ಜೆ.ಸಿ.ಐ ನಿಂದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ತರಬೇತಿ..!
– How to face exam ಎಂಬ ವಿಷಯವಾಗಿ ತರಬೇತಿ
– ಜೆ.ಸಿ.ಐ ಶೃಂಗೇರಿ ವತಿಯಿಂದ ತರಬೇತಿ ಆಯೋಜನೆ
NAMMUR EXPRESS NEWS
ಶೃಂಗೇರಿ/ಬೇಗಾರು : ಬೇಗಾರಿನ ಕರ್ನಾಟಕ ಪಬ್ಲಿಕ್ ಸ್ಕೂಲ್ – ಫ್ರೌಡಶಾಲಾ ವಿಭಾಗದಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗಾಗಿ ಜೆ.ಸಿ.ಐ ಶೃಂಗೇರಿ ಘಟಕದ ವತಿಯಿಂದ How to face exam ಎಂಬ ವಿಷಯವಾಗಿ ವಿಶೇಷ ತರಬೇತಿಯನ್ನು ನಡೆಸಲಾಯಿತು. ವಿಷಯದ ಕುರಿತು ತರಬೇತುದಾರರಾಗಿ ಜೆ.ಎಫ್.ಪಿ ವಿಜಯ್ ಕುಮಾರ್ ಎನ್.ಕೆಯವರು ನಡೆಸಿಕೊಟ್ಟರು. ತರಬೇತಿಯಲ್ಲಿ ಪರೀಕ್ಷೆಗಾಗಿ ವಿದ್ಯಾರ್ಥಿಗಳು ಹೇಗೆಲ್ಲಾ ಅಭ್ಯಾಸ ಮಾಡಬೇಕು, ಅಭ್ಯಾಸದ ಕ್ರಮ ಹೇಗಿರಬೇಕೆಂಬ ಸಲಹೆಗಳನ್ನು ನೀಡಿದರು.
ಈ ಸಂದರ್ಭದಲ್ಲಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಜೆ.ಸಿ.ಐ ಅಧ್ಯಕ್ಷ ವಿ.ಎಸ್ ಅಶೋಕ್ ಸಂಸ್ಥೆಯ ವತಿಯಿಂದ ಈ ವರ್ಷದಲ್ಲಿ ಇಂತಹ ನೂರು ತರಬೇತಿಗಳನ್ನು ನಡೆಸುವ ಉದ್ದೇಶವಿದೆ, ಆ ಮೂಲಕ ಶಾಲಾ ವಿದ್ಯಾರ್ಥಿಗಳು,ಶಿಕ್ಷಕ ವರ್ಗ,ಸಮಾಜದ ಯುವ ಸಮೂಹವನ್ನು ತಲುಪುವ ಉದ್ದೇಶ ಹೊಂದಲಾಗಿದೆ ಎಂದರು. ಕಾರ್ಯಕ್ರಮಲ್ಲಿ ಪದವಿ ಪೂರ್ವ ವಿಭಾಗದ ಪ್ರಾಂಶುಪಾಲರಾದ ಶಿವರಾಂ ಹಾಗೂ ಫ್ರೌಢಶಾಲಾ ವಿಭಾಗದ ಪ್ರಾಂಶುಪಾಲರಾದ ಚಂದ್ರೇಗೌಡ ಸೇರಿದಂತೆ ಜೆ.ಸಿ.ಐನ ಸದಸ್ಯರು ಉಪಸ್ಥಿತರಿದ್ದರು. ಸಂಸ್ಥೆಯ ಈ ಉತ್ತಮ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು.
ಗಣರಾಜ್ಯೋತ್ಸವದ ಅಂಗವಾಗಿ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳು..!!
ಸಂಸ್ಥೆಯ ವತಿಯಿಂದ ಗಣರಾಜ್ಯೋತ್ಸವದ ಪ್ರಯುಕ್ತ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗಾಗಿ ಚಿತ್ರಕಲೆ,ದೇಶ ಭಕ್ತಿಗೀತೆ ಮತ್ತು ಗಣರಾಜ್ಯೋತ್ಸವದ ಸಲುವಾಗಿ ವಿವಿಧ ಮಾದರಿ ತಯಾರಿಕಾ ಸ್ಪರ್ಧೆಗಳನ್ನು ತಾಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಗಂಡಘಟ್ಟದಲ್ಲಿ ಏರ್ಪಡಿಸಲಾಗಿತ್ತು ಹಾಗೂ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಜೆ.ಸಿ ಐ ಅಧ್ಯಕ್ಷ ಅಶೋಕ್ ವಿ.ಎಸ್ ಸೇರಿದಂತೆ,ಉಪಾಧ್ಯಕ್ಷರುಗಳಾದ ಪೂರ್ಣಚಂದ್ರ,ಶ್ರೀಕಾಂತ್,ಆಶೀಶ್ ದೇವಾಡಿಗ ಸದಸ್ಯರಾದ ಅಭಿಷೇಕ್,ಸಚಿನ್ ಹಾಗೂ ಮಹಿಳಾ ಸಂಯೋಜಕಿಯಾದ ಜೆ.ಸಿ.ಐ ಸುನೀತ ನವೀನ್ ಗೌಡರವರು ಭಾಗಿಯಾಗಿದ್ದರು.