ದತ್ತ ಜಯಂತಿ ಹಿನ್ನೆಲೆ: ಕಾಫಿ ನಾಡಲ್ಲಿ ವಿಶೇಷ ಕಾರ್ಯಕ್ರಮ!
– ವಿಶ್ವ ಹಿಂದೂ ಪರಿಷದ್ ಬಜರಂಗದಳದ ವತಿಯಿಂದ ಆಯೋಜನೆ
– ಜಿಲ್ಲೆಯ ಪ್ರತಿ ಪ್ರಖಂಡದಲ್ಲೂ ಧಾರ್ಮಿಕ,ಸಭಾ ಕಾರ್ಯಕ್ರಮ,ಶೋಭಾಯಾತ್ರೆ
NAMMUR EXPRESS NEWS
ಚಿಕ್ಕಮಗಳೂರು: ದತ್ತಜಯಂತಿ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಎಲ್ಲಾ ತಾಲೂಕು,ಪ್ರಮುಖ ಕೇಂದ್ರಗಳಲ್ಲಿ ಬೃಹತ್ ಶೋಭಾಯಾತ್ರೆ,ಧಾರ್ಮಿಕ ಸಭಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ವಿಶ್ವ ಹಿಂದೂ ಪರಿಷದ್ ಬಜರಂಗದಳದ ವತಿಯಿಂದ ಕಾರ್ಯಕ್ರಮಗಳ ಆಯೋಜನೆಯಾಗಿದ್ದು ದಿಕ್ಸೂಚಿ ಭಾಷಣಕಾರರಾಗಿ ಹಿಂದೂ ಫೈರ್ ಬ್ರಾಂಡ್ ಖ್ಯಾತ ವಾಗ್ಮಿಗಳನ್ನು ಆಹ್ವಾನಿಸಲಾಗಿದೆ.
ಯಾವತ್ತು,ಎಲ್ಲೆಲ್ಲಿ ಕಾರ್ಯಕ್ರಮ,ಯಾರು ದಿಕ್ಸೂಚಿ ಭಾಷಣಕಾರರು..?
ಡಿ.10 ರಂದು ಎನ್ ಆರ್ ಪುರ – ಶರಣ್ ಪಂಪ್ವೆಲ್
ಡಿ.12 ರಂದು ಬಾಳೆಹೊನ್ನೂರು – ಕುಮಾರಿ ಹಾರಿಕಾ ಮಂಜುನಾಥ್
ಡಿ.11ರಂದು ಕೊಪ್ಪ – ಪುನೀತ್ ಕೆರೆಹಳ್ಳಿ
ಡಿ.10 ರಂದು ಜಯಪುರ – ಪ್ರಭಂಜನ್ ಸೂರ್ಯ
ಡಿ.09 ರಂದು ಬಸರೀಕಟ್ಟೆ- ಕುಮಾರಿ ಹಾರಿಕಾ ಮಂಜುನಾಥ್
ಡಿ.11 ರಂದು ಕಳಸ- ರಾಜಶೇಖರಾನಂದ ಸ್ವಾಮೀಜಿ ವಜ್ರದೇಹಿ ಮಠ,ಶ್ರೀಮತಿ ಸುರೇಖಾರಾಜ್
ಡಿ.12 ರಂದು ಮೂಡಿಗೆರೆ- ಮುಕ್ತಾನಂದ ಸ್ವಾಮೀಜಿ ಮತ್ತು ರವೀಶ್ ತಂತ್ರಿ
ಡಿ.09 ರಂದು ಬಣಕಲ್ – ಪ್ರಕಾಶ್ ಮಲ್ಪೆ
ಡಿ.13 ರಂದು ಚಿಕ್ಕಮಗಳೂರು- ಚಕ್ರವರ್ತಿ ಸೂಲಿಬೆಲೆ.
ಕಾರ್ಯಕ್ರಮಗಳಿಗೆ ಸರ್ವರನ್ನು ಸ್ವಾಗತಿಸಲಾಗಿದೆ.