ಇಂದೇ ‘ಗೃಹಜ್ಯೋತಿ ನೋಂದಣಿ’ಗೆ ಕೊನೇ ದಿನ.!
– ಜುಲೈ ತಿಂಗಳ ಬಿಲ್ ಫ್ರೀ ಪಡೆಯಲು ನೋಂದಣಿ ಕಡ್ಡಾಯ
– ಯೋಜನೆಗೆ ಕೊನೆ ದಿನ ಅಲ್ಲ, ಈ ತಿಂಗಳ ಯೋಜನೆ ಪಡೆಯಲು ಕೊನೆಯ ದಿನ
NAMMUR EXPRESS NEWS
ಬೆಂಗಳೂರು: ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದಾದ ಗೃಹ ಜ್ಯೋತಿ ಗ್ಯಾರಂಟಿಯಡಿ ಮೊದಲ ತಿಂಗಳು ಸುಮಾರು ಶೇ.60ರಷ್ಟು ಗ್ರಾಹಕರು ಫಲಾನುಭವಿಗಳಾಗಲಿದ್ದಾರೆ. ಜುಲೈ ತಿಂಗಳ ಉಚಿತ ವಿದ್ಯುತ್ ಬಿಲ್ ಪಡೆಯಲು ಜುಲೈ 25 ಕೊನೆಯ ದಿನಾಂಕ ಆಗಿದೆ. 1.92 ಕೋಟಿ ಗೃಹ ಬಳಕೆದಾರರಿದ್ದು, ಇದರಲ್ಲಿ ಶೇ.90ಕ್ಕೂ ಅಧಿಕ ಜನ ಮಾಸಿಕ ಸರಾಸರಿ 200 ಯೂನಿಟ್ಗಿಂತ ಕಡಿಮೆ ವಿದ್ಯುತ್ ಬಳಕೆ ಮಾಡುವವರಾಗಿದ್ದಾರೆ ಎಂದು ವಿದ್ಯುತ್ ಸರಬರಾಜು ಕಂಪೆನಿ (ಎಸ್ಕಾಂ)ಗಳು ಮಾಹಿತಿ ನೀಡಿವೆ. ಇವರಲ್ಲಿ ಇದುವರೆಗೆ ಅಂದಾಜು 1.18 ರಿಂದ 1.20 ಕೋಟಿ ಮಂದಿ ಸೇವಾಸಿಂಧು ಪೋರ್ಟಲ್ ಮೂಲಕ ನೋಂದಣಿ ಮಾಡಿಸಿಕೊಂಡಿದ್ದಾರೆ. ಉಳಿದವರು ಇನ್ನೂ ನೋಂದಣಿ ಮಾಡಿ ಕೊಂಡಿಲ್ಲ.
ಜುಲೈ ಅಂದರೆ ಮೊದಲ ತಿಂಗಳ ಫಲಾನುಭವಿಗಳಾಗಲು ಮಂಗಳವಾರ ಕೊನೆಯ ದಿನವಾಗಿದೆ. ನೋಂದಣಿ ಮಾಡಿಸಿಕೊಳ್ಳದವರು ಯೋಜನೆ ಅಡಿ ಫಲಾನುಭವಿಗಳಾಗಲು ಒಂದು ತಿಂಗಳು ಕಾಯಬೇಕಿದೆ. ಮುಂದಿನ ತಿಂಗಳು ನೋಂದಣಿ ಮಾಡಿಕೊಂಡವರಿಗೆ ಮುಂದಿನ ತಿಂಗಳ ಬಿಲ್ ಫ್ರೀ ಆಗಲಿದೆ.
ಇದನ್ನೂ ಓದಿ : ತೀರ್ಥಹಳ್ಳಿ ಹುಡುಗನ ಅನುಮಾನಾಸ್ಪದ ಸಾವು!
HOW TO APPLY : NEET-UG COUNSELLING 2023