ಬಿಗ್ ಬಾಸ್ ಮನೆಯಿಂದ ದಿಢೀರ್ ಹೊರಬಂದ ಚೈತ್ರ ಕುಂದಾಪುರ..!!??
– ಚೈತ್ರ ಹೊರಬರಲು ಕಾರಣವೇನು..??
– ಬಿಗ್ಬಾಸ್ ಮನೆಯ ಪ್ರಬಲ ಸ್ಪರ್ಧಿ ಚೈತ್ರ ಕುಂದಾಪುರ
NAMMUR EXPRESS NEWS
ಬೆಂಗಳೂರು : ಕನ್ನಡ ಕಿರುತೆರೆ ಪ್ರಸಿದ್ಧ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ – 11 ರ ಸ್ಪರ್ಧಿ ಚೈತ್ರ ಕುಂದಾಪುರ ಬಿಗ್ಬಾಸ್ ಮನೆಯಿಂದ ಹೊರ ಬಂದಿದ್ದಾರೆ..!!
ಹೌದು..ಬಿಗ್ ಬಾಸ್ ಸ್ಪರ್ಧಿ ಚೈತ್ರಾ ಕುಂದಾಪುರ ಬಿಗ್ ಬಾಸ್ ಮನೆಯಲ್ಲಿ ಪ್ರಬಲ ಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದು, ಇದೀಗ ಬಿಗ್ಬಾಸ್ ಸೀಸನ್ 11ರ ಮನೆಯಿಂದ ಹೊರ ಬಂದಿದ್ದಾರೆ.
ಚೈತ್ರ ಹೊರಬರಲು ಕಾರಣವೇನು.?
ಚೈತ್ರಾ ಕುಂದಾಪುರ & ಗ್ಯಾಂಗ್ ಮೇಲೆ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಹೇಳಿ ಉದ್ಯಮಿ ಗೋವಿಂದಬಾಬು ಎಂಬುವವರಿಗೆ ಕೋಟಿ – ಕೋಟಿ ವಂಚಿಸಿದ ಆರೋಪದಲ್ಲಿ ಅವರ ಮೇಲೆ ದೂರು ದಾಖಲಾಗಿತ್ತು. ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚೈತ್ರಾ ಕೋರ್ಟ್ಗೆ ಹಾಜರಾಗಬೇಕಿತ್ತು.
ಈ ಹಿನ್ನಲೆಯಲ್ಲಿ ಇಂದು ದಿಢೀರನೇ ಬಿಗ್ ಬಾಸ್ ಮನೆಯಿಂದ ಗುಟ್ಟಾಗಿ ಹೊರ ಬಂದಿದ್ದು, 1ನೇ ಎಸಿಎಂಎಂ ಕೋರ್ಟ್ಗೆ ಹಾಜರಾಗಿದ್ದರು. ಈ ಪ್ರಕರಣದಲ್ಲಿ ಚೈತ್ರಾ ಕುಂದಾಪುರ ಬಂಧನಕ್ಕೊಳಗಾಗಿ ವಿಚಾರಣೆ ಎದುರಿಸಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ನ್ಯಾಯಾಧೀಶರು ಚೈತ್ರಾ ಕುಂದಾಪುರ ಅವರ ಕೇಸ್ನ ವಿಚಾರಣೆಯನ್ನು ಬರುವ ಜನವರಿ 13ರಂದು ನಡೆಸುವುದಾಗಿ ಹೇಳಿ ಮುಂದೂಡಿದ್ದಾರೆ. ಕೇಸ್ ಮುಂದುವರೆದ ಕಾರಣ ಚೈತ್ರಾ ಕುಂದಾಪುರ ಅವರನ್ನು ಮತ್ತೆ ಬಿಗ್ ಬಾಸ್ ಮನೆಯೊಳಗೆ ಕಳುಹಿಸಲಾಗಿದೆ.
ಕೇಸ್ ಮುಂದೂಡಿದ ಪರಿಣಾಮ ಚೈತ್ರಾ ಕುಂದಾಪುರ ಅವರಿಗೆ ಸದ್ಯ ಜನವರಿ ವರೆಗೆ ರಿಲೀಫ್ ಸಿಕ್ಕಿದೆ