ಟಾಪ್ ನ್ಯೂಸ್ ಕರಾವಳಿ ದುಬೈಯಿಂದ ಮನೆ ಕಟ್ಟಲು ಬಂದವರು ಹೆಣವಾದರು! – ಹಳೆಯ ಮನೆ ಕೆಡವುತ್ತಿದ್ದ ವೇಳೆ ಗೋಡೆ ಕುಸಿದು ಇಬ್ಬರು ಮೃತ್ಯು! – ಬಂಟ್ವಾಳ: ಆಕಸ್ಮಿಕವಾಗಿ ವಿದ್ಯುತ್ ಪ್ರಹವಿಸಿ ಯುವಕ ಸಾವು – ಮೂಡುಬಿದಿರೆ: ಕೋಳಿ ತ್ಯಾಜ್ಯ ಸುರಿದವರಿಗೆ ದಂಡ..! – ಬಂಟ್ವಾಳ: ಬ್ಯಾಂಕಿನೊಳಗಿಂದಲೇ ಲಕ್ಷಾಂತರ ರೂ. ಬ್ಯಾಗ್ ಕಳವು! NAMMUR EXPRESS NEWS ಮಂಗಳೂರು: ಮಂಗಳೂರು ನಗರದ ಜೈಲು ರಸ್ತೆಯ ಬಳಿ ಹಳೆ ಮನೆಯೊಂದನ್ನು ಕೆಡವುತ್ತಿದ್ದಾಗ ಗೋಡೆ ಕುಸಿದು ಇಬ್ಬರು ಮೃತಪಟ್ಟ ಘಟನೆ ಗುರುವಾರ ಬೆಳಗ್ಗೆ ನಡೆದಿದೆ. ಜೇಮ್ಸ್ ಸ್ಯಾಮುವೆಲ್ ಜತ್ತನ್ನ ಮತ್ತು ಅಶ್ವಿನ್ ಮೃತ ದುರ್ದೈವಿಗಳು. ಗುರುವಾರ ಬೆಳಗ್ಗೆ ಘಟನೆ ನಡೆದಿದ್ದು, ಜೆಸಿಬಿ ಮೂಲಕ ಮನೆ ಕೆಡವುತ್ತಿದ್ದಾಗ ಕಾಂಕ್ರೀಟ್ ಲಿಂಟೆಲ್ ಸಹಿತ ಗೋಡೆ ಮೈಮೇಲೆ ಬಿದ್ದು ಮೃತಪಟ್ಟಿದ್ದಾರೆ. ಜೇಮ್ಸ್ ಅವರು ಹಳೆ ಮನೆಯನ್ನು ಕೆಡವಿ ಹೊಸ ಮನೆ ನಿರ್ಮಿಸುವ ಉದ್ದೇಶದಿಂದ ಬಹರೈನ್ ನಿಂದ ಬಂದದ್ದರು. ಅ್ರಿನ್ ಪಕ್ಕದ ಮನೆಯವರಾಗಿದ್ದು ಸೋದರ ಸಂಬಂಧಿಯಾಗಿದ್ದರು. ಬಂಟ್ವಾಳ: ಆಕಸ್ಮಿಕವಾಗಿ ವಿದ್ಯುತ್ ಪ್ರಹವಿಸಿ…
Author: Nammur Express Admin
ಕಾಮುಕ ವೈದ್ಯನ ಗುಪ್ತಾಂಗಕ್ಕೆ ಬ್ಲೇಡ್ ಹಾಕಿದ ನರ್ಸ್! * ಡಾಕ್ಟರ್ ಮತ್ತು ಸಹಚರರು ಅತ್ಯಾಚಾರವೆಸಗಲು ಯತ್ನ! * ಪ್ರತಿಯೊಂದು ಹೆಣ್ಣು ಮಕ್ಕಳಿಗೂ ಮಾದರಿಯಾದ ನರ್ಸ್! NAMMUR EXPRESS NEWS ಪಾಟ್ನಾ: ಅತ್ಯಾಚಾರಕ್ಕೆ ಯತ್ನಿಸಿದ ವೈದ್ಯರೊಬ್ಬರ ಮರ್ಮಾಂಗಕ್ಕೆ ನರ್ಸ್ ಬ್ಲೇಡ್ ಹಾಕಿ ಪಾರಾದ ಘಟನೆ ಬಿಹಾರದ ಸಮಸ್ತಿಪುರ್ ಜಿಲ್ಲೆಯ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ. ಸಂತ್ರಸ್ತೆ ನರ್ಸ್ ಕೆಲಸ ಮುಗಿಸಿ ಮನೆಗೆ ಹೊರಡುವ ವೇಳೆ ಡಾಕ್ಟರ್ ಹಾಗೂ ಆತನ ಸಹಚರರು ಅತ್ಯಾಚಾರವೆಸಗಲು ಮುಂದಾದರು. ಆ ಸಂದರ್ಭದಲ್ಲಿ ತನ್ನ ಆತ್ಮರಕ್ಷಣೆ ಮಾಡಿಕೊಳ್ಳಲು ಆಕೆ ವೈದ್ಯರ ಖಾಸಗಿ ಅಂಗಕ್ಕೆ ಬ್ಲೇಡ್‌ನಿಂದ ಗಾಯ ಮಾಡಿ ಅಲ್ಲಿಂದ ತಪ್ಪಿಸಿಕೊಂಡು ಹೊರ ಬಂದರು. ನಂತರ ಆಸ್ಪತ್ರೆಯಿಂದ ಹೊರಬಂದು ಸಹಾಯವಾಣಿ ಸಂಖ್ಯೆ 112 ಗೆ ಕರೆ ಮಾಡಿ ಘಟನೆಯ ಬಗ್ಗೆ ಸಂತ್ರಸ್ತೆ ಹೇಳಿಕೆ ನೀಡಿರುವುದಾಗಿ ಸಮಸ್ತಿಪುರ ಉಪವಿಭಾಗೀಯ ಪೊಲೀಸ್ ಅಧಿಕಾರಿ (ಎಸ್‌ಡಿಪಿಒ) ಸಂಜಯ್ ಕುಮಾರ್ ಪಾಂಡೆ ಮಾಧ್ಯಮಗಳ ಮುಂದೆ ಮಾಹಿತಿ ೀಡಿರು. ಪೊಲೀಸರು ಕೂಡೇ ಸ್ಥಳಕ್ಕೆ ಬಂದು ಸಂತ್ರಸ್ತೆಯನ್ನು ರಕ್ಷಿಸಿ ಪೊಲೀಸ್ ಠಾಣೆಗೆ…
ಕರಾವಳಿ ನ್ಯೂಸ್ * ಕಾರ್ಕಳ:ಜೈಲಿನಲ್ಲಿದ್ದ ಮಗನ ಮಾತನಾಡಿಸಿ ಬಂದ ತಾಯಿ ಆತ್ಮಹತ್ಯೆ! * ಕರ್ತವ್ಯಲೋಪ: 80 ಪೊಲೀಸ್ ಸಿಬ್ಬಂದಿ ಅಮಾನತು; ಎಸ್‌ಪಿ ಕಟ್ಟುನಿಟ್ಟಿನ ಕ್ರಮ * ಕುಂದಾಪುರ: ಮೀನುಗಾರಿಕೆ ವೇಳೆ ಆಯತಪ್ಪಿ ಸಮುದ್ರಕ್ಕೆ ಬಿದ್ದು ವ್ಯಕ್ತಿ ಮೃತ್ಯು NAMMUR EXPRESS NEWS ಕಾರ್ಕಳ: ಪ್ರಕರಣವೊಂದರಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಮಗನನ್ನು ಮಾತಾಡಿಸಿಕೊಂಡು ಬಂದ ತಾಯಿ ಅದೇ ಚಿಂತೆಯಲ್ಲಿ ಆತ್ಮಹತ್ಯೆ ಮಾಡಿಕೊಂಡು ಸಾವನಪ್ಪಿದ ಘಟನೆ ನಲ್ಲೂರು ಎಂಬಲ್ಲಿ ನಡೆದಿದೆ. ನಲ್ಲೂರು ಗ್ರಾಮದ ಪ್ರೇಮಾ ಮೃತರು. ಪುತ್ರ ಸುಮಂತ್ ಎಂಬಾತನನ್ನು ಕಾರ್ಕಳ ನಗರ ಪೊಲೀಸರು ಒಂದೂವರೆ ತಿಂಗಳ ಹಿಂದೆ ವಾರಂಟ್‌ನಲ್ಲಿ ಬಂಧಿಸಿದ್ದರು. ಹಿರಿಯಡ್ಕ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಮಗನನ್ನು ತಾಯಿ ಪ್ರೇಮಾ ಸೆ.11ರಂದು ಜೈಲಿಗೆ ತೆರಳಿ ಮಾತಾಡಿಸಿಕೊಂಡು ಬಂದಿದ್ದರು. ಬಳಿಕ ಚಿಂತೆಯಲ್ಲಿದ್ದ ಅವರು ರಾತ್ರಿ ಊಟ ಮಾಡಿ ಮಲಗಿದ್ದರು. ಮರುದಿನ ಬೆಳಗ್ಗೆ ಅವರು ಕಾಣದಿದ್ದಾಗ ಮನೆಯವರು ಹುಡುಕಾಡಿ ೇಳೆ ನೆ ಕ್ಕದ ಹಾಡಿಯಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ…
