ಡಿ.28 ರಂದು ಚಿಕ್ಕಮಗಳೂರಲ್ಲಿ ಕರೆಂಟ್ ಇರಲ್ಲ..
– ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಕರೆಂಟ್ ಇಲ್ಲ
– ಪ್ರಕಟಣೆ ಹೊರಡಿಸಿದ ಚಿಕ್ಕಮಗಳೂರು ಮೆಸ್ಕಾಂ
NAMMUR EXPRESS NEWS
ಚಿಕ್ಕಮಗಳೂರು: ವಿದ್ಯುತ್ ಪರಿವರ್ತಕ ಕೇಂದ್ರವನ್ನು ಸ್ಥಳಾಂತರಿಸುವ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ತಾಲೂಕಿನ ಹಲವೆಡೆ ಡಿ.28ರಂದು ವಿದ್ಯುತ್ ವ್ಯತ್ಯಯವಾಗಲಿದೆ.
ನಗರ ಉಪವಿಭಾಗದ ಘಟಕ-1, 2, 3 ಮತ್ತು ಗ್ರಾಮೀಣ ಉಪವಿಭಾಗದ ವ್ಯಾಪ್ತಿಯ ಗೌರಿಕಾಲುವೆ, ಉಪ್ಪಳ್ಳಿ, ವಿಜಯಪುರ, ಐ.ಜಿ. ರಸ್ತೆ, ಬಾರ್ಲೈನ್ ರಸ್ತೆ, ಮಧುವನ ಲೇಔಟ್, ಕಲ್ಲುದೊಡ್ಡಿ, ನೆಹರು ನಗರ, ಮೂಗ್ತಿಹಳ್ಳಿ, ಮಲ್ಲಂದೂರು, ಡಿಸಿ, ಎಸ್ಪಿ ಕಚೇರಿ, ಬೋಳರಾಮೇಶ್ವರ ದೇವಸ್ಥಾನ, ಶಿರವಾಸೆ, ಇಂದಾವರ, ಜೋಳ್ದಾಳ್, ಆವತಿ, ಬಸವನಹಳ್ಳಿ ಮುಖ್ಯ ರಸ್ತೆ, ಆರ್ಜಿ ರಸ್ತೆ, ಕೆಎಂ. ರಸ್ತೆ ಸುತ್ತ ಮುತ್ತಲಿನ ಪ್ರದೇಶಗಳಿಗೆ ಡಿ.28ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 2ರವರೆಗೆ ವಿದ್ಯುತ್ ಸರಬರಾಜು ನಿಲುಗಡೆಯಾಗಲಿದೆ ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.