೆ ಹೆಂಡತಿ ಚುನಾವಣೆಗೆ ಸ್ಪರ್ಧಿಸಬಹುದು. ಅದೇ ರೀತಿ ಹೆಂಡತಿ ಸರ್ಕಾರಿ ನೌಕರಳಾಗಿದ್ದಲ್ಲಿ ಗಂಡ ಕೂಡ ಸ್ಪರ್ಧೆ ಮಾಡಬಹುದಾಗಿದೆ.ನಾಮಪತ್ರ ವಾಪಸ್ಸು ಪಡೆಯಲು ಸೂಚಕರ ಬದಲಾಗಿ ಬೇರೊಬ್ಬರನ್ನು ಮತದಾರನ ಮುಖಾಂತರ ಕಳುಹಿಸಿದರೆ…

Read More

100 ಎಕರೆ ಪ್ರದೇಶದಲ್ಲಿ ಸೈನಿಕ ಶಾಲೆ ಯೋಜನೆತೀರ್ಥಹಳ್ಳಿಯಲ್ಲಿ 500 ಕೋಟಿಯ ಅಭಿವೃದ್ಧಿ ಪರ್ವ ತೀರ್ಥಹಳ್ಳಿ: ಬಹು ನಿರೀಕ್ಷಿತ ಸೈನಿಕ್ ಶಾಲೆ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಪ್ರವಾಸಿ ತಾಣ ಆಗುಂಬೆ ಬಳಿ ಶುರುವಾಗಲಿದೆ. ಈಗಾಗಲೇ ಸುಮಾರು 100 ಎಕರೆ ಪ್ರದೇಶ ಗುರುತಿಸುವ ಕಾರ್ಯ ಆರಂಭವಾಗಿದೆ. 300 ಕೋಟಿ ರೂಪಾಯಿಗೂ ಹೆಚ್ಚು ವೆಚ್ಚದಲ್ಲಿ ಶಾಲೆ ನಿರ್ಮಾಣ ಮಾಡಲಾಗುತ್ತದೆ ಎಂದು ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದ್ದಾರೆ. ತೀರ್ಥಹಳ್ಳಿ ಕ್ಷೇತ್ರದ ಹಲವೆಡೆ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಶಂಕುಸ್ಥಾಪನೆ ಮಾಡಿ ಮಾತನಾಡಿದ ರಾಘವೇಂದ್ರ, ಸೈನಿಕ ಶಾಲೆ ಸ್ಥಾಪನೆ ಸಂಬಂಧ ಕೇಂದ್ರ ರಕ್ಷಣಾ ಸಚಿವ ರಾಜನಾಥ್‍ಸಿಂಗ್ ಅವರೊಂದಿಗೆ ಚರ್ಚಿಸಿ ಅಂತಿಮ ತೀರ್ಮಾನ ಮಾಡಲಾಗಿದೆ. ಎಲ್ಲ ಸೌಕರ್ಯಗಳೊಂದಿಗೆ ಸೈನಿಕ ಶಾಲೆ ಆರಂಭವಾಗಲಿದ್ದು ತೀರ್ಥಹಳ್ಳಿ ಭಾಗಕ್ಕೆ ವಿಶೇಷ ಆದ್ಯತೆ ಸಿಗಲಿದೆ. ಜೊತೆಗೆ ಶಿವಮೊಗ್ಗದಲ್ಲಿ 350 ಕೋಟಿ ವೆಚ್ಚದಲ್ಲಿ ವಿಮಾನ ನಿಲ್ದಾಣ ಶುರುವಾಗಿದೆ. 5000 ಕೋಟಿ ವೆಚ್ಚದಲ್ಲಿ ಶಿವಮೊಗ್ಗ-ತುಮಕೂರು ಜೋಡಿ ರಸ್ತೆ ಈಗಾಗಲೇ ನಡೆಯುತ್ತಿದೆ. ಶಿವಮೊಗ್ಗಕ್ಕೆ ಕೈಗಾರಿಕಾ ಕಾರಿಡಾರ್ ತರುವ ಪ್ರಯತ್ನ ಮಾಡುತ್ತಿದ್ದೇನೆ.…