ಜಟ್ಟಿನಮಕ್ಕಿ ಶೂಟ್ ಔಟ್ ಕೇಸ್: ಆರೋಪಿಗೆ 5 ವರ್ಷ ಜೈಲು! – ತೀರ್ಥಹಳ್ಳಿ ತಾಲೂಕು ದೇವಂಗಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದಿದ್ದ ಘಟನೆ – ದಾರಿ ವಿಚಾರಕ್ಕೆ ಕೋವಿಯಲ್ಲಿ ಗುಂಡು: ಏನಿದು ಪ್ರಕರಣ? NAMMUR EXPRESS NEWS ತೀರ್ಥಹಳ್ಳಿ: ತೀರ್ಥಹಳ್ಳಿ ಸಮೀಪ ದೇವಂಗಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಜಟ್ಟಿನಮಕ್ಕಿ ರೈತರಾದ ಕೃಷ್ಣಮೂರ್ತಿ ಎಂಬುವರಿಗೆ 23.04.2018ರಂದು ಅಶೋಕ ಎಂಬುವರು ಗುಂಡು ಹಾರಿಸಿ ಕೊಲೆಗೆ ಪ್ರಯತ್ನ ಪ್ರಕರಣದಲ್ಲಿ ತೀರ್ಥಹಳ್ಳಿ ಪೊಲೀಸರು ಪ್ರಕರಣವನ್ನು ದಾಖಲು ಮಾಡಿ ನ್ಯಾಯಾಲಯಕ್ಕೆ ಆರೋಪ ಪಟ್ಟಿಯನ್ನು ಸಲ್ಲಿಸಿದರು .ಶಿವಮೊಗ್ಗ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯ ದಲ್ಲಿ ಪ್ರಕರಣದ ವಿಚಾರಣೆ ನಡೆದು ಜಿಲ್ಲಾ ನ್ಯಾಯಾಧೀಶರಾದ ಗೌರವಾನ್ವಿತ ಮಂಜುನಾಥ ನಾಯಕರವರು ಆರೋಪಿ ಜೆಟ್ಟಿನ ಮಕ್ಕಿ ಅಶೋಕಗೆ ಐದು ವರ್ಷ ಕಠಿಣ ಶಿಕ್ಷೆ ಮತ್ತು ಐವತ್ತು ಸಾವಿರ ರೂಪಾಯಿ ದಂಡವನ್ನು ವಿಧಿಸಿ ತೀರ್ಪು ನೀಡಿದ್ದಾರೆ. ದಂಡದ ಹಣದ 25000 ರೂಪಾಯಿ ದೂರುದಾರ ಕೃಷ್ಣಮೂರ್ತಿಗೆ ನೀಡಲು ಆದೇಶ ಮಾಡಿದ್ದಾರೆ. ಸರ್ಕರ ಪರವಾಗಿ ರ್ಕಾರಿ ಅಭಿಯೋಜಕರಾದ ಎ.ಎಂ.…
