14 ದಿನಗಳ ಪೋಲಿಸ್ ಕಸ್ಟಡಿಗೆ ನಕ್ಸಲರು..!
* ಕೊಪ್ಪ,ಉಡುಪಿ ಡಿ.ವೈ.ಎಸ್.ಪಿ ನೇತೃತ್ವದಲ್ಲಿ ತನಿಖೆ ಆರಂಭ
* ಮೆಡಿಕಲ್ ಟೆಸ್ಟ್ ನಂತರ ಸ್ಥಳ ಮಹಜರಿಗೆ ಕರೆದೊಯ್ದ ಪೋಲೀಸರು
NAMMUR EXPRESS NEWS
ಕೊಪ್ಪ: ಕೆಲವು ದಿನಗಳ ಹಿಂದೆ ಮುಖ್ಯಮಂತ್ರಿಗಳ ಮುಂದೆ ಶರಣಾಗಿದ್ದ 6 ಮಂದಿ ನಕ್ಸಲರನ್ನು ಪೋಲೀಸ್ ಕಸ್ಟಡಿಗೆ ನೀಡಲಾಗಿದೆ. 16 ರ ತಡರಾತ್ರಿ ಚಿಕ್ಕಮಗಳೂರಿಗೆ ಹೆಚ್ಚಿನ ವಿಚಾರಣೆಗಾಗಿ ಕರೆತರಲಾಗಿತ್ತು. ಈ ಹಿನ್ನೆಲೆಯಲ್ಲಿ ಎನ್.ಐ.ಎ ಕೋರ್ಟ್ನಿಂದ ಅನುಮತಿ ಪಡೆದು ಪೋಲೀಸರು ಕರೆತಂದಿದ್ದರು.
ಚಿಕ್ಕಮಗಳೂರು ಮತ್ತು ಉಡುಪಿ ಜಿಲ್ಲೆಗಳಲ್ಲಿ ಮುಂಡಗಾರು ಲತಾ,ಸುಂದರಿ,ಜಯಣ್ಣ, ವನಜಾಕ್ಷಿಯವರುಗಳ ಮೇಲೆ ಪ್ರಕರಣಗಳಿದ್ದು ಇವುಗಳ ವಿಚಾರಣೆ ಆರಂಭವಾಗಿದೆ.
ಈ ಸಂಬಂಧ ಕೊಪ್ಪ ಹಾಗೂ ಉಡುಪಿ ಡಿ.ವೈ.ಎಸ್.ಪಿಗಳ ನೇತೃತ್ವದಲ್ಲಿ ವಿಚಾರಣೆ ಆರಂಭವಾಗಿದ್ದು ನಕ್ಸಲರ ಮೆಡಿಕಲ್ ಟೆಸ್ಟ್ ಮಾಡಿಸಿ ನಂತರ ಸ್ಥಳ ಮಹಜರಿಗಾಗಿ ಪೋಲೀಸರು ಕರೆದೊಯ್ದಿದ್ದಾರೆ. ಜಯಪುರ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಭಿತ್ತಿ ಪತ್ರ ಹಂಚಿಕೆ ಪ್ರಕರಣ ಸಂಬಂಧ ಜಯಪುರದ ಕಡೆಗುಂದಿ ಗ್ರಾಮದಲ್ಲಿ ಪೋಲೀಸರು ಭೇಟಿನೀಡಿ ಸ್ಥಳ ಮಹಜರು ನಡೆಸುತ್ತಿದ್ದಾರೆ. ಮುಂಡುಗಾರು ಲತಾ-33,ವನಜಾಕ್ಷಿ -15,ಸುಂದರಿ,ಜಯಣ್ಣ ಮೇಲೆ ತಲಾ 3 ಕೇಸುಗಳಿದ್ದು, 14 ದಿನಗಳ ಕಾಲ ಈ 6 ಜನ ನಕ್ಸಲರನ್ನು ಪೋಲೀಸ್ ಕಸ್ಟಡಿಗೆ ನೀಡಲಾಗಿದೆ.