ಜ.5ಕ್ಕೆ ರಾಜಧಾನಿಯಲ್ಲಿ ಸಹ್ಯಾದ್ರಿ ಸಂಘದಿಂದ ಕ್ರೀಡಾಕೂಟ!
– ಬೆಂಗಳೂರಿನಲ್ಲಿರುವ ಮಲೆನಾಡಿಗರ ವಾರ್ಷಿಕ ಕ್ರೀಡಾಕೂಟ
– ಪುರುಷರು, ಮಹಿಳೆಯರು, ಚಿಕ್ಕ ಮಕ್ಕಳಿಗೂ ಆಟೋಟ
– ಕಾರ್ಯಕ್ರಮದ ವಿಶೇಷ ವರದಿ ನಮ್ಮೂರ್ ಎಕ್ಸ್ಪ್ರೆಸ್ ಅಲ್ಲಿ ವೀಕ್ಷಿಸಿ
NAMMUR EXPRESS NEWS
ಬೆಂಗಳೂರು/ ಮಲೆನಾಡು: ಮಲೆನಾಡು ಮೂಲದವರ ರಾಜಧಾನಿ ಸಂಘಟನೆ ಸಹ್ಯಾದ್ರಿ ಸಂಘದ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವು ಕೂಡ ಬೆಂಗಳೂರಿನಲ್ಲಿರುವ ಮಲೆನಾಡಿಗರ 21ನೇ ವರ್ಷದ ವಾರ್ಷಿಕ ಕ್ರೀಡಾಕೂಟವನ್ನು ಜನವರಿ 5 – 2025 ಭಾನುವಾರದಂದು ಹಮ್ಮಿಕೊಳ್ಳಲಾಗಿದೆ. ಒಕ್ಕಲಿಗರ ಸಂಘ ಪ್ರೌಢಶಾಲಾ ಆವರಣ ಶ್ರೀಗಂಧಕಾವಲ್, ಸುಂಕದಕಟ್ಟೆ, ಬೆಂಗಳೂರಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಎಲ್ಲಾ ಮಲೆನಾಡಿಗರು ಒಟ್ಟಿಗೆ ಸೇರಲು ಒಂದು ಸುವರ್ಣ ಅವಕಾಶ ಆಗಲಿದೆ.
ಈ ಕ್ರೀಡಾಕೂಟದ ಉದ್ಘಾಟನೆಯನ್ನು ಜಿ. ಎ ಪುರುಷೋತ್ತಮ ಗೌಡ ಅವರು ನೆರವೇರಿಸಲಿದ್ದಾರೆ. ಚಿಕ್ಕ ಮಕ್ಕಳಿಂದ ಹಿಡಿದು ಪುರುಷರು, ಮಹಿಳೆಯರು ಎಲ್ಲರೂ ಕೂಡ ಈ ಕ್ರೀಡಾಕೂಟದಲ್ಲಿ ಸ್ಪರ್ಧಿಸಬಹುದು. ಅನೇಕ ರೀತಿಯ ಕ್ರೀಡೆಯನ್ನ ಏರ್ಪಡಿಸಲಾಗಿದೆ. ಬಕೆಟ್ ಒಳಗೆ ಚೆಂಡು, ಪ್ರಾಗ್ ಜಂಪ್ , ಮ್ಯೂಸಿಕಲ್ ಚೇರ್, ತೆಂಗಿನಕಾಯಿ ಒಡೆಯುವ ಸ್ಪರ್ಧೆ, ಕಬಡ್ಡಿ, ವಾಲಿಬಾಲ್, ತ್ರೋಬಾಲ್ , ರನ್ನಿಂಗ್ ರೇಸ್ ಸೇರಿದಂತೆ ಅನೇಕ ಆಟಗಳು ಆಯೋಜನೆ ಮಾಡಲಾಗಿದೆ. ಪುರುಷರು, ಮಹಿಳೆಯರು, ಮಕ್ಕಳು ಆಟ ಆಡಿ ಎಲ್ಲರೂ ಒಟ್ಟಿಗೆ ಕಾಲ ಕಳೆಯಬಹುದು. ಸಂಜೆ 4:00 ನಂತರ ವೇದಿಕೆ ಕಾರ್ಯಕ್ರಮ ಕೂಡ ನೆರವೇರುತ್ತದೆ ನೃತ್ಯ, ಮಲೆನಾಡಿನ ಅದೃಷ್ಟವಂತ ಹುಡುಗ- ಹುಡುಗಿ, ಅದೃಷ್ಟವಂತ ದಂಪತಿಗಳು ಎನ್ನುವ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ. ಸಂಜೆ 6 ಗಂಟೆಯ ನಂತರ ಸಮಾರೋಪ ಸಮಾರಂಭ ಕೂಡ ನೆರವೇರುತ್ತದೆ. ಈ ಕಾರ್ಯಕ್ರಮಕ್ಕೆ ಮಲೆನಾಡಿನ ಸರ್ವರನ್ನು ಕೂಡ ಸಹ್ಯಾದ್ರಿ ಸಂಘದ ಅಧ್ಯಕ್ಷರಾದ ಶ್ರೀಧರ್ ಮತ್ತು ಕಾರ್ಯದರ್ಶಿ ಜಯಪ್ರಕಾಶ್ ಸೇರಿ ಎಲ್ಲಾ ಪದಾಧಿಕಾರಿಗಳು ಸ್ವಾಗತಿಸಿದ್ದಾರೆ.
ಕ್ರೀಡಾಕೂಟ ಮತ್ತು ಸಭಾ ಕಾರ್ಯಕ್ರಮವನ್ನು ನಮ್ಮೂರ್ ಎಕ್ಸ್ ಪ್ರೆಸ್ ಯೂಟ್ಯೂಬ್ ಚಾನಲ್ ಅಲ್ಲಿ ನೇರ ಪ್ರಸಾರ ಕೂಡ ಮಾಡಲಿದೆ..