ಕಿಗ್ಗಾದಿಂದ ನರಸಿಂಹ ಪರ್ವತಕ್ಕೆ ನಾಮ ಜಪ ಯಾತ್ರೆ..
– ಅಯೋಧ್ಯೆ ಶ್ರೀರಾಮ ಮಂದಿರ ಲೋಕಾರ್ಪಣೆಗೊಂಡ ಮೊದಲ ವರ್ಷದ ನೆನಪಿಗಾಗಿ ಪಾದಯಾತ್ರೆ
– ಶ್ರೀರಾಮನಿಗೂ ಕಿಗ್ಗಾ ಋಷ್ಯಶೃಂಗೇಶ್ವರನಿಗೂ ಇರುವ ಮಹತ್ವದ ಸಂಬಂಧ
– ವಿಶ್ವಹಿಂದೂ ಪರಿಷತ್ ಬಜರಂಗದಳದಿಂದ ಕಾರ್ಯಕ್ರಮ ಆಯೋಜನೆ
NAMMUR EXPRESS NEWS
ಶೃಂಗೇರಿ: ಬಹುಕೋಟಿ ಹಿಂದೂಗಳ ಸುಮಾರು 500 ವರ್ಷಗಳ ಕನಸು ಅಯೋಧ್ಯೆ ಶ್ರೀರಾಮ ಮಂದಿರ, ಹಲವಾರು ತ್ಯಾಗ ಬಲಿದಾನಗಳ ನಂತರ ಕಾನೂನಿನಡಿಯಲ್ಲಿ ನ್ಯಾಯ ದೊರಕಿ ರಾಮನ ಜನ್ಮ ಭೂಮಿ ಅಯೋಧ್ಯೆಯಲ್ಲಿ ಬಾಲ ರಾಮ (ರಾಮ ಲಲ್ಲಾ)ನ ಪ್ರಾಣ ಪ್ರತಿಷ್ಠೆಗೊಂಡು ರಾಮ ಮಂದಿರ ಲೋಕಾರ್ಪಣೆಗೊಂಡ ಶುಭ ದಿನದಂದು ವಿಶ್ವ ಹಿಂದೂ ಪರಿಷದ್ ಬಜರಂಗದಳ ಶೃಂಗೇರಿ ವತಿಯಿಂದ ಶೃಂಗೇರಿ ತಾಲೂಕಿನ ಕಿಗ್ಗಾ ಋಷ್ಯಶೃಂಗೇಶ್ವರ ದೇವಾಲಯದಿಂದ ಋಷ್ಯಶೃಂಗರು ತಪಸ್ಸು ಮಾಡಿದ ಪವಿತ್ರ ಜಾಗ ನರಸಿಂಹ ಪರ್ವತಕ್ಕೆ “ನಾಮ ಜಪ ಯಾತ್ರೆ” ಎಂಬ ಪಾದಯಾತ್ರೆಯನ್ನು “ಋಷಿ ಪ್ರಜ್ಞಾ ಪ್ರದೀಪನ” ಎಂಬ ಧ್ಯೇಯದಡಿಯಲ್ಲಿ ಹಮ್ಮಿಕೊಂಡಿದೆ. ದಿನಾಂಕ: 22/01/2025 ರ ಬುಧವಾರ ಬೆಳಿಗ್ಗೆ 6:30 ಕ್ಕೆ ಆರಂಭಗೊಳ್ಳಲಿರುವ ಪಾದಯಾತ್ರೆಯಲ್ಲಿ ಸುಮಾರು 400 ಜನ ಭಕ್ತಾಧಿಗಳು ಸೇರುವ ನಿರೀಕ್ಷೆಯಿದೆ. ಆಸಕ್ತ ರಾಮ ಭಕ್ತರು ಈ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವಂತೆ ವಿಶ್ವ ಹಿಂದೂ ಪರಿಷದ್ ಬಜರಂಗದಳ ಮನವಿ ಮಾಡಿದೆ.