Categories
ಬೆಂಗಳೂರು

ತೆಲುಗಿಗೂ ಕಾಲಿಟ್ಟ ಪುನೀತ್!

  • ಯುವರತ್ನ ಚಿತ್ರ ತೆಲುಗಲ್ಲೂ ರಿಲೀಸ್

ಬೆಂಗಳೂರು: ಪುನೀತ್ ರಾಜ್‍ಕುಮಾರ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ಯುವರತ್ನ ಚಿತ್ರದ ಪವರ್ ಆಫ್ ಯೂತ್….ಹಾಡು ಡಿ.2ರಂದು ಬಿಡುಗಡೆ ಮಾಡುವುದಾಗಿ ನಿರ್ದೇಶಕ ಸಂತೋಷ್ ರಾಮ್ ಪ್ರಕಟಿಸಿದ್ದಾರೆ.


ಇನ್ನೊಂದೆಡೆ ಚಿತ್ರದ ಕುರಿತು ಟ್ವೀಟ್ ಮಾಡಿರುವ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್, ಯುವರತ್ನ ಚಿತ್ರ ತೆಲುಗಿನಲ್ಲೂ ಬಿಡುಗಡೆಗೊಳ್ಳಲಿದ್ದು, ನಿಮ್ಮ ಬೆಂಬಲ ಮತ್ತು ಹಾರೈಕೆ ಇರಲಿ ಎಂದು ಬರೆದುಕೊಂಡಿದ್ದಾರೆ.


ಮೊದಲ ಬಾರಿಗೆ ತೆಲುಗಿನಲ್ಲೂ ಈ ಚಿತ್ರ ತೆರೆ ಕಾಣಲಿದ್ದು, ಈ ಮೂಲಕ ಟಾಲಿವುಡ್‍ಗೂ ಪುನೀತ್ ಪದಾರ್ಪಣೆ ಮಾಡಲಿದ್ದಾರೆ. ಯುವರತ್ನ ಚಿತ್ರೀಕರಣ ಸಂಪೂರ್ಣವಾಗಿ ಪೂರ್ಣಗೊಂಡಿದೆ. ಚಿತ್ರದಲ್ಲಿ ಕಾಲಿವುಡ್ ಬೆಡಗಿ ಶಯೇಷಾ ಪುನೀತ್‍ಗೆ ಜೋಡಿಯಾಗಿದ್ದಾರೆ.


ಹೊಂಬಾಳೆ ಫಿಲ್ಮ್ಸ್ ಬ್ಯಾನರ್‍ನಡಿ ಈ ಚಿತ್ರಕ್ಕೆ ವಿಜಯ್ ಕಿರಗಂದೂರು ಬಂಡವಾಳ ಹೂಡಿದ್ದಾರೆ. ಚಿತ್ರದಲ್ಲಿ ಪ್ರಕಾಶ್ ರಾಜ್, ವಸಿಷ್ಠ ಸಿಂಹ, ದಿಗಂತ್, ಸೋನು ಗೌಡ ನಟಿಸಿದ್ದಾರೆ. ತಮನ್ ಸಂಗೀತ ಸಂಯೋಜನೆ ಮಾಡಿದ್ದು, ವೆಂಕಟೇಶ್ ಅಂಗುರಾಜ್ ಛಾಯಾಗ್ರಹಣವಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.