ತೀರ್ಥಹಳ್ಳಿ ಜೆಸಿಐ ಪ್ರಾಯೋಜಕತ್ವದಲ್ಲಿ ಏಕವ್ಯಕ್ತಿ ನಾಟಕ ಪ್ರದರ್ಶನ * ಇಂದು ತಾಯಿಯಾಗುವುದೆಂದರೆ ಏಕವ್ಯಕ್ತಿ ರಂಗ ಪ್ರಯೋಗ * ಸಂಜೆ ನಾಟಕ: ಸರ್ವರಿಗೂ ಸ್ವಾಗತಿಸಿದ ಜೆಸಿಐ ತೀರ್ಥಹಳ್ಳಿ NAMMUR EXPRESS NEWS ತೀರ್ಥಹಳ್ಳಿ: ಜೆಸಿಐ ತೀರ್ಥಹಳ್ಳಿ ಜೆ.ಸಿ ಸಪ್ತಾಹ-2024ರ ಪ್ರಯುಕ್ತ ತಾಯಿಯಾಗುವುದೆಂದರೆ ಏಕವ್ಯಕ್ತಿ ರಂಗಪ್ರಯೋಗ ದಿನಾಂಕ: 14.09.2024 ಶನಿವಾರ ಸಮಯ: ಸಂಜೆ 6.30ಕ್ಕೆ ಶ್ರೀ ಶಾಂತವೇರಿ ಗೋಪಾಲ ಗೌಡ ರಂಗಮಂದಿರ, ಸೊಪ್ಪುಗುಡ್ಡೆ ತೀರ್ಥಹಳ್ಳಿಯಲ್ಲಿ ನಡೆಯಲಿದೆ. ರಂಗಹೃದಯ, ಹಾಸನ ಪ್ರಸ್ತುತಿಯಲ್ಲಿ ರಂಗರೂಪ, ವಿನ್ಯಾಸ, ಸಂಗೀತ ಮತ್ತು ನಿರ್ದೇಶನವನ್ನು ಕೃಷ್ಣಮೂರ್ತಿ ಕವತ್ತಾರ್ ಮಾಡಿದ್ದಾರೆ. ರಚನೆ – ನಟನೆ: ಪೂಜಾ ರಘುನಂದನ್ ಮಾಡಿದ್ದಾರೆ. ನಾಟಕದ ವಿಶೇಷ ತಾಯಿ,ಇೊು ಸಾಮಾನ್ಯ ಪದವಲ್ಲ ಪ್ರತಿಯೊಬ್ಬನ ಜೀವನದಲ್ಲೂ ತಾಯಿಯೆನ್ನುವುದು ಒಂದು ಮಹತ್ವದ ಅಂತರಂಗದ ಶಕ್ತಿ ಮತ್ತು ಸ್ಫೂರ್ತಿ. ಇಂತಹ ಒಂದು ತಾಯಿಯ ವಸ್ತುವುಳ್ಳ ಕಥಾಹಂದರವನ್ನು ಇಟ್ಟುಕೊಂಡು ಹಾಸನದ ಉದಯೋನ್ಯುಖ ಕಲಾವಿದೆ ಶ್ರೀಮತಿ ಪೂಜಾ ರಘು ನಂದನ್ ಇವರು ರಚಿಸಿ ಅಭಿನಯಿಸಿದ್ದಾರೆ. ವಾಸ್ತವವಾಗಿ ಪೂಜಾರವರ ನಿಜ ಜೀವನದ ಕಥೆಯಾಗಿದ್ದು,ಅವರು ಅನುಭಸಿದ ದುಃಖ ದುಮ್ಮಾನ,…
ಈ ದಿನದ ರಾಶಿ ಭವಿಷ್ಯ ಹೇಗಿದೆ? – ಮಹಾವಿಷ್ಣುವಿನ ಕೃಪೆಯಿಂದ ಯಾವ ರಾಶಿಯವರಿಗೆ ಶುಭ ? ಯಾವ ರಾಶಿಯವರಿಗೆ ಅಶುಭ ? NAMMUR EXPRESS NEWS ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು? ** ಮೇಷ ರಾಶಿ : ಇಂದು ನಿಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಾಗಲಿದೆ. ಕೆಲಸದ ಜವಾಬ್ದಾರಿಗಳು ಹೆಚ್ಚಾಗುತ್ತವೆ. ನಿಮ್ಮ ಜೀವನದಲ್ಲಿ ಕೆಲವು ಅಪಾಯಗಳು ಸಹ ಎದುರಾಗಬಹುದು. ಆದರೆ ಹೆದರಬೇಡಿ, ಪ್ರಗತಿಗೆ ಸಾಕಷ್ಟು ಅವಕಾಶಗಳಿವೆ. ನಿಮಗೆ ಇಂದು ಸಿಗುವ ಹೊಸ ಅವಕಾಶಗಳಿಂದ ಖಂಡಿತ ಯಶಸ್ಸು ಸಿಗಲಿದೆ. ಹಣಕಾಸಿನ ಪರಿಸ್ಥಿತಿಯು ಬಲವಾಗಿರುತ್ತದೆ. ಆದರೆ ಇಂದು, ನಿಮ್ಮ ಸಹೋದರ ಸಹೋದರಿಯರ ನಡುವೆ ಹಣದ ವಿವಾದಗಳು ಹೆಚ್ಚಾಗಬಹುದು. ** ವೃಷಭ ರಾಶಿ : ಇಂದು ನೀವು ನಿಮ್ಮ ಪರಿಶ್ರಮದ ಫಲವನ್ನು ಪಡೆಯಬಹುದು. ಹೊಸ ಯೋಜನೆಗಳಲ್ಲಿ ಕೆಲಸ ಮಾಡಲು ಅವಕಾಶವಿರುತ್ತದೆ. ಜೀವನದಲ್ಲಿ ಹೊಸ ವಿಷಯಗಳನ್ನು ಕಲಿಯಲು ಹಿಂಜರಿಯಬೇಡಿ. ಕೆಲಸದ…
ಹಿಡಿಯಲು ಹೋಗಿ ಕೈಗೆ ಕಚ್ಚಿದ ಕನ್ನಡಿ ಹಾವು! – ವ್ಯಕ್ತಿ ಮೃತ್ಯು: ಮಂಗಳೂರಿನಲ್ಲಿ ಘಟನೆ NAMMUR EXPRESS NEWS ಮಂಗಳೂರು: ವಿಷರಹಿತ ಹಾವೆಂದು ತಪ್ಪಾಗಿ ತಿಳಿದು ಕನ್ನಡಿ ಹಾವನ್ನು ಕೈಯಲ್ಲಿ ಹಿಡಿದ ವೇಳೆ ಕೈಗೆ ಕಚ್ಚಿ ವ್ಯಕ್ತಿ ಮೃತಪಟ್ಟ ಘಟನೆ ಬಜ್ಜೆಯಲ್ಲಿ ನಡೆದಿದೆ. ಬಟ್ಟೆಯ ರಾಮಚಂದ್ರ ಪೂಜಾರಿ(55) ಮೃತ ದುರ್ದೈವಿಯಾಗಿದ್ದಾರೆ. ಗುರುವಾರ ಇಲ್ಲಿನ ಪರಿಸರದಲ್ಲಿ ಕನ್ನಡಿ ಹಾವೊಂದು ಕಾಣಿಸಿಕೊಂಡಿತ್ತು ಇದನ್ನು ರಾಮಚಂದ್ರ ಪೂಜಾರಿ ಅವರು ವಿಷರಹಿತ ಹಾವೆಂದು ತಪ್ಪಾಗಿ ತಿಳಿದು ಕೈಯಲ್ಲಿ ಹಿಡಿದಿದ್ದಾರೆ ಆದರೆ ಈ ವೇಳೆ ಹಾವು ರಾಮಚಂದ್ರ ಅವರ ಕೈಗೆ ಕಚ್ಚಿದೆ, ಇದನ್ನು ಗಂಭೀರವಾಗಿ ಪರಿಗಣಿಸದ ರಾಮಚಂದ್ರ ಅವರು ಮನೆಗೆ ತೆರಳಿದ್ದರು ಆದರೆ ಸಂಜೆಯಾಗುತ್ತಲೇ ಅವರ ಅರೋಗ್ಯ ಏರುಪೇರಾಗಿ ಆಸ್ಪತ್ರೆಗೆ ದಾಖಲಾಗಿದ್ದರು ಆದರೆ ಶುಕ್ರವಾರ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಅರ್ಜುನ ಆನೆಗೆ ಗಣೇಶೋತ್ಸವ ಅರ್ಪಣೆ ಮಾಡಿದ ದೇವಂಗಿ! – ಅದ್ದೂರಿ ಗಣೇಶೋತ್ಸವ: 5 ದಿನಗಳ ಕಾಲ ಸಂಭ್ರಮ – ಯುವತಿ ಚಿಕಿತ್ಸೆಗೆ ಸಹಕಾರ ಮಾಡಿದ ಗಜಾನನ ನಾಟ್ಯ ಸಂಘ – ಶಾಂತಿಯುತ ಗಣೇಶ ಆಚರಣೆ: ಸಾರ್ವಜನಿಕರ ಮೆಚ್ಚುಗೆ NAMMUR EXPRESS NEWS ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಿನ ಅದ್ದೂರಿ ಗಣೇಶೋತ್ಸವಗಳಲ್ಲಿ ಒಂದಾದ ದೇವಂಗಿ ಗಣೇಶೋತ್ಸವ ಈ ಬಾರಿ ಅದ್ದೂರಿಯಾಗಿ ನೆರವೇರಿತು. 