Read More

ಹೊಸ ಅಧ್ಯಕ್ಷರ ಆಯ್ಕೆಗೆ ಕೂಡಿ ಬರದ ಮುಹೂರ್ತಆದರ್ಶ ಹುಂಚದಕಟ್ಟೆ, ತೀಲಿ ರಾಘವೇಂದ್ರ ಪೈಪೋಟಿ? ಪೊಲಿಟಿಕಲ್ ಡೆಸ್ಕ್: ನಮ್ಮೂರ್ ಎಕ್ಸ್‍ಪ್ರೆಸ್ ತೀರ್ಥಹಳ್ಳಿ: ಕಾಂಗ್ರೆಸ್ ಸಂಘಟನೆ ಕೊರತೆಯಿಂದ ದಿನೇ ದಿನೇ ತಣ್ಣಗಾಗುತ್ತಿರುವ ನಡುವೆ ತೀರ್ಥಹಳ್ಳಿಯಲ್ಲಿ ಯುವ ಕಾಂಗ್ರೆಸ್ ಅನಾಥವಾಗಿದೆ.ಕಳೆದ ಕೆಲವು ತಿಂಗಳು ಹಿಂದೆಯೇ ಯುವ ಘಟಕದ ಅಧ್ಯಕ್ಷ ಪ್ರದೀಪ್ ಕೆಳಕೆರೆ ಅವಧಿ ಮುಗಿದು, ಅವರು ಸಂಘಟನೆಯಿಂದ ಜಾರಿಕೊಂಡಿದ್ದಾರೆ. ಇತ್ತ ಬಿಜೆಪಿ, ಮಂಜುನಾಥ ಗೌಡರ ಫಾಸ್ಟ್ ಎಂಟ್ರಿ ನಡುವೆ ಕಾಂಗ್ರೆಸ್ ಸಂಘಟನೆ ಕೊಂಚ ಮಂಕಾದಂತೆ ಕಾಣುತ್ತಿದೆ. ಗ್ರಾಮ ಪಂಚಾಯತಿ, ಪಟ್ಟಣ ಪಂಚಾಯಿತಿ ಬಳಿಕ ತಾಲೂಕು, ಜಿಲ್ಲಾ ಪಂಚಾಯತಿ ಚುನಾವಣೆ ಮುಂದಿರುವ ಈ ಹೊತ್ತಲ್ಲಿ ಕಾಂಗ್ರೆಸ್ ನಿದ್ರೆ ಕಾರ್ಯಕರ್ತರ ಬೇಸರಕ್ಕೆ ಕಾರಣವಾಗಿದೆ. 3 ವರ್ಷ ಪೂರೈಸಿದ ಪ್ರದೀಪ್: ಹಿರಿಯ ಕಾಂಗ್ರೆಸ್ ನಾಯಕ ಕೆಳಕೆರೆ ದಿವಾಕರ ಪುತ್ರ ಪ್ರದೀಪ್ 3 ವರ್ಷ ಅವಧಿ ಪೂರೈಸಿ ಹಲವು ತಿಂಗಳುಗಳೇ ಕಳೆದಿದೆ. ಆದರೆ ಯುವ ಘಟಕದ ಪದಾಧಿಕಾರಿಗಳ ನೇಮಕ ನಡೆದಿಲ್ಲ.ಇಬ್ಬರ ನೇಮಕ: ಕಾಂಗ್ರೆಸ್ ಈಗಾಗಲೇ 2 ಬ್ಲಾಕ್ ಮಾಡಿಕೊಂಡು ಪಕ್ಷ ಬಲವರ್ಧನೆಗೆ…

Read More

ಗರ್ಭಿಣಿಯಾದರೂ ಚಿತ್ರೀಕರಣಕ್ಕೆ ಹಾಜರ್ ಮುಂಬೈ: ಬಾಲಿವುಡ್ ನಟಿ ಮತ್ತು ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಶೀಘ್ರದಲ್ಲಿ ತಾಯಿ ಆಗಲಿದ್ದಾರೆ. 2021ರ ಜನವರಿಯೊಳಗೆ ತಮ್ಮೆಲ್ಲಾ ಶೂಟಿಂಗ್ ಕೆಲಸಗಳನ್ನು ಪೂರ್ಣಗೊಳಿಸಲು ನಿರ್ಧರಿಸಿದ್ದಾರೆ.ಅನುಷ್ಕಾ ಶರ್ಮಾ ಈಗ ತುಂಬು ಗರ್ಭಿಣಿ. ಹಾಗಾಗಿ ಕಳೆದ ಕೆಲವು ತಿಂಗಳುಗಳಿಂದ ಅವರು ಬ್ರೇಕ್ ಪಡೆದುಕೊಂಡಿದ್ದರು. ಜೊತೆಗೆ ಸಿನಿಮಾ ಸಂಬಂಧಿ ಯಾವುದೇ ಕಾರ್ಯಗಳಲ್ಲೂ ಅವರು ತೊಡಗಿಕೊಳ್ಳುತ್ತಿರಲಿಲ್ಲ. ಹಲವು ಸಿನಿಮಾ ಆಫರ್‍ಗಳು ಇದ್ದರೂ ಕೂಡ ಶೂಟಿಂಗ್‍ನಿಂದ ದೂರ ಉಳಿದಿದ್ದರು. ಇದೀಗ ಮತ್ತೆ ಶೂಟಿಂಗ್‍ಗೆ ಅವರು ಮರಳಿದ್ದು ಪ್ರತಿಷ್ಠಿತ ಬ್ರ್ಯಾಂಡ್‍ಗಳಿಗೆ ರೂಪದರ್ಶಿ ಆಗಿರುವ ಅನುಷ್ಕಾ, ಮುಂಬೈನಲ್ಲಿ ಜಾಹೀರಾತು ಶೂಟಿಂಗ್‍ವೊಂದರಲ್ಲಿ ತೊಡಗಿಸಿಕೊಂಡಿದ್ದಾರೆ. ಈಗಾಗಲೇ ನಿಗದಿಯಾಗಿರುವ ಈ ಏಳು ದಿನಗಳ ಶೂಟಿಂಗ್ ಮುಗಿಸಲಿದ್ದಾರೆ.

Read More

ಕಾಂಗ್ರೆಸ್ ಸ್ಟಾರ್ ಪ್ರಚಾರಕಿ ಕಮಲದ ಕಡೆಗೆ… ನವ ದೆಹಲಿ: ಬಿಜೆಪಿಗೆ ಕಾಂಗ್ರೆಸ್‍ನಿಂದ ನಾಯಕರ ದಂಡು ವಲಸೆ ಬರುತ್ತಿದ್ದು, ಇದೀಗ ಕಾಂಗ್ರೆಸ್ ಸ್ಟಾರ್ ಪ್ರಚಾರಕಿ ಮತ್ತು ಮಾಜಿ ಸಂಸದೆ ವಿಜಯ ಶಾಂತಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಸಮ್ಮುಖದಲ್ಲಿ ಬಿಜೆಪಿ ಸೇರಲಿದ್ದಾರೆ.ವಿಜಯ ಶಾಂತಿ ಬಿಜೆಪಿಗೆ ಸೇರ್ಪಡೆಯಾದರೆ ರಾಷ್ಟ್ರೀಯ ಮಟ್ಟದಲ್ಲಿ ಪಕ್ಷದ ಉನ್ನತ ಸ್ಥಾನ ಪಡೆಯಲಿದ್ದಾರೆ. ಮುಂಬರುವ ಜಿಹೆಚ್ ಎಂಸಿ ಚುನಾವಣೆ ತದನಂತರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಪರ ಪ್ರಚಾರ ನಡೆಸಲಿದ್ದಾರೆ.

