ಕೊಪ್ಪ ಪಟ್ಟಣದ ರಸ್ತೆಯಲ್ಲಿ ಗುಂಡಿಗಳದ್ದೇ ಸಾಮ್ರಾಜ್ಯ!
– ಪ್ರತಿ ನಿತ್ಯ ವಾಹನ ಸವಾರರ ಪರದಾಟ: ದಿನವೂ ಅಪಘಾತ
– ಕಣ್ಮುಚ್ಚಿ ಕುಳಿತ ಅಧಿಕಾರಿಗಳು,ಜನಪ್ರತಿನಿಧಿಗಳು: ಪ್ರತಿಭಟನೆ ಎಚ್ಚರಿಕೆ
NAMMUR EXPRESS NEWS
ಕೊಪ್ಪ: ಕೊಪ್ಪ ಪಟ್ಟಣದ ಮುಖ್ಯರಸ್ತೆಯಲ್ಲಿ ಗುಂಡಿಗಳದ್ದೇ ಸಾಮ್ರಾಜ್ಯ ನಿರ್ಮಾಣಗೊಂಡಿದೆ. ಇದರಿಂದ ದಿನವು ಅಪಘಾತಗಳು ನಡೆಯುತ್ತಿದ್ದು ಜನರು ಹೈರಾಣಾಗಿದ್ದಾರೆ. ಗುಂಡಿಗಳನ್ನು ಮಣ್ಣಿನಿಂದ ಮುಚ್ಚುವ ಕೆಲಸವಾಯಿತಾದರೂ ಅದು ಎರಡೇ ದಿನದಲ್ಲಿ ಮತ್ತೆ ಗುಂಡಿ ಬೀಳುತ್ತಿದೆ. ದಿನನಿತ್ಯ ಶಾಲಾಕಾಲೇಜು ಹೋಗುವ ವಿದ್ಯಾರ್ಥಿಗಳಿಗೆ,ಸಾರ್ವಜನಿಕರಿಗೆ ತೀವ್ರತೊಂದರೆಯಾಗುತ್ತಿದೆ. ಈ ಬಗ್ಗೆ ಶಾಸಕರು, ಅಧಿಕಾರಿಗಳು ಗಮನ ಹರಿಸಬೇಕು ಎಂದು ಜನತೆ ಅಗ್ರಹಿಸಿದ್ದಾರೆ.
ಶಾಶ್ವತ ಪರಿಹಾರ ಯಾಕಿಲ್ಲ…?
ಕೊಪ್ಪದ ಮೇಲಿನ ಪೇಟೆಯಲ್ಲಿ ರಸ್ತೆ ಗುಂಡಿಗಳಿಂದ ಬೈಕ್ ಸವಾರರು,ಪ್ರಯಾಣಿಕರು ಬಿದ್ದು ತೊಂದರೆಗಳಾಗಿವೆ. ಸೋಮವಾರ ಕೂಡ ಸ್ಥಳೀಯ ವಿದ್ಯಾರ್ಥಿಯೊಬ್ಬ ಗುಂಡಿ ತಪ್ಪಿಸಲು ಹೋಗಿ ಬೈಕ್ನಿಂದ ಬಿದ್ದು ಗಾಯಗೊಂಡು ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದಿನ ನಿತ್ಯ ಬೆಳಿಗ್ಗೆ ತಾಯಂದಿರು ಚಿಕ್ಕ ಮಕ್ಕಳನ್ನು ಸ್ಕೂಟಿಯಲ್ಲಿ ಕರೆತಂದು ಶಾಲೆಗೆ ಬಿಡುತ್ತಾರೆ ಹೀಗಿರುವಾಗ ರಸ್ತೆಯ ಈ ಅವ್ಯವಸ್ಥೆಯಿಂದ ತೀರಾ ತೊಂದರೆ ಉಂಟಾಗಿದ್ದು ಈ ಸಮಸ್ಯೆಗೆ ಶಾಶ್ವತ ಪರಿಹಾರಬೇಕಿದೆ.
ಸಮಸ್ಯೆ ಬಗೆಹರಿಯದಿದ್ದರೆ ಪ್ರತಿಭಟನೆಯ ಎಚ್ಚರಿಕೆ
ಹಲವು ದಿನಗಳಿಂದ ಉಂಟಾಗಿರುವ ಈ ಸಮಸ್ಯೆಗೆ ಅಧಿಕಾರಿಗಳು,ಜನಪ್ರತಿನಿಧಿಗಳು ಶಾಶ್ವತ ಪರಿಹಾರ ಕಲ್ಪಿಸದೇ ಇದ್ದಲ್ಲಿ ಮೇಲಿನಪೇಟೆಯಲ್ಲಿ ಪ್ರತಿಭಟನೆ ನಡೆಸೋದಾಗಿ ಸ್ಥಳೀಯರು “ನಮ್ಮೂರ್ ಎಕ್ಸ್ಪ್ರೆಸ್”ಗೆ ತಿಳಿಸಿದ್ದಾರೆ.