5 ದಿನಗಳ ಕಾಲ ವಿವಿಧ ಕಾರ್ಯಕ್ರಮ ಆಯೋಜನೆ ಮಾಡಿ ಕೊನೆ ದಿನ ಪಟಾಕಿ, ವಿವಿಧ ವೇಷ ಭೂಷಣಗಳೊಂದಿಗೆ ಮೆರವಣಿಗೆ ಮಾಡಿದ್ದು ಸಾವಿರಾರು ಜನ ಸೇರಿದರೂ ಶಾಂತಿಯುತ ಆಚರಣೆ ಮಾಡಿ ತಾಲೂಕಲ್ಲೆ ಮಾದರಿ ಆಯಿತು. ಅರ್ಜುನ ಆನೆಗೆ ಗಣೇಶೋತ್ಸವ ಅರ್ಪಣೆ ಮಾಡಿದ ದೇವಂಗಿ! ಅರ್ಜುನ ಆನೆ ಸಾವನ್ನಪ್ಪಿದ್ದರೂ ಕೂಡ ಅದಕ್ಕೆ ಸಿಗಬೇಕಾದ ನ್ಯಾಯ ಇಂದಿಗೂ ಕೂಡ ಸಿಕ್ಕಿಲ್ಲ. ಮೈಸೂರು ದಸರಾದಲ್ಲಿ ಿಂಹ ನಡಯಲ್ಲಿ ಹಪಾಠಿಗಳ ಜೊತೆ ಗಾಂಭೀರ್ಯದಿಂದ ಹೆಜ್ಜೆ ಹಾಕಿ, ಸತತ 8 ಬಾರಿ ಚಿನ್ನದ ಅಂಬಾರಿಯನ್ನ, ನಾಡ ದೇವತೆಯನ್ನು ಹೊತ್ತ ಅರ್ಜುನನಿಗೆ…
ಕಾರ್ಮಿಕರಿಗೆ ಕಿಟ್ ವಿತರಿಸಿದ ಶಾಸಕ ಟಿ.ಡಿ ರಾಜೇಗೌಡ – ಕ್ಷೇತ್ರದ ವಿಶೇಷ ಚೇತನರಿಗೆ ತ್ರಿಚಕ್ರ ವಾಹನ ವಿತರಿಸಿದ ಶಾಸಕ – ಕೊಪ್ಪ ಸರ್ಕಾರಿ ನೌಕರರ ಸಂಘದ ಕಟ್ಟಡದ ಶಂಕುಸ್ಥಾಪನೆ NAMMUR EXPRESS NEWS ಎನ್ ಆರ್ ಪುರ/ಕೊಪ್ಪ: ಕೊಪ್ಪ, ಶೃಂಗೇರಿ, ಎನ್ ಆರ್ ಪುರ ತಾಲೂಕಿನ ಕಾರ್ಮಿಕ ಫಲಾನುಭವಿಗಳಿಗೆ ಮತ್ತು ಕಟ್ಟಡ ಕಾರ್ಮಿಕರಿಗೆ ವೆಲ್ಡಿಂಗ್ ಕಿಟ್ ಹಾಗೂ ನ್ಯೂಟ್ರೀಷಿಯನ್ ಕಿಟ್‌ಗಳನ್ನು ಶಾಸಕ ಟಿ.ಡಿ ರಾಜೇಗೌಡ ವಿತರಿಸಿದರು. ನಂತರ ತಾಲೂಕಿನ ಶಾಸಕರ ಕಛೇರಿಯಲ್ಲಿ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿದರು. ಕೊಪ್ಪ ಶಾಸಕರ ಕಛೇರಿ ಸಮರ್ಪಣಾದಲ್ಲಿ ಕ್ಷೇತ್ರದ ವಿಶೇಷ ಚೇತನ ಫಲಾನುಭವಿಗಳಿಗೆ ತ್ರಿಚಕ್ರ ವಾಹನಗಳನ್ನು ವಿತರಿಸಿದ ಶಾಸಕ ರಾಜೇಗೌಡ ನಂತರ ಕೊಪ್ಪ ತಾಲೂಕಿನ ಸರ್ಕಾರಿ ನೌಕರರ ಸಂಘದ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಿದರು.
