Categories
ಅಂತಾರಾಷ್ಟ್ರೀಯ ಸುದ್ದಿ

ತಾಯಿ ಆಗ್ತಾರೆ ಅನುಷ್ಕಾ!

  • ಗರ್ಭಿಣಿಯಾದರೂ ಚಿತ್ರೀಕರಣಕ್ಕೆ ಹಾಜರ್

ಮುಂಬೈ: ಬಾಲಿವುಡ್ ನಟಿ ಮತ್ತು ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಶೀಘ್ರದಲ್ಲಿ ತಾಯಿ ಆಗಲಿದ್ದಾರೆ. 2021ರ ಜನವರಿಯೊಳಗೆ ತಮ್ಮೆಲ್ಲಾ ಶೂಟಿಂಗ್ ಕೆಲಸಗಳನ್ನು ಪೂರ್ಣಗೊಳಿಸಲು ನಿರ್ಧರಿಸಿದ್ದಾರೆ.
ಅನುಷ್ಕಾ ಶರ್ಮಾ ಈಗ ತುಂಬು ಗರ್ಭಿಣಿ. ಹಾಗಾಗಿ ಕಳೆದ ಕೆಲವು ತಿಂಗಳುಗಳಿಂದ ಅವರು ಬ್ರೇಕ್ ಪಡೆದುಕೊಂಡಿದ್ದರು. ಜೊತೆಗೆ ಸಿನಿಮಾ ಸಂಬಂಧಿ ಯಾವುದೇ ಕಾರ್ಯಗಳಲ್ಲೂ ಅವರು ತೊಡಗಿಕೊಳ್ಳುತ್ತಿರಲಿಲ್ಲ. ಹಲವು ಸಿನಿಮಾ ಆಫರ್‍ಗಳು ಇದ್ದರೂ ಕೂಡ ಶೂಟಿಂಗ್‍ನಿಂದ ದೂರ ಉಳಿದಿದ್ದರು. ಇದೀಗ ಮತ್ತೆ ಶೂಟಿಂಗ್‍ಗೆ ಅವರು ಮರಳಿದ್ದು ಪ್ರತಿಷ್ಠಿತ ಬ್ರ್ಯಾಂಡ್‍ಗಳಿಗೆ ರೂಪದರ್ಶಿ ಆಗಿರುವ ಅನುಷ್ಕಾ, ಮುಂಬೈನಲ್ಲಿ ಜಾಹೀರಾತು ಶೂಟಿಂಗ್‍ವೊಂದರಲ್ಲಿ ತೊಡಗಿಸಿಕೊಂಡಿದ್ದಾರೆ. ಈಗಾಗಲೇ ನಿಗದಿಯಾಗಿರುವ ಈ ಏಳು ದಿನಗಳ ಶೂಟಿಂಗ್ ಮುಗಿಸಲಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.