Read More

ಯುವರತ್ನ ಚಿತ್ರ ತೆಲುಗಲ್ಲೂ ರಿಲೀಸ್ ಬೆಂಗಳೂರು: ಪುನೀತ್ ರಾಜ್‍ಕುಮಾರ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ಯುವರತ್ನ ಚಿತ್ರದ ಪವರ್ ಆಫ್ ಯೂತ್….ಹಾಡು ಡಿ.2ರಂದು ಬಿಡುಗಡೆ ಮಾಡುವುದಾಗಿ ನಿರ್ದೇಶಕ ಸಂತೋಷ್ ರಾಮ್ ಪ್ರಕಟಿಸಿದ್ದಾರೆ. ಇನ್ನೊಂದೆಡೆ ಚಿತ್ರದ ಕುರಿತು ಟ್ವೀಟ್ ಮಾಡಿರುವ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್, ಯುವರತ್ನ ಚಿತ್ರ ತೆಲುಗಿನಲ್ಲೂ ಬಿಡುಗಡೆಗೊಳ್ಳಲಿದ್ದು, ನಿಮ್ಮ ಬೆಂಬಲ ಮತ್ತು ಹಾರೈಕೆ ಇರಲಿ ಎಂದು ಬರೆದುಕೊಂಡಿದ್ದಾರೆ. ಮೊದಲ ಬಾರಿಗೆ ತೆಲುಗಿನಲ್ಲೂ ಈ ಚಿತ್ರ ತೆರೆ ಕಾಣಲಿದ್ದು, ಈ ಮೂಲಕ ಟಾಲಿವುಡ್‍ಗೂ ಪುನೀತ್ ಪದಾರ್ಪಣೆ ಮಾಡಲಿದ್ದಾರೆ. ಯುವರತ್ನ ಚಿತ್ರೀಕರಣ ಸಂಪೂರ್ಣವಾಗಿ ಪೂರ್ಣಗೊಂಡಿದೆ. ಚಿತ್ರದಲ್ಲಿ ಕಾಲಿವುಡ್ ಬೆಡಗಿ ಶಯೇಷಾ ಪುನೀತ್‍ಗೆ ಜೋಡಿಯಾಗಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಬ್ಯಾನರ್‍ನಡಿ ಈ ಚಿತ್ರಕ್ಕೆ ವಿಜಯ್ ಕಿರಗಂದೂರು ಬಂಡವಾಳ ಹೂಡಿದ್ದಾರೆ. ಚಿತ್ರದಲ್ಲಿ ಪ್ರಕಾಶ್ ರಾಜ್, ವಸಿಷ್ಠ ಸಿಂಹ, ದಿಗಂತ್, ಸೋನು ಗೌಡ ನಟಿಸಿದ್ದಾರೆ. ತಮನ್ ಸಂಗೀತ ಸಂಯೋಜನೆ ಮಾಡಿದ್ದು, ವೆಂಕಟೇಶ್ ಅಂಗುರಾಜ್ ಛಾಯಾಗ್ರಹಣವಿದೆ.

