- ವಿದೇಶಿ ಮಹಿಳೆಯ ಖತರ್ನಾಕ್ ಪ್ಲಾನ್
- ಎಟಿಎಂನಿಂದ 17 ಲಕ್ಷ ವಂಚನ: ಬಂಧನ
ಬೆಂಗಳೂರು: ಎಟಿಎಂ ಮಷಿನ್ಗಳಿಗೆ ಡಿವೈಸ್ ಅಳವಡಿಸಿ ವಿವಿಧ ಗ್ರಾಹಕರ ಖಾತೆಗಳಿಂದ 17 ಲಕ್ಷ ರೂ. ಕಳವು ಮಾಡಿದ್ದ ವಿದೇಶಿ ಮಹಿಳೆಯನ್ನು ಬೆಂಗಳೂರು ಪೆÇೀಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಸ್ಪೇನ್ನ ಸೇಫಿನಿ ಎಂದು ಗುರುತಿಸಲಾಗಿದೆ. ಈಕೆ ಡಿಅವೈಸ್ ಉಪಯೋಗಿಸಿ ಎಟಿಎಂ ಕೇಂದ್ರಗಳಿಂದ ವಿವಿಧ ಗ್ರಾಹಕರ ಖಾತೆಗಳಲ್ಲಿದ್ದ 17 ಲಕ್ಷ ರೂ. ಕಳವು ಮಾಡಿದ್ದಾಳೆ. ಶಿವರಾಮ ಕಾರಂತ ನಗರದ ಎಸ್.ಬಿ.ಐ. ಎಟಿಎಂಗೆ 1500 ರೂ. ಡ್ರಾ ಮಾಡಲು ಹೋಗಿದ್ದ ಗ್ರಾಹಕರಿಗೆ ಎಟಿಎಂನಿಂದ 1 ಲಕ್ಷ ಹಣ ಬಂದಿದ್ದು ಕಂಡು ಗಾಬರಿಯಾಗಿದೆ. ಆತ ತಕ್ಷಣ ಬ್ಯಾಂಕ್ ಸಿಬ್ಬಂದಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.ತಕ್ಷಣ ಸ್ಥಳಕ್ಕೆ ಧಾವಿಸಿದ ಬ್ಯಾಂಕ್ ಸಿಬ್ಬಂದಿಗಳ ತಂಡ ಮತ್ತೊಮ್ಮೆ ಅದೇ ಡೆಬಿಟ್ ಕಾರ್ಡ್ ಬಳಸಿ 1500 ವಿತ್ ಡ್ರಾ ಮಾಡಿದಾಗ ಎಟಿಎಂನಿಂದ ಅದೇ ಮೊತ್ತದ ಹಣ ಬಂದಿದೆ. ಅದಾಗಿ ಮರುದಿನ ಸ್ಥಳಕ್ಕಾಗಮಿಸಿದ ತಾಂತ್ರಿಕ ಸಿಬ್ಬಂದಿಗಳ ತಂಡಕ್ಕೆ ಎಟಿಎಂನಲ್ಲಿ ಬೇರೆ ಡಿವೈಸ್ ಇರುವುದು ಗೊತ್ತಾಗಿದೆ. ಆಲ್ಲದೆ ಸ್ಥಳದಲ್ಲಿದ್ದ ಸಿಸಿಟಿವಿ ಪರಿಶೀಲಿಸಿದಾಗ ಮಹಿಳೆಯೊಬ್ಬಳು ಡಿವೈಸ್ ಅಳವಡಿಸಿರುವುದು ಪತ್ತೆಯಾಗಿದೆ. ಸಿಸಿಟಿವಿ ದೃಶ್ಯದ ಆಧಾರದ ಮೇಲೆ ಪೆÇೀಲೀಸರು ಶೋಧ ನಡೆಸಿ ಆರೋಪಿ ಮಹಿಳೆಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.