ದಿಶಾ ಭರತ್ ಅವರಿಗೆ ಬೆಸ್ಟ್ ವೆಯಿಟ್ ಲಿಫ್ಟರ್ 2024 ಪ್ರಶಸ್ತಿ
– ರಾಜ್ಯ ಮಟ್ಟದಲ್ಲಿ 3 ಚಿನ್ನದ ಪದಕಗಳೊಂದಿಗೆ ಉತ್ತಮ ಸಾಧನೆ
– ಪ್ರಸಿದ್ಧ ಜಿಮ್ ಟ್ರೈನರ್ ಭರತ್ ಅವರ ಪತ್ನಿ ದಿಶಾ ಸಾಧನೆ
NAMMUR EXPRESS NEWS
ಬೆಂಗಳೂರು: ಕರ್ನಾಟಕ ಸ್ಟೇಟ್ ಪವರ್ ಲಿಫ್ಟರ್ ಅಸೋಶಿಯೇಶನ್, ಪವರ್ ಲಿಫ್ಟರ್ ಫೆಡರೇಷನ್ ಇಂಡಿಯಾ ಸಹಯೋಗದಲ್ಲಿ ನಡೆದ ಸ್ಟೇಟ್ ಲೆವೆಲ್ ಪವರ್ ಲಿಫ್ಟಿಂಗ್ ಕಾಂಪಿಟೇಶನ್ 2024 ರಲ್ಲಿ ಮಹಿಳೆ ಮತ್ತು ಪುರುಷರ ವಿಭಾಗದ ಸ್ಪರ್ಧೆಯಲ್ಲಿ ಪಿ.ಕೆ.ಕ್ಲಾಸಿಕ್ 2024 ಮಹಿಳಾ ವಿಭಾಗದಲ್ಲಿ ದಿಶಾ ಭರತ್ ಅವರು ಮೂರು ಚಿನ್ನದ ಪದಕಗಳೊಂದಿಗೆ ಬೆಸ್ಟ್ ವೆಯಿಟ್ ಲಿಫ್ಟರ್ 2024 ಪ್ರಶಸ್ತಿ ಪಡೆದಿದ್ದಾರೆ.
ಈ ಸ್ಪರ್ಧೆಯಲ್ಲಿ ಪುಶ್ ಫುಲ್ ಪ್ರೆಸ್ ಅಂಡ್ ಡೆಡ್ಲಿ ಫಸ್ಟ್ ಪ್ಲೇಸ್, ಪುಶ್ ಓನ್ಲಿ ಬೆಂಚ್ ಪ್ರೆಸ್ ಫಸ್ಟ್ ಪ್ಲೇಸ್, ಪುಶ್ ಫುಲ್ ಓನ್ಲಿ ಡೆಡ್ ಲಿಫ್ಟ್ ಫಸ್ಟ್ ಪ್ಲೇಸ್, ಕರ್ನಾಟಕದ ಬೆಸ್ಟ್ ವೇಟ್ ಲಿಫ್ಟರ್ ಪ್ರಶಸ್ತಿಯನ್ನ ವುಮೆನ್ ಮಹಿಳಾ ವಿಭಾಗದಲ್ಲಿ ಪಡೆದುಕೊಂಡಿದ್ದಾರೆ.
ಕರ್ನಾಟಕ ರಾಜ್ಯದ ವಿವಿಧ ಭಾಗಗಳಿಂದ ಸ್ಪರ್ಧಿಗಳು ಆಗಮಿಸಿದ್ದರು. ದಿಶಾ ಅವರು ಇಲ್ಲಿಯವರೆಗೆ ಡಬ್ಲ್ಯೂ ಪಿ ಸಿ ನ್ಯಾಷನಲ್ 2023 ರಲ್ಲಿ 2 ಚಿನ್ನದ ಪದಕ ಹಾಗೂ ಮೊದಲ ಸ್ಥಾನವನ್ನು, ಒಂದು ಬೆಳ್ಳಿಯ ಪದಕ ಎರಡನೇ ಸ್ಥಾನವನ್ನ, ಸ್ಟೇಟ್ ಪವರ್ ಲಿಫ್ಟಿಂಗ್ 2023 ರಲ್ಲಿ ಬೆಳ್ಳಿಯ ಪದಕ ಎರಡನೇ ಸ್ಥಾನ, ನರೇಶ್ ಸೂರ್ಯ ಕ್ಲಾಸಿಕ್ 2023 ರಲ್ಲಿ ಬೆಳ್ಳಿ ಪದಕ ಪಡೆದುಕೊಂಡಿರುತ್ತಾರೆ. 2024ರ ಬೆಸ್ಟ್ ಲಿಫ್ಟಿರ್ ಆಫ್ ಕರ್ನಾಟಕ ವುಮೆನ್ಸ್ ಆಗಿದ್ದಾರೆ. ಇವರು ಬೆಂಗಳೂರಿನ ಖ್ಯಾತ ಜಿಮ್ ಟ್ರೈನರ್ ಭರತ್ ಅವರ ಪತ್ನಿಯಾಗಿದ್ದಾರೆ. ಇವರು
ಶೃಂಗೇರಿ ಮೂಲದ ಕಿಗ್ಗ ಸಮೀಪದವರಾಗಿದ್ದಾರೆ.