Read More

ಸಜ್ಜನ ರಾಜಕಾರಣಿ ಜಯಪ್ರಕಾಶ್ ಹೆಗ್ಡೆಗೆ ಸ್ಥಾನ ಬೆಂಗಳೂರು: ಸರಳ, ಸಜ್ಜನ ರಾಜಕಾರಣಿ, ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ ಅವರನ್ನು ರಾಜ್ಯ ಹಿಂದುಳಿದ ವರ್ಗಗಳ ಅಯೋಗದ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿ ರಾಜ್ಯಪಾಲರ ಆದೇಶಾನುಸಾರ ತಕ್ಷಣದಿಂದ ಜಾರಿಗೆ ಬರುವಂತೆ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಅಧಿಕಾರ ಇರಲಿ, ಬಿಡಲಿ ಜನರು, ನಂಬಿದವರ ಜತೆ ಸದಾ ಇರುವ ನಾಯಕ ಎಂದೇ ಕರಾವಳಿ ಭಾಗದಲ್ಲಿ ಹೆಸರು ಪಡೆದಿರುವ ಹೆಗ್ಡೆ ಅವರಿಗೆ ಹುದ್ದೆ ಸಿಕ್ಕಿರುವುದು ಅವರ ಅಭಿಮಾನಿ ವಲಯದಲ್ಲಿ ಸಂತಸ ತಂದಿದೆ.ಜಯಪ್ರಕಾಶ್ ಹೆಗ್ಡೆ ಅವರು ಜೆ.ಎಚ್.ಪಟೇಲ್ ನೇತೃತ್ವದ ಜನತಾದಳ ಸರ್ಕಾರದಲ್ಲಿ ಮೀನುಗಾರಿಕೆ ಮತ್ತು ಬಂದರು ಖಾತೆ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ನಂತರ ಕಾಂಗ್ರೆಸ್ ಸೇರಿದ್ದರು. ಒಂದು ಅವಧಿಗೆ ಉಡುಪಿ – ಚಿಕ್ಕಮಗಳೂರು ಸಂಸದರಾಗಿಯೂ ಆಯ್ಕೆಯಾಗಿದ್ದ ಜಯಪ್ರಕಾಶ್ ಹೆಗ್ಡೆ ಕಳೆದ ವಿಧಾನಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು. ಬಳಿಕ ಅವರಿಗೆ ಸ್ಥಾನ ಸಿಕ್ಕಿರಲಿಲ್ಲ.

Read More

ರೋಷನ್ ಬೇಗ್ ಬಂಧನದ ಬಳಿಕ ಅಧಿಕಾರಿ ಅರೆಸ್ಟ್ ಬೆಂಗಳೂರು: ಐಎಂಎ ಸಂಸ್ಥೆಯ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ.ಮಾಜಿ ಸಚಿವ ರೋಷನ್ ಬೇಗ್ ಅವರು ಈ ಪ್ರಕರಣದಲ್ಲಿ 10,ಕೋಟಿ ಹಣ ಪಡೆದ ಆರೋಪದಲ್ಲಿ ಸಿಬಿಐ ಅಧಿಕಾರಿಗಳು ಅವರನ್ನು ಬಂಧಿಸಿರುವ ನಡುವೆ ಸೋಮವಾರ ಮತ್ತೋರ್ವ ಆರೋಪಿಯನ್ನು ಬಂಧಿಸಿದ್ದಾರೆ. ಬಿಡಿಎ ವಿಶೇಷ ಭೂಸ್ವಾಧೀನಾಧಿಕಾರಿ ಪಿ.ಡಿ.ಕುಮಾರ್ ಬಂಧಿಸಿ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.ಮನ್ಸೂರ್ ಖಾನ್ ಅವರ ಹಣ ರಿಯಲ್ ಎಸ್ಟೇಟ್ ವಲಯದಲ್ಲಿ ಹೂಡಿಕೆಯಾಗಿದೆ. ಮನ್ಸೂರ್ ಖಾನ್‍ನಿಂದ 3 ರಿಂದ 4 ಕೋಟಿ ರೂ. ಹಣವನ್ನು ಪಿ.ಡಿ. ಕುಮಾರ್ ಪಡೆದಿದ್ದರು ಎಂದು ಸಿಬಿಐ ಅಧಿಕಾರಿಗಳು ಕೇಸ್ ದಾಖಲಿಸಿದ್ದರು. ಸಿಬಿಐ ವಿಶೇಷ ನ್ಯಾಯಾಲಯದ ಎದುರು ಬಂಧಿತನನ್ನು ಹಾಜರುಪಡಿಸಿದ್ದರು.ನಂತರ ನ್ಯಾಯಾಲಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ವಿಚಾರಣೆಗಾಗಿ ಕುಮಾರ್ ಅವರನ್ನು 3 ದಿನಗಳ ಕಾಲ ಸಿಬಿಐ ವಶಕ್ಕೆ ನೀಡಿ ಆದೇಶಿಸಿದೆ. ಈ ಮೂಲಕ ಐಎಂಎ ಹಗರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಮುಂದೆ ದೊಡ್ಡ ದೊಡ್ಡವರ ಹೆಸರು ಬಂದರೂ ಅಚ್ಚರಿ…