ಹೆಣ್ಮಕ್ಲೇ ಸ್ಟ್ರಾಂಗ್ ಗುರು ಎಂದ ತೀರ್ಥಹಳ್ಳಿ ಬಾಲಕಿಯರು!! * ಖೋ-ಖೋ ವಲಯ ಮಟ್ಟದ ಕ್ರೀಡಾಕೂಟದಲ್ಲಿ ವಿಜೇತರು * ಸದರಿ ವಸತಿ ಶಾಲೆಯ ವಿದ್ಯಾರ್ಥಿನಿಯರು ಜಿಲ್ಲಾ ಮಟ್ಟಕ್ಕೆ ಆಯ್ಕೆ! * ಕುಡುಮಲ್ಲಿಗೆ ಡಾ. ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆ ಸಾಧನೆ NAMMUR EXPRESS NEWS ತೀರ್ಥಹಳ್ಳಿ: ಡಾ.ಬಿ.ಆರ್.ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆ ಅಗ್ರಹಾರ (ಕುಡುಮಲ್ಲಿಗೆ) ತೀರ್ಥಹಳ್ಳಿ ತಾಲ್ಲೂಕು ಸದರಿ ವಸತಿ ಶಾಲೆಯ ವಿದ್ಯಾರ್ಥಿನಿಯರು ದೀಕ್ಷಾ, ಅಮೂಲ್ಯ, ಸಂಜನಾ, ನಿಕಿತಾ, ಸಿಂಚನ, ರೇಣುಕಾ,ಪ್ರೀತಿ, ಅನನ್ಯ, ಮಂದಾರ, ಆಶ್ರಿತಾ, ಚೈತ್ರ, ಹಿಮಾನಿ ಸೆ.10ರಂದು ನಡೆದ ಸರ್ಕಾರಿ ಪ್ರೌಢ ಶಾಲೆ ಆರಗದಲ್ಲಿ ನಡೆದ ಖೋ-ಖೋ ವಲಯ ಮಟ್ಟದ ಕ್ರೀಡಾಕೂಟದಲ್ಲಿ ವಿಜೇತರಾಗಿದ್ದಾರೆ. ಸೆ.11 ರಂದು ನಡೆದ ತೀರ್ಥಹಳ್ಳಿ ತಾಲ್ಲೂಕು ಮಟ್ಟದ ಖೋ-ಖೋ ಆಟದಲ್ಲಿ ಸರ್ಕಾರಿ ಪ್ರೌಢ ಶಾಲೆ. ಗುಡ್ಡೇಕೇರಿ. ತಂಡದ ವಿರುದ್ ಗೆದ್ು, ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಮುಂದಿನ ಹಂತದಲ್ಲಿಯೂ ವಿದ್ಯಾರ್ಥಿಗಳು ಗೆಲುವು ಸಾಧಿಸಿ ಯಶ್ವಸಿಯಾಗಲಿ ಎಂದು ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆ ಅಗ್ರಹಾರ (ಕುಡುಮಲ್ಲಿಗೆ)…