Read More

ಸರ್ಕಾರದ ನಿರ್ಧಾರ: ಪರೀಕ್ಷೆ ನಡೆಯುತ್ತಂತೆ… ಬೆಂಗಳೂರು: ಆರೋಗ್ಯ ಇಲಾಖೆ ಮತ್ತು ತಾಂತ್ರಿಕ ಸಲಹಾ ಸಮಿತಿ ವರದಿ ಆಧರಿಸಿ ಸರ್ಕಾರ ಡಿಸೆಂಬರ್ ಅಂತ್ಯದವರೆಗೆ ಶಾಲಾ ಕಾಲೇಜುಗಳನ್ನು ಆರಂಭಿಸುವುದಿಲ್ಲ ಎಂದು ಹೇಳಿದೆ. ಈ ಮೂಲಕ ಶಾಲಾ ಕಾಲೇಜುಗಳು ಈ ವರ್ಷಕ್ಕೆ ತೆರೆಯಲ್ಲ. ಆದರೆ ಪರೀಕ್ಷೆಗಳು ನಡೆಯಲಿವೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.ವಿಧಾನ ಸೌಧದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಭೆ ಬಳಿಕ ಈ ತೀರ್ಮಾನ ಕೈಗೊಳ್ಳಲಾಗಿದೆ. ಮುಂದಿನ ಸಭೆವರೆಗೂ ಈ ನಿರ್ಧಾರ ಅನ್ವಯ ಆಗಲಿದೆ ಎಂದು ಸಿಎಂ ತಿಳಿಸಿದ್ದಾರೆ. ಚಳಿಗಾಲದ ಹಿನ್ನಲೆಯಲ್ಲಿ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.ನವೆಂಬರ್ ಅಂತ್ಯ ಹಾಗೂ ಡಿಸೆಂಬರ್ ತಿಂಗಳಲ್ಲಿ ಕೋವಿಡ್ 19 ಎರಡನೆ ಅಲೆ ಕಂಡುಬರುb ಸಾಧ್ಯತೆ ಹಿನ್ನಲೆಯಲ್ಲಿ ಶಾಲಾ ಕಾಲೇಜುಗಳನ್ನು ಆರಂಭಿಸದೆ ಹಾಲಿ ವ್ಯವಸ್ಥೆಯನ್ನು ಮುಂದುವರಿಸಿಕೊಂಡು ಹೋಗಲು ತೀರ್ಮಾನಿಸಲಾಗಿದೆ. ಡಿಸೆಂಬರ್ ಮೂರನೆ ವಾರ ಮತ್ತೊಮ್ಮೆ ಸಭೆ ಸೇರಿ ತಾಂತ್ರಿಕ ಸಲಹಾ ಸಮಿತಿ ಹಾಗೂ ಆರೋಗ್ಯ ಇಲಾಖೆಗಳ ಅಭಿಪ್ರಾಯಗಳನ್ನು ಪಡೆದು ಶಾಲೆ ಆರಂಭಿಸಬೇಕೆ…

Read More